Wednesday, 11th December 2024

ಏಕರೂಪ ಸಂಹಿತೆ ಅಗತ್ಯ

ವಿನಾಯಕ ಓಣಿ ವಿಘ್ನೇಶ್ವರ

ವಿವಿಧತೆಯಲ್ಲಿ ಏಕತೆ ಎಂದು ಕೊಂಡಾಡುವ ನಮ್ಮ ದೇಶ ಒಂದು ಚಿಕ್ಕ ಪ್ರಪಂಚಕ್ಕೆ ಸಮಾನ. ಪ್ರಪಂಚದ ಎಲ್ಲ ರೀತಿಯ ಧರ್ಮ, ಮತ, ಸಂಪ್ರದಾಯ, ಸಂಸ್ಕೃತಿಗಳೂ ಭಾರತದ ತುಂಬೆಲ್ಲ ವ್ಯಾಪಿಸಿಕೊಂಡಿದೆ.

ಒಂದು ಅಂದಾಜಿನಂತೆ ಪ್ರತಿ ನೂರು ಕಿಲೋ ಮೀಟರ್ ಗೊಮ್ಮೆ ಇಲ್ಲಿನ ಸಂಸ್ಕೃತಿ ಬದಲಾಗುತ್ತದೆ. ಅಷ್ಟು ವಿಶಿಷ್ಟ ದೇಶ ನಮ್ಮದು. ಸ್ವಾತಂತ್ರ್ಯಾ ನಂತರದಲ್ಲಿ ನಾವು ಒಪ್ಪಿಕೊಂಡ ಸಂವಿಧಾನ ಇಲ್ಲಿ ವಾಸಿಸುವ ಪ್ರತಿಯೊಬ್ಬ ಪ್ರಜೆಯ ಜೀವನ ಪದ್ಧತಿಯನ್ನು ಭಾರತೀಯತೆಯ ಕಡೆಗೆ ನಿರ್ದೇಶಿಸಬೇಕಿತ್ತು. ದುರದೃಷ್ಟವಶಾತ್ ನಮ್ಮ ರಾಜಕೀಯ ವ್ಯವಸ್ಥೆ ಅದನ್ನು ಪೂರ್ತಿಯಾಗಿ ಸಾಧ್ಯ ಆಗಿಸಲಿಲ್ಲ ಅನ್ನುವುದು ಇಂದಿನ ಪರಿಸ್ಥಿತಿಗಳನ್ನ ಅವಲೋಕಿಸಿದಾಗ ಸ್ಪಷ್ಟವಾಗುತ್ತದೆ.

ಸಂವಿಧಾನವನ್ನು ವಿರೋಧಿಸುವ, ಇಲ್ಲಿನ ಕಾನೂನುಗಳನ್ನೇ ಟೀಕಿಸುವ, ಇಲ್ಲಿನ ನ್ಯಾಯ ವ್ಯವಸ್ಥೆ ಕೊಡುವ ತೀರ್ಪಿನ ವಿರುದ್ಧವೇ ಬಂದ್ ಆಚರಿಸುವ ಮಟ್ಟಿಗಿನ ಸ್ವಾತಂತ್ರ್ಯವನ್ನು ಕೊಟ್ಟಿದ್ದು ನಮ್ಮ ಸಂವಿಧಾನದ ಹೆಗ್ಗಳಿಕೆ ಅನ್ನ ಬೇಕೋ, ಬಲಹೀನತೆ ಅನ್ನಬೇಕೋ ಗೊತ್ತಾಗು ತ್ತಿಲ್ಲ. ಆ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ಸಮರ್ಥಿಸುವ, ಅದಕ್ಕೆ ಸ್ವಾತಂತ್ರ್ಯ ಅನ್ನುವ ಹಣೆಪಟ್ಟಿ ಹಚ್ಚುವ ಒಂದು ದೊಡ್ಡ ಗುಂಪು ಹುಟ್ಟಿದ್ದು ರಾಜಕೀಯ ಪ್ರೇರಿತ ಅನ್ನುವುದು ಕೂಡ ಸ್ಪಷ್ಟವೇ. ಹಾಗಾಗಿ ಒಂದರ್ಥದಲ್ಲಿ ಕಾಗದ ದಲ್ಲಿ ಮಾತ್ರ ಏಕತೆ ಅನ್ನುವುದು ಇದೆಯೇ ಹೊರತೂ ನಿಜವಾಗಿ ಸಮಾಜದಲ್ಲಿ ಅದು ಬೇರೂರಿಲ್ಲ ಎಂತಲೇ ವ್ಯಾಖ್ಯಾನಿಸಬಹುದು.

ಈ ದೃಷ್ಟಿಕೋನದಲ್ಲಿ, ಧರ್ಮಾಧಾರಿತ ಕಾನೂನುಗಳು ನಮ್ಮ ಸಂವಿಧಾನದ ಈ ಏಕತೆ ಅನ್ನುವ ಆಶಯಗಳಿಗೆ ಒಂದರ್ಥದಲ್ಲಿ ವಿರುದ್ಧ ವಾಗಿವೆ ಎನ್ನುವುದು ತಜ್ಞರ ಅಭಿಪ್ರಾಯ. ಒಂದು ಕಡೆ ಸಂವಿಧಾನ ಎಲ್ಲರೂ ಒಂದು ಎಂದರೆ, ಈ ಧರ್ಮಾಧಾರಿತ ಕಾನೂನುಗಳು ಬೇರೆ ಯದೇ ಹೇಳುತ್ತವೆ. ಒಂದು ಧರ್ಮ ವಸುಧೈವ ಕುಟುಂಬಕಂ ಅಂದರೆ, ಮತ್ತೊಂದು ಮತ ನಮ್ಮ ದೇವರನ್ನು ನಂಬದವರನ್ನು ಕೊಂದಾ ದರೂ ಸರಿ, ಮತವನ್ನು ರಕ್ಷಿಸು ಅನ್ನುತ್ತದೆ. ಒಂದು ಧರ್ಮ ಕುಟುಂಬ ವ್ಯವಸ್ಥೆಯಲ್ಲಿ ಸಂಸ್ಕಾರವನ್ನು ಹೆಚ್ಚಿಸುವ ಬಗ್ಗೆ ಉತ್ತಮ ವಿಚಾರ ಗಳನ್ನು ಹಂಚಿದರೆ ಮತ್ತೊಂದು ಮತ- ಸಂಸ್ಕಾರಕ್ಕೆ ಮಹತ್ವ ಕೊಡದೇ, ಜನ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಮಾತ್ರ ಮಾತಾ ಡುತ್ತದೆ ಯೇನೋ ಅನ್ನಿಸುವ ಮಟ್ಟಿಗೆ ಬೆಳೆಯುತ್ತದೆ.

ಮಿತ ಕುಟುಂಬ, ಪ್ರಜ್ಞಾವಂತ ಪೀಳಿಗೆ, ಸಂಸ್ಕಾರ ಯುತ ಸಮಾಜದತ್ತ ಒಂದು ಧರ್ಮ ಸಾಗುತ್ತಿದೆ. ಅದಕ್ಕೆ ತದ್ವಿರುದ್ಧವಾಗಿ ಅನಿಯಂತ್ರಿತ ಕುಟುಂಬ, ಅದರ ಪರಿಣಾಮವಾಗಿ ಬಡತನ, ಸಂಸ್ಕಾರ ಹೀನತೆ ಇವುಗಳ ಹಿನ್ನೆಲೆಯಲ್ಲಿ ಧರ್ಮಾಂಧತೆಗಳತ್ತ ಮತ್ತೊಂದು ಮತ ಸಾಗು ತ್ತಿದೆ. ಸಂಖ್ಯೆಯ ಆಧಾರದಲ್ಲಿ ಅಲ್ಲದೇ, ಹೆಸರಿಗಷ್ಟೇ ಅಲ್ಪ ಸಂಖ್ಯಾತರಾಗಿ, ಉಳಿದವರ ತೆರಿಗೆ ಹಣದಲ್ಲಿ ಹೆಚ್ಚು ಪಾಲನ್ನು ಪಡೆದೂ ದೇಶದ ಏಕತೆಗೆ ಗೌರವ ಕೊಡದೇ, ಸಂವಿಧಾನ, ಕಾನೂನು ಜತೆಗೆ ನ್ಯಾಯಾಲದ ತೀರ್ಪನ್ನು ಗೌರವಿಸದ ಇಂತಹ ಜನಕ್ಕೆ ಈ ವಿವಿಧತೆಯಲ್ಲಿ ಏಕತೆ ಅನ್ನುವ ಸಂವಿಧಾನದ ಆಶಯದ ಮಹತ್ವ ಅರ್ಥವೇ ಆಗುತ್ತಿಲ್ಲ.

ಇದಕ್ಕೆಲ್ಲ ಪರಿಹಾರ ಒಂದೇ. ಎಲ್ಲರನ್ನೂ ಸಮಾನವಾಗಿ ನೋಡುವ ‘ಏಕರೂಪ ನಾಗರಿಕ ಸಂಹಿತೆ’. ದೇಶ ಒಂದು, ವ್ಯವಸ್ಥೆ ಒಂದು ಎಂದ
ಮೇಲೆ ಕೌಟುಂಬಿಕ ವ್ಯವಸ್ಥೆ ಕೂಡ ಒಂದೇ ರೀತಿಯಲ್ಲಿ ಇರಬೇಕಾಗಿದೆ. ಎಲ್ಲರ ಮನಃಸ್ಥಿತಿ- ಎಲ್ಲರಿಗಾಗಿ ಎಲ್ಲರೂ ಅನ್ನುವ ವಿಶಾಲ ಮನೋಭಾವ ಈ ಕಾನೂನಿನ ಅಡಿಯಲ್ಲಿ ಆದರೂ ಸ್ಥಾಪನೆ ಆಗಬೇಕಿದೆ. ಸರಕಾರದ ವಿಶೇಷ ಸವಲತ್ತುಗಳು ಕೂಡ ಒಂದು ಸಮಾ ನತೆಯ ಆಧಾರದಲ್ಲಿ ಹಂಚಿಕೆ ಆಗಬೇಕಾಗಿದೆ. ಒಂದು ವರ್ಗ ತಮ್ಮ ಸಮಾಜವನ್ನು ಚಿಕ್ಕದಾಗಿ ಇಟ್ಟುಕೊಂಡು ಪ್ರಾಮಾಣಿಕ ತೆರಿಗೆ ಕಟ್ಟುವುದು, ಅದನ್ನು ಅವೈಜ್ಞಾನಿಕ ವಿಧಾನದಲ್ಲಿ ಅಸಮಾನವಾಗಿ ಹಂಚುವುದು. ಇಲ್ಲಿ ಸಮಾನತೆ ಹೇಗೆ ಸಾಧ್ಯ? ನಮ್ಮ ಪ್ರಧಾನಿಗಳು ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ಎಂದು ಘೋಷಿಸಿದ್ದು ಹೌದಾದರೂ, ಎಲ್ಲಿಯವರೆಗೆ ಸಮಾನ ನಾಗರಿಕ ಸಂಹಿತೆ ಜಾರಿಗೆ ಬರುವು ದಿಲ್ಲವೋ, ಅಲ್ಲಿಯ ವರೆಗೆ ಈ ಸಮಾನತೆ ಅನ್ನುವುದು ಸಾಧ್ಯ ಆಗುವುದೇ ಇಲ್ಲ.

ಯಾವುದೇ ರೀತಿಯ ದೇಶ ವಿರೋಧಿ ಕೃತ್ಯಕ್ಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರು ಹಚ್ಚಿಕೊಳ್ಳಲು ಅವಕಾಶ ಇದ್ದೇ ಇರುತ್ತದೆ. ಒಂದು ದೇಶದ ಪ್ರಜೆಗಳೆಲ್ಲ ಒಂದೇ ರೀತಿಯ ಕಾನೂನನ್ನು ಅನುಸರಿಸುವುದು ನಿಜವಾದ ಏಕತೆಯನ್ನು ತರುತ್ತದೆ. ಧಾರ್ಮಿಕವಾಗಿ ಭುಗಿಲೇ ಳುವ ಅನೇಕ ಸಮಸ್ಯೆಗಳಿಗೆ ಇದು ಪರಿಹಾರ ನೀಡುವ ಸಾಧ್ಯತೆಗಳು ಹೆಚ್ಚಿವೆ. ದೇಶದ ಪ್ರಗತಿಯ ವಿಷಯಗಳ ಆಧಾರದ ಮೇಲೆ ನಡೆಯ ಬೇಕಾಗಿದ್ದ ಚುನಾವಣೆಗಳು ಧರ್ಮಾಧಾರಿತವಾಗಿ, ತುಷ್ಟೀಕರಣ ರಾಜಕೀಯಕ್ಕೆ ಕಾರಣ ಆಗಿರುವುದು ಕೂಡ ಈ ಅಸಮಾ ನತೆಯ ಹಿನ್ನೆಲೆಯಲ್ಲಿಯೇ.

ಒಂದು ವೇಳೆ ಸಮಾನ ನಾಗರಿಕ ಸಂಹಿತೆ ಬಂದಲ್ಲಿ ಎಲ್ಲರೂ ಒಂದೇ ಆಗಿರುವಾಗ ಈ ತುಷ್ಟೀಕರಣ ಕೂಡಾ ನಿಂತು ಹೋಗಿ, ನಿಜವಾದ ಅಭಿವೃದ್ಧಿ ಆಧಾರಿತ ಚುನಾವಣೆಗಳಿಗೂ ಆಸ್ಪದ ಆಗುವ ಅನುಕೂಲ ಸೃಷ್ಟಿ ಆದೀತು.