Tuesday, 10th September 2024

ಅಮೆರಿಕದಲ್ಲಿ ಇನ್ಸೂರೆನ್ಸ್ ಸರ್ವಾಂತರ್ಯಾಮಿ

ಶಿಶಿರಕಾಲ

shishirh@gmail.com

ಇತ್ತೀಚೆಗೆ ಭವಾನಿ ರೇವಣ್ಣನವರ ಕಾರಿಗೆ ಯಾರೋ ಒಬ್ಬ ಜನಸಾಮಾನ್ಯ ಅದೆಲ್ಲಿಂದಲೋ ಬಂದು ಡಿಕ್ಕಿ ಹೊಡೆದ ಸನ್ನಿವೇಶ, ಆ ಸಮಯದಲ್ಲಿ ಸಚಿವೆ ಎಂಬ ಎಲ್ಲ ಲಜ್ಜೆ ಮರ್ಯಾದೆಗಳನ್ನು ಬಿಟ್ಟು ವ್ಯವಹರಿಸಿದ ವಿಡಿಯೋ ಟಿವಿ, ಸೋಷಿಯಲ್ ಮೀಡಿಯಾದಲ್ಲಿ ನೋಡಿಯೇ ಇರುತ್ತೀರಿ. ನಮ್ಮ ದೇಶದಲ್ಲಿ ಚಿಕ್ಕಪುಟ್ಟ ಅಪಘಾತವಾದಾಗ ಅದರಲ್ಲಿ ಇದ್ದವರು, ಇಲ್ಲದವರು, ಅಕ್ಕಪಕ್ಕದವರು ಎಲ್ಲರೂ ಬಂದು ಗಲಾಟೆಯಲ್ಲಿ ಭಾಗಿಯಾಗುವುದು, ರಾಸ್ತ ನ್ಯಾಯಾಲಯ ನಡೆಸುವುದು ಇತ್ಯಾದಿ ನಿಮಗೆಲ್ಲ ಗೊತ್ತಿದ್ದದ್ದೇ. ಯಾವುದೇ ಅಪಘಾತವನ್ನು ಯಾರೂ ಬಯಸುವುದಿಲ್ಲ, ಆದರೂ ಅದರಬ್ಬರ ತಪ್ಪು ಹುಡುಕಿ ಜಗಳ, ಹೊಡೆದಾಟಕ್ಕಿಳಿಯುವುದು ಸಾಮಾನ್ಯ.

ಅಮೆರಿಕದಲ್ಲಿ ೩೩ ಕೋಟಿ ಜನಸಂಖ್ಯೆ. ಅದರಲ್ಲಿ ವಾಹನ ಚಲಾಯಿಸುವ ವಯಸ್ಸು – ಹದಿನಾರು ಮೀರಿದವರು ೨೬ ಕೋಟಿ ಮಂದಿ. ಅಮೆರಿಕದಲ್ಲಿ ಚಲಾವಣೆ ಯಲ್ಲಿರುವ ಕಾರಿನ ಸಂಖ್ಯೆ ೨೮ ಕೋಟಿ. ಅಮೆರಿಕದಲ್ಲಿ ೩೬ ಸಾವಿರ ಅಪಘಾತ ದಿನಂಪ್ರತಿ ಸಂಭವಿಸುತ್ತದೆ. ಆದರೆ ಒಂದೇ ಅಪಘಾತ ದಲ್ಲಿಯೂ ಇಂತಹ ಒಂದೂ ಘಟನೆ, ಜಗಳ, ಹೊಡೆದಾಟ ನಡೆಯುವುದಿಲ್ಲ. ಆಕ್ಸಿಡೆಂಟ್ ಮಾಡಿಕೊಂಡವರ ವಾಗ್ವಾದದ ಸೀನ್ ಇಲ್ಲವೇ ಇಲ್ಲ. ಆಕ್ಸಿಡೆಂಟ್ ಅದ ತಕ್ಷಣ ಎರಡೂ ಕಾರಿನವರು ೯೧೧ ತುರ್ತು ಸೇವೆಗೆ ಕರೆ ಮಾಡುತ್ತಾರೆ. ಆಗ ಅಂಬ್ಯುಲೆ ಅವಶ್ಯವಿದ್ದಲ್ಲಿ ಅಥವಾ ಪೊಲೀಸರು ಒಂದೆರಡು ನಿಮಿಷದಲ್ಲಿ ಬಂದುಬಿಡುತ್ತಾರೆ.

ಅವರು ಎರಡೂ ವಾಹನ ಯಾವ ಕಡೆಯಿಂದ ಬಂದು ಒಂದಕ್ಕೊಂದು ತಾಗಿತು, ಇದರಲ್ಲಿ ಯಾರದ್ದು ತಪ್ಪು ಎಂದು ನಿರ್ಧಸಿರುವುದು ಪೊಲೀಸ್. ಅದಾದ ನಂತರ ತಪ್ಪಿರುವವನ ಹೆಸರು, ಅವನ ಇನ್ಸೂರೆ ವಿವರ ಪಡೆದು, ಅದೆಲ್ಲವನ್ನು ಒಂದು ಚಿಕ್ಕ ರಿಪೋರ್ಟ್ ಮಾಡಿ, ತಪ್ಪಿಲ್ಲದವನ ಕೈಗೆ ಕೊಡುತ್ತಾರೆ. ಆತ ಅದನ್ನು ಇಟ್ಟುಕೊಂಡು ಹೋಗಿ ಗಾಡಿ ದುರಸ್ತಿ ಮಾಡಿಸಿಕೊಂಡರಾಯಿತು. ಆಕ್ಸಿಡೆಂಟ್ ಆದಾಗ ಭಾರತದವರು ನಡೆದುಕೊಳ್ಳುವು ದನ್ನು ಮತ್ತು ಅಮೆರಿಕದವರು ನಡೆದು ಕೊಳ್ಳುವುದನ್ನು ಸಂಸ್ಕಾರ, ಸಾಮಾಜಿಕ ಸಭ್ಯತೆ, ಪ್ರೌಢತೆ ಇತ್ಯಾದಿ ಗುಣವಿಶೇಷಗಳನ್ನು ಜನಸಾಮಾನ್ಯರಿಗೆ ಆರೋಪಿಸಿ ಹೋಲಿಸುವುದನ್ನು ಕಂಡಿದ್ದೇನೆ. ಅಪಘಾತವೆಂದರೆ ಅದೊಂದು ನಷ್ಟ.

ನಷ್ಟ ಅನುಭವಿಸಿದವನು ಇನ್ನೊಬ್ಬರ ಮೇಲೆ ತಪ್ಪು ಹೊರಿಸುವುದು, ಅದುವೇ ಮುಂದುವರಿದು ಜಗಳವಾಗುವುದು, ಗಾಡಿ ಓಡಿಸಲಿಕ್ಕೆ ಬರದಿದ್ದಲ್ಲಿ ಏಕೆ ಓಡಿಸ ಬೇಕೆಂದು ಶುರುವಾಗುವ ಜಗಳಗಳು ತಾರಕಕ್ಕೇರುವುದಿದೆ. ಅದ್ಯಾವುದೂ ಅಮೆರಿಕದಲ್ಲಿ ನಡೆಯುವುದೇ ಇಲ್ಲ. ಅಸಲಿಗೆ ಇಬ್ಬರು ಆಕ್ಸಿಡೆಂಟ್‌ ನಲ್ಲಿ ಭಾಗಿಯಾ ದಲ್ಲಿ ಒಬ್ಬರನ್ನೊಬ್ಬರು ಪರಸ್ಪರ ಮಾತನಾಡಿಸುವುದೇ ಇಲ್ಲ. ಒಬೊಬ್ಬರು ಒಂದೊಂದು ದಿಕ್ಕಿಗೆ ಮುಖ ಮಾಡಿ ದೂರ ನಿಂತುಬಿಡು ತ್ತಾರೆ. ಪೊಲೀಸು ಬಂದು ಇಂಥವರ ತಪ್ಪು ಎಂದರೆ ಮುಗಿಯಿತು. ಈ ನಾಗರಿಕ ನಡೆ ಸಾಮಾಜಿಕ ಸಭ್ಯತೆಯೇ? ಅಲ್ಲ.

ಇದೆಲ್ಲದಕ್ಕೆ ಕಾರಣ ಇಲ್ಲಿರುವ ಇನ್ಸೂರೆನ್ಸ್ ವ್ಯವಸ್ಥೆ. ತಪ್ಪು ಮಾಡದವನ ಎಲ್ಲ ನಷ್ಟವನ್ನೂ ಇನ್ನೊಬ್ಬ, ತಪ್ಪೆಸಗಿ ದವನ ಇನ್ಸೂರೆ ಭರಿಸಿಕೊಡುತ್ತದೆ. ಅಷ್ಟೇ ಅಲ್ಲ, ರಿಪೇರಿ ಆಗುವಷ್ಟು ಸಮಯದ ವರೆಗೆ ಬಾಡಿಗೆ ಕಾರಿನ ಖರ್ಚೂ ಅದೇ ಇನ್ಸೂರೆನದು. ಇನ್ನು ತಪ್ಪೆಸಗಿದವನಿಗೂ ನಷ್ಟವಾಗಿದ್ದರೆ ಅದನ್ನು ಅವನ ಇನ್ಸೂರೆ ಭರಿಸುತ್ತದೆ. ಇದೆಲ್ಲವೂ ತಪ್ಪೆಸಗಿದವನ ಇನ್ಸುರೆನ್ಸಿಗೆ ಪಟ್ಟಿಯಾಗುತ್ತದೆ. ಅವರೋ, ತಪ್ಪೆಸಗಿದವನೆಂದರೆ ಅವನಿಂದ ಇನ್ನೂ ಹೆಚ್ಚಿನ ನಷ್ಟವಾಗುವ ಸಾಧ್ಯತೆ ಜಾಸ್ತಿ. ರಿ ಹೆಚ್ಚು ಎಂದರೆ ಅವರ ಪ್ರೀಮಿಯಂ ಅದಕ್ಕನುಗುಣವಾಗಿ ಜಾಸ್ತಿ.

ಹಾಗಾಗಿ ಆಕ್ಸಿಡೆಂಟಿಗೆ ಕಾರಣವಾದವನ ತಿಂಗಳ ಇನ್ಸೂರೆ ಪ್ರೀಮಿಯಂ ಹೆಚ್ಚುತ್ತದೆ, ದುಪ್ಪಟ್ಟಾಗುತ್ತದೆ. ತಪ್ಪು ಮಾಡಿದವನಿಗೆ ಪೊಲೀಸ್ ದಂಡ ಒಂದು
ಕಡೆಯಾದರೆ ಇನ್ನೊಂದು ಕಡೆ ಅವನ ತಿಂಗಳ ಇನ್ಸೂರೆ ಖರ್ಚು ಹೆಚ್ಚುತ್ತದೆ. ಈ ವ್ಯವಸ್ಥೆಯಿರುವುದರಿಂದ ಅಮೆರಿಕನ್ನರು ಆಕ್ಸಿಡೆಂಟ್ ಆದಾಗ ಜಗಳವಾಡು ವುದಿಲ್ಲ, ಹೊಡೆದಾಟಕ್ಕಿಳಿಯುವುದಿಲ್ಲ. ಹೊಡೆದಾಟ ಮಾಡಿದರೆ ಇಬ್ಬರ ಮೇಲೂ ಇನ್ನೊಂದು ಕೇಸ್ ಬೀಳುತ್ತದೆ. ಒಂದು ವೇಳೆ ಇಬ್ಬರದ್ದೂ ತಪ್ಪಿದ್ದರೆ, ಅಥವಾ ತಪ್ಪನ್ನು ಪೊಲೀಸ್ ನಿರ್ಧರಿಸಲು ಸಾಧ್ಯವಾಗದಿದ್ದಲ್ಲಿ ಅಪಘಾತದ ಖರ್ಚು ಎರಡೂ ಇನ್ಸೂರೆನವರಿಗೆ. ಅಂತೆಯೇ ಇಬ್ಬರದೂ ಪ್ರೀಮಿಯಂ ಆಕಾಶಕ್ಕೇರುತ್ತದೆ.
ಇದು ಒಂದು ಉದಾಹರಣೆ.

ಅಮೆರಿಕದಲ್ಲಿ ಎಲ್ಲ ವ್ಯವಹಾರ, ವ್ಯಾಪಾರಹಗಳನ್ನು ನಿರ್ದೇಶಿಸುವುದೇ ವಿಮೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇಲ್ಲಿ ಇನ್ಸೂರೆ ಇಲ್ಲದೆ ಯಾವುದೇ ವ್ಯವಹಾರ, ವ್ಯಾಪಾರ, ಕೆಲಸ ನಡೆಯುವುದೇ ಇಲ್ಲ. ವಿಮೆ ಸರ್ವವ್ಯಾಪಿ. ಇಷ್ಟಕ್ಕೂ ವಿಮೆಯೆಂದರೆ ಏನು? ಅಪಾಯವಿದ್ದರೆ ಅದಕ್ಕೊಂದು ಬದಲಿ ಪರಿಹಾರ. ವಿಮೆಯನ್ನು ಖರೀದಿಸು ವುದು ಅದರ ಲಾಭ ಪಡೆಯಬೇಕೆಂದಲ್ಲ. ಬದಲಿಗೆ ಅಂದುಕೊಳ್ಳದ ಅವಘಡಗಳಾದಲ್ಲಿ ಅದರಿಂದಾಗುವ ನಷ್ಟವನ್ನು ಭರಿಸುವಲ್ಲಿ
ಎಲ್ಲರಿಂದ ಸಂಗ್ರಹಿಸಿದ ಹಣ ಮೂಲಕ ಮಾಡುವುದು. ಆ ಮೂಲಕ ಅವಘಡದ ನಷ್ಟವನ್ನು ನಿಭಾ ಯಿಸುವುದು. ರಿ ಅನ್ನು ಎಲ್ಲರಿಗೂ ಸಮಪಾಲಾಗಿ ಹಂಚುವುದು. ಕಡಿಮೆ ಅವಘಡ, ಕ್ಲೈಮ್ ಆದಷ್ಟು ಅಪಾಯ ಕಡಿಮೆ, ಹೆಚ್ಚಿನವರು ಪಾಲ್ಗೊಂಡು ವಿಮೆ ಖರೀದಿಸಿದರೆ ಆಗ ವಿಮೆಯ ಖರ್ಚು ಕಡಿಮೆ.

ಅದು ಗ್ರೇಟ್ ಡಿಪ್ರೆಶನ್ ಸಮಯ. ೧೯೩೦ ರಲ್ಲಿ ಆರ್ಥಿಕ ಮುಗ್ಗಟ್ಟು ಎಲ್ಲ ಮಿತಿಯನ್ನು ಮೀರಿತ್ತು. ಜನರಿಗೆ ಒಮ್ಮಿಂದೊಮ್ಮೆಲೆ ಬ್ಯಾಂಕುಗಳ ಮೇಲಿನ ನಂಬಿಕೆ ಹೊರಟುಹೋಗಿತ್ತು. ಏಕೆಂದರೆ ಒಂದೊಂದೇ ಬ್ಯಾಂಕು ಸಾಲ ಮರುಪಾವತಿ ಪಡೆಯಲಾಗದೆ ಸೊರಗಿ ದಿವಾಳಿಯಾಗತೊಡಗಿತ್ತು. ಹೀಗಿರುವಾಗ ಬ್ಯಾಂಕಿನಲ್ಲಿಟ್ಟ ಹಣವನ್ನು ಜನರು ಹೊರತೆಗೆಯಲು ಶುರುಮಾಡಿದರು. ಮೊದಲೇ ಆರ್ಥಿಕ ಮುಗ್ಗಟ್ಟು, ಜನರ ಬ್ಯಾಂಕಿನ ಮೇಲಿನ ಅಪನಂಬಿಕೆ ಗಾಯದ ಮೇಲೆ ಬರಿಯ ಎಳೆದಂತಾಗಿತ್ತು. ಸ್ವತಃ ಅಮೆರಿಕದ ಅಧ್ಯಕ್ಷರೇ ಬಂದು ನಿಮ್ಮ ಹಣ ಬ್ಯಾಂಕಿನಲ್ಲಿ ಸುರಕ್ಷಿತ ಎಂದರೂ ಸಾಕಾಗಲಿಲ್ಲ.

ಆಗ ಇನ್ಸೂರೆ ಒಂದನ್ನು ಜಾರಿಗೆ ತರಲಾಯಿತು. ಈ ಇನ್ಸೂರೆ ಹೊಂದಿರುವ ಬ್ಯಾಂಕುಗಳಲ್ಲಿನ ಹಣ ವೇನಾದರೂ ನಷ್ಟವಾದರೆ ಅದನ್ನು ವಿಮೆ ಹೊಂದಿಸಿ ಕೊಡುವ ಪದ್ಧತಿ ಜಾರಿಗೆ ಬಂತು. ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಕಳೆದ ಐವತ್ತು ವರ್ಷದಲ್ಲಿ ಒಬ್ಬನೇ ಒಬ್ಬ ಅಮೆರಿಕನ್ ಬ್ಯಾಂಕ್ ಅಥವಾ ಯಾವುದೇ ಆರ್ಥಿಕ ಸಂಸ್ಥೆಯಿಂದ ಒಂದೇ ಒಂದು ಡಾಲರ್ ನಷ್ಟ ಹೊಂದಿಲ್ಲ, ಕಳೆದುಕೊಂಡಿಲ್ಲ. ಈಗೊಂದು ವರ್ಷದ ಹಿಂದೆ ನನ್ನದೊಂದು ಡೆಬಿಟ್ ಕಾರ್ಡ್ ಕಳೆದುಹೋಗಿತ್ತು. ನನಗೆ ಅದು ಕಳೆದದ್ದೇ ಗೊತ್ತಿಲ್ಲ. ಒಂದೆರಡು ದಿನ ಕಳೆದು ನೋಡುತ್ತೇನೆ, ಅದರಿಂದ ನೂರಾರು ಹಣದ ಪಾವತಿಯಾಗಿತ್ತು.

ಅದು ಸಿಕ್ಕಿದ ವ್ಯಕ್ತಿ ಸುಮಾರು ಸಾವಿರ ಡಾಲರ್ ಹಣವನ್ನು ನನ್ನ ಖಾತೆಯಿಂದ ತೆಗೆದಿದ್ದ. ನನಗೆ ಗೊತ್ತಾದಾಕ್ಷಣ ಬ್ಯಾಂಕಿನವರಿಗೆ ಒಂದು ಫೋನ್ ಮಾಡಿದ್ದಷ್ಟೆ. ನನ್ನ ಖಾತೆಯಿಂದ ಕಳೆದ ಹಣವನ್ನೆಲ್ಲ ವಾಪಸ್ ಹಾಕಿಬಿಟ್ಟರು. ಇದು ಆ ಇನ್ಸೂರೆ ಇದ್ದದ್ದಕ್ಕೆ ನಾನ್ನು ಬಚಾವು. ಇಲ್ಲಿ ಈ ಇನ್ಸೂರೆ ಹೊಂದಿರದ ಹಣಕಾಸು ಸಂಸ್ಥೆಯ ಜೊತೆ ಯಾರೂ ವ್ಯವಹರಿಸುವುದೇ ಇಲ್ಲ. ಕಾರಿಗೆ ವಿಮೆ ಮಾಡಿಸಿದಷ್ಟೇ ಸಹಜ ಮತ್ತು ಸಾಮಾನ್ಯ ಮನೆಯ ವಿಮೆ. ಮನೆಗೆ ಏನೇ ಹಾನಿಯಾದರೂ ಆ ವಿಮೆ ಅದನ್ನು ನಿಭಾಯಿಸುತ್ತದೆ. ಅಮೆರಿಕದಲ್ಲಿ ಇನ್ನೊಂದು ನಿಯಮವಿದೆ. ಒಂದು ವೇಳೆ ನಿಮ್ಮ ಮನೆಗೆ ಯಾರೋ ನೆಂಟರು ಬಂದರೆಂದುಕೊಳ್ಳಿ, ಅವರು ಮನೆಯೊಳಗೆ ಕಾಲು ಜಾರಿ ಬಿದ್ದರೆ, ನೋವು ಮಾಡಿಕೊಂಡರೆ ಅದನ್ನು ಭರಿಸುವುದಕ್ಕೆ ವಿಮೆ ಇರಬೇಕು. ಯಾರೋ ಒಬ್ಬ ಕೆಲಸಗಾರ ನಿಮ್ಮ ಮನೆಯೊಳಕ್ಕೆ ಏನೋ ಒಂದು ರಿಪೇರಿಗೆ ಬಂದರೆ ಅವನ ಜವಾಬ್ದಾರಿಯೂ ಇದೇ ಇನ್ಸೂರೆನದು. ಅಷ್ಟೇ ಅಲ್ಲ, ಮನೆಯ ಅಂಗಳ, ಪಕ್ಕದ ಕಾಲು ದಾರಿಯಲ್ಲಿ ಜಾರಿ ಬಿದ್ದರೂ ಆ ಜವಾಬ್ದಾರಿ ಮತ್ತು ಖರ್ಚು ವಿಮೆಯದು. ಒಂದು ವೇಳೆ ವಿಮೆ ಹೊಂದಿಲ್ಲವೆಂದರೆ ಆ ಎಲ್ಲ ಖರ್ಚು ಮನೆಯ ಯಜಮಾನ ನದು. ಏಕೆಂದರೆ ಅಪಘಾತವಾಗಿದ್ದು ಆತನ ಖಾಸಗಿ ಜಾಗದಲ್ಲಿ.

ಈಗೊಂದು ತಿಂಗಳ ಹಿಂದೆ ಸ್ಟಾರ್ ಬP ಕಾಫಿ ದುಕಾನಿಗೆ ಹೋಗಿದ್ದೆ. ನಾನು ಒಳ ಹೊಕ್ಕುವಾಗಲೇ ಆ ಮಳಿಗೆ ಮುಚ್ಚುವ ಸಮಯವಾಗಿತ್ತು. ಇನ್ನೊಂದು ನಿಮಿಷವಿತ್ತು. ನಾನು ಒಳ ಸೇರಿಕೊಂಡು ಕಾಫಿ ಆರ್ಡರ್ ಮಾಡುವಾಗ ಆ ಅಂಗಡಿಯ ಸಮಯ ಮುಗಿದಿತ್ತು. ಆತ ನಾವು ಇನ್ನು ಕಾಫಿ ಕೊಡಲಾಗುವು ದಿಲ್ಲ ಎಂದುಬಿಟ್ಟ. ಆತ ಹೆಚ್ಚಿಗೆಯಿದ್ದ ಎಲ್ಲ ಕಾಫಿಗಳನ್ನು ಬೇಸಿನ್ನಿಗೆ ಚಲ್ಲುತ್ತಿದ್ದ. ನನಗೋ ಕಾಫಿ ಬೇಕೇ ಬೇಕಿತ್ತು. ಚಲ್ಲುವುದನ್ನೇ ಕೊಡು ಎಂದೆ. ಸರಿ ಕೊಡುತ್ತೇನೆ, ಆದರೆ ನೀವು ಅಂಗಡಿಯ ಒಳಕ್ಕೆ ಕುಡಿಯುವಂತಿಲ್ಲ, ಅಲ್ಲದೆ ಇದಕ್ಕೆ ನಾನು ಹಣ ಪಡೆಯಲಾಗುವುದಿಲ್ಲ. ಏಕೆಂದರೆ ಈಗಾಗಲೇ ಕಂಪ್ಯೂಟ ರೀಕೃತ ಗ ಪಟ್ಟಿ ಲಾಕ್ ಆಗಿಬಿಟ್ಟಿದೆ ಎಂದ.

ವಿಷಯ ಏನೆಂದರೆ ಆ ಅಂಗಡಿಯ ವ್ಯವಹಾರ, ಅಲ್ಲಿನ ಹಣ, ಅದರೊಳಕ್ಕೆ ಬರುವ ಗ್ರಾಹಕ, ಅವರು ಕೊಡುವ ಕಾಫಿಯಿಂದ ಆಗಬಹುದಾದ ಯಾವುದೇ ಅವಘಡ, ಅಂಗಡಿಯೊಳಕ್ಕೆ ಕಾಲು ಜಾರಿ ಬಿದ್ದರೆ ಇವು ಯಾವುವೂ ಅಂಗಡಿಯ ಸಮಯದ ನಂತರವಾದರೆ ಇನ್ಸೂರೆ ಅದಕ್ಕೆ ಜವಾಬ್ದಾರನಲ್ಲ ಎಂಬ ಒಡಂಬಡಿಕೆ. ಇದರಿಂದಾಗಿ ಸಮಯವಾದ ಒಂದೇ ಕ್ಷಣದ ನಂತರವೂ ವ್ಯವಹಾರ ನಡೆಸುವಂತಿಲ್ಲ, ನಿರ್ಬಂಧ. ಅಮೆರಿಕದಲ್ಲಿ ಎಲಿ ಅಪಾಯ ರಿ ಇದೆಯೋ ಅಲ್ಲ ಅದಕ್ಕೊಂದು ಇನ್ಸೂರೆ ಇದೆ. ಇದರಲ್ಲಿ ಬಹುತೇಕ ವಿಮೆಗಳು ಖಡ್ಡಾಯ. ಇನ್ನು ಕೆಲವು ಐಚ್ಛಿಕ. ವಾಹನ, ಮನೆ, ಅರೋಗ್ಯ ವಿಮೆಗಳಷ್ಟೇ ಅಲ್ಲ. ಬಾಡಿಗೆ ಮನೆ ಪಡೆಯಬೇಕೆಂದರೆ ಅದಕ್ಕೂ ವಿಮೆ ಬೇಕು. ನೀವು ಯಾವುದೇ ವ್ಯವಹಾರ ನಡೆಸುತ್ತಿದ್ದೀರಿ, ನಿಮಗಾಗಿ ದುಡಿಯುವ ಕೆಲಸದವರಿದ್ದಾರೆ ಎಂದರೆ ಅವರೆಲ್ಲರ ಮೇಲೆಯೂ ವಿಮೆಯಾಗಿರಬೇಕು.

ಮನುಷ್ಯನ ಹಲ್ಲು, ಕಣ್ಣು ವಿಮೆಯಿಲ್ಲದೆ ಶುಶ್ರೂಷೆ ಪಡೆಯಲು ಸಾಧ್ಯವೇ ಇಲ್ಲ. ಏಕೆಂದರೆ, ಅಲ್ಲಿನ ಆಸ್ಪತ್ರೆಗಳು ಬಲು ತುಟ್ಟಿ. ಅಮೆರಿಕದಲ್ಲಿ ಸಾಕು ಪ್ರಾಣಿಗಳ ಶುಶ್ರೂಷೆಯೂ ವಿಮೆಯಿಲ್ಲದಿದ್ದರೆ ತುಟ್ಟಿ. ಪ್ರತೀ ಬಿಲ್ಡಿಂಗು ಪ್ರವಾಹ, ಭೂಕಂಪ, ಸುಂಟರಗಾಳಿ ಮೊದಲಾದ ವಿಮೆ ಮಾಡಿವುದು ಕಡ್ಡಾಯ. ಐಡೆಂಟಿಟಿ ಥೆ- ಇನ್ಸೂರೆ ಎಂದೊಂದಿದೆ. ನಿಮ್ಮ ಹೆಸರು, ವಿವರ ಕದ್ದು ಪಡೆದು ಆ ಮೂಲಕ ಹಣ ಲೂಟಿ ಮಾಡುವ ಹೊಸ ಮೋಸವಿದು. ಇದರಲ್ಲಿ ಸಿಕ್ಕಿಕೊಂಡು ಮೋಸ ಹೋದವರಿದ್ದಾರೆ. ಹಾಗಾಗಿ ಇತ್ತೀಚೆಗೆ ಬಹುತೇಕರು ಈ ವಿಮೆ ಮಾಡಿಸಿಕೊಳ್ಳುತ್ತಾರೆ. ಮದುವೆ ಇನ್ಸೂರೆ ಎಂದೊಂದಿದೆ. ಏಕೆಂದರೆ, ಮದುವೆ ದೊಡ್ಡ ಖರ್ಚಿನದಲ್ವೇ, ಹಾಗಾಗಿ ಈ ವಿಮೆ ಮಾಡಿಸಿಕೊಂಡರೆ ಒಂದು ವೇಳೆ ಕಾರಣಾಂತರದಿಂದ ಮದುವೆ ನಿಂತು ಹೋದರೆ ಅದರಿಂದಾಗುವ ಆರ್ಥಿಕ ನಷ್ಟ ಭರಿಸಲು ಇದು. ಕಂಪನಿಗಳು, ಬ್ಯಾಂಕುಗಳು, ಅಂಗಡಿಗಳು, ಹೋಟೆಲ್ಲುಗಳು, ಪಾರ್ಕುಗಳು, ವಾಹನ, ಆರೋಗ್ಯ ಹೀಗೆ ಎಲ್ಲದರಲ್ಲಿಯೂ ಎಂದರಲ್ಲಿ ವಿಮೆ. ಆಲ್ಕೋಹಾಲ್ ಮಾರಾಟ ಮಾಡುವ ಮಳಿಗೆಗಳು ವಿಚಿತ್ರ ವಿಮೆ ಮಾಡಿಸಿಕೊಂಡಿರುತ್ತವೆ.

ಅದೇನೆಂದರೆ ಅವರು ಮಾರಾಟ ಮಾಡುವ ಮದ್ಯ ಹಾಳಾಗಿ ಅಥವಾ ಅದರಿಂದಾಗಿ ಅರೋಗ್ಯ ಕೆಟ್ಟರೆ, ವಿಪರೀತವಾದರೆ, ಅವರು ಆ ಮದ್ಯದಂಗಡಿಯ ಮೇಲೆ ಕೇಸ್ ಮಾಡಿದರೆ ಎಂದು ಎಣ್ಣೆ ಇನ್ಸೂರೆ ಮಾಡಿಸಿರಬೇಕು. ಹೈನುಗಾರಿಕೆ ನಡೆಸುವವರು ಸಾಂಕ್ರಾಮಿಕ ರೋಗ, ಅಗ್ನಿ, ಮಳೆ, ಪ್ರವಾಹ ಮೊದಲಾದ ದುರಂತಗಳಿಗೆ ವಿಮೆ ಪಡೆದಿರುತ್ತಾರೆ. ಒಂದುವೇಳೆ, ಕೋಲಾ ಆರೋಗ್ಯದ ಮಿತಿಗಿಂತ ಜಾಸ್ತಿ ಪ್ರಮಾಣದ ಕಪ್ಪುಗಳಲ್ಲಿ ಮಾರುವುದಾದರೆ ಅದರಿಂದೇನಾದರೂ ಆದರೆ ಅದಕ್ಕೂ ವಿಮೆ ಪಡೆದಿರಬೇಕು. ವಾಲ್ಮಾರ್ಟ್ ಮೊದಲಾದ ಬೃಹತ್ ಮಳಿಗೆಗಳು ಎಲ್ಲ ಸೇರಿ ಒಂದು ಎಂಬ ವಿಮೆ ಹೊಂದಿರುತ್ತವೆ.

ಅಂಗಡಿ ಸುಟ್ಟುಹೋದರೆ, ಅಂಗಡಿಯೊಳಗೆ ಯಾರಿಗಾದರೂ ಪೆಟ್ಟಾದರೆ, ನೆಲ ಒರೆಸುವಾಗ ಒz ನೆಲದಲ್ಲಿ ಕಾಲು ಜಾರಿ ಬಿದ್ದರೆ, ದರೋಡೆಯಾದರೆ ಹೀಗೆ ಸಾವಿರದೆಂಟು ‘ಆದರೆ’ ಗಳಿಗೆಲ್ಲಕ್ಕೂ ವಿಮೆ. ವಿಮಾನ ಸ್ವಂತzದರೆ ಅಥವಾ ಬಾಡಿಗೆಗೆ ಪಡೆದಿದ್ದರೆ ಅದು ನಿಂತಾಗ ಒಂದು ವಿಮೆ, ಹಾರಲು ಟರ್ಮ್ಯಾಕ್‌ ನಲ್ಲಿ ಓದುವಾಗ ಒಂದು ಇನ್ಸೂರೆ, ಆಕಾಶದಲ್ಲಿ ಇರುವಾಗ ಮತ್ತೊಂದು, ನೆಲಕ್ಕಿಳಿಯುವಾಗ ಮಗದೊಂದು. ಒಂದೊಂದರಲ್ಲಿ ರಿ ಪ್ರಮಾಣಗಳು ವಿಭಿನ್ನ. ಹಾಗಾಗಿ ಪ್ರೀಮಿಯಂ ಬೇರೆ ಬೇರೆ. ಇನ್ಸೂರೆ ಪಡೆಯದಿದ್ದರೆ ಏನಾಗುತ್ತದೆ? ಇಲ್ಲಿನ ಕಾನೂನು ಬಹಳ ಗಟ್ಟಿ.

ಅಲ್ಲದೆ ನಷ್ಟ ಅನುಭವಿಸಿದವನು ಕೋರ್ಟಿಗೆ ಹೋದರೆ ಕೋರ್ಟ್ ಆತನ ಪರವಾಗಿಯೇ ನಿಲ್ಲುವುದು. ಉದ್ಯಮದ ಕೆಲಸಗಾರನೊಬ್ಬ ಗಾಯಗೊಂಡು ಕೋರ್ಟ್ ಮೆಟ್ಟಿಲೇರಿದರೆ, ಅದು ಕಂಪನಿಯ ತಪ್ಪೆಂದಾದರೆ ಅಲ್ಲಿ ವಿಮೆಯಿದ್ದರೆ ಆ ಕಂಪನಿ ಬಚಾವು. ಇಲ್ಲದಿದ್ದರೆ ಕೆಲವೊಮ್ಮೆ ಒಬ್ಬ ಕೆಲಸಗಾರನಿಗೆ ದಶಲಕ್ಷಗಟ್ಟಲೆ ಪರಿಹಾರ ಕೊಡಬೇಕಾಗುತ್ತದೆ. ಯಾವುದೋ ಕಾರ್ಖಾನೆಯಲ್ಲಿ ಅನಿಲ ಸೋರಿಕೆಯಾಯಿತೆಂದುಕೊಳ್ಳಿ, ಅಲ್ಲಿನವರೆಲ್ಲ ಕೇಸ್ ಮಾಡಿದರೆ, ವಿಮೆಯಿಲ್ಲದಿದ್ದಲ್ಲಿ ಕಂಪನಿ ಮುಚ್ಚಬೇಕಾಗುತ್ತದೆ.

ವಿಮಾ ಕಂಪನಿಗಳ ಯಶಸ್ಸು ಇರುವುದೇ ಅದರ ಗ್ರಾಹಕರಲ್ಲಿರುವ ರಿ ಪ್ರಮಾಣ ತಗ್ಗಿಸುವಲ್ಲಿ. ಹಾಗಾಗಿ ಅಪಾಯ ಎಷ್ಟಿದೆ ಎಂಬುದರ ಮೇಲೆ ವಿಮೆಯ ಪ್ರೀಮಿಯಂ ನಿರ್ಧಾರವಾಗುತ್ತದೆ. ಅಥವಾ ಈ ವಿಮಾ ಕಂಪನಿಗಳು ಈ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡರೆ ನಿಮ್ಮ ರಿಸ್ಕ್ ಕಡಿಮೆಯಾಗಿ ಪ್ರೀಮಿಯಂ ತಗ್ಗುತ್ತದೆ ಎಂದು ನಿರ್ದೇಶಿಸುತ್ತವೆ. ಹೀಗೆ ಎಲ್ಲವೂ ವಿಮೆಯ ವ್ಯಾಪ್ತಿಯೊಳಕ್ಕೆ ಬರುವುದರಿಂದಾಗಿ ವಿಮಾ ಕಂಪನಿಗಳು ಇಡೀ ಸಮಾಜದ ಸುರಕ್ಷತೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ನಿರ್ದೇಶಿಸುತ್ತವೆ. ಇತ್ತೀಚೆಗೊಬ್ಬ ನಟ ಜೈಲು ಸೇರಿದ ಸುದ್ದಿ ಬಂದಾಗ ಅವನನ್ನು ಹಾಕಿಕೊಂಡು ಚಿತ್ರ ನಿರ್ಮಿಸುತ್ತಿದ್ದ ನಿರ್ಮಾಪಕರು ಒಂದಿಷ್ಟು ಲಾಸ್ ಮಾಡಿಕೊಂಡರು ಎಂಬ ಸುದ್ದಿ ಬಂತಲ್ಲ.

ಅಂತಹ ಸ್ಥಿತಿ ಅಮೆರಿಕದಲ್ಲಿ ನಿರ್ಮಾಣವಾಗುವುದಿಲ್ಲ. ಏಕೆಂದರೆ ಸಿನೆಮಾ ನಿರ್ಮಿಸಲು ಸಾಲ ಕೊಡುವಾಗಲೇ ಅದರಲ್ಲಿರುವ ಮುಖ್ಯ, ಬದಲಾಯಿ ಸಲಾಗದ ಪಾತ್ರ ನಿರ್ವಹಿಸುವ ಎಲ್ಲರ ಮೇಲೆಯೂ ವಿಮೆ ಖರೀದಿಸುವಂತೆ ನೋಡಿಕೊಳ್ಳುತ್ತವೆ. ಇದರಿಂದಾಗಿ ಯಾವುದೇ ನಟ ಮೃತನಾದಲ್ಲಿ ಅಥವಾ ಜೈಲು ಸೇರುವಂತಹ ಘಟನೆಯಾದಲ್ಲಿ ಅದರಿಂದಾಗುವ ನಷ್ಟ ಭರಿಸಲಿಕೆ ವಿಮೆ ಇರುತ್ತದೆ. ಇಲ್ಲಿನ ಎಲ್ಲಾ ಡಾಕ್ಟರುಗಳು ಇನ್ಸೂರೆ ಹೊಂದಿರಲೇ ಬೇಕು. ಹೆರಿಗೆ ತಜ್ಞರಾದರೆ ಅವರು ರಿಟೈರ್ಡ್ ಆದ ಹದಿನೆಂಟು ವರ್ಷವೂ ವಿಮೆ ಹೊಂದಿರಬೇಕು. ಏಕೆಂದರೆ ಅವರು ಪ್ರಸೂತಿ ಮಾಡಿದ ಮಗು ಹದಿನೆಂಟು ವರ್ಷ ತಲುಪುವವರೆಗೂ ಹೆರಿಗೆ ಮಾಡಿದ ಡಾಕ್ಟರ್ ಮೇಲೆ ವೈದ್ಯಕೀಯ ನಿರ್ಲಕ್ಷದ ಕೇಸ್ ಮಾಡಬಹುದು.

ವೈದ್ಯರ ಯಾವುದೇ ನಿರ್ಲಕ್ಷ್ಯದಿಂದಾಗುವ ಅಚಾತುರ್ಯಕ್ಕೆ ಈ ಇನ್ಸುರೆನ್ಸುಗಳು ಆಪದ್ಬಾಂಧವ. ವಿಮೆ ಹೊಂದಿಲ್ಲವೆಂದರೆ ವೈದ್ಯರೇ ನಷ್ಟ ಭರಿಸಬೇಕು, ಅದೂ ಕೋಟಿಗಳ ಲೆಕ್ಕದಲ್ಲಿ. ಹಾಗಾಗಿ ವೈದ್ಯರು ದುಡಿದ ಹಣದ ದೊಡ್ಡ ಪಾಲು ವಿಮೆ ಪಾವತಿಗೆ ಹೋಗುತ್ತದೆ. ಇಷ್ಟೆಲ್ಲ ‘ವಿಮಾ’ಮಯವಾಗಿರುವಾಗ, ಇಡೀ ಸಮಾಜದ ಆಂತರ್ಯದ ನಿಯಂತ್ರಕ ವಿಮೆಯಾಗಿರುವುದರಿಂದ ಸಾಕಷ್ಟು -ಡ್, ಮೋಸ ಕೂಡ ನಡೆಯುತ್ತದೆ. ನಷ್ಟದಲ್ಲಿರುವ ವ್ಯವಹಾರ-ಸ್ವಂತ ಹಾನಿ ಮಾಡಿಕೊಂಡು ವಿಮೆಯ ಹಣ ಪಡೆಯಲು ಮುಂದಾದರೆ ಅಥವಾ ಸುಳ್ಳು, ಮೋಸ ಮಾಡಲಿಕ್ಕೆ ಮುಂದಾದರೆ ಇಡೀ ವಿಮಾ ವ್ಯವಸ್ಥೆಗೆ ಹೊಡೆತ.

ಇದೆಲ್ಲ ಸರಿಯಾಗಿ ನಡೆಯಬೇಕೆಂದರೆ, ವಿಮೆ ಕೈಗೆಟುಕುವಂತಿರಬೇಕೆಂದರೆ ಮೋಸದಿಂದ ಕ್ಮೈಮ್ ಮಾಡುವುದನ್ನು ಸರಕಾರ ತಡೆಗಟ್ಟಬೇಕು. ಈ ಕಾರಣಕ್ಕೆ ಇನ್ಸೂರೆ -ಡ್ – ವಿಮಾ ಮೋಸಕ್ಕೆ ಕಠಿಣ ಶಿಕ್ಷೆಯಿದೆ. ಅಂದಹಾಗೆ ವಿಮಾ ಕಂಪನಿಗಳು ಮೋಸದಿಂದಾಗುವ ನಷ್ಟವನನ್ನ ಭರಿಸಲೆಂದೇ ಇನ್ನೊಂದು ವಿಮೆ ಪಡೆಯುವ ರೂಢಿಯೂ ಇದೆ. ಒಂದು ಸಮಾಜ ಸುಲಲಿತವಾಗಿ ನಡೆಯಬೇಕೆಂದರೆ, ವ್ಯವಸ್ಥಿತವಾಗಬೇಕೆಂದರೆ ಎಲ್ಲಿ ಅಪಾಯ ವಿದೆಯೋ ಅಲ್ಲ ಅದನ್ನು ಭರಿಸುವ ವ್ಯವಸ್ಥೆ ಇರಬೇಕು, ಅದಕ್ಕೆ ವಿಮೆ ಬೇಕು ಎಂಬುದು ಅಮೆರಿಕನ್ ವ್ಯವಸ್ಥೆ. ಇದೆಲ್ಲ ವಿಮಾ ಕಂಪನಿಗಳು ನಿರ್ಮಿಸಿ ದ್ದಲ್ಲ. ಬದಲಿಗೆ ಸರಕಾರವೇ ಇದೆಲ್ಲವನ್ನು ಮಾಡಿಕೊಂಡದ್ದು. ಅದಕ್ಕೆ ಬೇಕಾದ ಕಾನೂನನ್ನು ನಿರ್ಮಿಸಿ ಇಂತಹ ವ್ಯವಸ್ಥೆಯನ್ನು ಕಟ್ಟಿಕೊಂಡದ್ದು.

ಏನೇ ಅವಘಡವಾಗಲಿ, ಅದರಿಂದಾಗುವ ನಷ್ಟ ನಾಗರಿಕನ ಬದುಕನ್ನು ಮೂರಾಬಟ್ಟೆ ಆಗಬಾರದೆನ್ನುವ ಆಶಯ. ಇಷ್ಟೊಂದು ವಿಮೆಗಳಿರುವುದರಿಂದ ಇದೆಲ್ಲದರ ಆರ್ಥಿಕ ಹೊರೆ ಆ ದೇಶದ ನಾಗರಿಕರ ಮೇಲೆಯೇ ಬೀಳುವುದು. ಇದರಿಂದ ಬದುಕು ಇನ್ನಷ್ಟು ತುಟ್ಟಿಯಾಗುವುದು. ಆದರೆ ಇಡೀ ಸಮಾಜ ಸುರಕ್ಷಿತವಾಗಿರ ಬೇಕೆಂದರೆ ಅದಕ್ಕೆ ಬೆಲೆ ಎಲ್ಲರೂ ಸೇರಿ ತೆರಲೇ ಬೇಕು. ಆಗ ಮಾತ್ರ ಸುರಕ್ಷಿತ ವಾತಾವರಣ ನಿಮಿಸಿಕೊಳ್ಳಲು ಸಾಧ್ಯ. ಅಷ್ಟಕ್ಕೂ ಈ ವಿಮಾ ಕಂಪನಿಗಳ ಹಣವೇನು ಇನ್ನೆ ಹೋಗಿಬಿಡುವುದಿಲ್ಲ. ಬದಲಿಗೆ ಇನ್ನೊಂದು ರೂಪದಲ್ಲಿ ಆರ್ಥಿಕತೆಗೇ ಬಂದು ಸೇರುವುದು. ಅಯ್ಯೋ ನಷ್ಟವಾಗಿ ಹೋಯ್ತು, ಅಪಘಾತವೊಂದರಿಂದ ದಿವಾಳಿಯಾಗಿ ಬೀದಿಗೆ ಬರಬೇಕಾಯ್ತು ಎಂಬಿತ್ಯಾದಿ ಆಗದಂತೆ ತನ್ನ ನಾಗರಿಕರನ್ನು ನೋಡಿಕೊಳ್ಳುವುದು ಸರಕಾರದ್ದೇ ಕೆಲಸವಲ್ಲವೇ? ಇಂತಹ ವ್ಯವಸ್ಥೆ ನಿರ್ಮಿಸಿಕೊಂಡ ಅಮೆರಿಕ ಶ್ಲಾಘನೀಯ ಆರ್ಥಿಕ ಮಾದರಿ.

Leave a Reply

Your email address will not be published. Required fields are marked *