Thursday, 19th September 2024

ಅಂದು ಅರಸು, ಇಂದು ಸಿದ್ದರಾಮಯ್ಯ

ಒಡಲಾಳ

ಬಿ.ಎಸ್.ಶಿವಣ್ಣ

ಅಂದು ಹೀಗೆಯೇ ನಡೆದಿತ್ತು! ಶೋಷಿತ ವರ್ಗದ ಗಟ್ಟಿ ಧ್ವನಿಯಾಗಿ, ರಾಜಕೀಯ ಹಕ್ಕುಗಳಿಂದ ವಂಚಿತರಾಗಿದ್ದ ಹಿಂದುಳಿದ, ದಲಿತ ಹಾಗೂ ಅಲ್ಪಸಂಖ್ಯಾತ ವರ್ಗದ ಆಶಾಕಿರಣವಾಗಿ ಬೆಳಗಿದ ದಿ.ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವುದಕ್ಕೆ ಇದೇ ಬಗೆಯ ಷಡ್ಯಂತ್ರ ನಡೆಸಲಾಗಿತ್ತು. ರಾಜ್ಯ ರಾಜಕಾರಣದಲ್ಲಿ ತಾವು ನಡೆಸಿದ ಸೋಷಿಯಲ್ ಎಂಜಿನಿಯರಿಂಗ್ ಫಲವಾಗಿ ಸತತ ಎರಡನೇ ಬಾರಿಗೆ ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದರು. ಆದರೆ ಒಬ್ಬ ಹಿಂದುಳಿದ ವರ್ಗದ ನಾಯಕ ಮತ್ತೆ ಮತ್ತೆ
ಅಽಕಾರದಲ್ಲಿ ಪ್ರತಿಷ್ಠಾಪನೆಗೊಳ್ಳುವುದನ್ನು ಸ್ಥಾಪಿತ ಹಾಗೂ ಪಟ್ಟಭದ್ರ ಹಿತಾಸಕ್ತಿಗಳು ಸಹಿಸಿಕೊಳ್ಳಲಿಲ್ಲ. ಅದರ ಜತೆಗೆ ಸಮಯಸಾಧಕರ ಗುಂಪು ಈ ಕೂಟವನ್ನು ಸೇರಿಕೊಂಡು
ಅರಸು ಅವರನ್ನು ಹಣಿಯುವುದಕ್ಕೆ ಪಿತೂರಿ ನಡೆಸಿತು.

ಅದೇ ಬಗೆಯ ಸಂಚು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನಡೆಯುತ್ತಿದೆ. ಅರಸು ಅವರಂತೆ ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇ ಒಂದು ಸಂಕ್ರಮಣ ಕಾಲದಲ್ಲಿ. ಅರಸು ನಂತರದ ಸುದೀರ್ಘ ಅವಽಯಲ್ಲಿ ಕರ್ನಾಟಕದಲ್ಲಿ ಹಿಂದುಳಿದ ಹಾಗೂ ಶೋಷಿತ ವರ್ಗಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯವೇ ಸಿಕ್ಕಿರಲಿಲ್ಲ. ಮಾಜಿ ಪ್ರಧಾನಿ ಎಚ್
.ಡಿ.ದೇವೇಗೌಡರ ಕುಟುಂಬ ವರ್ಗದ ದ್ವೇಷ ಹಾಗೂ ಸೇಡಿನ ರಾಜಕಾರಣದ ನಡುವೆಯೂ ತಮ್ಮ ಅರ್ಹತೆ ಮತ್ತು ಜನಪ್ರಿಯ ನಾಯಕತ್ವದ ಮೂಲಕ ಅಹಿಂದ ವರ್ಗವನ್ನು ಸಂಘಟಿಸಿ ಅವರು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದರು. ಸಿದ್ದರಾಮಯ್ಯ ಅವರಿಗೆ ಸಿಕ್ಕ ಈ ಅಧಿಕಾರ ಸಮಸ್ತ ಅಹಿಂದ ವರ್ಗಕ್ಕೆ ದೊರೆತ ಅಧಿಕಾರವಾಗಿತ್ತು.

ಹೀಗಾಗಿ ತಮ್ಮ ಮೊದಲ ಅವಧಿಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿಯಂಥ ಕ್ರಾಂತಿಕಾರಿ ಕಾಯಿದೆಗಳನ್ನು ಜಾರಿಗೆ ತಂದರು. ಎಲ್ಲದಕ್ಕಿಂತ ಮುಖ್ಯವಾಗಿ ರಾಜ್ಯದ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ಅರಿಯುವುದಕ್ಕಾಗಿ ೧೫೦ ಕೋಟಿ ರು. ವೆಚ್ಚದಲ್ಲಿ ಗಣತಿ ಕಾರ್ಯ ನಡೆಸಿದರು. ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ೧೫೦ಕ್ಕೂ ಹೆಚ್ಚು ಭರವಸೆಗಳು ಯಶಸ್ವಿಯಾಗಿ ಜಾರಿಗೊಂಡವು. ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಅವಕಾಶದಿಂದ ವಂಚಿತರಾಗುವುದಕ್ಕೂ ಷಡ್ಯಂತ್ರವೇ ಕಾರಣವಾಗಿತ್ತು. ಆದರೆ ಈಗ ಮತ್ತೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಅದೇ ರಾಜಕೀಯ ಕೂಟ ಸಂಚು ರೂಪಿಸಿದೆ.

ದೇವರಾಜ ಅರಸು ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವುದಕ್ಕೆ ಯಾರು ಕಾರಣರಾಗಿದ್ದರೋ ಅವರೇ ಈಗ ಸಿದ್ದರಾಮಯ್ಯ ವಿರುದ್ಧ ಭೂ ಅಕ್ರಮದ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಽಕಾರ ಹಾಗೂ ಕ್ಷಣಿಕ ಆಸೆಗಳಿಗಾಗಿ ಕಾಂಗ್ರೆಸ್ ತೊರೆದು, ಜೆಡಿಎಸ್, ಬಿಜೆಪಿ ಸುತ್ತಿದ ಗೋಸುಂಬೆ ರಾಜಕಾರಣಿ ಎಚ್.ವಿಶ್ವನಾಥ ‘ಮುಡಾ’ ವಿಚಾರದಲ್ಲಿ ಮಾತನಾಡುವ ಯಾವ ನೈತಿಕತೆ
ಉಳಿಸಿಕೊಂಡಿದ್ದಾರೆ? ಅರಸು ಪದಚ್ಯುತಿ ಸಂದರ್ಭದಲ್ಲಿ ದೇವರಾಜ ಅರಸು ಅವರ ಬೆನ್ನಿಗೆ ಚೂರಿಹಾಕಿದ ವಿಶ್ವನಾಥ್ ಯಾವ ರೀತಿ ವರ್ತಿಸಿದ್ದರು ಎಂಬುದನ್ನು ಈಗ ಬಿಡಿಸಿ ಹೇಳಬೇಕಾಗಿಲ್ಲ. ಅರಸು ವಿರುದ್ಧ ಗ್ರೋವರ್ ಆಯೋಗ ರಚನೆಯಾಗುವುದಕ್ಕೆ ತೆರೆಮರೆಯಲ್ಲಿ ಯತ್ನಿಸಿದ್ದ ಎಚ್ .ಡಿ.ದೇವೇಗೌಡರು ಈಗ ಸಿದ್ದರಾಮಯ್ಯ ವಿರುದ್ಧ ದಿಲ್ಲಿಯಲ್ಲಿ ಕಾರ್ಯತಂತ್ರ ನಡೆಸುತ್ತಿರುವುದು ಸುಳ್ಳಾ? ವೀಲ್ ಚೇರ್‌ನಲ್ಲಿ ಹಗಲಿರುಳೆನ್ನದೇ ಅವರು ದಿಲ್ಲಿ ಸುತ್ತುತ್ತಿರುವುದು ರಾಜ್ಯದ ಅಭ್ಯುದಯಕ್ಕಂತೂ ಖಂಡಿತ ಅಲ್ಲ. ಅದರ ಹಿಂದಿರುವುದು ಸಿದ್ದರಾಮಯ್ಯ ವಿರುದ್ಧ ಕತ್ತಿ ಮಸೆಯುವ ಒಂದು ಅಂಶದ ಅಜೆಂಡಾ ಮಾತ್ರ!

ಇನ್ನು ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯ ವಿಚಾರಕ್ಕೆ ಬರೋಣ. ಈ ಪಾದಯಾತ್ರೆಯ ಮುಂಚೂಣಿಯಲ್ಲಿ ಇರುವವರು ಯಾರು? ತಂದೆ ಅಽಕಾರದಲ್ಲಿದ್ದಾಗ ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ನಕಲಿ ಸಹಿ ಮಾಡಿ, ಚೆಕ್ ನಲ್ಲಿ ಲಂಚ ಪಡೆದುಕೊಂಡು ಅಪ್ಪನನ್ನೇ ಜೈಲಿಗೆ ಕಳುಹಿಸಿದ ಬಿ.ವೈ.ವಿಜಯೇಂದ್ರ. ಯಡಿಯೂರಪ್ಪ ಎರಡನೇ ಬಾರಿಗೆ ಅಧಿಕಾರದಿಂದ ಕೆಳಗೆ ಇಳಿಯುವುದಕ್ಕೆ ಕಾರಣವಾಗಿದ್ದು ಕೂಡಾ ಇದೇ ವಿಜಯೇಂದ್ರ. ಭ್ರಷ್ಟಾಚಾರವೇ ಮೈವೆತ್ತಿ ನಿಂತಂತಿರುವ ಈ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ. ಇನ್ನು ೮೨ನೇ ವಯಸ್ಸಿನಲ್ಲಿ ತಮ್ಮ ಮೇಲೆ ಪೋಕ್ಸೋ ಪ್ರಕರಣ ದಾಖಲಾಗುವುದಕ್ಕೆ ಕಾರಣರಾಗಿ ಬೇಲ್‌ನಲ್ಲಿ ಓಡಾಡುತ್ತಿರುವ ಯಡಿಯೂರಪ್ಪ ಅವರು, ಪಾದಯಾತ್ರೆ ಮೈಸೂರು ತಲುಪುವುದರೊಳಗೆ ಸಿದ್ದರಾಮಯ್ಯ ರಾಜೀನಾಮೆ ಕೊಡ ಬೇಕೆಂದು ಆಗ್ರಹಿಸುವುದರಲ್ಲಿ ಯಾವ ನೈತಿಕತೆ ಇದೆ? ವಾಸ್ತವದಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ಜಂಟಿ ಪಾದ
ಯಾತ್ರೆಯನ್ನು ಮಾಡಬೇಕಿರುವುದು ಬೆಂಗಳೂರಿನಿಂದ ಮೈಸೂರಿಗೆ ಅಲ್ಲ, ಬೆಂಗಳೂರಿನಿಂದ ದಿಲ್ಲಿಗೆ. ಕನ್ನಡಿಗರಿಗೆ ಕೇಂದ್ರ ಸರಕಾರ ನಿರಂತರವಾಗಿ ಮಾಡುತ್ತಿರುವ ಅನ್ಯಾಯವನ್ನು ಪ್ರಶ್ನಿಸಿ ಅವರು ಹೋರಾಟವನ್ನು ಮಾಡಬೇಕಿದೆ.

ಅದು ಅವರ ನಿಜವಾದ ಕರ್ತವ್ಯ. ಆದರೆ ಅದನ್ನು ಬಿಟ್ಟು ರಿಯಲ್ ಎಸ್ಟೇಟ್ ಏಜೆಂಟ್‌ಗಳ ರೀತಿಯಲ್ಲಿ ದಿನಕ್ಕೊಂದು ಕತೆ ಹೇಳುತ್ತಾ ಪಾದಯಾತ್ರೆ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಪಾದಯಾತ್ರೆಯಲ್ಲಿ ಆ ಎರಡು ಪಕ್ಷಗಳ ಒಳಜಗಳ ಬಹಿರಂಗವಾಗುತ್ತಿದೆಯೇ ವಿನಾ ಬೇರೇನೂ ಇಲ್ಲ. ಇವರು ಕೇಳುತ್ತಾರೆಂಬ ಕಾರಣಕ್ಕೆ ರಾಜೀನಾಮೆ ನೀಡುವುದಕ್ಕೆ ಮುಖ್ಯಮಂತ್ರಿ ಸ್ಥಾನ ಆಟಿಕೆಯ ವಸ್ತುವಲ್ಲ, ಅದು ೪೦ ವರ್ಷಗಳ ಪರಿಶುದ್ಧ ಮತ್ತು ಪ್ರಾಮಾಣಿಕ ರಾಜಕೀಯ ಜೀವನಕ್ಕಾಗಿ ಸಿದ್ದರಾಮಯ್ಯನವರಿಗೆ ಜನ ನೀಡಿದ ಆಶೀರ್ವಾದ. ಇದನ್ನು ಕಸಿಯಲು ಹೊರಟಿರುವ ಊಳಿಗಮಾನ್ಯ ಮನಸ್ಥಿತಿಯ ವಿರುದ್ಧವೇ ಇಂದು ಮೈಸೂರಿನಲ್ಲಿ ನಡೆಯುತ್ತಿದೆ ಜನಾಂದೋಲನ ಸಭೆ. ಈ ಹಿಂದೆ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಸಿಕ್ಕ ಮಾನ್ಯತೆ ಈಗಲೂ ಲಭಿಸುತ್ತಿರುವುದು ಸಿದ್ದರಾಮಯ್ಯನವರ ಜನಪ್ರಿಯ ನಾಯಕತ್ವಕ್ಕೆ ಸಾಕ್ಷಿ. ಸಿದ್ದರಾಮಯ್ಯ ವಿರುದ್ಧ ಇಂಥದೊಂದು ಷಡ್ಯಂತ್ರವನ್ನು ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ನಡೆಸಲಾಗಿತ್ತೆಂಬ
ಬಗ್ಗೆ ಈಗ ಮಾಹಿತಿಗಳು ಬರುತ್ತಿವೆ.

ಇದಾದ ಬಳಿಕ ಸದನದ ಒಳಗೆ ಹಾಗೂ ಹೊರಗೆ ಇಂಥದೊಂದು ಅನುಮಾನವನ್ನು ಬಿತ್ತುವುದಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನಿರಂತರ ಪ್ರಯತ್ನ ನಡೆಸಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರ ಸ್ವಾಮಿ ಯವರಂತೂ ಮೈಸೂರಿಗೆ ಬಂದು ಸಿದ್ದರಾಮಯ್ಯ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿ ಆರೋಪ ಮಾಡಿದ್ದರು. ಇಲ್ಲವಾದರೆ ಖುದ್ದು ಮುಡಾದಲ್ಲಿ ಪರ್ಯಾಯ ನಿವೇಶನ ಬೇಡಿದವರು
ಇಂಥದೊಂದು ಆರೋಪ ಮಾಡುವುದಕ್ಕೆ ಸಾಧ್ಯವಿತ್ತೇ? ಮೈತ್ರಿ ಪಕ್ಷಗಳ ಈ ಒಳಸಂಚಿನ ಬಗ್ಗೆ ಸಿದ್ದರಾಮಯ್ಯ ನವರು ಈಗಾಗಲೇ ಪತ್ರಿಕಾಗೋಷ್ಠಿ ನಡೆಸಿ ಸಾಕಷ್ಟು ವಿಚಾರಗಳ ಬಗ್ಗೆ ಬೆಳಕು ಚೆಲಿದ್ದಾರೆ. ಸೈದ್ಧಾಂತಿಕವಾಗಿ ಅವರ ಜತೆಗೆ ಸುದೀರ್ಘ ವರ್ಷಗಳಿಂದ ನಿಂತಿರುವ ನಮಗೆಲ್ಲ ಅವರ ವ್ಯಕ್ತಿತ್ವ ಎಂಥದೆಂದು ಸ್ಪಷ್ಟವಾಗಿ ಗೊತ್ತು.

ಆದಾಗ್ಯೂ ರಾಜಭವನವನ್ನು ದುರ್ಬಳಕೆ ಮಾಡಿಕೊಂಡು ಸಿದ್ದರಾಮಯ್ಯ ಅವರನ್ನು ಕಾನೂನು ಕುಣಿಕೆಯೊಳಗೆ ಸಿಲುಕಿಸುವ ಹತಾಶ ಪ್ರಯತ್ನ ನಡೆಯುತ್ತಿದೆ. ಅರಸು ಅವರ ರೀತಿ ಹಿಂದು ಳಿದ ವರ್ಗದ ನಾಯಕನ ಮೇಲೆ ವ್ಯವಸ್ಥಿತ ಸಂಚನ್ನು ರೂಪಿಸಲಾಗುತ್ತಿದ್ದು ದಿಲ್ಲಿ ನಾಯಕತ್ವ ಇದರ ಹಿಂದೆ ಇದೆ. ಹೀಗಾಗಿ ಸಿದ್ದರಾಮಯ್ಯ ಅವರ ಪರವಾಗಿ ಸಮಸ್ತ ಶೋಷಿತ ವರ್ಗ ಒಟ್ಟಿಗೆ ನಿಲ್ಲಬೇಕಿದೆ. ಈ ಸಮಾವೇಶ ಯಾವುದೇ ಜಾತಿ, ವರ್ಗದ ವಿರುದ್ಧವಲ್ಲ. ಆದರೆ ಧ್ವನಿಯಿಲ್ಲದವರ ಧ್ವನಿಯಾಗಿರುವ ಸಿದ್ದರಾಮಯ್ಯ ಅವರನ್ನು ರಕ್ಷಿಸಿಕೊಳ್ಳುವುದು ನಮ್ಮ ಈ ಕ್ಷಣದ ಅನಿವಾರ್ಯತೆ ಹಾಗೂ ಕರ್ತವ್ಯ.

ಇದನ್ನು ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಬೆಂಬಲಿಸೋಣ ಬನ್ನಿ. ಬುದ್ಧ, ಬಸವಣ್ಣ, ಅಂಬೇಡ್ಕರ್‌ರವರ ಸಿದ್ಧಾಂತಗಳ ಅಪ್ಪಟ ಅನುಯಾಯಿಯಾಗಿರುವ, ಸಾಮಾಜಿಕ ನ್ಯಾಯದ ಹರಿಕಾರರಾಗಿರುವ ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಜಾರಿಗೆ ತಂದಿರುವ ಜನಪರ ಪಂಚ ಗ್ಯಾರಂಟಿಗಳ ಜನಪ್ರಿಯತೆಯನ್ನು ಸಹಿಸಲಾರದೆ ಬಿಜೆಪಿ ಮತ್ತು ಜೆಡಿಎಸ್ ಕುತಂತ್ರ ರಾಜಕಾರಣದಲ್ಲಿ ತೊಡಗಿ ಸಿದ್ದರಾಮಯ್ಯನವರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುತ್ತಿರುವುದನ್ನು ಈ ನಾಡಿನ ಪ್ರಜ್ಞಾವಂತ ನಾಗರಿಕರು, ಪ್ರಗತಿಪರ ಚಿಂತಕರು, ರೈತಪರ ಹೋರಾಟಗಾರರು, ಶೋಷಿತ ಸಮುದಾಯಗಳು ಒಗ್ಗಟ್ಟಿನಿಂದ ಖಂಡಿಸಬೇಕಾಗಿದೆ.

(ಲೇಖಕರು ರಾಮಮನೋಹರ್ ಲೋಹಿಯಾ ವಿಚಾರ
ವೇದಿಕೆಯ ಅಧ್ಯಕ್ಷರು)

Leave a Reply

Your email address will not be published. Required fields are marked *