ಅವಲೋಕನ
ರಾಕೇಶ್ ಜ ಕಾಂಬಳೆ
ಹೊಸ ವರುಷ ಬಂದಿತ್ತು ಹೊಸ ಹರುಷ ತಂದಿತ್ತು ಬಾಳಿನಲ್ಲಿ ನೂರಾರು ಸಂಕಲ್ಪಗಳು ಹೊತ್ತು ತಂದಿತು ಮನದಲ್ಲಿ. ನೂರಾರು ಭಾವನೆಗಳು ತುಂಬಿತ್ತು.
ಆಸೆಗಳು ಈಡೇರಿಸಿಕೊಳ್ಳುವ ತವಕದಲ್ಲಿ, ಹೊಸತನದ ಹರ್ಷೋದ್ಗಾರಗಳು ಜಗದ ತುಂಬೆ ಹೊಸ ವರ್ಷದ ಹೊನಲು ಏಳು –
ಬೀಳುಗಳ ಹೊಸ ಹಳೆಗಳ ಮೆಲುಕು ಹಾಕುವ ಬದುಕಿನ ಪಯಣ. ಜಗತ್ತಿನ ಎಲ್ಲ ದೇಶಗಳು ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗು ತ್ತಿರಲು ಬಾನೆತ್ತರಕ್ಕೆ ಹಾರುವ ಕನಸುಗಳನ್ನು ಕಾಣುತ್ತಿರಲು ವಿಜ್ಞಾನ – ತಂತ್ರಜ್ಞಾನಗಳ ಜ್ಯೋತಿಷ್ಯಗಳ ಭರಾಟೆಯು ಸಾಗುತಿ ರಲು ಬಯಸದೇ ಬಂದ ಭಾಗ್ಯವೆಂಬಂತೆ ಕರೋನಾ ವೈರಸ್ ಹೆಮ್ಮಾರಿಯ ಕರಿನೆರಳು ಜಗತ್ತನ್ನು ಆವರಿಸಿಕೊಂಡಿತ್ತು.
ನೋಡುನೋಡುತ್ತಿದ್ದಂತೆ ಜಗತ್ತಿನ ಎಲ್ಲ ದೇಶಗಳಲ್ಲಿ ಸಾಲು ಸಾಲು ಸಾವುಗಳು ರಣ ಕೆಕೇ ಹಾಕಿದವು. ಸಾವುಗಳ ಅಂಧಕಾರದಲ್ಲಿ ಜಗತ್ತು ಅಡಗಿಹೋಯಿತು. ಅಭಿವೃದ್ಧಿ ಪಥದ ಆರ್ಥಿಕ – ಸಾಮಾಜಿಕ ಯೋಜನೆಗಳಿಗೆ ಕ್ರೂಡೀಕರಣವಾದ ಸಂಪನ್ಮೂಲವನ್ನು
ನುಂಗಿಹಾಕಿತು ಈ ಹೆಮ್ಮಾರಿ ಕರೋನಾ. ತನ್ನ ರಾಕ್ಷಸ ಕಬಂಧ ಬಾಹುಗಳಲ್ಲಿ ಜನಸಾಮಾನ್ಯರ ಬದುಕನ್ನು ಹಿಡಿದಿಟ್ಟುಕೊಂಡು ವಿಲವಿಲನೆ ಒದ್ದಾಡುವಂತೆ ಮಾಡಿತು.
ಎಷ್ಟು ಸಂಸಾರಗಳು ಅಪ್ಪನನ್ನು ಅಮ್ಮನನ್ನು ತಂಗಿಯನ್ನು ತಾಯಿಯನ್ನು ಅಕ್ಕನನ್ನು ಅಣ್ಣನನ್ನು ತಮ್ಮನನ್ನು ಹೆಂಡತಿ ಯನ್ನು ಮಕ್ಕಳನ್ನು ಗುರುವನ್ನು ಕಳೆದುಕೊಂಡು ಬಾರದ ಲೋಕಕ್ಕೆ ಪಯಣ ಬೆಳೆಸಿದ ಇವರ ಬರುವಿಕೆಗಾಗಿ ಕಾತರದಿಂದ ಕಾಯುವ ಕಣ್ಣುಗಳು ದೃಶ್ಯ ಮನಕಲಕುವಂತಿತ್ತು. ಒಂದು ಸಂಸಾರ ಸಾಗಿಸುವ ನೋಗವು ಮುರಿದು ಹೋದವು.
ಬದುಕುಗಳು ಬೀದಿಗೆ ಬಂದು ಕರೋನಾ ರುದ್ರನರ್ತನದಲ್ಲಿ ಕರಗಿಹೋದವು. ದೇಶದ ಅಭಿವೃದ್ಧಿಯ ಕನಸುಗಳು ಕಮರಿದವು. ಲಾಕ್ ಡೌನ್, ಸೀಲ್ ಡೌನ್, ಕರ್ಫ್ಯೂ ಎಂಬಿತ್ಯಾದಿ ಭವಗಳಲ್ಲಿ ಜನಸಾಮಾನ್ಯರು ನಲುಗಿಹೋದರು. ಈಗಲೂ ಬದುಕು ಕಟ್ಟಿಕೊಳ್ಳಲು ಹೆಣಗಾಡುತ್ತಿzರೆ. ವಿಪರ್ಯಾಸ ಎಂಬಂತೆ ಕರೋನಾ ಕರಿನೆರಳಿನ ಫಲದ ಪರಿಣಾಮವಾಗಿ ಜಗತ್ತಿನಾದ್ಯಂತ ಅನ್ನದ ಬೆಲೆ ಮಾನವೀಯ ಮೌಲ್ಯಗಳ ಸಂಬಂಧ, ಮಾನವ ಪ್ರೇಮಗಳ ಅನುಬಂಧ ಪರಸ್ಪರ ಹೊಂದಾಣಿಕೆ ಸಂಬಂಧಗಳ ಹಿರಿಮೆ ಗರಿಮೆಗಳು ಜನಮನದಲ್ಲಿ ತುಂಬಿಕೊಂಡವು.
ವಿಜ್ಞಾನ – ತಂತ್ರಜ್ಞಾನದ ಮಿತಿಯ ಅರಿವು ಜಗತ್ತಿಗೆ ಗೊತ್ತಾಯಿತು. ನೇಗಿಲ ಯೋಗಿಯ ರೈತನ ಶ್ರಮಸಂಸ್ಕೃತಿಯ ಬದುಕು ಅರಿವಿನ ನೆಲೆಯಲ್ಲಿ ಜಗತ್ತಿಗೆ ಪಸರಿಸಿತು. ಕರೋನಾ ಹೆಸರಿನಲ್ಲಿ ಹಣದ ಹೊಳೆ ಹರಿಯಿತು. ಲಸಿಕೆಯ ಸಂಶೋಧನೆಗಾಗಿ ನೂರಾರು ಕಂಪನಿಗಳು ಶ್ರಮಕ್ಕೆ ಪ್ರತಿಫಲ ಸಿಗದಾಯಿತು. ಫಲ ಯಾವಾಗ ಸಿಗುತ್ತದೆ ಎಂದು ಕಾದು ನೋಡಬೇಕು. ಜಾತಿ – ಮತ
ಧರ್ಮ ಭೇದವನ್ನು ತೋರದೆ ಬಡವ ಶ್ರೀಮಂತ ಎನ್ನದೆ ಕರೋನಾ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿತು.
ಜನರ ಆಕ್ರಂದನ ಮುಗಿಲು ಮುಟ್ಟಿತ್ತು. ಕರೋನಾ ವಾರಿಯರ್ಸ್ ಗಳು ಕೇಳುವರ‍್ಯಾರು? ಜಗತ್ತಿನ ಯಾವ ದೇವರು ಸಹ ಮಾನವನ ರಕ್ಷಣೆ ಮಾಡಲಿಲ್ಲ. ಬದಲಾಗಿ ಎಲ್ಲ ದೇವರಗಳು ಗುಡಿಗಳಲ್ಲಿ ದಿಗ್ಬಂಧನವಾಗಿದ್ದವು. ಯೋಧರು ವೈದ್ಯರು ಸಮವಸ ತೊಟ್ಟ ಖಾಕಿಧಾರಿಗಳು ಸರಕಾರ, ಅಽಕಾರಿಗಳು, ಸಿಬ್ಬಂದಿ, ಸಮಾಜಸೇವಕರು, ರಕ್ಷಣೆಗಾಗಿ ನಿಂತ ನಿಜವಾದ ಕರೋನಾ ವಾರಿಯರ್ಸ್ ಗಳು. ಎಲ್ಲೂ ಜಗತ್ತಿನ ಎಲ್ಲಾ ಮಾಧ್ಯಮಗಳಲ್ಲಿ ಕರೋನಾ ಮಾರ್ಗದರ್ಶಿಗಳ ಭರಾಟೆಯ ಪ್ರಚಾರ ಮಾಸ್ಕ್, ಹ್ಯಾಂಡ್ ವಾಶ್,
ಸಾಮಾಜಿಕ ಅಂತರದ ಜಾಗೃತಿಗಳು, ಆದರೂ ಕರೋನಾ ತನ್ನ ಕ್ರೂರತ್ವವನ್ನು ಮುಂದುವರಿಸುತ್ತಲೇ ಇದೆ.
ಜನಸಾಮಾನ್ಯರ ತೆರಿಗೆ ಹಣ ಇದರ ಕರಿ ನೆರಳಿಗೆ ನೀರಿನಂತೆ ಪೋಲಾಗುತ್ತಿದೆ. ಅಭಿವೃದ್ಧಿ ಹೊಂದಿದ ದೇಶಗಳು ಸಹ ವಿಜ್ಞಾನ – ತಂತ್ರಜ್ಞಾನದಲ್ಲಿ ಎಷ್ಟು ಮುಂದುವರಿದರೂ, ಈ ಒಂದು ಸಣ್ಣ ವೈರಸ್ಸನ್ನು ಜಗತ್ತಿನಿಂದ ಅಳಿಸಿ ಹಾಕಲಾಗಲಿಲ್ಲ. ಅದಕ್ಕೆ ಹೇಳೋದು ಪ್ರಕೃತಿಯ ಮುಂದೆ ಮನುಷ್ಯ ಪ್ರಯತ್ನ ಏನೂ ಅಲ್ಲ. ವರ್ಷಾರಂಭದಲ್ಲಿ ಹಾಕಿಕೊಂಡ ಪ್ರಗತಿಪರ ಯೋಜನೆಗಳು ತಲೆಕೆಳಗಾದವು. ಅಭಿವೃದ್ಧಿಯ ಪಥ ಹಳಿ ತಪ್ಪಿತು. ಎಲ್ಲ ದೇಶಗಳ ಉದ್ದೇಶ ಜನರ ಪ್ರಾಣ ರಕ್ಷಣೆಯನ್ನು ಮಾಡುವುದು ಇದು ಈಗಲೂ ಮುಂದುವರಿಯುತ್ತಲೇ ಇದೆ. ಮತ್ತೆ 2021ನೆ ಹೊಸ ವರ್ಷ ಬರುತ್ತಿದೆ.
ಎಲ್ಲರ ಬಾಳಲ್ಲಿ ಹೊಸತನ್ನು ತರಲಿ. ಯಾವುದೇ ಕರಿನೆರಳು ಮತ್ತೆ ಬಾರದಿರಲಿ ಎಂದು ಆಶಿಸೋಣ.