ಅವಲೋಕನ
ಮಾರುತೀಶ್ ಅಗ್ರಾರ
maruthishagrara@gmail.com
ಟಿಪ್ಪು ಒಳ್ಳೆಯವನಾಗಿದ್ದರೆ ಕೊಡವರು, ದುರ್ಗದ ವಾಲ್ಮೀಕಿ ಜನಾಂಗದವರು, ಮಂಗಳೂರಿನ ಕೊಂಕಣಿಗರು, ಮೈಸೂರು ಮಂಡ್ಯ ಭಾಗದ ಜನರೇಕೇ ಅವನನ್ನು ಪ್ರೀತಿಸುವುದಿಲ್ಲ? ಇತಿಹಾಸವೇ ನಮ್ಮ ಕಣ್ಣಮುಂದಿದೆ ಅನ್ನೋದನ್ನ ಟಿಪ್ಪು ವೈಭ ವಿಕರಿಸಿ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ವಿಚಾರ ಹೊರಗಿಡಬೇಕೆಂಬ ಕೂಗು ಇಂದು ನಿನ್ನೆಯದಲ್ಲ. ಈಗ ಆ ಕೂಗಿಗೆ ತುಸು ಬಲ ಬಂದಿದ್ದು, ನ್ಯಾಯ ಒದಗಿಸುವ ಕೆಲಸಕ್ಕೆ ಸರಕಾರ ಮುಂದಾಗುತ್ತಿರುವುದು ಶ್ಲಾಘನೀಯ. ನಿಜ ಹೇಳಬೇಕೆಂದರೆ ಟಿಪ್ಪು ಸುಲ್ತಾನ್ ಕಟ್ಟಾ ಇಸ್ಲಾಂ ಧರ್ಮದ ಒಬ್ಬ ಜಿಹಾದಿ ನಾಯಕ!
ಆತ ಎಂದಿಗೂ ದೇಶಕ್ಕಾಗಿ, ಕನ್ನಡ ನಾಡಿಗಾಗಿ ಹೋರಾಡಿಯೇ ಇಲ್ಲ. ಆತನೊಬ್ಬ ಹಿಂದೂ ವಿರೋಧಿ, ಭಾರತ ವಿರೋಧಿ ರಾಜನಾಗಿದ್ದವನು. ನಿಜವಾಗಿಯೂ ಆ ಕಾಲಕ್ಕೆ ಆತನೊಳಗೊಬ್ಬ ಒಸಾಮಾ ಬಿನ್ ಲಾಡೆನ್‌ನಂಥ ಮತಾಂಧ ನಾಯಕನಿದ್ದ ಎಂದರೇ ತಪ್ಪಾಗ ಲಾರದು. ಟಿಪ್ಪು ಆಡಳಿತವನ್ನು ಕಣ್ಣಾರೆ ಕಂಡ ಅದೆಷ್ಟೋ ಇತಿಹಾಸಕಾರರ ದಾಖಲೆಗಳೆಲ್ಲವೂ ಆತನೊಬ್ಬ ಇಸ್ಲಾಂ ಭಯೋತ್ಪಾದಕ ನೆಂದೇ ಹೇಳುತ್ತವೆ.
ಇಂಥ ಕ್ರೂರ ವ್ಯಕ್ತಿತ್ವದ ಬಗ್ಗೆ ಸರಿಯಾದ ಮಾಹಿತಿ ತಿಳಿಯಲು ಮೈಸೂರು ರಾಜ್ಯದ ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡ ಬೇಕು. ಹಿಂದಿನಿಂದಲೂ ಅನೇಕರು ಟಿಪ್ಪುಸುಲ್ತಾನ್ ಒಬ್ಬ ಸ್ವಾತಂತ್ರ್ಯ ಹೋರಾಟಗಾರ! ವೀರಸೇನಾನಿ! ದೇಶ ಪ್ರೇಮಿ ಎಂದೆಲ್ಲ ಕರೆದು ಇತಿಹಾಸದ ಪುಟಗಳಲ್ಲಿ ಆತನ ಗುಣಗಾನ ಮಾಡುತ್ತಲೇ ಬರಲಾಗುತ್ತಿದೆ. ಇದು ನಮ್ಮ ಬುದ್ಧಿಜೀವಿಗಳು, ಎಡಪಂಥೀಯ ಇತಿಹಾಸಕರು, ಪ್ರಗತಿಪರರು, ಢೊಂಗಿ ಚಿಂತಕರ ಸೃಷ್ಟಿಯಷ್ಟೇ.
ತಮ್ಮ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಾಗಿ ಟಿಪ್ಪು ಎಂಬ ಇಸ್ಲಾಮಿಕ್ ರಾಜನನ್ನು ಇತಿಹಾಸದ ಪುಟಗಳಲ್ಲಿ ವೈಭವೀಕರಿಸಿ ಜನರ ಮುಂದಿಟ್ಟಿದ್ದಾರಷ್ಟೆ. ವಿಷಾದದ ಸಂಗತಿಯೆಂದರೆ ಯಾರು ಟಿಪ್ಪುವನ್ನು ಸ್ವಾತಂತ್ರ್ಯ ಹೋರಾಟಗಾರನೆಂದು ಕರೆಯುತ್ತಿದ್ದಾರೋ ಅದೇ ಕಾಂಗ್ರೆಸ್ ಭಾರತದಲ್ಲಿ ಸ್ವಾತಂತ್ರ್ಯದ ಕಿಚ್ಚು ಹೊತ್ತಿಸಿದ್ದು, 1857ರಲ್ಲಿ. ಅದನ್ನೇ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನ್ನಲಾಗುತ್ತದೆ. ಅದಕ್ಕೂ ಮುನ್ನ ಭಾರತದಲ್ಲಿ ಸ್ವಾತಂತ್ರ್ಯ ಕುರಿತ ಹೋರಾಟವಾಗಲಿ, ಆಂದೋಲನವಾಗಲಿ, ದಂಗೆ-ಪ್ರತಿಭಟನೆಗಳಾಗಲಿ ನಡೆದದ್ದು ಇತಿಹಾಸದಲ್ಲಿ ಇಲ್ಲವೇ ಇಲ್ಲ.
ಒಂದು ವೇಳೆ ಹಾಗೇನಾದರೂ ನಡೆದಿದ್ದರೂ ಅದು ಪ್ರಾಂತೀಯ ಚಳವಳಿಗಳಿಗೆ ಮಾತ್ರ ಸೀಮಿತವಾಗಿದ್ದವೇ ಹೊರತು ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಅಲ್ಲ. ಈ ತಥಾಕಥಿತ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಮಡಿದದ್ದು 1799ರಲ್ಲಿ ನಡೆದ
ನಾಲ್ಕನೇ ಮೈಸೂರು ಯುದ್ಧದ. ಬ್ರಿಟಿಷರ ಗುಂಡೇಟಿಗೆ ಆತ ಬಲಿಯಾಗಿದ್ದು ಹೌದಾದರೂ ಅದು ವೈಯಕ್ತಿಕ ರಾಜಪದವಿಯ ಉಳಿವಿನ
ಹೋರಾಟದಲ್ಲಿನ ಸಾವಾಗಿತ್ತು.
ಟಿಪ್ಪು ಸತ್ತ ನಂತರವೇ ದೇಶದಲ್ಲಿ ಸಮಗ್ರ ಸ್ವಾತಂತ್ರದ ಪರಿಕಲ್ಪನೆ ಮೂಡಿದ್ದು. ಅದಕ್ಕಿಂತ ಮೊದಲೂ ಟಿಪ್ಪು ಹೋರಾಡಿದ್ದು ಇಸ್ಲಾಂ ಧರ್ಮದ ಉಳಿವಿಗಾಗಿಯೇ ಹೊರತು ದೇಶದ ಮೇಲಿದ್ದ ಕಾಳಜಿ, ಅಭಿಮಾನದಿಂದಲ್ಲ. ದಿವಂಗತ ಕೋ.ಚೆನ್ನಬಸಪ್ಪನವರು ‘ಅಪ್ರತಿಮ ದೇಶಭಕ್ತ ಟಿಪ್ಪು ಸುಲ್ತಾನ್’ ಎಂಬ ಪುಸ್ತಕದಲ್ಲಿ ಹೈದರಾಲಿ ಹಾಗೂ ಆತನ ಮಗ ಟಿಪ್ಪು ಸುಲ್ತಾನ್ ಇಬ್ಬರನ್ನೂ ‘ಭಾರತದ ಸ್ವಾತಂತ್ರ್ಯಕ್ಕಾಗಿ
ಹೋರಾಡಿದ ಮಹಾಸಾಹಸಿಗಳು’ ಎಂದಿದ್ದಾರೆ.
ದಿವಂಗತ ಗಿರೀಶ್ ಕಾರ್ನಾಡರು ಸಹ ತಮ್ಮ ‘ಟಿಪ್ಪುವಿನ ಕನಸುಗಳು’ ಕೃತಿಯಲ್ಲಿ ಆತನೊಬ್ಬ ವೀರಸೇನಾನಿ ಹಾಗೂ ಹಿಂದೂಧರ್ಮ ರಕ್ಷಕನೆಂದು ಬಿಂಬಿಸಿದ್ದಾರೆ. ಕೋಚೆಯವರಂತೂ ಟಿಪ್ಪುಸುಲ್ತಾನನ್ನು ಹೊಗಳುವ ಭರದಲ್ಲಿ ಹಾಗೂ ಯಾರನ್ನೋ ಮೆಚ್ಚಿಸುವುದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನೂ ಟೀಕಿಸಿ, ಕೇಸರಿಕರಣಗೊಂಡವರ ಅಪಪ್ರಚಾರವೇ ಟಿಪ್ಪು ಬಗ್ಗೆ ಅಸಹನೆ, ಕೋಮುಭಾವನೆ
ಬೆಳೆಯಲು ಕಾರಣ ಎಂದುಬಿಟ್ಟಿದ್ದಾರೆ. ಟಿಪ್ಪುವಿನ ನೈಜ ಇತಿಹಾಸವನ್ನ ಕೊಚೆ, ಕಾರ್ನಾಡ್ ಅವರಂಥವರೇ ಮರೆಮಾಚಿರುವಾಗ ಸತ್ಯ ಹೇಳುವ ಆರೆಸ್ಸೆಸ್ ನಂಥ ಸಂಘಟನೆಯ ವಿರುದ್ಧ ಹರಿಹಾಯವುದು ನಿರೀಕ್ಷಿತವೇ ಇರಲಿ, ಮತ್ತೆ ಟಿಪ್ಪುವಿನ ನಿಜ ಇತಿಹಾಸದ ಕಡೆ
ಬರೋಣ. ಅದು 17-18ನೇ ಶತಮಾನದ ಕಾಲಘಟ್ಟ. ಆ ಸಮಯದಲ್ಲಿದ್ದ ಬಾರ್ತೋಲೋಮ್ಯು ಎಂಬ ಪೋರ್ಚುಗೀಸ್ ಇತಿಹಾಸ ಕಾರ, ಟಿಪ್ಪು ಎಸಗಿದ ಕೌರ್ಯಗಳಿಗೆ ಪ್ರತ್ಯಕ್ಷ ಸಾಕ್ಷಿಗಳಲ್ಲೊಬ್ಬ.
ಬಾರ್ತೊಲೋಮ್ಯೂ 1790ರಲ್ಲಿ ಮಲಬಾರಿನ ಪ್ರದೇಶಗಳಲ್ಲಿ ಏನೇನು ಕಂಡೆನೆಂಬುದನ್ನು ಇತಿಹಾಸ ದಲ್ಲಿ ದಾಖಲಿಸಿದ್ದಾನೆ. ಬಾರ್ತೊ ಲೋಮ್ಯೂ ಹೇಳುವ ಪ್ರಕಾರ ಟಿಪ್ಪುವಿನ ಬಳಿ 30 ಸಾವಿರ ಮಂದಿ ಅನಾಗರಿಕ ಸೈನಿಕರನ್ನೊಳಗೊಂಡಿದ್ದ ಸೇನಾಪಡೆ ಯೊಂದಿತ್ತು. ಅವರು ದಾರಿಯಲ್ಲಿ ಸಿಕ್ಕ ಪ್ರತಿಯೊಬ್ಬ ಮುಸ್ಲೀಮೇತರರನ್ನೂ ಕೊಂದು ಹಾಕುತ್ತಿದ್ದರು. ಟಿಪ್ಪು ಆನೆಯೊಂದರ ಮೇಲೆ ಕುಳಿತು ಸವಾರಿ ಮಾಡುತ್ತ ಇದನ್ನು ನಿರ್ದೇಶಿಸುತ್ತಿದ್ದ. ಈ ಸೇನಾಪಡೆ ಇಸ್ಲಾಮನ್ನು ಒಪ್ಪದ ಬಹುಪಾಲು ಗಂಡಸರನ್ನೂ, ಹೆಂಗಸರನ್ನೂ ಕಲ್ಲಿ ಕೋಟೆಯಲ್ಲಿ ನೇಣಿಗೆ ಹಾಕಿತು.
ಅಕ್ಷರಶಃ ನರರಾಕ್ಷಸ ಟಿಪ್ಪು, ಕ್ರಿಶ್ಚಿಯನ್ನರನ್ನೂ ಹಾಗೂ ಹಿಂದೂಗಳನ್ನೂ ನಗ್ನರನ್ನಾಗಿಸಿ ಆನೆಗಳ ಕಾಲಿಗೆ ಕಟ್ಟಿಹಾಕಿ ಆ ಶರೀರಗಳು ಛಿದ್ರ ಛಿದ್ರವಾಗುವವರೆಗೆ ಆನೆಗಳನ್ನು ಓಡಿಸುತ್ತಿದ್ದ ಉದಾಹರಣೆಗಳೂ ಇದ್ದವು. ದೇವಾಲಯಗಳಿಗೆ ಹಾಗೂ ಚರ್ಚುಗಳಿಗೆ ಬೆಂಕಿ ಹಚ್ಚುವಂತೆ ಹಾಗೂ ಅಪವಿತ್ರಗೊಳಿಸುವಂತೆ ಟಿಪ್ಪುಸುಲ್ತಾನ್ ಅಪ್ಪಣೆ ಮಾಡುತ್ತಿದ್ದನು ಎಂದು ಬಾರ್ತೊಲೋಮ್ಯೂ ಆ ಸಮಯದಲ್ಲಿ ತನ್ನ ಕಣ್ಣುಗಳಲ್ಲಿ ಕಂಡದ್ದನ್ನು ಇತಿಹಾಸದಲ್ಲಿ ದಾಖಲಿಸಿದ್ದಾನೆ.
ಟಿಪ್ಪುವಿನ ಇತಿಹಾಸ ರಚಿಸಿರುವ ಕೀರ್ಮಾನಿ ಹೇಳುವ ಪ್ರಕಾರ, ಟಿಪ್ಪು ತನ್ನ ಮತಕ್ಕೆ ಸೇರಿಲ್ಲದಂಥವರನ್ನು ಮನಸೋ ಇಚ್ಛೆ ಹಿಂಸಿಸಿ ಮತಾಂತರ ಮಾಡುತ್ತಿದ್ದ. ಮತಾಂತರಕ್ಕೆ ಒಪ್ಪದವರನ್ನು ಕ್ರೂರವಾಗಿ ಹಿಂಸಿಸಿ ಕೊಲ್ಲುತ್ತಿದ್ದ. ಟಿಪ್ಪು ಸುಲ್ತಾನ್ ಎಂಥಾ ದುರಾಕ್ರಮಣ ಕಾರಿ ಯಾಗಿದ್ದನೆಂದರೆ ಅಘ್ಘಾನಿಸ್ತಾನದ ದೊರೆಯಾಗಿದ್ದ ಜಮಾನ್ ಶಾಹನಿಗೆ ಅನೇಕ ಸಲ ಪತ್ರ ಬರೆದು ಭಾರತದ ಮೇಲೆ ಆಕ್ರಮಣವ ನ್ನೆಸಗುವಂತೆಯೂ ಹಾಗೂ ಹಿಂದೂಗಳ ನಾಡಿನಲ್ಲಿ ಇಸ್ಲಾಮಿನ ಪ್ರಭುತ್ವವನ್ನು ಸ್ಥಾಪಿಸುವಂತೆಯೂ ಕೋರಿದ್ದ. ಟಿಪ್ಪು ಭಾರತದ ಮೇಲೆ ಆಕ್ರಮಣ ಮಾಡುವಂತೆ ಜಮಾನ್ ಶಾಹನಿಗೆ ಮಾತ್ರವಲ್ಲ ಇನ್ನೂ ಅನೇಕ ಮುಸ್ಲಿಂ ದೊರೆಗಳಿಗೆ ಇಂಥದೇ ಆಹ್ವಾನವನ್ನು ನೀಡಿದ್ದ ಎನ್ಬುವುದು ಕೀರ್ಮಾನಿಯವರ ಅಭಿಪ್ರಾಯ.
ಧರ್ಮದ ಆಫೀಮನ್ನೇ ತಲೆಗೇರಿಸಿಕೊಂಡಿದ್ದ ಟಿಪ್ಪು ತನ್ನ ತತ್ವ-ಸಿದ್ಧಾಂತಗಳಿಗೆ ವಿರೋಧವಾಗಿದ್ದವರ ಪ್ರಾಣ ತೆಗೆದು ಮತಾಂಧನಾಗಿ, ಧರ್ಮಾಂಧನಾಗಿ ಮೆರೆದು ತನ್ನ ಅಸ್ತಿತ್ವ ಸ್ಥಾಪಿಸಿದ ಎನ್ನುತ್ತದೆ ಟಿಪ್ಪುವಿನ ಮೂಲ ಇತಿಹಾಸ. ಕೆಲ ಇತಿಹಾಸಕಾರರು ಟಿಪ್ಪು ದೇಶರಕ್ಷಣೆ ಗಾಗಿ ತನ್ನ ಮಕ್ಕಳನ್ನು ಬ್ರಿಟಿಷರಿಗೆ ಒತ್ತೆಯಿಟ್ಟ ಎನ್ನುತ್ತಾರೆ. ನಿಜ, ಟಿಪ್ಪು ಸುಲ್ತಾನ್ ತನ್ನ ಮಕ್ಕಳಿಬ್ಬರನ್ನು ಬ್ರಿಟಿಷರಿಗೆ ಒತ್ತೆಯಿಟ್ಟ! ಆದರೆ ಅದು ದೇಶದ ರಕ್ಷಣೆಗಾಗಲಿ ಅಥವಾ ದೇಶದ ಮೇಲಿನ ಪ್ರೀತಿಗಾಗಲಿ ಅಲ್ಲ.
ಬ್ರಿಟಿಷರಿಗೆ ಆತ ಕೊಡಬೇಕಿದ್ದ ಬಾಕಿ ಹಣಕ್ಕಾಗಿ! ಯಾಕೆಂದರೆ ಟಿಪ್ಪು ಆ ಸಮಯದಲ್ಲಿ ಬ್ರಿಟಿಷರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಆತನ ಹತ್ತಿರ ಮಕ್ಕಳನ್ನು ಒತ್ತೆ ಇಡುವ ದಾರಿ ಬಿಟ್ಟರೇ ಬೇರೆ ಯಾವುದೇ ಮಾರ್ಗವಿರಲಿಲ್ಲ. ಇನ್ನು ಸ್ವತಃ ಟಿಪ್ಪುಸುಲ್ತಾನನೇ ತನ್ನ ಕೈಯಾರೆ ಕೇರಳದ ಮಲಬಾರ್ ಪ್ರದೇಶದ ತನ್ನ ಅಧಿಕಾರಿಗಳಿಗೆ ಒಳಗಿಂದೊಳಗೆ ಪತ್ರಗಳನ್ನು ಬರೆದು, ಅದರ ಪ್ರಕಾರ ಆದೇಶ ನೀಡಿರುವುದು ಇತಿಹಾಸದ ದಾಖಲೆಗಳಲ್ಲಿ ದಾಖಲಾಗಿವೆ.
ಜನರಿಂದ ‘ಮೈಸೂರು ಹುಲಿ’ ಎಂದು ಹೆಮ್ಮೆಯಿಂದ ಕರೆಯಿಸಿಕೊಂಡ ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆಯಲ್ಲಿ ಅಧಿಕಾರಿಗಳಿಗೆ ಬರೆದ
ಪತ್ರದ ಸಾಲುಗಳು ಹೀಗಿವೆ: 14.12.1788ರಲ್ಲಿ ಟಿಪ್ಪು ಕಲ್ಲಿಕೋಟೆಯ ಸೇನಾಧಿಪತಿಗೆ ಪತ್ರ ಇದು- ‘ಮೀರ್ ಹುಸೇನ್ ಆಲಿಯನ್ನು ಇಬ್ಬರು ಅಂಗರಕ್ಷಕರೊಂದಿಗೆ ಕಳುಹಿಸಲಾಗಿದೆ. ಆತನು ನಿಗದಿತ ಸ್ಥಳವನ್ನು ದೇವರ ಕೃಪೆಯಿಂದ ಸೇರಲಿದ್ದಾನೆ. ನೀನು ಆತನ ಜೊತೆಗೂಡಿ, ದೇವರಲ್ಲಿ ನಂಬಿಕೆಯಿಲ್ಲದ ಎಲ್ಲ ನಾಸ್ತಿಕರನ್ನು ಬಂಧಿಸಿ ನಂತರ ಕೊಲ್ಲಬೇಕು. ಇಪ್ಪತ್ತು ವರ್ಷಗಳಿಗಿಂತ ಕಿರಿಯ ತರುಣ ರನ್ನು ಸೆರೆಮನೆಯಲ್ಲಿಟ್ಟು ಉಳಿದಂತೆ ಕನಿಷ್ಠ ಐದು ಸಾವಿರ ಮಂದಿಯನ್ನು ಮರಗಳಿಗೆ ನೇಣು ಹಾಕಬೇಕು.’
14.12.1788ರಲ್ಲಿ ಕೊಡಗೇರಿಯ ಸೇನಾಧಿಪತಿ ಮೀರ್ ಹೈದರನಿಗೆ ಟಿಪ್ಪು ಪತ್ರ- ‘ರಹಸ್ಯ ಮೂಲಗಳಿಂದ ತಿಳಿದು ಬಂದಿರುವಂತೆ ಕೊಡಗೇರಿ ಮತ್ತು ಕೊಡತ್ತನಾಟ್ಟು ರಾಜರು ಒಂದಾಗಿದ್ದಾರೆ. ನೀನು ಕುಟಿಲೊಪಾಯಗಳನ್ನಾದರೂ ಸರಿಯೇ ಬಳಸಿ, ಅವರನ್ನು ಬಂಧಿಸಿ ಅವರನ್ನು ನಿರ್ನಾಮ ಮಾಡಿ ಅವರಿಗೆಲ್ಲ ನರಕದ ಹಾದಿ ತೋರಬೇಕು. ಆ ಎರಡೂ ನಾಯಿಗಳನ್ನು ಹಿಡಿದ ತಕ್ಷಣ ಮೇಲಿನ ನಮ್ಮ ಆeಯಂತೆ ಅವರನ್ನು ಶಿಕ್ಷಿಸಬೇಕು’ ಈ ತರಹದ ಇನ್ನು ಅನೇಕ ಪತ್ರಗಳನ್ನು ಟಿಪ್ಪು ತನ್ನ ಕೈಯಾರೆ ಬರೆದಿದ್ದಾನೆ ಎನ್ನುವುದಕ್ಕೆ ಸಾಕಷ್ಟು ಪುರಾವೆಗಳಿವೆ. ಈ ಇದೆಲ್ಲವನ್ನೂ “The Real Tippu’ ಎಂಬ ಗ್ರಂಥದಲ್ಲಿ ಸವಿವರವಾಗಿ ಉಲ್ಲೇಖಿಸಿದ್ದಾರೆ ಲೇಖಕರಾದ ಎಚ್. ಡಿ.ಶರ್ಮಾ. ಆತನೇ ತನ್ನ ಕೈಯಾರೆ ಬರೆದ ಪತ್ರಗಳನ್ನು ಓದಿದ ಮೇಲೆ ಟಿಪ್ಪುವಿನ ಉದ್ದೇಶ ಮುಸ್ಲಿಂ ಅಲ್ಲದವರನ್ನು ಹೆದರಿಸಿ, ಬೆದರಿಸಿ ಅಥವಾ ಹಿಂಸಿಸಿ ಅವರನ್ನು ಇಸ್ಲಾಂಗೆ ಮತಾಂತರಿಸುದಾಗಿತ್ತೇ ವಿನಾ ದೇಶಭಕ್ತಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಒಂದು ಕಾಲದಲ್ಲಿ ಮೈಸೂರು ಅರಸರನ್ನು ಬದಿಗೊತ್ತಿ ಸರ್ವಾಧಿಕಾರಿಯಾದ ಹೈದರನ ಮಗ ಟಿಪ್ಪು, ಒಂದು ಹೆಜ್ಜೆ ಮುಂದೆ ಹೋಗಿ ತಾನೇ ಮೈಸೂರು ರಾಜ್ಯದ ’ಬಾದಷಹ’ ನೆಂದು ಘೋಷಿಸಿ, ವಿಧವೆ ರಾಣಿ ಲಕ್ಷ್ಮೀ ಅಮ್ಮಣ್ಣಿಯನ್ನು ಸೆರೆಯಲ್ಲಿಟ್ಟು ರಾಜನಾಗಿ ಮೆರೆದಿದ್ದ. ಅರಸರಿಗೆ ಹಾಗೂ ಅರಸು ಸಂಬಂಧಿಕರಿಗೆ ಟಿಪ್ಪು ಕೊಟ್ಟ ಕಿರುಕುಳ ಅಪಾರ. ದನ ಕಟ್ಟುವ ಕೊಟ್ಟಿಗೆಯಂಥ ಒಂದು ಜಾಗದಲ್ಲಿ ಟಿಪ್ಪು ಅಂದಿನ ಮೈಸೂರು ರಾಜ್ಯದ ರಾಜಮಾತೆ ಲಕ್ಷ್ಮಮ್ಮಣ್ಣಿಯವರನ್ನು ಬಂಧಿಸಿಟ್ಟಿದ್ದನೆಂದರೆ ಆತ ಎಂಥ ನಯವಂಚಕ ಹಾಗೂ ಕ್ರೂರಿ ಎಂಬುದರ ಅರಿವಾಗುತ್ತದೆ.
ಟಿಪ್ಪು ಸುಲ್ತಾನ್ ಮೈಸೂರಿನ ಅರಸರಿಗೆ ಮಾಡಿದ ಮೋಸ- ಅನ್ಯಾಯ ಹಾಗೂ ಅಂದಿನ ಮೈಸೂರು ರಾಜ್ಯಕ್ಕೆ(ಇಂದಿನ ಕರ್ನಾಟಕ) ಮಾಡಿದ ವಂಚನೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯಬೇಕಾದರೆ ಅರಸು ವಂಶದವರಾದ ಪ್ರೊ.ಪಿ.ವಿ.ನಂಜರಾಜ ಅರಸು ಅವರು ಬರೆದಿರುವ ‘ಮೈಸೂರು ನೂರಿನ್ನೂರು ವರ್ಷಗಳ ಹಿಂದೆ’ ಎಂಬ ದಾಖಲೆಗಳ ಸಹಿತ ಮುದ್ರಿತವಾಗಿರುವ ಗ್ರಂಥವನ್ನು ಓದುಬಹುದು.
ಇನ್ನು 1761ರಲ್ಲಿ ಮೈಸೂರಿನ ಸರ್ವಾಧಿಕಾರಿಗಿದ್ದ ಹೈದರನು, ಮೈಸೂರು ರಾಜ್ಯವು ಅರಸು ದೊರೆಗಳಿಗೆ ಸೇರಿದ್ದು ಎನ್ನುವಂತೆ ನಡೆದು ಕೊಂಡಿದ್ದ. ಮುಂದೆ ಕನ್ನಡವನ್ನು ಆಡಳಿತ ಭಾಷೆಯಾಗಿ ಮುಂದುವರಿಸಿದ. ಆದರೆ ಹೈದರನ ಸಾವಿನ ಬಳಿಕ ಟಿಪ್ಪು ಸುಲ್ತಾನ್ ತನ್ನನ್ನು ಸಾರ್ವಭೌಮನೆಂದು ಘೋಷಿಸಿಕೊಂಡು ತನ್ನದು ’ಅ ನೀಡಿದ ಸರಕಾರ’ ಎಂದು ಭಾವಿಸಿದ. ಆರಂಭದಲ್ಲಿ ಅವನ ಆಡಳಿತ ಭಾಷೆ ಕನ್ನಡವಾಗಿದ್ದರೂ 1792ರ ಬಳಿಕ ಅವನು ಅದರ ಜಾಗದಲ್ಲಿ ಪರ್ಷಿಯನ್ ಭಾಷೆಯನ್ನು ಜಾರಿಗೊಳಿಸಿದುದಕ್ಕೆ ಅವನ ಸಮ ಕಾಲೀನರ ಹೇಳಿಕೆಗಳು ಮತ್ತು ಅವನ ಆeಗಳು ಆಧಾರವಾಗಿವೆ. ಈ ಬಗ್ಗೆ ಇತಿಹಾಸಕಾರರು ದಾಖಲಿಸಿದ್ದಾರೆ.
ಡೆಕನ್ ಪ್ರದೇಶದಲ್ಲಿ ಮೊಘಲರು ಪರ್ಷಿಯನ್ ಭಾಷೆ ಜಾರಿಗೊಳಿಸಿದ್ದರೂ ಅದು ಮೈಸೂರಲ್ಲಿ ಬಳಕೆಗೆ ಬಂದುದು 1792 ರಲ್ಲಿ. ಅದು ಟಿಪ್ಪುಸುಲ್ತಾನನ ಆಡಳಿತದ ಕೊನೆ ವರ್ಷಗಳಲ್ಲಿ. ಅವನ ಉದ್ದೇಶ ಅಂದಿನ ಮೈಸೂರು ರಾಜ್ಯವನ್ನು ಪರ್ಷಿಯನ್ ಭಾಷಾ ಪ್ರಾಂತ್ಯ ವನ್ನಾಸುವುದು ಆಗಿತ್ತು. ಹೀಗಾಗಿ ಅವನು ಊರುಗಳ ಹೆಸರನ್ನು ಪರ್ಷಿಯನ್ ಭಾಷೆಗೆ ಬದಲಾಯಿಸಿದ. ಚಿತ್ರದುರ್ಗ-ಪುರೊಕ್ಯಬ್ ಹಿಫರ್ ಆಯಿತು, ದೇವನಹಳ್ಳಿ-ಯುಸು-ಬಾದ್ ಆಯಿತು, ಮೈಸೂರು -ನಜರಾಬಾದ್ ಆಯಿತು, ಹಾಸನ-ಖುಯೇಮಾಬಾದ್ ಆಯಿತು, ಶಿರಾ-ರುಸ್ತುಮಾಬಾದ್ ಆಯಿತು, ಮಡಿಕೇರಿ- ಜಾಫರ್ ಬಾದ್ ಆಯಿತು, ಭಾಗಮಂಡಲ-ಅ-ಲ್ ಬಾದ್ ಆಯಿತು. ಹೀಗೆ ಅನೇಕ ಸ್ಥಳಗಳ ಹೆಸರನ್ನು ಬದಲಾಯಿಸಿ ಕನ್ನಡ ಭಾಷೆಗೆ ಮೋಸ ಮಾಡಿದ.
ಮತ್ತು ಅವನ ಆಡಳಿತದಲ್ಲಿ ನಾಣ್ಯಗಳ ಭಾಷೆ ಪರ್ಷಿಯನ್ ಆಗಿತ್ತು ಎನ್ನುವುದಕ್ಕೆ ಪುರಾವೆಗಳಿವೆ. ವಿಪರ್ಯಾಸವೆಂದರೆ ನಿಜವಾಗಿಯೂ ಮೈಸೂರು ಅರಸರು ನಮ್ಮ ನಾಡಿಗೆ ಹಾಗೂ ಎಲ್ಲ ಧರ್ಮದವರಿಗಾಗಿ ಮಾಡಿರುವ ಸೇವೆಗಳ ಮುಂದೆ, ಟಿಪ್ಪುವಿನ ಬೂಟಾಟಿಕೆಯ ಕೊಡುಗೆ ನಗಣ್ಯ. ಆತನದೇನಿದ್ದರೂ ಕನ್ನಡ ನಾಡನ್ನು ದಾರ್-ಉಲ್ -ಇಸ್ಲಾಂ (ಇಸ್ಲಾಂ ಬಾಹುಳ್ಯ ಪ್ರದೇಶ) ಮಾಡಬೇಕೆಂಬ ಬಯಕೆ ಹೊಂದಿದ್ದ ವ್ಯಕ್ತಿತ್ವ. ಟಿಪ್ಪು ಅನೇಕ ಹಿಂದೂ ದೇವಸ್ಥಾನಗಳಿಗೆ, ಮಠಮಾನ್ಯಗಳಿಗೆ ದಾನ ದತ್ತಿಗಳನ್ನು ಕೊಟ್ಟಿದ್ದಾನೆ ಎನ್ನುತ್ತಾರೆ.
ದಾನ ದತ್ತಿಗಳನ್ನು ಕೊಟ್ಟ ಮಾತ್ರಕ್ಕೆ ಅವನು ಒಳ್ಳೆಯವನಾಗುತ್ತಾನೆಯೇ? ತಾನು ಸಮಾಜದ ದೃಷ್ಟಿಯಲ್ಲಿ ಒಳ್ಳೆಯನಾಗಲು, ತಾನು ಮಾಡುವ ಕುತಂತ್ರದ ಕೆಲಸಗಳನ್ನು ಯಾರು ಪ್ರಶ್ನಿಸಬಾರದು, ನನ್ನ ವಿರೋಧಿಸುವವರು ಯಾರು ಇರಬಾರದೆಂದು ದಾನ ದತ್ತಿಗಳನ್ನು
ಕೊಟ್ಟಿರಲಿಕ್ಕೂ ಸಾಕಲ್ಲವೇ? ಹೋಗಲಿ, ಟಿಪ್ಪು ಒಳ್ಳೆಯವನಾಗಿದ್ದರೆ ಕೊಡಗಿನ ಕೊಡವರು, ದುರ್ಗದ ವಾಲ್ಮೀಕಿ ಜನಾಂಗದವರು,
ಮಂಗಳೂರಿನ ಕೊಂಕಣಿ ಕ್ರೈಸ್ತರು, ಮೈಸೂರು ಮಂಡ್ಯ ಭಾಗದ ಜನರೆಕೇ ಟಿಪ್ಪುವನ್ನು ಪ್ರೀತಿಸುವುದಿಲ್ಲ? ಹಾಗಾಗಿ ಇತಿಹಾಸವೇ ನಮ್ಮ ಕಣ್ಣಮುಂದಿದೆ ಅನ್ನೋದನ್ನ ಟಿಪ್ಪು ಸುಲ್ತಾನ್ ನನ್ನು ವೈಭವಿಕರಿಸಿ ಮಾತನಾಡುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.
ಟಿಪ್ಪುವಿನ ಸಮಗ್ರ ಇತಿಹಾಸವನ್ನು ರಾಜಕೀಯ ಮತಬ್ಯಾಂಕಿನ ದೃಷ್ಟಿಯಿಂದ ನೋಡದೆ ಆತ ಕನ್ನಡನಾಡಿಗೆ, ಹಿಂದೂಗಳಿಗೆ ಹಾಗೂ ದೇಶಕ್ಕೆ ಮಾಡಿದ ಘೋರ ಅನ್ಯಾಯದ ವಾಸ್ತವವನ್ನು ಮುಂದಿಡಬೇಕಾದ ಸಮಯ ಬಂದಿದೆ.