Sunday, 13th October 2024

ಉದ್ಧವ್‌ ಜೀ, ಪೆನ್‌ ಡ್ರೈವ್ ಬಾಂಬ್‌ ಬಗ್ಗೆ ಮಾತನಾಡಿ

ಸಂಗತ

ವಿಜಯ್‌ ದರ್‌ಡ

ಹಿಂದೆಯೂ ರಾಜಕಾರಣದಲ್ಲಿ ಆರೋಪಗಳ ಮೂಟೆಗಳೇ ಇದ್ದವು, ಆದರೆ ಅವೆಲ್ಲವೂ ವಿಷಯಾಧಾರಿತವಾಗಿದ್ದವು. ಸೈದ್ಧಾಂತಿಕ ವ್ಯತ್ಯಾಸಗಳಿಂದಾಗಿ ಉದ್ಭವವಾಗುತ್ತಿದ್ದವು. ಹಾಗಾಗಿಯೇ ವಿಧಾನಸಭೆಯಿಂದ ಹೊರಬಂದ ನಂತರ ಎಲ್ಲವನ್ನೂ ಮರೆತು ಪಕ್ಷಾತೀತವಾಗಿ ಒಟ್ಟಿಗೆ ಊಟ ಮಾಡುವ ಸಂಪ್ರದಾಯವಿತ್ತು. ಆದರೆ ಆ ಕಾಲ ಗತಿಸಿದೆ.

ಮಹಾರಾಷ್ಟ್ರ ಸರಕಾರದ ವಿರುದ್ಧ ಫಡ್ನವೀಸ್ ಆರೋಪ ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಗಳು ಸಿಡಿಯುವ ಸದ್ದು ಕೇಳುತ್ತದೆ. ಆದರೆ ಮಹಾರಾಷ್ಟದ ರಾಜಕೀಯದಲ್ಲಿ ಪಟಾಕಿ ಸದ್ದು ಯುಗಾದಿಗೇ ಶುರುವಾಗಿದೆ. ಪುಟಿನ್ ಉಕ್ರೇನಿನ ಮೇಲೆ
ಬಾಂಬುಗಳನ್ನು ಹಾಕುತ್ತಲೇ ಇದ್ದಾರೆ. ಮುಂಬಯಿಯಲ್ಲಿ ಮಹಾರಾಷ್ಟ ವಿಧಾನಸಭೆ ಯ ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ರಾಜಕೀಯ ವರ್ತುಲಗಳಲ್ಲಿ ಪೆನ್ ಡ್ರೈವ್ ಬಾಂಬು ಎಸೆಯುತ್ತಿದ್ದಾರೆ.

ಬಣ್ಣಗಳ ಹಬ್ಬ ಹೋಳಿ ಮುಗಿದಿದೆ, ಆದರೆ ರಾಜಕೀಯದಲ್ಲಿ ಇನ್ನೂ ಹೋಳಿ ಹಬ್ಬ ಮುಗಿದಿಲ್ಲ, ಅಲ್ಲಲ್ಲಿ ಬಣ್ಣಗಳ ತುಂತುರು ಕಾಣಿಸುತ್ತಿದೆ. ಮಹಾರಾಷ್ಟ ರಾಜಕೀಯದ ಚಿತ್ರಣವೇ ಕಲುಷಿತವಾಗಿದೆ ಮತ್ತು ಅನುಮಾನಾಸ್ಪದವಾಗಿ ಕಾಣಿಸುತ್ತಿದೆ. ಯಶವಂತರಾವ್ ಚವಾಣ, ವಸಂತರಾವ್ ನಾಯಕ, ಎ.ಆರ್.ಅಂತುಳೆ ಮತ್ತು ಪವಾರ್

ಸಾಹೇಬರ ಕಾಲದಲ್ಲಿಯೂ ಆರೋಪಗಳ ಮೂಟೆಗಳೇ ಇದ್ದವು, ಆದರೆ ಅವೆಲ್ಲವೂ ವಿಷಯಾ ಧಾರಿತವಾಗಿದ್ದವು. ಅವೆಲ್ಲವೂ ಸೈದ್ಧಾಂತಿಕ ವ್ಯತ್ಯಾಸಗಳಿಂದಾಗಿ ಉದ್ಭವ ವಾಗುತ್ತಿದ್ದ ಆರೋಪಗಳು. ಹಾಗಾಗಿಯೇ ವಿಧಾನಸಭೆಯಿಂದ ಹೊರಬಂದ ನಂತರ ಅದೆಲ್ಲವನ್ನೂ ಮರೆತು ಪಕ್ಷಾತೀತವಾಗಿ ಎಲ್ಲರೂ ಒಟ್ಟಿಗೆ ಊಟ ಮಾಡುವ ಸಂಪ್ರದಾಯವಿತ್ತು. ಆದರೆ ಆ ಕಾಲ ಗತಿಸಿದೆ, ಈಗ ಪರಿಸ್ಥಿತಿ ಕೊಂಚ ಭಿನ್ನವಾಗಿದೆ.

ಮೊದಲ ಬಾರಿಗೆ ಮಹಾರಾಷ್ಟ ರಾಜ್ಯದ ಆಡಳಿತಾತ್ಮಕ ಮತ್ತು ರಾಜಕೀಯ ವಲಯಗಳಲ್ಲಿ ಪೆನ್‌ಡ್ರೈವ್ ಬಾಂಬಿನ ಸುದ್ದಿ ಎಲ್ಲರಲ್ಲಿ ಕುತೂಹಲ ಮೂಡಿಸಿದೆ. ಮಾತ್ರವಲ್ಲ ಚರ್ಚೆಗೂ ಗ್ರಾಸವಾಗಿದೆ. ಸತ್ಯವೇನೆಂಬುದು ಯಾರಿಗೂ ಗೊತ್ತಿಲ್ಲ. ಆದರೆ ಈ ಬಾಂಬಿಗೆ ಯಾರು ಬಲಿ ಯಾಗುತ್ತಾರೆ ಎಂಬುದಂತೂ ಯಾರಿಗೂ ಗೊತ್ತಿಲ್ಲ. ಅಥವಾ ಈ ವಿಚಾರ ಶೈತ್ಯಾಗಾರ ಸೇರಿ ತಣ್ಣಗಾ ಗುತ್ತದೋ, ಬಲ್ಲವರಿಲ್ಲ. ಇದೆಲ್ಲ ಯಾಕೆ ಹೇಳಿದೆ ನೆಂದರೆ, ಮಹಾರಾಷ್ಟ ಸರಕಾರವೇ ಈ ಆರೋಪಗಳೆಲ್ಲ ಆಧಾರರಹಿತ ಎಂದು ಅಲ್ಲಗಳೆದಿದೆ. ಇದುವರೆಗೆ ಯಾವುದೇ ತನಿಖೆಯ ಮಾತು ಕೇಳಿಬಂದಿಲ್ಲ.

ತನಿಖೆಯನ್ನೇ ಮಾಡದೇ ವಿವಾದವನ್ನು ಆಧಾರರಹಿತ ಎಂದು ಹೇಗೆ ಅರ್ಥೈಸಿದರೋ ಗೊತ್ತಾಗುತ್ತಿಲ್ಲ. ನಿಕಟಪೂರ್ವ ಮುಖ್ಯ ಮಂತ್ರಿ ದೇವೇಂದ್ರ ಫಡ್ನವೀಸ್ ಈಗಾಗಲೇ ಮೂರು ಪೆನ್ ಡ್ರೈವ್‌ಗಳನ್ನು ಮಹಾರಾಷ್ಟ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್‌ರಿಗೆ ಹಸ್ತಾಂತರಿಸಿ ಸರಕಾರದ ವಿರುದ್ಧ ಗಂಭೀರ ಪಿತೂರಿಯ ಆರೋಪವನ್ನು ಮಾಡಿದ್ದಾರೆ. ತಮ್ಮ ಬಳಿ ೧೨೫ ಗಂಟೆಗಳಷ್ಟು ಸುದೀರ್ಘ ಅವಧಿಯ ರೆಕಾರ್ಡಿಂಗ್ ಇದೆ, ಅದರಲ್ಲಿ ಎರಡೂವರೆ ಗಂಟೆಯದನ್ನು ಮಾತ್ರ ನಿಮ್ಮ ಬಳಿ ಹಂಚಿಕೊಂಡಿದ್ದೇನೆ ಎಂದೂ ಅವರು ಹೇಳಿದ್ದಾರೆ.

ಉಳಿದದ್ದನ್ನು ತಾನು ಸಿಬಿಐಗೆ ಹಸ್ತಾಂತರಿಸುವುದಾಗಿಯೂ ಅವರು ಹೇಳಿದ್ದಾರೆ. ಉಪಸಭಾಪತಿಗಳು ಅದನ್ನು ಗಂಭೀರವಾಗಿ ಪರಿಗಣಿಸಿzರೋ ಇಲ್ಲವೋ ಗೊತ್ತಿಲ್ಲ, ತನಿಖಾ ಸಂಸ್ಥೆಗಳು ಈ ಸಂಗತಿಯನ್ನು ಕೂಲಂಕಶವಾಗಿ ತನಿಖೆ ಮಾಡಲಿವೆ. ತಾವು ಕೊಟ್ಟ ರೆಕಾರ್ಡೆಡ್ ದಾಖಲೆಗಳನ್ನು ತನಿಖೆಗೆ ಒಳಪಡಿಸಿದಲ್ಲಿ ಹಲವಾರು ಹಿರಿತಲೆಗಳು ಜೈಲಿನಲ್ಲಿ ಕಂಬಿ ಎಣಿಸಬೇಕಾಗುತ್ತದೆ ಎಂದು ದೇವೇಂದ್ರ -ಡ್ನವೀಸರು ಹೇಳಿದ್ದಾರೆ. ಅವರ ಬಳಿ ಇರುವ ದಾಖಲೆಗಳಲ್ಲಿ ಸರಕಾರ ನಡೆಸುತ್ತಿರುವ ಷಡ್ಯಂತ್ರದ ಹಲವು ನಿದರ್ಶನಗಳಿವೆಯೆಂದು ಹೇಳಿಕೊಂಡಿದ್ದಾರೆ.

ಬಿಜೆಪಿ ನಾಯಕರುಗಳಾದ ಗಿರೀಶ್ ಮಹಾಜನ್, ಜಯಕುಮಾರ ರಾವಲ, ಸುಭಾಷ್ ದೇಶಮುಖ್, ಸುಧೀರ್ ಮುಂಗ್ವಂತೀಕರ್,
ಚಂದ್ರಕಾಂತ ಪಾಟೀಲ, ಚಂದ್ರಶೇಖರ ಬಾವನಕುಲೆ ಸೇರಿದಂತೆ ಹಲವರನ್ನು ಒಂದಿಂದು ಪ್ರಕರಣದಲ್ಲಿ ಫಿಟ್ ಮಾಡುವ ಬಗ್ಗೆ ಸಂಚು ನಡೆಸಲಾಗಿದ್ದು ಬಹಿರಂಗವಾಗಿದೆ ಎಂದವರು ಹೇಳಿದ್ದಾರೆ. ಇದೇ ವೇಳೆ ಶರದ ಪವಾರರು ಫಡ್ನವೀಸರ ಆರೋಪಗಳನ್ನು ತಳ್ಳಿಹಾಕಿದ್ದು, ಅದೆಲ್ಲವೂ ತಲೆಬುಡವಿಲ್ಲದ್ದು ಎಂದಿದ್ದಾರೆ.

ಶಿವಸೇನಾ-ಎನ್‌ಸಿಪಿ ಸಮ್ಮಿಶ್ರ ಸರಕಾರವನ್ನು ಬೀಳಿಸುವುದಕ್ಕೆ ಬಿಜೆಪಿಯವರು ಮಾಡುತ್ತಿರುವ ಪಿತೂರಿ ಇದು ಎಂದು ಪವಾರ್ ಹೇಳಿದ್ದಾರೆ. ರೆಕಾರ್ಡಿಂಗ್‌ನಲ್ಲಿರುವುದೆಲ್ಲವೂ ಕೇಂದ್ರ ವಿಚಕ್ಷಣಾ ದಳದ ಸರ್ವೇಕ್ಷಣಾ ಉಪಕ್ರಮದ ಫೂಟೇಜ್‌ಗಳು ಮತ್ತು ಅವು ಫಡ್ನವೀಸರ ಕೈಗೆ ಹೇಗೆ ಬಂದವು ಎಂಬು ದನ್ನು ಪವಾರ್ ಪ್ರಶ್ನಿಸಿದ್ದಾರೆ. ಆ ವಿಡಿಯೋ ರೆಕಾರ್ಡಿಂಗ್ ಮತ್ತು ಪೆನ್‌ಡ್ರೈವ್‌ ನಲ್ಲಿರುವ ಆಡಿಯೋ ಫೈಲುಗಳಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರವೀಣಚಂದ್ರ ಪದೇ ಪದೇ ಕಾಣಿಸಿಕೊಂಡಿದ್ದು, ಇದೆಲ್ಲವೂ ಉದ್ದೇಶಪೂರ್ವಕ ಸಂಯೋಜಿತ ಸಂಗತಿ ಎಂದೂ ಆರೋಪಿಸಲಾಗಿದೆ.

ಅಲ್ಲಿರುವ ರೆಕಾರ್ಡಿಂಗ್‌ನಲ್ಲಿ ಚವಾಣ, ಪೋಲೀಸ್ ಅಧಿಕಾರಿಗಳು ಮತ್ತು ಕೆಲ ಅಧಿಕಾರಿಗಳ ನಡುವಣ ಮಾತುಕತೆಯ ಭಾಗವಿದೆ. ಅವರು ಸುಮಾರು ೩೦೦ ಕ್ರಿಮಿನಲ್ ಪ್ರಕರಣಗಳ ಕುರಿತು ಅಲ್ಲಿ ಚರ್ಚಿಸಿದ್ದಾರೆ, ಅವುಗಳಲ್ಲಿ ಬಹುತೇಕ ಎಲ್ಲವೂ ಟೆರರ್ ಫಂಡಿಂಗ್ ಮತ್ತು ಸೆಕ್ಸ್ ರ‍್ಯಾಕೆಟ್‌ಗೆ ಸಂಬಂಧಪಟ್ಟ ಪ್ರಕರಣ ಗಳಾಗಿವೆ. ಅದರಲ್ಲಿ ಐಸಾಕ್ ಬಾಗ್ವಾನ್‌ಗೆ ಸೇರಿದ ಬಾರಾಮತಿಯ ಆಸ್ತಿಯ ಉಖವೂ ಇದೆ. ವಕ್ಷ್ ಮಂಡಳಿ ಸದಸ್ಯ ಮುದಸ್ಸಿರ್ ಲಂಬೆ ಮತ್ತು ಇನ್ನೊಬ್ಬ ಅನಾಮಿಕ ವ್ಯಕ್ತಿಯ ನಡುವಣ ಮಾತುಕತೆಯೂ ಅಲ್ಲಿದೆ. ದಾವೂದ್ ಕಡೆಯವರಿಂದ ಹಣಕಾಸಿನ ವಸೂಲಿ ವಿಚಾರದ ಮಾತುಕತೆಯೂ ಇದೆ.

ನಾನು ಆ ವಿಡಿಯೋಗಳನ್ನು ನೋಡಿಲ್ಲ, ಆದರೆ ಅವುಗಳ ಕುರಿತಾಗಿ ಚರ್ಚಿತವಾಗುತ್ತಿರುವ ಸಂಗತಿಗಳು ಅಮಂಗಳಕರವೆಂಬು ದಂತೂ ದಿಟ. ಫಡ್ನವೀಸರು ರೆಕಾರ್ಡುಗಳನ್ನು ಹಾಜರು ಪಡಿಸಿದ್ದಾರೆಯಾದ್ದರಿಂದ ಅದನ್ನೇ ಪುರಾವೆಯಾಗಿ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಮತ್ತು ಸತ್ಯಾಂಶ ಹೊರಬರಬೇಕು. ರಾಜ್ಯದ ಪ್ರತಿಯೊಬ್ಬ ನಾಗರಿಕನಿಗೂ ಸತ್ಯವೇನೆಂಬುದು ಗೊತ್ತಾಗಬೇಕು.
ಫಡ್ನವೀಸರು ಮಾಡಿರುವ ಆರೋಪಗಳಲ್ಲಿ ಹುರುಳಿದ್ದರೆ, ತಪ್ಪಿತಸ್ಥರ ಮೇಲೆ ಕ್ರಮ ಜರುಗಬೇಕು, ಅವರೆಲ್ಲರನ್ನೂ ಜೈಲಿಗಟ್ಟಬೇಕು.

ಸತ್ಯಾಂಶವಿಲ್ಲದೇ ಇದ್ದಲ್ಲಿ ಫಡ್ನವೀಸರು ಕೂಡ ನ್ಯಾಯಾಲಯದಲ್ಲಿ ತಮ್ಮ ವಾದಕ್ಕೆ ಪುರಾವೆ ಕೊಡಬೇಕು. ಸರಕಾರ ನಿಷ್ಪಕ್ಷಪಾತವಾಗಿ ತನಿಖೆ ಕ್ರಮ ಜರುಗಿಸಿದಲ್ಲಿ ಮಾತ್ರ ಇದು ಸಾಧ್ಯ. ಫಡ್ನವೀಸರು ಸಿಬಿಐ ತನಿಖೆಯಾಗ ಬೇಕೆಂದು ಪಟ್ಟು ಹಿಡಿದಿದ್ದಾರೆ. ಸರಕಾರ ಕೂಡಲೇ ಕ್ರಮವಹಿಸಬೇಕಿದೆ. ಮಹಾರಾಷ್ಟ ಸರಕಾರವು ಈಗ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ಈ ನಿಟ್ಟಿನಲ್ಲಿ ತನಿಖೆ ತ್ವರಿತಗತಿಯಲ್ಲಿ ಆಗಬೇಕು. ಮಹಾರಾಷ್ಟದ ಇತಿಹಾಸದ ಮೊದಲ ಬಾರಿಗೆ ಒಬ್ಬ ಗೃಹಸಚಿವ ಸುಲಿಗೆ ಆರೋಪದ ಮೇಲೆ ಜೈಲುಪಾಲಾಗಿದ್ದಾರೆ.

ಇನ್ನೊಬ್ಬ ಸಚಿವ ನವಾಬ್ ಮಲಿಕ್ ಅವರೂ ಹಣಕಾಸು ಅಪರಾತಪರಾ ಪ್ರಕರಣದಲ್ಲಿ ಜೈಲುಸೇರಿzರೆ. ನ್ಯಾಯಾಲಯದ ತೀರ್ಪು
ಬರುವ ತನಕ ಈ ಬಗ್ಗೆ ಏನನ್ನೂ ಹೇಳುವಂತಿಲ್ಲ. ಜಾರಿ ನಿರ್ದೇಶನಾಲಯವು ಬುಧವಾರ ಮಹಾರಾಷ್ಟ್ರ ಸಚಿವ ಹಾಗೂ ಎನ್ಸಿಪಿ ನಾಯಕ ನವಾಬ್ ಮಲಿಕ್ ಅವರನ್ನು ಬಂಧಿಸಿದೆ. ಮಲಿಕ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಭೂಗತ ಪಾತಕಿ ದಾವೂದ್ ಜೊತೆಗಿನ ನಂಟು ಹೊಂದಿರುವ ಆರೋಪ ಇದೆ. ಅಂದ ಹಾಗೆ ನವಾಬ್ ಮಲಿಕ್ ವಿರುದ್ಧ ಫಡ್ನವೀಸ್‌ರೇ ಆರೋಪ
ಮಾಡಿದ್ದರು. ದಾವೂದ್ ಬಂಟರ ಜೊತೆ ಸೇರಿ ನವಾಬ್ ಮಲಿಕ್ ಭೂ ಖರೀದಿ ಒಂದನ್ನು ಮಾಡಿದ್ದು, ಈ ಪ್ರಕ್ರಿಯೆಯಲ್ಲಿ ಭಾರೀ ಪ್ರಮಾಣದ ಗೋಲ್ಮಾಲ್ ನಡೆದಿದೆ ಎಂದಿದ್ದರು.

೧೯೯೩ರ ಮುಂಬಯಿ ಬಾಂಬ್ ಷ ಟದ ಅಪರಾಧಿಗಳಾದ ಸದಾರ್ರ‍ ಶಹ್ವಾಲಿ ಖಾನ್ ಮತ್ತು  ಮೊಹಮದ್ ಸಲೀಮ್ ಇಶಾಕ್ ಪಟೇಲ್ ಜತೆ ಆಸ್ತಿ ಒಪ್ಪಂದ ಮಾಡಿಕೊಂಡಿದ್ದರು ಎಂದು ಅವರು ದೂರಿದ್ದರು, ಸಚಿವರುಗಳೇ ಸಾಲಿನಲ್ಲಿ ಆರೋಪಿಗಳಾಗಿ ಜೈಲು ಸೇರುತ್ತಿರುವಾಗ ಸರಕಾರದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ.ಮೇಲೆ ಹೇಳಿದ ಸುಲಿಗೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಹಲವಾರು ವ್ಯಕ್ತಿಗಳು ರಾಜಾರೋಷವಾಗಿ ಓಡಾಡುತ್ತಿದ್ದು ರಾಜಕೀಯ ವರ್ತುಲಗಳಲ್ಲಿ ಇದು ಚರ್ಚೆಗೆ ಒಳಗಾಗಿದೆ. ಇದು ನ್ಯಾಯವೇ? ಶಿವಸೇನಾ ಶಾಸಕ ಪ್ರತಾಪ್ ಸಾರ್ಣಿಕ್ ಅವರ ಆಸ್ತಿಗಳ ಮೇಲೆ
ನಡೆದ ರೇಡ್ ಮತ್ತು ಜಫ್ತಿನ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ.

ಜಾರಿ ನಿರ್ದೇಶನಾಲಯದಿಂದ ಮುಖ್ಯಮಂತ್ರಿ ಉದ್ಧವ ಠಾಕ್ರೆಯವರ ಭಾವನ ಆಸ್ತಿ ಮುಟ್ಟುಗೋಲಿಗೆ  ಒಳಗಾಗಿದ್ದೂ ಎಲ್ಲರಿಗೆ ಗೊತ್ತಿದೆ. ಇತ್ತೀಚಿನ ಪ್ರಕರಣ ವೆಂದರೆ ಅದು ಅನಿಲ್ ಪರಬ್ ಅವರಿಗೆ ಸಂಬಂಽಸಿದ್ದು. ಆತ ಆದಿತ್ಯಠಾಕ್ರೆಯ ಅತ್ಯಾಪ್ತ ಸ್ನೇಹಿತ. ಮುಖ್ಯಮಂತ್ರಿಗಳು ಕೇಂದ್ರ ಸರಕಾರದತ್ತ ಬೊಟ್ಟುಮಾಡಿ, ಇದೆಲ್ಲವೂ ನನ್ನ ವಿರುದ್ಧ ಮಾಡುತ್ತಿರುವ ಪಿತೂರಿ ಎಂದು ದೂಷಿಸಬಹುದು.

ಆದರೆ ಕೇಂದ್ರ ತನಿಖಾ ಸಂಸ್ಥೆಗಳಿಗೆ ನಿಮ್ಮ ಮೇಲೇನೂ ವೈಯಕ್ತಿಕ ದ್ವೇಷವಿಲ್ಲವಲ್ಲ? ಮಾತುಗಳನ್ನು ಪೋಣಿಸಿ ಜನರನ್ನು
ಮರುಳು ಮಾಡುವುದರಿಂದ ಆಡಳಿತಾತ್ಮಕವಾಗಿ ಏನನ್ನೂ ಸಾಧಿಸಿದಂತಾಗುವು ದಿಲ್ಲ. ಪ್ರತಿಪಕ್ಷ ಗಂಭೀರವಾದ ಆರೋ
ಪವೊಂದನ್ನು ಮಾಡುತ್ತಿದ್ದರೆ ಅದನ್ನು ಮಾತುಗಳಲ್ಲಿ ಖಂಡಿಸುತ್ತ ಕೂರುವುದಲ್ಲ. ನಾನು ಮುಖ್ಯಮಂತ್ರಿ ಉದ್ಧವ ಠಾಕ್ರೆಯ ವರನ್ನು ಚೆನ್ನಾಗಿ ಬ. ಅವರು ಕ್ಲೀನ್ ಇಮೇಜ್ ಇರುವ, ರಾಜಕೀಯವಾಗಿ ಸಾಕಷ್ಟು ಧೈರ್ಯ ಶಾಲಿತ್ವ ವ್ಯಕ್ತಿ ಎಂಬುದೂ ನನಗೆ ಗೊತ್ತಿದೆ. ಇಂಥವರು -ಡ್ನವೀಸರ ಪೆನ್ ಡ್ರೈವ್ ಆರೋಪಕ್ಕೆ ಹೆದರಬೇಕಾಗಿರಲಿಲ್ಲ.

ಅವರು ಕೂಡಲೇ ತನಿಖೆಗೆ ಆದೇಶಿಸಬೇಕಿತ್ತು. ಹಾಗೆ ಮಾಡಿದ್ದರೆ ಅವರ ವ್ಯಕ್ತಿತ್ವಕ್ಕೆ ಮೆರುಗು ಬರುತ್ತಿತ್ತು. ರಾಜ್ಯದ ಆಡಳಿತ ಯಂತ್ರ ಎಲ್ಲಿಯಾದರೂ ಈ ಪ್ರಕರಣ ದಲ್ಲಿ ಭಾಗಿಯಾಗಿದ್ದರೆ, ಅಂಥವರನ್ನು ಹುಡುಕಿ ತೆಗೆದು ಹಣಿಯುವುದು ಮುಖ್ಯಮಂತ್ರಿಗಳಿಗೆ ಸಾಧ್ಯವಾಗದ ಮಾತೇನಲ್ಲ.

ರಾಜಕೀಯ ನಾಯಕರುಗಳು ತಮ್ಮ ಬೇಳೆ ಬೇಯಿಸಿಕೊಳ್ಳಲಾಗದೇ ಹತಾಶರಾದಾಗ, ರಾಜಕಿಯ ಒಳಸುಳಿಗಳ ಮೂಲಕ ಗೊಂದಲ ಗಳನ್ನು ಸೃಷ್ಟಿ ಮಾಡಿಸಲು ಯತ್ನಿಸುತ್ತಾರೆ ಎಂಬ ಮಾತಿನಲ್ಲಿ ಸತ್ಯವಿಲ್ಲವೆಂದು ನಾನು ಹೇಳುತ್ತಿಲ್ಲ. ಅಂಥವರು ಯಾರ ಮಾತನ್ನೂ ಕೇಳುವುದಿಲ್ಲ, ಆಡಳಿತಾತ್ಮಕ ನೀತಿ ನಿರೂಪಣೆಗಳಲ್ಲಿ ಅಡ್ಡಿಗಳನ್ನು ತಂದಿಟ್ಟು ಎಲ್ಲರೂ ಸಂಕಷ್ಟ ಅನುಭವಿಸುವಂತೆ ಮಾಡುತ್ತಾರೆ. ದುರದೃಷ್ಟವಶಾತ್ ಮಹಾರಾಷ್ಟ ಈಗ ಇಂತಹದೊಂದು ಹಾದಿಯಲ್ಲಿ ಸಾಗುತ್ತಿದೆ.