ತನ್ನಿಮಿತ್ತ
ಗಣೇಶ್ ಭಟ್ಟ
ಪೌರಾಣಿಕವಾಗಿ ನಾರಾಯಣನಿಗೆ ಪ್ರಿಯವಾದ ಮರಗಳಲ್ಲಿ ನೆಲ್ಲಿಯ ಮರ ಕೂಡ ಒಂದು. ಬ್ರಹ್ಮನ ಅಮಲವಾದ (ಶುದ್ಧವಾದ) ‘ಕ’(ಜಲ)ದಿಂದ ಹುಟ್ಟಿದ್ದರಿಂದ ‘ಆಮಲಕ’ ಎಂದು ಹೆಸರು ಬಂತು. ಆನಂದವನ್ನು ಧರಿಸಿ ಹುಟ್ಟಿ ಬೆಳೆದ ವೃಕ್ಷಕ್ಕೆ ‘ಧಾತ್ರಿ’ ಎಂದೂ ಹೆಸರಾಯಿತು. ಇಂತಹ ನೆಲ್ಲಿಯ ಟೊಂಗೆಯೊಂದಿಗೆ ತುಳಸಿಯನ್ನು ಪೂಜಿಸಿದರೆ ವಿಷ್ಣುಗೆ ಪ್ರಿಯವಾಗುವುದು ಎಂದು ಪುರಾಣಗಳ ನಂಬಿಕೆ.
ನಾವು ನಮ್ಮ ಜೀವನದಲ್ಲಿ ಬಹಳಷ್ಟು ಸಮಯ ನಿದ್ರೆ ಮಾಡುತ್ತೇವೆ. ಮಾನವನೂ ಸೇರಿದಂತೆ ಎಲ್ಲಾ ಜೀವಿಗಳ ಬೆಳವಣಿಗೆಯ ಮೂಲ ನಿದ್ದೆ ಅಥವಾ ವಿರಾಮ. ಈ ಒಂದು ವಿರಾಮವು ಅಥವಾ ಅಲ್ಪವಿರಾಮವು ಮುಂದಿನ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಉತ್ಸಾಹವನ್ನು, ಒಂದು ಹುಮ್ಮಸ್ಸನ್ನು ನೀಡುವುದು.
ನಿದ್ದೆ ಎನ್ನುವುದು ಒಂದು ದಿನದ ವಿರಾಮ. ರಾತ್ರಿಯ ಒಳ್ಳೆಯ ನಿದ್ದೆ ದಿನದ ಉತ್ಸಾಹದ ಚಟುವಟಿಕೆಗಳಿಗೆ ಕಾರಣ. ಪುರಾಣಗಳ
ಪ್ರಕಾರ ಶ್ರೀಮನ್ನಾರಾಯಣನು ಆಷಾಢ ಶುದ್ಧ ಏಕಾದಶಿಯಂದು ಮಲಗಿ ಕಾರ್ತಿಕ ಶುದ್ಧ ದ್ವಾದಶಿಯಂದು ಅಂದರೆ ‘ಉತ್ಥಾನ ದ್ವಾದಶಿ’ ಯಂದು ಏಳುವನು. ಈ ದಿನವನ್ನೇ ನಾವು ‘ದೇವೋತ್ಥಾನ ದ್ವಾದಶಿ’, ‘ಪ್ರಬೋಧೋತ್ಸವ’, ‘ತುಳಸಿವಿವಾಹ’ ಎಂದು ಕರೆಯುವುದು. ಇದು ದೇವದೇವನ ಎಚ್ಚರದ ಹಬ್ಬವಾಗಿದೆ. ಈ ಎಚ್ಚರದಲ್ಲಿ ದೇವತ್ವವಿದೆ. ದೇವತ್ವವೆಂದರೆ ಎಚ್ಚರ. ಶಂಖಾ ಸುರನನ್ನು ಮರ್ದಿಸುವಾಗ ಉಂಟಾದ ಆಯಾಸವನ್ನು ಹೋಗಲಾಡಿಸಿಕೊಳ್ಳಲು ವಿಷ್ಣುವು ಕ್ಷೀರಸಾಗರದಲ್ಲಿ ಪವಡಿಸುವನು.
ಉತ್ಥಾನ ದ್ವಾದಶಿಯಂದು ಏಳುವನು. ವಿಷ್ಣುವಿನ ಈ ಜಾಗೃತಿ ನಮಗೊಂದು ಹಬ್ಬ. ಜಗದ ಆದಿ ಮೂಲವಾದ ಭಗವಂತನ ಲೀಲೆ ಅಪಾರ. ನಮ್ಮ ದೃಷ್ಟಿಯಿಂದ ಮಾತ್ರ ಆತ ನಿದ್ರಿಸುವುದು. ಆದರೆ ಆತ ಎಂದಿಗೂ ಸದಾ ಎಚ್ಚರ, ನಿತ್ಯಜಾಗೃತ. ಅದನ್ನೇ ಉಪನಿಷತ್ತು ‘ಚರೈವೇತಿ ಚರೈವೇತಿ’ ಎಂದಿರುವುದು. ಆತನೇಂದೂ ನಿದ್ರಿಸಲಾರ. ಅನಂತ ಕಾಲದಲ್ಲೂ ಆತ ಪ್ರತ್ಯಕ್ಷ. ಭಗವಂತನ ಕಣ್ಣು ತಪ್ಪಿಸಿ ಒಂದು ಘಟನೆಯೂ ನಡೆಯಲು ಸಾಧ್ಯವಿಲ್ಲ. ಈಗಾಗಲೇ ವಿಷ್ಣುಪ್ರಿಯೆಯಾದ ಲಕ್ಷ್ಮಿಯನ್ನು ದೀಪಾವಳಿಯಂದು ಪೂಜಿಸಿದ ನಾವು ವಿಷ್ಣುವಿಗೆ ಅಷ್ಟೇ ಪ್ರಿಯಳಾದ ತುಳಸಿಯನ್ನೂ ಪೂಜಿಸುವ ದಿನ ‘ಪ್ರಬೋಧಿನಿ ದ್ವಾದಶಿ’.
ತುಳಸಿಯ ಹುಟ್ಟು: ವೈದಿಕ ವಾಙ್ಮಯದ ಪ್ರಕಾರ ಸೂರ‌್ಯ ದೊಡ್ಡ ದೇವತೆ. ಹರಿ, ವಿಷ್ಣು, ಇಂದ್ರ ಮುಂತಾದ ದೇವತೆಗಳು ಸೂರ‌್ಯನ ಪರ್ಯಾಯ ಪದಗಳು. ಮಳೆಗಾಲದ ಸುಮಾರು ನಾಲ್ಕು ತಿಂಗಳುಗಳ ಕಾಲ ಸೂರ್ಯ ಆ ಮಳೆಮೋಡಗಳಲ್ಲಿ
ಅಡಗಿರುವನು ಅಥವಾ ಮೋಡಗಳು ಆತನನ್ನು ಮರೆಮಾಡುವುದು. ಅದಕ್ಕಾಗಿಯೇ ಋಷಿಮುನಿಗಳು ಈ ನಾಲ್ಕು ತಿಂಗಳುಗಳ ಕಾಲ ಶ್ರೀಹರಿ ನಿದ್ರೆ ಮಾಡುವನು ಎಂದಿದ್ದಾರೆ.
ಮಳೆಗಾಲದ ನಂತರ ಏಳುವನು ಅಥವಾ ನಮ್ಮಲ್ಲಿರುವ ಆತನನ್ನು ಎಬ್ಬಿಸುವುದು ನಮ್ಮ ಮನೆಯ ತುಳಸಿಯಲ್ಲಿ ಸನ್ನಿತನಾಗಿ ರುವ, ಮನದಲ್ಲಿ ಸನ್ನಿತನಾಗಿರುವ ಆತನನ್ನು ಎಬ್ಬಿಸುವುದೇ ‘ಪ್ರಬೋಧಿನಿ’ ಅಥವಾ ತುಳಸಿಹಬ್ಬ. ಪುರಾಣಗಳ ಪ್ರಕಾರ ದೇವಾನುದೇವತೆಗಳು ಕ್ಷೀರಸಾಗರವನ್ನು ಮಥನ ಮಾಡಿದಾಗ ಕಾಮಧೇನು – ಕಲ್ಪವೃಕ್ಷ ಮುಂತಾದ 14 ವಸ್ತುಗಳು, ರತ್ನಗಳು ಹೊರಹೊಮ್ಮಿ ಕೊನೆಯಲ್ಲಿ ‘ಅಮೃತಕಲಶ’ ಹೊರಬಂತು.
ಮಹಾವಿಷ್ಣು ಅದನ್ನು ಕೈಯಲ್ಲಿ ತೆಗೆದುಕೊಂಡಾಗ ಆತನ ಕಣ್ಣುಗಳಿಂದ ಆನಂದಬಾಷ್ಪ ಹೊರಹೊಮ್ಮಿ ಅಮೃತಕಲಶದಲ್ಲಿ ಬಿತ್ತು ‘ನಿಖಿಲಭುವನ ಗಾತ್ರೇ ವಿಷ್ಣು ಹರ್ಷಾಶ್ರುಜಾತೇ’ ಅಲ್ಲಿಂದ ಒಂದು ಗಿಡ ಹುಟ್ಟಿತು. ಆ ಗಿಡಕ್ಕೆ ಇನ್ನೊಂದು ಹೋಲಿಕೆ ಅಥವಾ ತುಲನೆ ಇಲ್ಲವಾದ್ದರಿಂದ ‘ತುಳಸೀ’ ಎಂದು ಹೆಸರಿಡಲಾಯಿತು. ಮುಂದೆ ವಿಷ್ಣು ಲಕ್ಷ್ಮೀಯೊಂದಿಗೆ ತುಳಸಿಯನ್ನು ವಿವಾಹವಾದ ಎಂದು ಪುರಾಣಗಳು ಹೇಳುತ್ತವೆ.
ತುಳಸಿಯೊಂದಿಗೆ ನೆಲ್ಲಿಗೆ ಪೂಜೆ: ಸ್ಕಂದ ಪುರಾಣದ ವೈಷ್ಣವ ಖಂಡದಲ್ಲಿ ಕಾರ್ತಿಕ ಮಾಸದ ಮಹತ್ವವನ್ನು 15 ಅಧ್ಯಾಯ ಗಳಲ್ಲಿ ಹೇಳಿದೆ. ಇಡೀ ಜಗತ್ತು ಜಲದಲ್ಲಿ ಮುಳುಗಿತ್ತು. ಆಗ ಬ್ರಹ್ಮ ಉದ್ವಿಗ್ನಗೊಂಡು ಎಚ್ಚರಗೊಂಡ. ನಾರಾಯಣನ ದರ್ಶನ ಪಡೆಯಲು ಬ್ರಹ್ಮ ಉತ್ಸುಕನಾಗಿದ್ದ. ನಾರಾಯಣನ ದರ್ಶನ ಪಡೆದಾಗ ಬ್ರಹ್ಮನ ಕಣ್ಣಿಂದ ಸಂತೋಷ ಧಾರೆ ಹೊರಬಂತು. ಆ ಕಣ್ಣೀರು ಭೂಮಿಯಲ್ಲಿ ಬಿದ್ದ ಸ್ಥಳದಲ್ಲಿ ನೆಲ್ಲಿ ಮರಗಳು ಹುಟ್ಟಿದವು.
ಪೌರಾಣಿಕವಾಗಿ ನಾರಾಯಣನಿಗೆ ಪ್ರಿಯವಾದ ಮರಗಳಲ್ಲಿ ನೆಲ್ಲಿಯ ಮರ ಕೂಡ ಒಂದು. ಬ್ರಹ್ಮನ ಅಮಲವಾದ (ಶುದ್ಧವಾದ) ‘ಕ’(ಜಲ)ದಿಂದ ಹುಟ್ಟಿದ್ದರಿಂದ ‘ಆಮಲಕ’ ಎಂದು ಹೆಸರುಬಂತು. ಆನಂದವನ್ನು ಧರಿಸಿ ಹುಟ್ಟಿ ಬೆಳೆದ ವೃಕ್ಷಕ್ಕೆ ‘ಧಾತ್ರಿ’
ಎಂದೂ ಹೆಸರಾಯಿತು. ಇಂತಹ ನೆಲ್ಲಿಯ ಟೊಂಗೆಯೊಂದಿಗೆ ತುಳಸಿಯನ್ನು ಪೂಜಿಸಿದರೆ ವಿಷ್ಣುಗೆ ಪ್ರಿಯವಾಗುವುದು ಎಂದು ಪುರಾಣಗಳ ನಂಬಿಕೆ.
ಆಚರಣೆಯ ವಿಧಿ-ವಿಧಾನ: ತುಳಸಿ ವಿವಾಹದ ಆಚರಣೆಯ ವಿಧಿ – ವಿಧಾನವನ್ನು ಧರ್ಮಸಿಂಧು ನಮಗೆ ಹೀಗೆ ತಿಳಿಸುವುದು. ಶ್ರೀದಾಮೋದರ ಪ್ರೀತ್ಯರ್ಥಂ ಪ್ರಬೋಧೋತ್ಸವಂ ಸಂಕ್ಷೇಪತಸ್ತುಲಸೀ ವಿವಾಹಂ ಚ ಕರಿಷ್ಯೆ॥ ತದಂಗತಯಾ ಪುರುಷಸೂಕ್ತೇನ ಧಿನಾ ಷೋಡಶೋಪಚಾರೈಃ ಶ್ರಿ ಮಹಾವಿಷ್ಣುಪೂಜಾಂ, ತುಲಸೀ ಪೂಜಾಂಚ ತಂತ್ರೇಣ ಕರಿಷ್ಯೇ॥ ಎಂದು ಸಂಕಲ್ಪಿಸಬೇಕು.
ತುಲಸಿ ಸನ್ನಿಧಿಯನ್ನು ಕಬ್ಬಿನ ಮೂಲಕ ಮಂಟಪ ಮಾಡಿ ಅಥವಾ ಮಂಟಪವನ್ನು ಮಾಡಿ ಕಬ್ಬಿನಿಂದ ಅಲಂಕರಿಸಿ, ಮಾನ ತೋರಣವನ್ನು ಕಟ್ಟಿ ಹೂವಿನಿಂದಲೂ ಅಲಂಕರಿಸುವರು. ನೆಲ್ಲಿಟೊಂಗೆ ಹಾಗೂ ಹುಣಸಿ ಟೊಂಗೆಗಳನ್ನು ತುಲಸಿಯೊಂದಿ ಗಿಟ್ಟು ಷೋಡಷ ಉಪಚಾರಗಳ ಮೂಲಕ ಪೂಜಿಸಿ ತುಳಸಿಯ ಸುತ್ತಲೂ ದೀಪ ಬೆಳಗಿಸಿ ಬ್ರಹ್ಮೇಂದ್ರರುದ್ರಾದಿ ಕುಬೇರಸೂರ್ಯ ಸೋಮಾದಿಭಿರ್ವಂದಿತ ವಂದನೀಯ ಬುಧ್ಯಸ್ವ ದೇವದೇವೇಶ ಜಗನ್ನಿವಾಸ ಮಂತ್ರಪ್ರಭಾವೇಣ ಸುಖೇನ ದೇವ॥
ಇಯಂಚ ದ್ವಾದಶೀದೇವ ಪ್ರಬೋಧಾರ್ಥಂತು ನಿರ್ಮಿತಾ ತ್ವಯೈವ ಸರ್ವಲೋಕಾನಾಂ ತಾರ್ಥಂ ಶೇಷ ಶಾಯಿನಾ॥
ಉತ್ತಿಷ್ಠೋತ್ತಿಷ್ಠ ಗೋವಿಂದ ತ್ಯಜನಿದ್ರಾಂಜಗತ್ಪತೇ ತ್ವಯೀಸುಪ್ತೆ ಜಗತ್ಸುಪ್ತಂ ಉತ್ಥಿತೇ ಜೋತ್ಥಿತಂ ಜಗತ್॥
ಎಂದು ಪ್ರಾರ್ಥಿಸಬೇಕು. ಕರ್ಮಸಮರ್ಪಣೆ ಮಾಡಿ, ಗೋವಿಂದ, ಗೋವಿಂದ ಎಂದು (ಪ್ರಬೋಧೋತ್ಸವ) ಅರ್ಪಿಸಿದ ನೈವೇದ್ಯಗಳನ್ನು ಎಲ್ಲರೂ ಸ್ವೀಕರಿಸುವುದು.
ತುಳಸಿ – ನೆಲ್ಲಿಯ ಸೇವನೆಯ ಮಹತ್ವ: ಪದ್ಮಪುರಾಣದ ಉತ್ತರಖಂಡದ ಇಪ್ಪತ್ನಾಲ್ಕನೇ ಅಧ್ಯಾಯದ ಪ್ರಕಾರ ಪತ್ರಂ ಪುಷ್ಪಂ ಫಲಂ ಮೂಲಂ ಶಾಖಾ ತ್ವಕ್
ಸ್ಕಂಧಸಾಂಜ್ಞಿತಮ್
ತುಲಸೀ ಸಂಭವಂ ಸರ್ವಂ ಪಾವನಂ
ಮೃತ್ತಿಕಾದಿಕಮ್॥
ತುಳಸಿಯ ಎಲೆ, ಹೂವು, ಕೊಂಬೆ, ಸಿಪ್ಪೆ, ಬೇರು, ಬುಡದಮಣ್ಣು, ಕಾಂಡ ಇವೆಲ್ಲವೂ ಪವಿತ್ರವಾದವುಗಳು. ಯಾರಮನೆಯಲ್ಲಿ ‘ತುಳಸಿ’ ಇರುವುದೋ ಆ ಮನೆಯಲ್ಲಿ ಲಕ್ಷ್ಮೀಯೂ ನೆಲೆಸಿರುವಳು. ತುಳಸಿಯನ್ನು ಪೂಜಿಸಿದರೆ ವಿಷ್ಣುಸಹಿತ ಎಲ್ಲರನ್ನೂ
ಪೂಜಿಸಿದಂತೆ. ತುಳಸಿಯ ವಾಯು ಪರಿಸರವನ್ನು ಶುದ್ಧಗೊಳಿಸುತ್ತದೆ. ಕೃಷ್ಣತುಳಸಿ, ಶ್ವೇತತುಳಸಿ, ಶ್ರೀತುಳಸಿ, ಕರ್ಪೂರ ತುಳಸಿ ಮುಂತಾದ ಅನೇಕ ಪ್ರಕಾರದ ತುಳಸಿಯ ಎಲೆಗಳನ್ನು ಸೇಸಿವಿದರೆ ಅಸ್ತಮಾ – ಕ್ಷಯ – ಜ್ವರ ಮುಂತಾದ ರೋಗಗಳಿಗೆ ರಾಮಬಾಣ ಎಂದು ಆಯುರ್ವೇದವೂ ಸಾರಿದೆ.
ನೆಲ್ಲಿಯೂ ಸಹ ಆಯುರ್ವೇದದ ಪ್ರಕಾರ ಆರೋಗ್ಯದ ದೃಷ್ಟಿಯಿಂದ ಯಾವುದೇ ಕಾಯಿಲೆಗಳಿಗೆ ಸಿದ್ಧ ಔಷಧ. ಕಫ – ವಾಯು – ಪಿತ್ತಗಳನ್ನು ನೆಲ್ಲಿಯು ಶಮನಗೊಳಿಸುವುದು. ಅದಕ್ಕಾಗಿಯೇ ನೆಲ್ಲಿಗೆ ‘ಅಮೃತ ಫಲ’ವೆಂದು ಹೆಸರು. ಹೀಗೆ ತುಲಸಿ – ನೆಲ್ಲಿ
– ಹುಣಸೆಯ ಸೇವನೆ ಆರೋಗ್ಯ- ಅಧ್ಯಾತ್ಮ ದೃಷ್ಟಿಯಿಂದಲೂ ಮಹತ್ವ ಪಡೆದಿದೆ.
ಮರಣಕಾಲದಲ್ಲಿ ತುಳಸಿ ದಳವನ್ನು ಬಾಯಲ್ಲಿ ಇಟ್ಟು ಗಂಗಾಜಲವನ್ನು ಹಾಕಿದರೆ ಮೋಕ್ಷವೆಂಬ ನಂಬಿಕೆ ಇದೆ. ಪುರುಷಸೂಕ್ತ ಪಠಿಸುತ್ತಾ ಸಾಲಿಗ್ರಾಮಕ್ಕೆ ತುಳಸಿದಳ ಇಟ್ಟು ಶಂಖದಿಂದ ಅಭಿಷೇಕ ಮಾಡಿದಾಗ ಅದು ತೀರ್ಥವಾಗುವುದು. ಹೀಗೆ ಜಲ ತೀರ್ಥ ವಾಗುವಲ್ಲಿ ತುಳಸಿಯ ಮಹತ್ವದ ಪಾತ್ರವಿದೆ.
ನಮ್ಮಲ್ಲಿಯ ಜಡತೆ – ಆಲಸ್ಯ- ನಿರುತ್ಸಾಹ -ಅಜ್ಞಾನ – ಅಕರ್ಮಣ್ಯತೆ ದೂರವಾಗಿ ನಾವು ಜಾಗೃತವಾಗುವುದು ಅವಶ್ಯಕವಾಗಿದೆ. ಇದಕ್ಕಾಗಿಯೇ ‘ಪ್ರಬೋಧೊತ್ಸವ’, ಆರೋಗ್ಯ- ಅಧ್ಯಾತ್ಮ ಎರಡೂ ದೃಷ್ಟಿಯಿಂದಲೂ ಅತ್ಯಂತ ಮಹತ್ವ ಪಡೆದ ಹಬ್ಬ
ತುಳಸಿ ಹಬ್ಬ. ನಮ್ಮ ಮನೆಯಲ್ಲಿರುವ, ಮನದಲ್ಲಿರುವ ಭಗವಂತನನ್ನು ಸನ್ಮಂಗಲಗಳನ್ನು ಪ್ರಾರ್ಥಿಸುವ ಪರ್ವ.
ಶಂಖಾಸುರನನ್ನು ಮರ್ದಿಸುವಾಗ ಉಂಟಾದ ಆಯಾಸವನ್ನು ಹೋಗಲಾಡಿಸಿಕೊಳ್ಳಲು ವಿಷ್ಣುವು ಕ್ಷೀರಸಾಗರದಲ್ಲಿ ಪವಡಿಸು ವನು. ಉತ್ಥಾನ ದ್ವಾದಶಿಯಂದು ಏಳುವನು. ವಿಷ್ಣುವಿನ ಈ ಜಾಗೃತಿ ನಮಗೊಂದು ಹಬ್ಬ. ಜಗದ ಆದಿ ಮೂಲವಾದ ಭಗವಂತನ ಲೀಲೆ ಅಪಾರ. ನಮ್ಮ ದೃಷ್ಟಿಯಿಂದ ಮಾತ್ರ ಆತ ನಿದ್ರಿಸುವುದು. ಆದರೆ ಆತ ಎಂದಿಗೂ ಸದಾ ಎಚ್ಚರ, ನಿತ್ಯಜಾಗೃತ.
ಅದನ್ನೇ ಉಪನಿಷತ್ತು ‘ಚರೈವೇತಿ ಚರೈವೇತಿ’ ಎಂದಿರುವುದು.