Friday, 20th September 2024

ಟ್ವಿಟರ್‌ ಅಕೌಂಟ್‌’ನಲ್ಲಿ ಸಿದ್ರಾಮಯ್ಯ -X ಸಿಎಂ

ತುಂಟರಗಾಳಿ

ಸಿನಿಗನ್ನಡ

ಇತ್ತೀಚೆಗೆ ನಟ ನಿರ್ದೇಶಕ ಉಪೇಂದ್ರ ಅವರ ಯುಐ ಸಿನಿಮಾದ ಟೀಸರ್‌ ಬಿಡುಗಡೆ ಆಗಿತ್ತು. ಆದ್ರೆ ಸಿನಿಮಾ ಪತ್ರಿಕೋದ್ಯಮದ
ಭಾಷೆಯಲ್ಲಿ ಅದು ಸದ್ದು ಮಾಡ್ತಾ ಇದೆ ಅಂದ್ರೆ ಅದನ್ನು ಲಿಟರಲ್ ಆಗಿಯೇ ಅರ್ಥ ಮಾಡಿಕೊಳ್ಳಬೇಕು. ಯಾಕಂದ್ರೆ ಅದರಲ್ಲಿ ಇರೋದೇ ಬರೀ ಸದ್ದು.

ದೃಶ್ಯಗಳೇ ಇಲ್ಲ. ಟೀಸರ್ ತುಂಬಾ ಬ್ಲಾಕ್ ಸ್ಕ್ರೀನ್ ಇದೆ ಅನ್ನೋ ಕಾರಣಕ್ಕೆ ಜನ ಬ್ಲಾಕ್‌ನಲ್ಲಿ ಟಿಕೆಟ್ ತಗೊಂಡು ಸಿನಿಮಾ ನೋಡ್ತಾರಾ ಗೊತ್ತಿಲ್ಲ. ಇನ್ನು ಇದರ ಬಗ್ಗೆ ಉಪೇಂದ್ರ ಅಭಿಮಾನಿಗಳು ಎಂದಿನಂತೆ ಅದಕ್ಕೆ ಇಲ್ಲ ಸಲ್ಲದ ಅರ್ಥ ಕೊಟ್ಟು ಬಿಲ್ಡ್ ಅಪ್ ಕೊಡ್ತಾ ಸೆನ್ಸಾರ್ ಬೋರ್ಡ್ ಥರಾ ತಾವೇ ಸಿನಿಮಾಗೆ ‘ಯುಐ’ ಸರ್ಟಿಫಿಕೇಟ್ ಕೊಟ್ಟು ಮಾತಾಡ್ತಾ ಇದ್ರೆ, ಉಳಿದವರು ಏನೂ ಮಾತಾಡೋಕೆ ಹೋಗ್ತಿಲ್ಲ. ಯಾಕಂದ್ರೆ ಏನಾದ್ರೂ ಇದ್ರೆ ತಾನೇ ಅದರ ಬಗ್ಗೆ ಮಾತಾಡೋಕೆ. ಇಂಥ ಗಿಮಿಕ್‌ಗಳನ್ನು ಇನ್ನೂ ಎಷ್ಟು ದಿನ ಮಾಡ್ತಾರೆ ಉಪೇಂದ್ರ ಅನ್ನೋದು ಬೇರೆ ಪ್ರಶ್ನೆ ಅಂತ ಹೇಳಂಗಿಲ್ಲ.

ಯಾಕಂದ್ರೆ, ಯಾರೋ ಚಿತ್ರರಂಗಕ್ಕೆ ಹೊಸದಾಗಿ ಬಂದವರು ಇಂಥ ಕೆಲಸ ಮಾಡಿದರೆ ಪಾಪ ತಮಗೊಂದು ಹೆಸರು ಮಾಡಿ ಕೊಳ್ಳೋದಕ್ಕೆ ಇಂಥದ್ದೇ ಮಾಡ್ತಾರೆ ಬಿಡಪ್ಪ ಎನ್ನಬ ಹುದು. ಆದರೆ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷ ಆದ್ರೂ, ಇನ್ನೂ  ಇಂಥವನ್ನೇ ತಮ್ಮ ಬಂಡವಾಳ ಮಾಡಿಕೊಂಡು ಪ್ರಚಾರ ಪಡೆಯೋ ಅಗತ್ಯ ಉಪೇಂದ್ರ ಅವರಿಗೆ ಇದೆಯಾ? ಪಾಪ ಅವರ ಉಪ್ಪಿ ೨ ಚಿತ್ರ ನೋಡಿದವರಿಗೆ ಅವರ ಇತ್ತೀಚಿನ ನಿರ್ದೇಶನದ ಫಾರ್ಮ್ ಮತ್ತು ಚಾರ್ಮ್ ಬಗ್ಗೆ ಈಗಾಗಲೇ ಗೊತ್ತಾಗಿದೆ. ಹಾಗಾಗಿ ಉಪೇಂದ್ರ ಅವರು ಇನ್ನೂ ಎಷ್ಟು ವರ್ಷ ನೀನು ನಾನು ಎಂದುಕೊಂಡೇ ತೂ ತೂ, ಮೈ ಮೈ ಅಂತ ಗಿಮಿಕ್ ಆಟಗಳನ್ನ ಆಡಿಕೊಂಡೇ ಕಾಲ ಕಳೆಯುತ್ತಾರೆ ಎನ್ನುವುದು ಪ್ರಾಮಾಣಿಕ ಪ್ರಶ್ನೆ ಆಗುತ್ತದೆ.

ಸಿನಿಮಾದ ನಿರ್ಮಾಪಕರು ಚಿತ್ರದಲ್ಲಿ ಇರೋ ಗ್ರಾಫಿಕ್ಸ್, ವಿಎಫ್ ಎಕ್ಸ್ ಬಗ್ಗೆ ಹೆಚ್ಚು ಮಾತಾಡಿದ್ದಾರೆ. ಆದರೆ ಸಿನಿಮಾದ ಮೂಲದ
ಸಮಸ್ಯೆ ಇದ್ರೆ ಅದನ್ನು ಯಾವ ಗ್ರಾಫಿಕ್ಸ್, ವಿಎಫ್ ಎಕ್ಸೂ ಫಿಕ್ಸ್ ಮಾಡಲ್ಲ ಅನ್ನೋದು ಅವರಿಗೂ ಗೊತ್ತಿರುತ್ತೆ. ಹಾಗಾಗಿ, ಈ ಗಿಮಿಕ್‌ ಗಳೆ ಇಷ್ಟಕ್ಕೇ ಮುಗಿದು, ಹಳೆಯ ನಿರ್ದೇಶಕ ಉಪೇಂದ್ರ ಅವರನ್ನು ಕಾಣಬಹುದಾದ ಸಿನಿಮಾ ನಮಗೆ ಸಿಗುತ್ತದೆ ಅನ್ನೋ ನಂಬಿಕೆಯಲ್ಲಿ ಅಪ್ಪಟ ಸಿನಿಮಾ ಪ್ರೇಮಿಗಳು ಕಾಯುತ್ತಿದ್ದಾರೆ.

ನೆಟ್ ಪಿಕ್ಸ್
ವಯಸ್ಸಾದ ಮೇಲೆ ರೋಡ್ ಟ್ರಿಪ್ ಹೋಗೋದು ಕಷ್ಟ. ಆದ್ರೂ ನಮ್ಮ ಖೇಮುಗೆ ೮೦ ವರ್ಷ ವಯಸ್ಸಾದ ಮೇಲೆ ಗೆಳೆಯ ರೊಂದಿಗೆ ಜಾಲಿ ಟ್ರಿಪ್ ಹೋಗಬೇಕು ಅಂತ ಆಸೆ ಬಂತು. ಅದು ಬರೀ ಆಸೆ ಆಗಿ ಉಳಿಯದೇ ಹಠ ಆಯ್ತು. ಸರಿ ಹೇಗೋ ತನ್ನ ಎಲ್ಲಾ ಗೆಳೆಯರನ್ನೂ ಕಲೆ ಹಾಕಿ ನಾವು ನನ್ನ ಕಾರಲ್ಲಿ ಲಾಂಗ್ ಡ್ರೈವ್ ಮಾಡ್ಕೊಂಡು ಟ್ರಿಪ್ ಹೋಗೋಣ ಅಂದ. ಎಲ್ಲರೂ ಒಪ್ಪಿದರು. ಆದ್ರೆ ಡ್ರೈವ್ ಮಾಡೋದು ಯಾರು ಅನ್ನೋ ಪ್ರಶ್ನೆ ಬಂತು. ಖೇಮು ನಾನೇ ಕಾರ್‌ ಓಡಿಸ್ತೀನಿ ಅಂತ ಹಠ ಹಿಡಿದ. ಎಲ್ಲರೂ ಭಯ ಪಟ್ಕೊಂಡ್ರೂ ಕೊನೆಗೆ ಖೇಮು ಬೇಜಾರಾಗ್ತಾನೆ ಅಂತ ಒಪ್ಪಿಕೊಂಡ್ರು.

ಸರಿ ಟ್ರಿಪ್ ಶುರು ಆಯ್ತು. ಖೇಮು ತುಂಬಾ ಉತ್ಸಾಹದಿಂದ ಗಾಡಿ ಓಡಿಸ್ತಿದ್ದ. ಸ್ವಲ್ಪ ಹೊತ್ತು ಮಾತಾಡ್ತಾ ಇದ್ದ ಎಲ್ಲರೂ ನಂತರ ಮೌನಕ್ಕೆ ಶರಣಾದರು. ಹೀಗೆ ಹೈ ವೇ ನಲ್ಲಿ ಹೋಗುವಾಗ ಖೇಮುಗೆ ದಾರಿಯಲ್ಲಿ ಟ್ರಾಫಿಕ್ ಪೊಲೀಸ್ ಕಾಣಿಸಿದರು. ಕೈ ತೋರಿಸಿ ಗಾಡಿ ನಿಲ್ಲಿಸಿದರು. ಒಬ್ಬ ಪೊಲೀಸ, ರ್ಕಾ ಹತ್ತಿರ ಬಂದು, ಯಾಕ್ ಸರ್‌, ಇಷ್ಟು ಮೆತ್ತಗೆ ಹೋಗ್ತಾ ಇದ್ದೀರಾ ಅಂತ ಡ್ರೈವ್ ಮಾಡ್ತಾ ಇದ್ದ ಖೇಮುನ ಕೇಳಿದ. ಅದಕ್ಕೆ ಖೇಮು, ಅದೂ, ಹಿಂದೆ ೨೦ ಅಂತ ರೋಡ್ ಸೈನ್ ಬೋರ್ಡ್ ನೋಡಿದೆ. ಅದಕ್ಕೆ ೨೦ ಕಿಲೋ ಮೀಟರ್‌ ಸ್ಪೀಡಲ್ಲಿ ಹೋಗ್ತಾ ಇದ್ದೀನಿ ಅಂದ. ಅದಕ್ಕೆ ಪೊಲೀಸ್ ಆಫೀಸರ್‌, ಈ ವಯಸ್ಸಲ್ಲಿ ಡ್ರೈವ್ ಮಾಡೋಕ್ ಹೋದ್ರೆ, ಹಿಂಗೇ ಆಗೋದು.

ಅದು ಸ್ಪೀಡ್ ಲಿಮಿಟ್ ಅಲ್ಲ ಸರ್‌, NH 25 ಅಂತ ಬೋರ್ಡ್ ಹಾಕಿರೋದು ಅಂದ. ಅಷ್ಟು ಹೇಳಿ ಹೊರಟವನು ಮತ್ತೆ ಹಿಂದೆ ತಿರುಗಿ, ಅದ್ಸರಿ, ಹಿಂದೆ ಕೂತಿರೋರೆಲ್ಲ ಯಾಕೋ ತುಂಬಾ ಹೆದರಿಕೊಂಡಿರೋ ಥರ ಇದೆ, ಕೂದಲೆಲ್ಲ ಎದ್ದು ನಿಂತುಕೊಂಡಿದೆ,
ಏನಾಯ್ತು ಅಂತ ಕೇಳಿದ. ಅದಕ್ಕೆ ಖೇಮು ಕಡೆಯಿಂದ ಉತ್ತರ ಬಂತು ’ಅದೂ, ಈಗ ತಾನೇ NH 125 ಕಡೆಯಿಂದ ಪಾಸ್ ಆದ್ವಿ. ಅದಕ್ಕೇ ಅನ್ಸುತ್ತೆ’

ಲೈನ್ ಮ್ಯಾನ್
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಿದ್ರೆ ಮಕ್ಕಳ ಪಠ್ಯ ಪುಸ್ತಕದಲ್ಲಿ ಹೊಸ ಪದ್ಯ ಸೇರಿಸ್ತಾ ಇದ್ರು

– ಕಮಲಳ ಲಂಗ ದಳ ದಳ

ಬಿಜೆಪಿ ಜೊತೆ ದೋಸ್ತಿ ಮಾಡಿದ ಮೇಲೆ ಹಾಸನದ ಗೌಡ್ರನ್ನ ಏನಂತ ಕರಿಬೇಕು?
– ಕಮಲ ಹಾಸನ ಗೌಡ್ರು..

ಜೆಡಿಎಸ್ ಬಿಜೆಪಿ ಭಾಯಿ ಭಾಯಿ ಎಂದ ಕುಮಾರಣ್ಣ
– ಇನ್ಮೇಲೆ ಹಾಸನ, ಮಂಡ್ಯ ಕಡೆ ಮಣ್ಣಿನ ಮಕ್ಕಳೆಲ್ಲ ಕಮಲದ ಹೂವು ಬೆಳಿತಾರಾ?

ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ವಿಷಯದಲ್ಲಿ ಬಿಜೆಪಿ ಜೊತೆ ಗೊಂದಲ ಆದ್ರೆ ಕುಮಾರಸ್ವಾಮಿ
ಏನ್ ಮಾಡ್ತಾರೆ?
– ಚೈತ್ರಾ ಕುಂದಾಪುರ ಹತ್ರ ಹೋಗ್ತಾರೆ

ಸಿಎಂ ಸಿದ್ದರಾಮಯ್ಯ ಅವರ ಟ್ವಿಟ್ಟರ್ ಅಕೌಂಟ್ ನೋಡಿದ್ರೆ ಏನನನ್ನಿಸುತ್ತೆ?
ಅವರು ‘’ಸಿಎಂ ಅನ್ಸುತ್ತೆ

ಫಸ್ಟ್ ನೇಮ್, ಲಾಸ್ಟ್ ನೇಮ್ ಅಂತ ಗೊಂದಲ ಯಾರಿಗೆ ಇರೋದಿಲ್ಲ?
– ಪಾಠ ಹೇಳಿ ಕೊಡೋ ಮಾಸ್ತರರಿಗೆ. ಯಾಕಂದ್ರೆ ಅವರದ್ದು ‘ಸರ್’ ನೇಮ್…

ಚೈನಾ ಮಾಡೆಲ್ ಅಂದ್ರೆ ನಕಲಿ ಮಾಲು, ಬಾಳಿಕೆ ಬರಲ್ಲ ಅಂತ ಹೇಳುವವರಿಗೆ ಒಂದು ಪ್ರಶ್ನೆ
– ದ ಗ್ರೇಟ್ ವಾಲ್ ಆಫ್ ಚೈನಾ ಕಟ್ಟಿ ಅಷ್ಟು ವರ್ಷ ಆದ್ರೂ ಇನ್ನೂ ಗಟ್ಟಿಮುಟ್ಟಾಗೇ ಇದೆಯಲ್ಲ ಹೆಂಗೆ?

ಸಾವಿನ ಬಗ್ಗೆ ತುಂಬಾ ಜನ ಮಾತಾಡ್ತಾ ಇದ್ರೆ ಅದು?
– ‘ಮೌತ್’ ಪಬ್ಲಿಸಿಟಿ

ಸುಂದರವಾದ ಕಾಶ್ಮೀರಿ ಹುಡುಗಿ ನೋಡಿದ ಕವಿ ಏನು ಹೇಳ್ತಾನೆ?

– ಕಾಶ್ ವೋ ಮೇರಿ ಹೋತೀ ಅದೇ ಹುಡುಗಿಯನ್ನ ನೋಡಿದ ಕ್ರಿಶ್ಚಿಯನ್ ಹುಡುಗ ಏನು ಹೇಳ್ತಾನೆ?

– ಕಾಶ್ ವೋ Mary ಹೋತೀ