Wednesday, 18th September 2024

ಮಿಥ್ಯಗಳ ಅಬ್ಬರದಲ್ಲಿ ಮಂಕಾಗುತ್ತಿರುವ ತಥ್ಯಗಳು

ಪ್ರಚಲಿತ

ಗಣೇಶ್ ಭಟ್, ವಾರಣಾಸಿ

ಸುಳ್ಳಿಗಿರುವ ಶಕ್ತಿಯೇ ಅದು. ಅದು ಅನುಕೂಲಕ್ಕೆ ತಕ್ಕಂತೆ, ಕಾಲಕ್ಕೆ ತಕ್ಕಂತೆ ರೂಪಿತವಾಗುತ್ತದೆ. ಸುಳ್ಳು ಅತಿ ರಂಜಕವಾಗಿರುತ್ತದೆ. ಹೀಗಾಗಿ ಸತ್ಯಕ್ಕಿಂತ  ಮೊದಲೇ ಸುಳ್ಳುಗಳು ಜನರನ್ನು ತಲುಪುತ್ತದೆ. ಅದ್ದರಿಂದಲೇ ಸತ್ಯ ಚಪ್ಪಲಿಯನ್ನು ಹಾಕುವಷ್ಟರಲ್ಲಿ ಸುಳ್ಳು ಊರಿಗೆ ಅರ್ಧ ಸುತ್ತನ್ನು ಹಾಕುತ್ತದೆ  ಎನ್ನುವ ಗಾದೆ ರೂಪುಗೊಂಡದ್ದು. ಮೊದಲು ಯಾವ ಸುದ್ದಿ ಸಿಗುತ್ತದೆಯೋ ಅದೇ ಸುದ್ದಿಯನ್ನು ಜನರು ಹೆಚ್ಚು ನಂಬುತ್ಟಾರೆ.

ದಶಕದ ಹಿಂದೆ ಸಾಮಾಜಿಕ ಮಾಧ್ಯಮ ಗಳಾದ ಫೇಸ್‌ಬುಕ್, ಯೂಟ್ಯೂಬ, ವಾಟ್ಸಾಪ್,ಟ್ವಿಟರ್‌ಗಳು ಪರಿಚಯಿಸಲ್ಪಟ್ಟಾಗ ಮುಖ್ಯಮಾಹಿನಿ ಮಾಧ್ಯಮಗಳು ಬಿತ್ತರಿಸಿದ ಸುದ್ದಿಗಳ ಸತ್ಯಾಸತ್ಯತೆಯನ್ನು ಒರೆಹಚ್ಚಲು ದೊರಕಿರುವ ಒಂದು ಅವಕಾಶ  ವೆಂದೇ ಭಾವಿಸಲಾಗಿತ್ತು. ಆದರೆ ಕ್ರಮೇಣ
ಸಾಮಾಜಿಕ ಮಾಧ್ಯಮಗಳೂ ಕುಲಗೆಟ್ಟು ಹೋದವು. ಸುಳ್ಸುದ್ದಿಯನ್ನು ಹರಡುವ ವಾಟ್ಸಾಪ್‌ಗಳು, ಸುದ್ದಿಯನ್ನು ತಿರುಚುವ ಯೂಟ್ಯೂಬರ್‌ಗಳು ಸಾಮಾಜಿಕ ಮಾಧ್ಯಮಗಳ ವಿಶ್ವಾಸಾರ್ಹತೆಯನ್ನೂ ಹಾಳು ಮಾಡಿದವು. ಸಾಮಾಜಿಕ ಮಾಧ್ಯಮಗಳಲ್ಲಿ ಬಿತ್ತರಿಸಲ್ಪಟ್ಟ ಸುದ್ದಿಗಳು ಅಸಲಿಯೋ ನಕಲಿಯೋ ಎಂದು ವಿಶ್ಲೇಷಿಸಲೆಂದೇ ಕೆಲವು ಫ್ಯಾಕ್ಟ್ ಚೆಕಿಂಗ್ ಮಾಧ್ಯಮಗಳು ಹುಟ್ಟಿಕೊಂಡವು. ಆದರೆ ಅವುಗಳೂ ಅಜೆಂಡಾಗಳ ಮೇಲೆಯೇ ನಿರೂಪಿತಗೊಳ್ಳಲು ಆರಂಭವಾದಾಗ ಫ್ಯಾಕ್ಟ್ ಚೆಕ್ಕರ್‌ಗಳ ವಿಶ್ವಾಸಾರ್ಹತೆಯೂ ಕುಂದಿತು. ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ತಲುಪಲು ಎಲ್ಲ ರಾಜಕೀಯ ಪಕ್ಷಗಳು ಐಟಿ ಸೆಲ್‌ಗಳನ್ನು ಹೊಂದಿವೆ.

ಸಾಮಾಜಿಕ ಮಾಧ್ಯಮದಲ್ಲಿ ಸ್ವಲ್ಪ ಮಟ್ಟಿಗೆ ಹಿಂದಿದ್ದ ಕಾಂಗ್ರೆಸ್ ಪಕ್ಷವು ೨೦೨೧ರಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪಕ್ಷದ ಪರವಾಗಿ ಪ್ರಚಾರ ಕೈಗೊಳ್ಳಲು, ಟ್ರೆಂಡ್ ಗಳನ್ನು ಸೃಷ್ಟಿಸಲು ೫ ಲಕ್ಷ ಸೋಶಿಯಲ್ ಮೀಡಿಯಾ ವಾಲಂಟಿಯರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಿದೆ ಎಂದು ಘೋಷಿಸಿತ್ತು. ಇಂದು ಸಾಮಾಜಿಕ ಮಾಧ್ಯಮದಲ್ಲಿ ಇತರೆ ಪಕ್ಷಗಳಿಗಿಂತ ಕಾಂಗ್ರೆಸ್ ಪಕ್ಷವು ಹೆಚ್ಚು ಸಕ್ರಿಯವಾಗಿದೆ. ೨೦೨೪ರ ಚುನಾವಣೆಯ ಸಂದರ್ಭದಲ್ಲಿ ಪ್ರಚಾರ ಹಾಗೂ ಅಪಪ್ರಚಾರಗಳಿಗೆ ಸಾಮಾಜಿಕ ಮಾಧ್ಯಮ ಗಳನ್ನು ಧಾರಾಳವಾಗಿ ಬಳಸಿಕೊಳ್ಳಲಾಯಿತು. ಈ ಬಾರಿಯ ಮಹಾ ಚುನಾವಣೆಯಲ್ಲಿ ಸುಳ್ಳುಗಳೇ ಹೆಚ್ಚು ವಿಜೃಂಭಿಸಿವೆ ಎನ್ನಬಹುದು.

ಕೇಂದ್ರದಲ್ಲಿ ಬಿಜೆಪಿಯು ಪುನಃ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ಬದಲಿಸಲಿದೆ, ಮೀಸಲಾತಿಯನ್ನು ತೆಗೆದು ಹಾಕಲಿದೆ, ಸಿಎಎ ಜಾರಿಯಿಂದಾಗಿ ಮುಸಲ್ಮಾನರಿಗೆ ಅನ್ಯಾಯವಾಗಲಿದೆ, ಕೇಂದ್ರ ಸರಕಾರವು ಅದಾನಿ ಅಂಬಾನಿಗಳ ಒಳಿತಿಗಾಗಿ ಮಾತ್ರ ಕೆಲಸಮಾಡುತ್ತಿದೆ ಎಂಬೆ ರೀತಿಯ ಅಪಪ್ರಚಾರಗಳನ್ನು ಪ್ರತಿಪಕ್ಷಗಳು ನಡೆಸಿದವು. ಹಾಗೆ ನೋಡಿದರೆ ಈ ಬಾರಿ ಪ್ರತಿಪಕ್ಷಗಳು ಸುಳ್ಳು ಹಬ್ಬಿಸುವುದನ್ನೇ ಚುನಾವಣಾ ಕಾರ್ಯತಂತ್ರವಾಗಿ ಬಳಸಿದಂತಿದೆ. ಇದರ ರುಚಿ ೨೦೨೩ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿತ್ತು. ಕಾಂಗ್ರೆಸ್ ಪಕ್ಷವು ಪೇಸಿಎಂ, ೪೦ ಪರ್ಸೆಂಟ್ ಕಮಿಷನ್ ಸರಕಾರ ಎಂಬೆ ರೀತಿಯ ಪ್ರಚಾರವನ್ನು ವ್ಯವಸ್ಥಿತವಾಗಿ ನಡೆಸಿದ ಕಾರಣ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಸೋಲು ಉಂಟಾಗಿ ಕಾಂಗ್ರೆಸ್ ಪಕ್ಷವು ಗೆಲುವನ್ನು ಪಡೆದಿತ್ತು. ಚುನಾವಣಾ ಸಂದರ್ಭದಲ್ಲಿ ಮಾಡಿದ್ದ ಯಾವೊಂದು ಆರೋಪವನ್ನೂ ಇದುವರೆಗೂ ಸಾಬೀತುಪಡಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ.

ಲೋಕಸಭಾ ಚುನಾವಣೆಗಳು ಮುಗಿದರೂ ಸುಳ್ಳು ಆರೋಪಗಳು ನಿಂತಿಲ್ಲ. ಕೇಂದ್ರ ಸರಕಾರದ ಮೇಲೆ ರಚನಾತ್ಮಕ ಟೀಕೆಗಳನ್ನು ನಡೆಸಲು ಸಾಕಷ್ಟು
ವಿಷಯಗಳು ಇವೆ. ಆದರೆ ಪ್ರತಿಪಕ್ಷಗಳು ಕೇವಲ ನಕಾರಾತ್ಮಕ ತಂತ್ರಗಳನ್ನೇ ಹೆಚ್ಚು ಅವಲಂಬಿಸುತ್ತಿರುವುದು ದೇಶದ ಹಿತದೃಷ್ಟಿಯಿಂದ ಏನೇನೂ
ಒಳ್ಳೆಯದಲ್ಲ. ಚುನಾವಣೆಯ ನಂತರವೂ ಸುಳ್ಳು ಆರೋಪಗಳು ಮುಂದುವರಿದಿವೆ. ಇತ್ತೀಚೆಗೆ ಲೋಕಸಭೆಯಲ್ಲಿ ನಡೆಸಿದ ಭಾಷಣದಲ್ಲಿ ಪ್ರತಿಪಕ್ಷ
ನಾಯಕ ರಾಹುಲ್ ಗಾಂಽ ಅಗ್ನಿವೀರ ಅಜಯ್ ಕುಮಾರ್ ವಿಷಯವನ್ನು ಪ್ರಸ್ತಾಪಿಸಿ ಅಗ್ನಿವೀರರು ಸೇವಾ ಸಂದರ್ಭದಲ್ಲಿ ಸಾವಿಗೀಡಾದರೆ ಅವರಿಗೆ
ಯಾವುದೇ ರೀತಿಯ ಪರಿಹಾರವನ್ನು ಕೇಂದ್ರ ಸರಕಾರವು ಕೊಡುತ್ತಿಲ್ಲ ಎಂದು ಆರೋಪಿಸಿದರು. ರಾಹುಲ್ ಆರೋಪಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಮೃತ ಅಗ್ನಿವೀರನ ಕುಟುಂಬಕ್ಕೆ ಸುಮಾರು ೯೮ ಲಕ್ಷ ರುಪಾಯಿಗಳ ಪರಿಹಾರವನ್ನು ನೀಡಲಾಗಿದೆ ಎಂದು
ಸ್ಪಷ್ಟನೆ ನೀಡಿದರು. ಇಷ್ಟಕ್ಕೂ ಸುಮ್ಮನಾಗದ ರಾಹುಲ್ ಗಾಂಧಿ ತಾನು ಮೃತನ ಕುಟುಂಬವನ್ನು ಭೇಟಿ ಮಾಡಿದ ವಿಡಿಯೊವನ್ನು ಮಾಧ್ಯಮಗಳಲ್ಲಿ
ಹರಿಯಬಿಟ್ಟು ಮೃತನ ತಂದೆ ತನಗೆ ಯಾವುದೇ ಪರಿಹಾರ ಇದುವರೆಗೂ ಸಿಕ್ಕಿಲ್ಲ ಎಂದು ಹೇಳಿಕೆ ನೀಡಿದ್ದಾರೆ ಎಂದು ಹೇಳಿದರು.

ರಾಹುಲ್ ಗಾಂಧಿಯವರ ಆರೋಪಕ್ಕೆ ಭಾರತೀಯ ಸೇನೆಯೇ ಪ್ರತಿಕ್ರಿಯಿಸಿ ಮೃತ ಅಜಯ್ ಕುಟುಂಬಕ್ಕೆ ಕೊಡಬೇಕಾದ ೧.೬೫ ಕೋಟಿ ರುಪಾಯಿಗಳ ಪರಿಹಾರ ದಲ್ಲಿ ೯೮.೩೯ ಲಕ್ಷ ರುಪಾಯಿಗಳನ್ನು ಈಗಾಗಲೇ ಕೊಡಲಾಗಿದ್ದು, ಉಳಿದ ಸರಿಸುಮಾರು ೬೭ ಲಕ್ಷ ರುಪಾಯಿಗಳನ್ನು ಪೋಲೀಸು ಪರಿಶೀಲನೆಯ ನಂತರ ಶೀಘ್ರವೇ ಹಸ್ತಾಂತರಿಸಲಾಗುವುದು ಎಂದು ಸ್ಪಷ್ಟೀಕರಣವನ್ನು ಕೊಡಬೇಕಾಯಿತು. ಅಗ್ನಿಪಥ ಯೋಜನೆಯ ಕುರಿತಾಗಿ ರಾಜಕೀಯ ಪ್ರೇರಿತ ಅಪಪ್ರಚಾರ ಎಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ ಎಂದರೆ ಹರಿಯಾಣದ ಜಾಟ್ ಸಮುದಾಯದ ಖಾಪ್ ಪಂಚಾಯತ್ ತನ್ನ ಸಮುದಾಯದ ಯುವಕರು ಅಗ್ನಿಪಥ್ ಯೋಜನೆಯನ್ನು ಸೇರುವುದರ ವಿರುದ್ಧ ನಿಷೇಧವನ್ನು ಹೇರುವಂತಾಗಿದೆ.

೨೦೨೨ರಲ್ಲಿ ಅಗ್ನಿಪಥ ಯೋಜನೆಯನ್ನು ಸೇರಲು ೩೪ ಲಕ್ಷ ವಿದ್ಯಾರ್ಥಿಗಳು ತಮ್ಮನ್ನು ನೊಂದಾಯಿಸಿಕೊಂಡಿದ್ದರು ಎಂದರೆ ಆ ಯೋಜನೆಗೆ ಯಾವ
ರೀತಿಯ ಜನಸ್ಪಂದನೆ ಸಿಕ್ಕಿದೆ ಎಂಬುದು ಅರ್ಥ ವಾಗಬಹುದು. ಭಾರತದಲ್ಲಿ ಪ್ರಜಾಪ್ರಭುತ್ವವು ಆಪಾಯದಲ್ಲಿದೆ ಎಂದು ಪ್ರತಿಪಕ್ಷಗಳು ಆರೋಪಿಸು ತ್ತವೆ. ಆದರೆ  ದೇಶದ ೧೧ ರಾಜ್ಯಗಳಲ್ಲಿ ಕಾಂಗ್ರೆಸ್ ಹಾಗೂ ಇಂಡಿ ಅಲಾಯ ಪಕ್ಷಗಳು ಅಧಿಕಾರದಲ್ಲಿವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೨೪೦ ಸ್ಥಾನಗಳಿಗೆ ಕುಸಿದಾಗ ಹಾಗೂ ಕಾಂಗ್ರೆಸ್ ೯೯ಸ್ಥಾನಗಳನ್ನು ಗೆzಗ ಪ್ರತಿಪಕ್ಷಗಳು ಇದು ಪ್ರಜಾಪ್ರಭುತ್ವದ ವಿಜಯ ಎಂದು ಬಣ್ಣಿಸುತ್ತಿವೆ.

ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ ಎಂದು ಈ ಹಿಂದೆ ಮಾಡಿರುವ ಆರೋಪಕ್ಕೆ ಅರ್ಥವೆಲ್ಲಿದೆ? ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಅಪಪ್ರಚಾರವು ಮೊದಲಿ ನಿಂದಲೂ ನಡೆದುಕೊಂಡು ಬಂದಿದೆ. ಪ್ರತಿಪಕ್ಷಗಳು ಚುನಾವಣೆಗಳನ್ನು ಸೋತಾಗ ಮಾತ್ರ ಮತಯಂತ್ರದ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಕರ್ನಾಟಕ, ಹಿಮಾಚಲ ಪ್ರದೇಶ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ, ತಮಿಳುನಾಡಿನಲ್ಲಿ ಡಿಎಂಕೆ ಗೆzಗ, ಕೇರಳದಲ್ಲಿ ಕಮ್ಯುನಿ ಗೆದ್ದಾಗ, ದೆಹಲಿ ಹಾಗೂ ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷವು ಗೆದ್ದಾಗ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ
ಟಿಎಂಸಿ ಗೆದ್ದಾಗ ಮತಯಂತ್ರವನ್ನು ಯಾರೂ ದೂರಲಿಲ್ಲ.

ಆದರೆ ಬಿಜೆಪಿಯೂ ರಾಜ್ಯ ಚುನಾವಣೆ ಹಾಗೂ ಕೇಂದ್ರ ಚುನಾವಣೆಗಳನ್ನು ಗೆದ್ದಾಗ ಮಾತ್ರ ಮತಯಂತ್ರಗಳ ಬಗ್ಗೆ ಅಪಸ್ವರಗಳೇಳುತ್ತವೆ. ಮೊನ್ನೆಯ ಲೋಕಸಭಾ ಚುನಾವಣೆಯ ಫಲಿತಾಂಶವು ಪ್ರಕಟವಾದ ನಂತರ ರಾಹುಲ್ ಗಾಂಧಿಯವರು ಇವಿಎಂಗಳು ಬ್ಲ್ಯಾಕ್ ಬಾಕ್ಸಿನಂತೆ ಇದ್ದು ಅವು ಪರಿಶೀಲನೆಗೆ ದಕ್ಕುವುದಿಲ್ಲ ಎಂದು ಹೇಳಿದ್ದಾರೆ. ಆದರೆ ೨೦೧೭ರಲ್ಲಿ ಚುನಾವಣಾ ಆಯೋಗವು ಇವಿಎಂ ಅನ್ನು ಹ್ಯಾಕ್ ಮಾಡಲು ರಾಜಕೀಯ ಪಕ್ಷ
ಗಳಿಗೆ ಪಂಥಾಹ್ವಾನವನ್ನು ಕೊಟ್ಟಾಗ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಯಾವ ಪಕ್ಷಗಳೂ ಇವಿಎಂ ಅನ್ನು ಹ್ಯಾಕ್ ಮಾಡುವ ಪ್ರಯತ್ನವನ್ನೇ
ಮಾಡಲಿಲ್ಲ. ಏಕೆಂದರೆ ಇವಿಎಂ ಅನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು.

ದೇಶದ ಉದ್ಯಮಪತಿಗಳನ್ನು ಗುರಿ ಮಾಡಿ ದಾಳಿ ಮಾಡುತ್ತಿರುವುದು ಪ್ರತಿಪಕ್ಷಗಳ ಹವ್ಯಾಸವಾಗಿ ಬಿಟ್ಟಿದೆ. ಭಾರತ ವಿರೋಽ ಜಾರ್ಜ್ ಸೋರೋಸ್
ಬೆಂಬಲಿತ ಹಿಂಡೆನ್‌ಬರ್ಗ್ ಹೆಸರಿನ ಶಾರ್ಟ್ ಸೆಲ್ಲಿಂಗ್ ಸಂಸ್ಥೆಯು ಎರಡು ವರ್ಷಗಳ ಮೊದಲು ಅದಾನಿ ಸಂಸ್ಥೆಯ ಮೇಲೆ ಇಲ್ಲಸಲ್ಲದ ಆರೋಪ ಗಳನ್ನು ಮಾಡಿ ವರದಿ ಬಿಡುಗಡೆ ಮಾಡಿದಾಗ, ಮೋದಿ ವಿರುದ್ಧ ಹೊಸ ಅಸ ಸಿಕ್ಕಿತೆಂದು ಸಂಭ್ರಮಿಸಿದ್ದ ಪ್ರತಿಪಕ್ಷಗಳು, ಮೋದಿ ಹಾಗೂ ಅದಾನಿ
ನಡುವೆ ನೇರ ಸಂಬಂಧವಿದೆಯೆಂದು ಆರೋಪಿಸಿ ಗುಬ್ಬಿಸಿದ್ದವು.

ಈ ಅಪಪ್ರಚಾರದಿಂದಾಗಿ ಅದಾನಿ ಸಮೂಹದ ಮಾರಕಟೆ ಮೌಲ್ಯವು ೧೫೦ ಬಿಲಿಯನ್ ಡಾಲರ್‌ಗಳಷ್ಟು (ಅಂದಿನ ರುಪಾಯಿ ಮೌಲ್ಯ ದಲ್ಲಿ ಸುಮಾರು ೧೨ ಲಕ್ಷ ಕೋಟಿ ರುಪಾಯಿಗಳು) ಕುಸಿದಿತ್ತು. ಇದರಿಂದಾಗಿ ಅದಾನಿ ಸಂಸ್ಥೆಯ ಮೌಲ್ಯ ಮಾತ್ರವಲ್ಲ, ಆ ಸಂಸ್ಥೆಯ ಮೇಲೆ ಹೂಡಿಕೆ ಮಾಡಿದ್ದ ದೇಶದ ಲಕ್ಷಾಂತರ ಷೇರುದಾರರೂ ಕೋಟ್ಯಂತರ ರುಪಾಯಿಗಳನ್ನು ಕಳೆದುಕೊಳ್ಳ ಬೇಕಾಯಿತು. ಹಿಂಡೆನ್‌ಬರ್ಗ್ ಆರೋಪಗಳು ಸುಳ್ಳೆಂದು ಸುಪ್ರೀಂ ಕೋರ್ಟಿನ ಸಾಬೀತಾ ಯಿತು. ಅದಾನಿ ಸಂಸ್ಥೆಯ ಮೌಲ್ಯ ಪುನಃ ಹೆಚ್ಚಾಗಿದೆ. ಇನ್ನು ಅಂಬಾನಿಯನ್ನು ಟೀಕಿಸುತ್ತಿದ್ದವರಲ್ಲಿ ಹೆಚ್ಚಿನವರು ಮೊನ್ನೆ ನಡೆದ ಮುಖೇಶ್ ಅಂಬಾನಿ ಮಗನ ಅದ್ದೂರಿಯ ಮದುವೆಯಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದಾರೆ!

ಮೇಕ್ ಇನ್ ಇಂಡಿಯಾ ಯೋಜನೆಯನ್ನು ಆರಂಭಿಸಿದಾಗ ಆ ಯೋಜನೆಯನ್ನು ಅಪಹಾಸ್ಯ ಮಾಡಲಾಗಿತ್ತು. ಇಂದು ಮೇಕ್ ಇನ್ ಇಂಡಿಯಾ ಹಾಗೂ ಆತ್ಮ ನಿರ್ಭರ್ ಭಾರತ್ ಯೋಜನೆಗಳು ದೇಶದ ಅಭಿವೃದ್ಧಿ ದರವು ೨೦೨೩-೨೪ರಲ್ಲಿ ಶೇ.೮.೨ ರಷ್ಟು ಗಳಿಗೆ ಏರುವಂತೆ ಮಾಡಿ ಭಾರತವನ್ನು ಜಗತ್ತಿನ ಅತೀ ವೇಗವಾಗಿ ಬೆಳೆಯುವ ಆರ್ಥಿಕತೆಯ ದೇಶವನ್ನಾಗಿಸಿವೆ. ಜಗತ್ತಿನ ಅತೀ ದೊಡ್ಡ ಆರ್ಥಿಕತೆ ಯುಳ್ಳ ದೇಶಗಳ ಪಟ್ಟಿಯಲ್ಲಿ ಭಾರತವಿಂದು ೧೦ನೇ
ಸ್ಥಾನದಿಂದ ಐದನೇ ಸ್ಥಾನಕ್ಕೇರಿದೆ. ಈ ಯೋಜನೆಯ ಭಾಗವಾಗಿ ೧.೨೭ ಲಕ್ಷ ನವೋದ್ಯಮಗಳು ದೇಶದಲ್ಲಿ ರೂಪುಗೊಂಡಿವೆ. ಈ ನವೋದ್ಯಮಗಳು ಸುಮಾರು ೧೩ ಲಕ್ಷ ನೇರ ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸಿವೆ.

ನವೋದ್ಯಮಗಳು ಭಾರದ ಜಿಡಿಪಿಗೆ ಸುಮಾರು ೧೪೦ ಶತಕೋಟಿ ಡಾಲರ್‌ಗಳ ಕೊಡುಗೆಯನ್ನು ನೀಡಿವೆ. ೨೦೩೦ರಲ್ಲಿ ಭಾರತದ ರಫ್ತಿಗೆ ಒಂದು ಟ್ರಿಲಿಯನ್ ಡಾಲರ್ ಮೌಲ್ಯವನ್ನು ಈ ನವೋದ್ಯಮಗಳು ಸೇರಿಸಲಿವೆ ಎಂದು ಅಂದಾಜಿ ಸಲಾಗಿದೆ. ೨೦೧೩-೧೪ ರಲ್ಲಿ ಭಾರತದ ರ- ೩೩೬ ಬಿಲಿಯನ್ ಡಾಲರ್‌ಗಳಾಗಿದ್ದರೆ ೨೦೨೩-೨೪ ರಲ್ಲಿ ಅದು ಶೇ.೨೩೦ರಷ್ಟು ಅಭಿವೃದ್ಧಿಯನ್ನು ಕಂಡು ೭೭೮ಬಿಲಿಯನ್ ಡಾಲರ್‌ಗಳಿಗೇರಿದೆ. ೨೦೧೪ರ ಮೊದಲು
ಸೈನಿಕರ ಶೂ, ಯುದ್ಧೋಪಕರಣಗಳು, ಬುಲೆಟ್ — ಅಂಗಿಗಳು ಹೀಗೆ ಪ್ರತಿಯೊಂದಕ್ಕೂ ವಿದೇಶಗಳನ್ನು ಅವಲಂಬಿಸಿದ್ದ ಭಾರತ ೨೦೨೩-೨೪ರಲ್ಲಿ
ದೇಶೀಯವಾಗಿ ೧.೩ ಲಕ್ಷ ಕೋಟಿ ರುಪಾಯಿಗಳ ಮೌಲ್ಯದ ಯುದ್ಧ ಸಾಮಾಗ್ರಿಗಳನ್ನು ಉತ್ಪಾದಿಸಿದೆ ಎಂದರೆ ಮೇಕ್ ಇನ್ ಇಂಡಿಯಾ – ಆತ್ಮನಿರ್ಭರ್
ಭಾರತ್ ಯೋಜನೆಗಳ ಯಶಸ್ಸನ್ನು ಅರ್ಥಮಾಡಿಕೊಳ್ಳಬಹುದು.

ಕಳೆದ ಹತ್ತುವರ್ಷಗಳಲ್ಲಿ ಸರಕಾರವು ದೇಶದ ಪ್ರತೀ ಮನೆಗೆ ವಿದ್ಯುತ್ ಸಂಪರ್ಕ, ಅಡುಗೆ ಅನಿಲದ ಸಂಪರ್ಕ ಹಾಗೂ ಶೌಚಾಲಯವನ್ನು ಒದಗಿಸಿ
ಕೊಡುವಲ್ಲಿ ಯಶಸ್ವಿಯಾಗಿದ್ದು, ಇದೀಗ ಪ್ರತೀ ಮನೆಗೆ ಕುಡಿಯುವ ನೀರಿನ ಸಂಪರ್ಕವನ್ನು ಕೊಡುವ ಕಾರ್ಯವನ್ನು ಜಲ್ ಜೀವನ್ ಮಿಷನ್ ಮೂಲಕ ಮಾಡುತ್ತಿದ್ದು, ದೇಶದ ೭೭.೫% ಮನೆಗಳಿಗೆ ಈಗಾಗಲೇ ಸಂಪರ್ಕವನ್ನು ಕಲ್ಪಿಸಲಾಗಿದೆ. ೨೦೧೯ ರಲ್ಲಿ ಈ ಯೋಜನೆಯು ಆರಂಭವಾದ ನಂತರ ದೇಶದ ೧೧.೭೫ ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕವನ್ನು ಕೊಡಲಾಗಿದೆ.

ದ್ವಿಗುಣಗೊಂಡ ವಿಮಾನ ನಿಲ್ದಾಣಗಳು, ದೇಶದ ಎಲ್ಲಾ ನಗರಗಳಿಗೆ ವಿಸ್ತರಿಸಿಕೊಂಡ ಮೆಟ್ರೋಗಳು, ವಿದ್ಯುದೀಕರಣಗೊಂಡು ಆಧುನಿಕವಾದ ರೈಲ್ವೇ,
ದ್ವಿಗುಣಗೊಂಡ ಹೈವೇಗಳು ಹಾಗೂ ಎಕ್ಸ್ ಪ್ರೆಸ್ ವೇಗಳು, ಹೆಚ್ಚಾದ ವಿದೇಶಿ ವಿನಿಮಯ ಸಂಗ್ರಹ ಹಾಗೂ ನೇರ ವಿದೇಶೀ ಹೂಡಿಕೆ, ನಿಯಂತ್ರಣ
ದಲ್ಲಿರುವ ಹಣದುಬ್ಬರ, ದೇಶ ಡಿಜಿಟಲ್ ಇಂಡಿಯಾ ಆಗಿ ಬದಲಾದ ರೀತಿ ಈ ಎಲ್ಲಾ ಧನಾತ್ಮಕ ವಿಷಯಗಳು ಸುದ್ದಿಯಾಗುವುದೇ ಇಲ್ಲ.  ಮಿಥ್ಯಗಳ ಮೆರವಣಿಗೆಯಲ್ಲಿ ತಥ್ಯ ಮಂಕಾಗುತ್ತಿದೆ.

(ಲೇಖಕರು : ಹವ್ಯಾಸಿ ಬರಹಗಾರರು)

Leave a Reply

Your email address will not be published. Required fields are marked *