Tuesday, 10th December 2024

ನಿಮ್ಮ ಯೋಚನೆಯೇ ನಿಮ್ಮನ್ನು ಗೆಲ್ಲಿಸುವುದು

ಪರಿಶ್ರಮ

parishramamd@gmail.com

ಯೋಚನೆ ಸರಿಯಾಗಿರಲಿ Ideas Rules the World ಸಾಗುವಳಿದಾರನ ಬವಣೆ ಅಂತಾರೆ. ಪ್ರತಿ ಯೋಚನೆಯೂ ಅವನ ಎತ್ತರ ವನ್ನು ಅವನು ತಲುಬೇಕಾದ ಗಮ್ಯವನ್ನು ತೀರ್ಮಾನಿಸುತ್ತದೆ. ಯೋಚನೆಗಳಲ್ಲಿ ಸ್ಥಿರತೆಯಿದ್ದರೆ ಯೋಚನೆಗಳಲ್ಲಿ ಸಕಾರಾತ್ಮಕ ತೆಯಿದ್ದರೆ, ಆ ಯೋಚನೆಯನ್ನು ಜಾರಿಗೆ ತರುವ ಧೈರ್ಯವಿದ್ದರೆ, ಸಾಮಾನ್ಯ ಕುಟುಂಬದ ವ್ಯಕ್ತಿಯೂ ಈ ಪ್ರಪಂಚವನ್ನು ಆಳಬಹುದು.

ಬಡತನ, ಅನಿಶ್ಚಿತತೆ, ಅನಾಥಪ್ರಜ್ಞೆ, ಒಂಟಿತನ ಏನೇ ಇರಲಿ ಸರಿಯಾಗಿ ಮಾಡಬೇಕಾದ ಕೆಲಸ ಮಾಡಿದರೆ ಎಂತಹ ಸಾಮ್ರಾಜ್ಯ ವನ್ನೂ ಬೇಕಾದರೂ ಕಟ್ಟಬಹುದು. ಜೀವನದಲ್ಲಿ ಏನಾದರೂ ಸಾಧಿಸುತ್ತೇನೆಂಬ ಚಿಕ್ಕ ಯೋಚನೆ ಪ್ರತಿಯೊಬ್ಬನನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯತ್ತದೆ. ಮರದಿಂದ ಸೇಬು ಕೇಳಗೆ ಬಿದ್ದಾಗ, ಏಕೆ ಬಿತ್ತು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿ, ಅದರಲ್ಲೇ ಸುದೀರ್ಘವಾದ ಅಧ್ಯಯನ ನಡೆಸಿ, ಗುರುತ್ವಾ ಕರ್ಷಣೆಯನ್ನು ಜಗತ್ತಿಗೆ ಪರಿಚಯಿಸಿದವರು ಸಿರ್ ಐಸಾಕ್ ನ್ಯೂಟನ್.

ಎಲ್ಲರ ತರಹ ಉಪನ್ಯಾಸಕನಾಗಿ ಉಳಿದುಬಿಡೋಣ ಎಂಬ ತೀರ್ಮಾನದಲ್ಲಿದ್ದಾಗ, ತನ್ನ ಸಿದ್ಧಾಂತವು ಜಗತ್ತಿಗೆ ತಿಳಿಯಬೇಕೆಂಬ ಯೋಚನೆ ಮಾಡಿ, ಅದನ್ನು ಪ್ರಪಂಚದ ಮುಂದೆ ಪ್ರಚುರ ಪಡಿಸಿದಾಗ, ಅಲ್ಬರ್ಟ್ ಐನ್‌ಸ್ಟೀನ್‌ರವರನ್ನು ನೋಬೆಲ್ ಪ್ರೈಜ್‌ ರವರೆಗೂ ಕೊಂಡೊಯ್ಯಿತು. ಹುಟ್ಟಿನಿಂದಲೇ ಬಡಕುಟುಂಬದಲ್ಲಿ ಬೆಳೆದ ಮೇಡಂ ಕ್ಯೂರಿ ಅವರಿಗೆ ನೋಬೆಲ್ ಪ್ರಶಸ್ತಿ ಪಡೆಯಲು ಕಾರಣವಾಗಿದ್ದು ಒಂದು ಪ್ರಬಲವಾದ ಯೋಚನೆ, ಆಲೋಚನೆ ರಾಮೇಶ್ವರಂನ ಬಡಕುಟುಂಬದಲ್ಲಿ ಜನಿಸಿದ ಎಪಿಜೆ ಅಬ್ದುಲ್ ಕಲಾಂರವರು, ವಿಜ್ಞಾನಿಯಾಗಿ, ದೇಶದ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿ, ಜನಮಾನಸದಲ್ಲಿ ಅರಳಿ ನಿಂತರೂ. ಜೀವನದಲ್ಲಿ ಏನೋ ಸಾಧಿಸಬೇಕೆಂಬ ಹಠದ ಜೊತೆ ಬಾಲ್ಯದಲ್ಲಿ ಅವರು ತೆಗೆದುಕೊಂಡ ಒಂದು ಧೃಡ ನಿರ್ಧಾರ, ಯೋಚನೆ, ಆಲೋಚನೆ, ಗುರಿಯೆಡೆಗೆ ಅವರು ಓಡುತ್ತಿದ್ದ ಪರಿ ಅವರನ್ನು ಮತ್ತೊಂದು ಹಂತಕ್ಕೆ ಕೊಂಡ್ಯೊಯಿತು.

ನಮ್ಮ ಕನ್ನಡದ ಹುಡುಗ ಬೆಂಗಳೂರಲ್ಲಿ ಬಸ್ ಕಂಡಕ್ಟರ್ ಆಗಿದ್ದುಕೊಂಡು, ಮುಂದೆ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟು, ಇಲ್ಲಿಂದ
ತಮಿಳುನಾಡಿಗೆ ಹೋಗಿ ಸೂಪರ್ ಸ್ಟಾರ್ ಆಗಲು ನಾನು ಗೆಲ್ಲುತ್ತೇನೆಂಬ ಪ್ರಬಲ ಯೋಚನೆಯೇ ರಜಿನಿಕಾಂತ್‌ರವರನ್ನು
ಸೂಪರ್ ಸ್ಟಾರ್ ರನ್ನಾಗಿ ಮಾಡಿ, ದೇಶ-ಹೊರ ದೇಶದ ಜನರ ಚಪ್ಪಾಳೆಗೆ ಕಾರಣವಾಯಿತು. ಅದೇ ರೀತಿ, ವಿಪ್ರೋನಲ್ಲಿ ಕೆಲಸ ಸಿಗಲಿಲ್ಲವೆಂದು ನಿಶಾರರಾಗದೆ, ತನ್ನದೇ ಆದ ಇನೋಸಿಸ್ ಅನ್ನು ಕಟ್ಟಿ, ಭಾರತದಲ್ಲಿ ತಂತ್ರಜ್ಞಾನ ಅಂದರೇ ಗೊತ್ತಿರದ ಕಾಲದಲ್ಲಿ ತಂತ್ರಜ್ಞಾನದಿಂದ ಭಾರತವನ್ನು ಬೆಳಗುವಂತೆ ಮಾಡಿದ ನಾರಾಯಣ ಮೂರ್ತಿ ಅವರನ್ನು ಬೆಳೆಸಿದ್ದೂ ತನ್ನ ಛಲವೇ.

ಕನ್ನಡದ ಮಣ್ಣಿಗೆ ಅಂತಹ ವಿಶಿಷ್ಟವಾದ ತಾಕತ್ತಿದೆ. ಮಲೆನಾಡಿನ ಪ್ರಕೃತಿಯ ಸೌಂದರ್ಯದ ನಡುವೆ ಅಕ್ಷರಗಳನ್ನು ಜೋಡಿಸಿ ಸಾಹಿತ್ಯ ಲೋಕದ ಸರಸ್ವತಿ ಪುತ್ರರಾದ ಕುವೆಂಪುರವರ ಆ ಪ್ರಬಲವಾದ ಯೋಚನೆಯೇ ಅವರನ್ನು ಜ್ಞಾನಪೀಠ ಪ್ರಶಸ್ತಿವರೆಗೂ ಕೊಂಡೊಯ್ಯಿತು. ಅಕ್ಷರಗಳಿಂದ ಮತ್ತೊಂದು ಹಂತಕ್ಕೆ ತಲುಪಬಹುದೆಂದು ಯೋಚಿಸಿದ ಮೂಕಜ್ಜಿಯ ಕನಸುಗಳ, ಶಿವರಾಮ ಕಾರಂತರವರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದು. ಅವರ ಸಕಾರಾತ್ಮಕ ಯೋಚನೆಯಿಂದ ನಾಕುತಂತಿಯಿಂದ, ದ.ರಾ.ಬೇಂದ್ರೆಯವರು ಭಾರತ ಸಿಂಧೂ ರಶ್ಮಿಯಿಂದ, ವಿ.ಕೃ.ಗೋಕಾಕ್‌ರವರು.

ಚಿಕ್ಕ ವೀರರಾಜೇಂದ್ರ ಕೃತಿಯಿಂದ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್‌ರು ಈ ಜಗತ್ತಿಗೆ ತಿಳಿದಿದ್ದು. ಅವರ ಪ್ರಬಲವಾದ ಯೋಚನೆ ಗಳಿಂದಲೇ ಬದುಕಿನಲ್ಲಿ ಏನು ಬೇಕಾದರೂ ಸಾಧಿಸಬಹುದು, ಎಂತಹ ಅದ್ಭುತವನ್ನು ಬೇಕಾದರೂ ಸಾಧಿಸಬಹುದು, ನೀವು ವಿದ್ಯಾರ್ಥಿಯಾಗಿರಬಹುದು, ವ್ಯವಹಾರಸ್ಥ, ಯಾವುದೋ ಕಂಪನಿಯಲ್ಲಿ ಕೆಲಸವನ್ನೂ ಮಾಡುತ್ತಿರಬಹುದು, ರಾಜಕಾರಣಿ ಯಾಗಿರಬಹುದು, ಶಿಕ್ಷಣ ತಜ್ಞರಾಗಿರಬಹುದು, ನೀವು ಒಂದು ಆಲೋಚನೆಯನ್ನು ತೆಗೆದುಕೊಂಡರೆ, ಸಾವಿರಾರು ಬಾರಿ ಯೋಚಿಸಬೇಕು.

ಯೋಚಿಸಿ ತೀರ್ಮಾನ ತೆಗೆದುಕೊಂಡ ನಂತರ ಆ ಆಲೋಚನೆಗೆ ನೀವು ನಿಲ್ಲಬೇಕು. ಕಷ್ಟವೋ, ಸುಖವೋ, ಆನಂದಬಾಷ್ಪವೋ, ಕಣ್ಣೀರೋ, ಗೆಲ್ಲುತ್ತೀರೋ, ಸೋಲುತ್ತೀರೋ ಅದು ನಂತರಕ್ಕೆ ಬಿಟ್ಟಿದ್ದು. ಆದರೆ, ಆ ಕೆಲಸಕ್ಕೆ ನೀವು ಕೊಡುವ ಆಸಕ್ತಿ, ಸಮರ್ಪಣೆ, ಛಲವಿದ್ದರೆ ಯಾವುದೇ ಹೊರ ಶಕ್ತಿಯೂ ನಿಮ್ಮನ್ನು ಸೋಲಿಸಲಾರದು.

ಪ್ರಯತ್ನದಲ್ಲಿ ಸೋಲಬಾರದು, ಪ್ರಾಯಕ್ಕೆ ಬಂದಿರುವ ಯುವಕ, ಯುವತಿಯರಿಗೂ ಒಂದು ಸಂದೇಶವನ್ನು ಹೇಳುತ್ತೇನೆ. ಕಾಲೇಜಿನಲ್ಲೋ, ಡಿಗ್ರಿಯಲ್ಲೋ ತಾವು ಇರುತ್ತಿರ. ಧೃಡವಾದ ಒಂದು ತೀರ್ಮಾನ ತೆಗೆದುಕೊಳ್ಳಿ, ಪ್ರೀತಿ, ಪ್ರೇಮ ಎಲ್ಲದರ ಆಚೆ ಬದುಕು, ಗೆಲುವು ಮೊದಲನೆ ಸ್ಥಾನದಲ್ಲಿರಲಿ. ಹೆತ್ತವರ ಪ್ರೀತಿ, ಅವರ ತ್ಯಾಗ ಬೀದಿ ಪಾಲಾಗಬಾರದು. ಅಪ್ಪನ ೧೮-೨೦ ವರ್ಷಗಳ ಪರಿಶ್ರಮ ಊರಿನಲ್ಲಿ ಹರಾಜಾಗಬಾರದು. ನಿಮ್ಮ ತಾಯಿ ಮಾಡಿದ ತ್ಯಾಗ ಕಣ್ಣೀರಲ್ಲಿ ಕೊಚ್ಚಿ ಹೋಗಿ ಕೊನೆಯಾಗಬಾರದು. ಮೊದಲು ಗೆಲುವಿನ ಕಡೆ, ಭವಿಷ್ಯದ ಕಡೆ ಆಲೋಚಿಸಿ ಒಂದು ಗೆಲುವನ್ನು ಪಡೆಯಿರಿ.

ನಂತರ ಎಲ್ಲ ಇದ್ದಿದೆ, ೧೦೦ ವರ್ಷದ ಜೀವನದಲ್ಲಿ ಸೋಲು, ಗೆಲುವು ಎಲ್ಲವೂ ಬರಬೇಕು. ಧೈರ್ಯವಾಗಿರಿ ಯಾವುದಕ್ಕೂ
ಅಂಜಬೇಡಿ. ಬದುಕು ಗೆಲ್ಲಬೇಕು, ಗೆಲುವನ್ನು ಗೆಲ್ಲಿಸಬೇಕು, ಸೋಲನ್ನು ಸಾಧ್ಯವಾದಷ್ಟು ದೂರವಿಡಿ. ಕಣ್ಣೀರಿಗೆ ತಿಲಾಂಜಲಿ ಇಡಿ. ಸೋಲಿಗೆ ಗುಡ್‌ಬಾಯ್ ಹೇಳೋಣ. ಗೆಲುವಿಗೆ ಹ್ಯಾಂಡ್ ಶೇಕ್ ಮಾಡೋಣ. ನಿಮ್ಮ ಎಲ್ಲಾ ಪ್ರಯತ್ನಕ್ಕೂ ಶುಭವಾಗಲಿ. ಪರಿಶ್ರಮ ಒಂದಿದ್ದರೆ ಪ್ರತಿಯೊಬ್ಬರೂ ಗೆಲ್ಲುತ್ತಾರೆ ಎಂಬ ನಂಬಿಕೆ ನನ್ನದು.
Read E-Paper click here