ರಾಜಧರ್ಮ
ಸುರೇಶ ಬಾಲಚಂದ್ರನ್
ಉತ್ತರಾಖಂಡದಲ್ಲಿ ಈ ಕಾಯ್ದೆಯ ಅನುಷ್ಠಾನದಿಂದ ಆ ರಾಜ್ಯದ ಎಲ್ಲಾ ಧರ್ಮದ ಮಹಿಳೆಯರಿಗೆ ಸಮಾನ ಹಕ್ಕು ದೊರೆಯುವುದಲ್ಲದೆ, ಅದು ಇಡೀ ಭಾರತಕ್ಕೆ ಮಾದರಿ ಕಾನೂನಾಗುವುದರಲ್ಲಿ ಸಂದೇಹವಿಲ್ಲ. ಸಾಮಾಜಿಕ ಒಗ್ಗಟ್ಟು, ರಾಷ್ಟ್ರೀಯ ಏಕತೆಗಾಗಿ ಒಂದು ಚೌಕಟ್ಟನ್ನು ನಿರ್ಮಿಸುವುದರಲ್ಲಿ ತಪ್ಪೇನಿಲ್ಲ.
ಸಮಾನ ನಾಗರಿಕ ಸಂಹಿತೆಯ ಮೂಲ ಉದ್ದೇಶ ಪ್ರತಿಯೊಬ್ಬ ನಾಗರಿಕನಿಗೆ ವಿವಾಹ, ವಿವಾಹ ವಿಚ್ಛೇದನ, ಉತ್ತರಾಧಿಕಾರತ್ವ, ದತ್ತು ಸ್ವೀಕಾರ ಮುಂತಾದ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಸಮಾನ ಕಾನೂನುಗಳನ್ನು ಧರ್ಮಾತೀತವಾಗಿ ಸ್ಥಾಪಿಸುವುದು, ಹೆಣ್ಣು-ಗಂಡು ಭೇದವಿಲ್ಲದೆ ಸಮಾನತೆ, ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುವುದೇ ಇದರ ಪ್ರಮುಖ ಗುರಿ.
ಸಂವಿಧಾನ ರಚನೆಯ ವೇಳೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನ ನಾಗರಿಕ ಸಂಹಿತೆಯನ್ನು ಅಳವಡಿಸಲು ಹೇಳಿದ್ದರಾದರೂ, ಅಲ್ಪ ಸಂಖ್ಯಾತ ಪ್ರತಿನಿಧಿಗಳು ಅದನ್ನು ವಿರೋಧಿಸಿ ತಮ್ಮ ಧರ್ಮದ ವೈಯಕ್ತಿಕ ಕಾನೂನುಗಳಲ್ಲಿ ಹಸ್ತಕ್ಷೇಪ ಮಾಡದಿರಿ ಎಂದರು. ಈ ನಿಲುವಿನ ಪರಿಣಾಮ
ವಾಗಿ ರಾಜ್ಯನೀತಿ ನಿರ್ದೇಶಕ ತತ್ವಗಳಾಗಿ (ಈಜ್ಟಿಛ್ಚಿಠಿಜಿqಛಿ Pಜ್ಞ್ಚಿಜಿmಛಿo)ಸಂವಿಧಾನದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ೪೪ನೇ ವಿಧಿಯಲ್ಲಿ ಇದು ರಾಜ್ಯಗಳ ಕರ್ತವ್ಯ ಎಂದು ಸೇರಿಸಲಾಯಿತು. ಆದರೆ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ‘ಸಮಾನ ನಾಗರಿಕ ಸಂಹಿತೆಯು ಅಲ್ಪಸಂಖ್ಯಾತ
ವಿರೋಧಿ’ ಎಂದೇ ಅಭಿಪ್ರಾಯ ರೂಪುಗೊಂಡ ಪರಿಣಾಮ, ಸತತವಾಗಿ ಅಧಿಕಾರಕ್ಕೆ ಬಂದ ಕೇಂದ್ರ ಸರಕಾರಗಳು ಎಲ್ಲಾ ಧರ್ಮದ ಪದ್ಧತಿಗಳು, ಆಚರಣೆಗಳನ್ನು ಮುಟ್ಟಲು ಸಹ ರಾಜಕೀಯ ಧೈರ್ಯ ತೋರಲಿಲ್ಲವಾದ ಕಾರಣ ಅವರವರ ವೈಯಕ್ತಿಕ ಕಾನೂನು ಮುಂದುವರಿದು ಏಕರೂಪ ನಾಗರಿಕ ಸಂಹಿತೆ ಹಳ್ಳಹಿಡಿಯಿತು.
ದೇವಭೂಮಿಯೆಂದು ಹೆಸರಾಗಿರುವ ಉತ್ತರಾಖಂಡವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಮಾಡಿರುವ ಪ್ರಪ್ರಥಮ ರಾಜ್ಯವಾಗಿದೆ. ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿಯವರ ನೇತೃತ್ವದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು, ಒಬ್ಬ
ನಿವೃತ್ತ ನ್ಯಾಯಾಧೀಶರು ಮತ್ತು ಒಬ್ಬ ಉಪಕುಲಪತಿಗಳನ್ನು ಒಳಗೊಂಡಂತೆ, ಸಮಾನ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಸಂಬಂಧಪಟ್ಟ ಅಧ್ಯಯನ ನಡೆಸಲು ೨೦೨೨ರಲ್ಲಿ ಉತ್ತರಾ ಖಂಡ ರಾಜ್ಯವು ಸಮಿತಿಯೊಂದನ್ನು ರಚಿಸಿತ್ತು. ೨೦ ತಿಂಗಳು ಸತತವಾಗಿ ಶ್ರಮಿಸಿದ ಈ ಸಮಿತಿ ಸಲ್ಲಿಸಿದ ೭೪೦ ಪುಟಗಳ ೪ ಸಂಪುಟಗಳ ವರದಿಯನ್ನಾದರಿಸಿ ಫೆಬ್ರವರಿ ೭ರಂದು ರಾಜ್ಯದ ಶಾಸಕಾಂಗ ಅಧಿವೇಶನದಲ್ಲಿ ಈ ಕಾಯ್ದೆ ಅನುಮೋದನೆಗೊಂಡಿದೆ.
ಮಾದರಿ ಸಂಹಿತೆಯನ್ನು ಸಿದ್ಧ ಪಡಿಸಲು ಸಮಿತಿಯು ಸಾರ್ವಜನಿಕರಿಂದ ಅಭಿಪ್ರಾಯವನ್ನು, ವಿವರಗಳನ್ನು ಲಿಖಿತ ರೂಪದಲ್ಲಿ ಸ್ವೀಕರಿಸಿತ್ತು. ಹಲವಾರು ಸಂವಾದ-ಚರ್ಚೆ ಗಳನ್ನು, ನಾಗರಿಕರ, ಸಂಘ-ಸಂಸ್ಥೆಗಳ ಸಭೆಗಳನ್ನು ನಡೆಸಿ ಮಾಹಿತಿಯನ್ನು ಸಹ ಕಲೆಹಾಕಿತ್ತು. ೪೪ನೇ ವಿಧಿಯ ಅನ್ವಯ
ಉತ್ತರಾಖಂಡ ರಾಜ್ಯವು ಪರಿಶಿಷ್ಟ ಬುಡಕಟ್ಟು ಜನರನ್ನು ಈ ಸಂಹಿತೆಯಿಂದ ಹೊರಗಿಟ್ಟಿದೆ ಎನ್ನುವುದು ಗಮನಾರ್ಹ. ಎಲ್ಲಾ ಧರ್ಮಗಳ ಹೆಣ್ಣು ಮಕ್ಕಳಿಗೆ ಏಕರೂಪದ ವಿವಾಹದ ವಯಸ್ಸು, ಕಡ್ಡಾಯವಾದ ವಿವಾಹ ನೋಂದಣಿ, ಎಲ್ಲಾ ಧರ್ಮದ ಮಹಿಳೆಯರಿಗೆ ನಿರ್ವಹಣಾ ಭತ್ಯೆ, ವಿಚ್ಛೇದನ, ಅದರ ಕಾರ್ಯವಿಧಾನ ಮತ್ತು ಬಹುಪತಿತ್ವ/ಬಹುಪತ್ನಿತ್ವ ಆದಿಯಾಗಿ ಸಂಪೂರ್ಣ ನಿಷೇಽಸುವ ನಿಬಂಧನೆಗಳನ್ನು ಈ ಸಂಹಿತೆ ಒಳಗೊಂಡಿದೆ.
ಸಮಾನವಲ್ಲದ ಕೆಲವೊಂದು ವೈಯಕ್ತಿಕ ಧಾರ್ಮಿಕ ಆಚರಣೆಗಳನ್ನು ಶಿಕ್ಷಾರ್ಹ ಅಪರಾಧವೆಂದು ಇದು ಪರಿಗಣಿಸುತ್ತದೆ. ಪ್ರಮುಖವಾಗಿ ಈ ಸಂಹಿತೆ
ಯಡಿ ‘ಲಿವ್-ಇನ್’ ಸಂಬಂಧಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕಾಗಿದೆ, ಇಲ್ಲವಾದರೆ ಅಧಿಕಮಟ್ಟದ ದಂಡ ವಿಧಿಸುವ ನಿಯಮಾವಳಿ ಇದೆ. ನಿಬಂಧನೆಗಳು ಮತ್ತು ನಿಯಮಾವಳಿಯ ಉಲ್ಲಂಘನೆಗೆ ಶೀಘ್ರವಾಗಿ ದಂಡ ವಿಧಿಸಲು, ಶಿಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
ಉತ್ತರಾಖಂಡದಲ್ಲಿ ಈ ಕಾಯ್ದೆಯ ಅನುಷ್ಠಾನದಿಂದ ಆ ರಾಜ್ಯದ ಎಲ್ಲಾ ಧರ್ಮದ ಮಹಿಳೆಯರಿಗೆ ಸಮಾನ ಹಕ್ಕು ದೊರೆಯುವುದಲ್ಲದೆ, ಅದು ಇಡೀ ಭಾರತಕ್ಕೆ ಮಾದರಿ ಕಾನೂನಾಗುವುದರಲ್ಲಿ ಸಂದೇಹವಿಲ್ಲ. ಸಾಮಾಜಿಕ ಒಗ್ಗಟ್ಟು, ರಾಷ್ಟ್ರೀಯ ಏಕತೆಗಾಗಿ ಒಂದು ಚೌಕಟ್ಟನ್ನು ನಿರ್ಮಿಸುವುದರಲ್ಲಿ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ರಾಜ್ಯಗಳ ಏಕರೂಪ ನಾಗರಿಕ ಸಂಹಿತೆ ಮಹತ್ತರವಾದ ಪಾತ್ರವಹಿಸುವುದನ್ನು ತಳ್ಳಿಹಾಕಲಾ ಗದು. ಈ ಸಂಹಿತೆಯ ವಿರೋಧಿಗಳು ಅಲ್ಪಸಂಖ್ಯಾತರ ಧಾರ್ಮಿಕ ಆಚರಣೆಗಳಲ್ಲಿ ಮೂಗು ತೂರಿಸಬಾರದು ಎಂದು ಹೇಳುತ್ತಿದ್ದರು. ಆದರೆ ಗಮನಾರ್ಹ ಅಂಶವೆಂದರೆ,
ಸಂವಿಧಾನದ ೪೪ನೇ ವಿಧಿಯಲ್ಲಿ ರಾಜ್ಯ ಸರಕಾರಕ್ಕೆ ಕೊಟ್ಟಿರುವ ಅಧಿಕಾರವನ್ನು ನಾಗರಿಕರಿಗೆ ಸಮಾನ ಹಕ್ಕನ್ನು ಒದಗಿಸಲು ಕಾನೂನು ಜಾರಿಗೆ ತರುವುದು ಸರಿಯಾಗಿದೆ ಎಂದು ಉತ್ತರಾಖಂಡ ಸರಕಾರ ಹೇಳಿರುವುದು ಸಮರ್ಥನೀಯ ಅಂಶವಾಗಿದೆ.
ಸಾಂವಿಧಾನಿಕವಾಗಿ, ಕಾನೂನುಬದ್ಧವಾಗಿ ಭಾರತದ ಎಲ್ಲಾ ರಾಜ್ಯಗಳು ಏಕರೂಪ ನಾಗರಿಕ ಸಂಹಿತೆಯನ್ನು ರಚಿಸಿ ಅನುಷ್ಠಾನಗೊಳಿಸಲು ಅಽಕಾರ ಹೊಂದಿವೆ. ಉತ್ತರಾಖಂಡ ಸರಕಾರ ರಚಿಸಿದ ಸಮಿತಿಯ ಬಗ್ಗೆ ಹೂಡಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯವು
ವಜಾ ಮಾಡಿ, ‘ರಾಜ್ಯಗಳು ತಮ್ಮ ಶಾಸಕಾಂಗ ವ್ಯಾಪ್ತಿಯಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ರೂಪಿಸುವುದಕ್ಕೆ ಅಧಿಕಾರವಿದೆ’ ಎಂದು ತೀರ್ಪಿ ತ್ತಿರುವುದನ್ನು ಇಲ್ಲಿ ಸ್ಮರಿಸಬೇಕು. ಈ ತೀರ್ಪಿನನ್ವಯ, ಯಾವುದೇ ರಾಜ್ಯ ರೂಪಿಸಲು ಉದ್ದೇಶಿಸಿರುವ ಏಕರೂಪ ನಾಗರಿಕ ಸಂಹಿತೆಗೆ ಕಾನೂನಾತ್ಮಕ ತೊಡಕು ಎದುರಿಸಬೇಕಾಗಿರುವುದಿಲ್ಲ.
ಅಸ್ಸಾಂ, ಗುಜರಾತ್, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಸರಕಾರಗಳು ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಈಗಾಗಲೇ ತಜ್ಞರ ಸಮಿತಿಯನ್ನು ರಚಿಸಿವೆ ಮತ್ತು ಕಾರ್ಯಪ್ರವೃತ್ತವಾಗಿವೆ. ಅಲ್ಪಸಂಖ್ಯಾತ-ವಿರೋಧಿ ಸಂಹಿತೆಯಾಗಬಹುದೇನೋ ಎಂಬ ಜಾಣಭಯದಿಂದ ಕೆಲವು ರಾಜ್ಯಗಳಲ್ಲಿನ ಆಡಳಿತಾ ರೂಢ ಪಕ್ಷಗಳು, ಸಂವಿಧಾನದಲ್ಲಿ ಏಕರೂಪ ನಾಗರಿಕ ಸಂಹಿತೆಗೆ ಅವಕಾಶವಿದ್ದರೂ ಪುರಸ್ಕರಿಸುತ್ತಿಲ್ಲ; ಬದಲಾಗಿ ಅವು ವಿರೋಧಿಸುತ್ತಿರುವುದು ದುರ್ದೈವ.
ಯಾವುದೇ ಕಾನೂನನ್ನು ‘ಇದಮಿತ್ಥಂ’ ಎಂದು ಹೇಳ ಲಾಗದು; ಪ್ರತಿಯೊಂದು ನಿಯಮಾವಳಿಯನ್ನು ಪರಿಶೀಲಿಸ ಬೇಕಾಗುತ್ತದೆ ಮತ್ತು ಕಾರ್ಯ ರೂಪಕ್ಕೆ ತರಲು ರೂಪುರೇಷೆ ಗಳನ್ನು ನಿರ್ಮಿಸಬೇಕಾಗುತ್ತದೆ. ಕಾಲಕ್ಕೆ ತಕ್ಕಂತೆ, ಸಮಯಕ್ಕೆ ಸರಿಹೊಂದುವಂತೆ ಬದಲಿಸಬೇಕಾಗುತ್ತದೆ. ಆದ್ದರಿಂದ ಪ್ರಾಯೋಗಿಕವಾಗಿ ಗೋವಾ ಮತ್ತು ಉತ್ತರಾಖಂಡದ ಏಕರೂಪ ನಾಗರಿಕ ಸಂಹಿತೆಗಳನ್ನು ಮೂಲವಾಗಿಟ್ಟುಕೊಂಡು ಕಾನೂನು ರೂಪಿಸಬಹುದು. ಗೋವಾ ಸಿವಿಲ್ ಕೋಡ್ ಎನ್ನುವ ಸಾಮಾನ್ಯ ಕೌಟುಂಬಿಕ ಕಾನೂನು ಗೋವಾ ರಾಜ್ಯದಲ್ಲಿ ಈಗಾಗಲೇ ಜಾರಿಯಲ್ಲಿದ್ದು ವಿವಾಹ, ಉತ್ತರಾಧಿ ಕಾರತ್ವ ಮತ್ತು ವಿವಾಹ ವಿಚ್ಛೇದನ ಹಾಗೂ ಇನ್ನಿತರ ನಾಗರಿಕ ಕಾನೂನಿನ ವಿವಿಧ ಅಂಶಗಳನ್ನು ಈ ಕೋಡ್ ಗೋವಾ ರಾಜ್ಯದಲ್ಲಿ ನಿಯಂತ್ರಿಸುತ್ತಿದೆ.
೧೮೬೭ರಿಂದ ಜಾರಿಯಿರುವ ಈ ಕಾನೂನು ಎಲ್ಲಾ ಧರ್ಮ ಮತ್ತು ಸಮುದಾಯಗಳಿಗೆ ಸರಿ ಹೊಂದಿದೆ ಮತ್ತು ಯಾವುದೇ ತಕರಾರಿಲ್ಲದೆ ಅನುಷ್ಠಾನ ಗೊಂಡಿದೆ. ಹೀಗಿರುವಾಗ ಎಲ್ಲಾ ರಾಜ್ಯಗಳು ತಮ್ಮ ಏಕರೂಪ ನಾಗರಿಕ ಸಂಹಿತೆಯನ್ನು ಅನುಷ್ಠಾನಗೊಳಿಸುವುದರಲ್ಲಿ ತಪ್ಪಿಲ್ಲ.
(ಲೇಖಕರು ಲೆಕ್ಕಪರಿಶೋಧಕರು)