ಅಭಿಪ್ರಾಯ
ದೇವಿ ಮಹೇಶ್ವರ ಹಂಪಿನಾಯ್ಡು
ಹತ್ತು ವರ್ಷಗಳ ಹಿಂದೆ, ಆಗತಾನೇ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಬೇಡಿಕೆಯ ಮಾತುಗಳು ರಾಜಕಾರಣದಲ್ಲಿ ಕೇಳಿಬರುತ್ತಿದ್ದವು. ಇವು ಕನ್ನಡದ
ಹಿರಿಯ ವಸ್ತುನಿಷ್ಠ ಸಂಶೋಧಕರು ಸಾಹಿತಿ, ಇತಿಹಾಸಕಾರರೂ ಆಗಿದ್ದ ನಾಡೋಜ ಡಾ.ಎಂ.ಚಿದಾನಂದಮೂರ್ತಿಗಳ ನಿದ್ರೆಗೆಡಿಸಿದ್ದವು. ಆಗ ಅವರು ಸುಮ್ಮನೆ ಕೂರಲಿಲ್ಲ. ಆಗಾಗಲೇ ಐತಿಹ್ಯ ವಾಗಿ ಎಂದೋ ಸತ್ಯಶಾಸನವಾಗಿದ್ದ ವಿಚಾರಗಳನ್ನು ಮತ್ತೇ ಕಲೆಹಾಕಲು ಪ್ರಾರಂಭಿಸಿದರು.
ನಾಡಿನ ಚಾರಿತ್ರಿಕ ಮಠಗಳ ಹಿರಿಯ ಸ್ವಾಮೀಜಿಗಳನ್ನು ಸಂಪರ್ಕಿಸಿ ಅವರಿಂದ ವ್ಯಕ್ತವಾದ ‘ಲಿಂಗಾಯತ ಅಥವಾ ವೀರಶೈವ ಎಂಬುದನ್ನು ಧರ್ಮ ಎನ್ನುತ್ತಿರಬಹುದು. ಆದರೆ ಅದು ಸನಾತನ ಹಿಂದೂ ಧರ್ಮದ ಹುಟ್ಟಿಕೊಂಡ ಅಥವಾ ನೆಲೆಸಿರುವ ಒಂದು ಆಚರಣೆಯ ಜಾತಿಱ ಎಂಬುದರ ಕುರಿತು ಸ್ಪಷ್ಟ ಅಭಿಪ್ರಾಯವನ್ನು ದಾಖಲಿಸಿಕೊಂಡರು. ಈ ನಿಟ್ಟಿನಲ್ಲಿ ಆಗಿನ ಸಿದ್ದಗಂಗಾ ಸ್ವಾಮೀಜಿಗಳಾದ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಚಿಮೂ ಅವರು ತಮ್ಮ ಮನೆಯ ಸ್ಥಿರ ದೂರವಾಣಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುತ್ತಾರೆ. ಆದರೆ ಸ್ವಾಮೀಜಿಗಳು ಅನಾರೋಗ್ಯ ಕಾರಣ ಕರೆಯನ್ನು
ಸ್ವೀಕರಿಸುತ್ತಿಲ್ಲ ಎಂಬ ಉತ್ತರ ಬರುತ್ತದೆ. ಆದರೂ ಚಿಮೂ ಅವರು ಆ ದೂರವಾಣಿ ಕರೆ ಸ್ವೀಕರಿಸಿದ ‘ಪ್ರಜ್ಞಾವಂತ’ ವ್ಯಕ್ತಿಗೆ ಱಲಿಂಗಾಯತ ವೀರಶೈವ
ಧರ್ಮ-ಹಿಂದೂ ಧರ್ಮ’ ಕುರಿತು ಸ್ವಾಮೀಜಿಗಳ ಅಭಿಪ್ರಾಯವೇನಿರಬಹುದು ಎಂದು ಕೇಳುತ್ತಾರೆ.
ಆಗ ಆ ವ್ಯಕ್ತಿ ಅಂದಿನ ಮೂರು ಮಂದಿ ರಾಜಕಾರಣಿಗಳ ಹೆಸರನ್ನು ಹೇಳಿ ಅವರ ಬೇಡಿಕೆಯೇ ಸತ್ಯ ಎಂದು ತಿಳಿಸುತ್ತಾರೆ. ಇದರಿಂದ ಕಂಗಾಲಾದ ಚಿಮೂ ಅವರು ಮಾರನೆಯ ದಿನ ಶಿವಕುಮಾರ ಸ್ವಾಮೀಜಿಗಳೊಂದಿಗೆ ಮಾತನಾಡಲೇಬೇಕೆಂದು ಆಗ್ರಹಿಸಿ ದೂರವಾಣಿ ಕರೆ ಮಾಡಿದಾಗ ಚಿಮೂ ಅವರೊಂದಿಗೆ ಮಾತನಾಡಿದ ನಡೆದಾಡುವ ದೇವರು ಹೇಳಿದ ಮಾತುಗಳೇನು ಗೊತ್ತೇ? ಱಲಿಂಗಾಯತ – ವೀರಶೈವ ಎರಡೂ ಒಂದೇ, ಇದು ಹಿಂದೂ ಧರ್ಮವಲ್ಲದೇ ಬೇರೇನೂ ಅಲ್ಲ, ಬಸವ ತತ್ವ ಇರಬಹುದು ಆದರೆ ವೇದ ಸಂಸ್ಕೃತವೇ ಬಸವಣ್ಣನವರ ಮೂಲ ಮತ್ತು ನಮ್ಮ ಮಠದ ವೇದ ಸಂಸ್ಕೃತ ಪಾಠಶಾಲೆ ಇದೆಯಲ್ಲವೇ, ಇನ್ನೇನು ಬೇಕು? ಇಂಥ ಅನರ್ಥ ವಾದಗಳು ನಮ್ಮದಲ್ಲ, ಅದು ರಾಜಕಾರಣಿಗಳದ್ದು’ ಎಂದು ಉತ್ತರಿಸುತ್ತಾರೆ.
ಆಗಲೇ ಚಿಮೂ ಅವರ ಮುಖದಲ್ಲಿ ಹೊಳಪು ಮೂಡುತ್ತದೆ. ಇಂಥದ್ದೇ ಅಭಿಪ್ರಾಯವನ್ನು ಅಂದು ರಂಭಾಪುರ ಶ್ರೀಗಳೂ ಸೇರಿ ಅನೇಕ ಹಿರಿಯ ಸ್ವಾಮೀಜಿಗಳು ಚಿಮೂ ಅವರೊಂದಿಗೆ ಹಂಚಿಕೊಳ್ಳುತ್ತಾರೆ. ಇದೆಲ್ಲ ಅಭಿಪ್ರಾಯವನ್ನು ಸಂಗ್ರಹಿಸಿದ ಚಿಮೂ ಅವರು ಐತಿಹಾಸಿಕ ದಾಖಲೆಗಳೊಂದಿಗೆ ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ಕರೆದು ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆಯನ್ನು ಖಂಡಿಸುತ್ತಾರೆ. ಮುಂದೆ ತುಮಕೂರಿನ ವಿಶ್ವವಿದ್ಯಾಲಯ ದಲ್ಲಿ ಬಸವ ಅಧ್ಯಾಯನ ಕೇಂದ್ರದ ಉದ್ಘಾಟನೆಗೆ ಅದರ ಮುಖ್ಯಸ್ಥರಾಗಿದ್ದ ಡಾ.ಚಿಮೂ ಅವರ ಶಿಷ್ಯರೇ ಆದ ಡಾ.ಡಿ.ವಿ ಪರಮಶಿವಮೂರ್ತಿಗಳು (ಇಂದು ಹಂಪಿ ವಿಶ್ವವಿದ್ಯಾಲಯದ ಉಪ ಕುಲಪತಿಗಳು) ಚಿಮೂ ಅವರನ್ನು ಆಹ್ವಾನಿಸುತ್ತಾರೆ.
ಆ ವೇದಿಕೆಯಲ್ಲಿ ಬಸವಣ್ಣನವರ ಹುಟ್ಟು ಮತ್ತು ಬೆಳವಣೆಗೆಯ ಕುರಿತು ಮಾತನಾಡಿದ ಚಿಮೂ ಅವರು ಬಸವಣ್ಣನವರು ಮೂಲತಃ ಬ್ರಾಹ್ಮಣರು (ಕುಲಕರ್ಣಿ) ಎಂದು ಸತ್ಯವನ್ನು ಹೇಳುತ್ತಾ (ಇಂಥ ಸತ್ಯವನ್ನು ಹೇಳುವ ನೇರ ವಂತಿಕೆ ಇಂದಿನ ಯಾವ ಲಿಂಗಾಯತ ನಾಯಕ ರಿಗೆ ಇದೆ?) ಮಾತನ್ನು ಆರಂಭಿಸುತ್ತಾರೆ. ಇಂಥದ್ದೇ ವೇದಿಕೆಯೊಂದು ಹಂಪಿಯ ಕೊಟ್ಟು ರೇಶ್ವರ ಮಠದಲ್ಲಿ ಚಿಮೂ ಅವರಿಗೆ ದೊರಕುತ್ತದೆ. ಅದು ಸಂಗಮ ವಂಶದ ಅಪ್ರತಿಮ ಅರಸ ಎರಡನೇ ದೇವರಾಯನ (ಪ್ರೌಢದೇವರಾಯ) ಕುರಿತಾದ ಪುಸ್ತಕ ಬಿಡುಗಡೆ ಸಮಾರಂಭ. ಅಂದು ಕೇಸರಿ ತೊಟ್ಟ ಅನೇಕ ಆಧುನಿಕ ಸ್ವಾಮೀಜಿ
ಗಳೆಂದೆನಿಸಿಕೊಂಡವರು ಭಾಷಣ ಬಡಿದು ಅಂಥ ಮಹಾನ್ ಅರಸ ಪ್ರೌಢದೇವರಾನಿಗೇ ಜಾತಿಯ ಬೇಲಿಕಟ್ಟಿ ನಿಲ್ಲಿಸುತ್ತಾರೆ.
ಕೊನೆಯಲ್ಲಿ ಚಿಮೂ ಅವರ ಭಾಷಣ ಆರಂಭಗೊಳ್ಳುತ್ತದೆ. ಆದರೆ ಅವರು ಬರಿಯ ಪ್ರೌಢದೇವರಾಯನ ಕುರಿತು ಮಾತನಾಡಲಿಲ್ಲ, ಅವರು ಮಾತು ಆರಂಭವಾದದ್ದೇ ಇತಿಹಾಸದಲ್ಲಿ ವಿನಾಶಕಾರಿ ಇಸ್ಲಾಂ ಧರ್ಮಾಂಧರಿಂದ ಹಿಂದೂ ಧರ್ಮವನ್ನು ರಕ್ಷಿಸಿದ ವಿದ್ಯಾರಣ್ಯ ಮತ್ತು ಹರಿಹರರಾಯ
ಬುಕ್ಕರಾಯರ ಗುಣಗಾನದಿಂದ. ನಂತರದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಜಗದ್ವಿಖ್ಯಾತಿಗೊಳಿಸಿದ ಪ್ರೌಢದೇವರಾಯ ಮತ್ತು ಶ್ರೀ ಕೃಷ್ಣ
ದೇವರಾಯರ ಕುರಿತು ವಸ್ತುನಿಷ್ಠವಾಗಿ ಮಾತನಾಡಿದರು. ಆ ಮೂಲಕ ಬರಿಯ ವೀರಶೈವ ಲಿಂಗಾಯತ ಮಾತ್ರವಲ್ಲ ಸಕಲ ಜಾತಿಗಳ ತಾಯಿಯೇ ಸನಾತನ ಧರ್ಮ ಅರ್ಥಾತ್ ಹಿಂದೂ ಧರ್ಮ ಎಂಬದು ಅವರ ಕೊನೆಯ ಉಸಿರಿನ ಸತ್ಯವಾಗಿತ್ತು.
ಆಶ್ಚರ್ಯವೆಂದರೆ ಇಂಥ ಪರಮ ಸತ್ಯವನ್ನು ಸಾರಿದ ಚಿದಾನಂದಮೂರ್ತಿಗಳು ಅಪ್ಪಟ ವೀರಶೈವ ಲಿಂಗಾಯತರೇ ಆಗಿದ್ದರು. ಆ ಕುರಿತು
ಅವರಿಗೆ ಹೆಮ್ಮೆ ಇದ್ದಿತ್ತು. ಅವರು ಕಟ್ಟಿಕೊಂಡಿದ್ದ ಱಬೌದ್ಧಿಕ ಲಿಂಗಱ ಎಂಥದ್ದು ಗೊತ್ತೇ? ಅವರ ಜೀವಿತಾವಧಿಯ ಏಳು ದಶಕಗಳಷ್ಟೂ ಇತಿಹಾಸ
ಚರಿತ್ರೆ ಶಾಸನಗಳ ಅಗಾಧ ಸಂಶೋಧನೆಯ ಅಪಾರ eನದ ಹೊಳಪಿನ ಲಿಂಗ. ಅಂಥ ಲಿಂಗಧಾರಣೆಯನ್ನು ಅವರ ಅನೇಕ ಸಮಕಾಲೀನರು ಸಹಿಸುತ್ತಿರಲಿಲ್ಲ. ರಾಜಕೀಯ ಒತ್ತಾಸೆಗಳಿಗೆ ವೈಯಕ್ತಿಕ ಉದ್ಧಾರಕ್ಕಾಗಿ ಇತಿಹಾಸ ವನ್ನೇ ತಿರುಚಿ ಕಪೋಲಕಲ್ಪಿತ ಇತಿಹಾಸ ಕೃಷಿ ಮಾಡಿ ರಾಜಕಾರಣಿ ಗಳಿಗೆ ಅರ್ಪಿಸಿ ಕೃತಾರ್ಥ ರಾಗಿ ಪ್ರಶಸ್ತಿ ಪುರಸ್ಕಾರಗಳನ್ನು ಪಡೆಯುತ್ತಿದ್ದ ಅವಕಾಶವಾದಿ ಸಾಹಿತಿಗಳು ಒಂದೆಡೆಯಾದರೆ, ಹಿಂದೆ ಸೀಮೆಎಣ್ಣೆಗಾಗಿ ಖಾಲಿ ಡಬ್ಬವನ್ನು ಸಾಲಿನಲ್ಲಿ ಇಟ್ಟು ಕಾದಿರಿಸುವಂತೆ ತಯಾರಾದ ಇಂದಿನ ದಿಢೀರ್ ಸ್ವಾಮೀಜಿಗಳು ಕಾವಿಧಾರಿಗಳು, ಇತಿಹಾಸದ ಯಾವ ಜ್ಞಾನವೂ ಇಲ್ಲದ
ಸ್ವಾರ್ಥ ರಾಜಕಾರಣಿಗಳೆ ಸೇರಿಕೊಂಡು ಇಂದು ಸನಾತನ ಧರ್ಮನಿಷ್ಠ ಹಿರಿಯ ಸ್ವಾಮೀಜಿಗಳಿಗೇ ಧರ್ಮದ ಪಾಠ ಹೇಳುತ್ತಿದ್ದಾರೆ.
ಇಂಥವರಿಂದ ಉದ್ರೇಕ ಉನ್ಮಾದಗೊಂಡ ಕೆಲ ಅವಿವೇಕಿ ಕಾವಿಧಾರಿಗಳು ಗಣೇಶ ಸರಸ್ವತಿ ಪಾರ್ವತಿ ದೇವರುಗಳನ್ನೇ ಹೀಯಾಳಿಸಿ ಆಕಾಶಕ್ಕೆ ಮುಖ
ಮಾಡಿ ಉಗಿಯುವ ಚಟವಂತರಾಗಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಕಳೆದ ಆಗ ೩ರಂದು ದಾವಣೆಗೆರೆಯಲ್ಲಿ ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಗಳು ಮಾತನಾಡುತ್ತಾ ವೀರಶೈವ ಲಿಂಗಾಯತರು ಹಿಂದೂಗಳು ಎನ್ನುವುದು ಸತ್ಯ ವಿಚಾರ. ನಾವು ಎಲ್ಲಿ ಇದ್ದೇವೆ? ನಾವು ಯಾವ ರಾಷ್ಟ್ರದಲ್ಲಿದ್ದೇವೆ ಎಂಬುದನ್ನು ಅರ್ಥ ಮಾಡಿಕೊಂಡು ರಾಷ್ಟ್ರವನ್ನು ಯಾವ ರೀತಿ ಬೆಳಸಬೇಕೆಂದು ಯೋಚಿಸಬೇಕು.
ಹಿಂದೂ ಎನ್ನುವುದು ಅತ್ಯಂತ ಶ್ರೇಷ್ಠವಾದ ಸತ್ಯ ಸನಾತನವಾದದ್ದು, ಹಿಂದುತ್ವದ ವೃಕ್ಷದಲ್ಲಿ ಸಾಕಷ್ಟು ರಂಬೆ-ಕೊಂಬೆಗಳಿವೆ. ಅಲ್ಲಿ ಅಲ್ಲಮ
ಪ್ರಭು ಬಸವಾದಿ ಶರಣರು, ಗೌತಮ ಬುದ್ಧ ಸೇರಿದಂತೆ ಹಲವು ಮಹನೀಯರಿದ್ದಾರೆ. ಲಿಂಗಾಯತ ಆಚರಣೆಯಲ್ಲಿ ಬದಲಾವಣೆ ಬರಬಹುದಷ್ಟೇ! ನಾವೆ ಹಿಂದೂಗಳು, ಹಿಂದೂ ಎನ್ನುವುದು ಮಹಾಸಾಗರ ಎಂದು ಸತ್ಯವಚನವನ್ನು ಸಾರಿದ್ದಾರೆ. ಅಲ್ಲದೇ ಮೊನ್ನೆ ಆಗ ೧೨ರಂದು ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ವೀರಶೈವ ಧರ್ಮ ಬೇರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ನಾವೆ ಹಿಂದೂಗಳೇ, ಹಿಂದೂ ಎಂಬುದು ಮಹಾಸಾಗರ, ಮಹಾಸಾಗರದಲ್ಲಿ ಅನೇಕ ನದಿಗಳು ವಿಲೀನವಾಗಿದೆ.
ಹಿಂದೂ ಧರ್ಮದಲ್ಲಿ ಬೌದ್ಧ, ಜೈನ್, ಸಿಖ್, ವೀರಶೈವ-ಲಿಂಗಾಯತ, ವೈಷ್ಣವ ಎಂಬ ನದಿಗಳು ಶಂಕರಾಚಾರ್ಯರು ಮಧ್ವಾಚಾರ್ಯರು, ಗುರುನಾನ ಕರು, ಜ್ಞಾನೇಶ್ವರ ಬಸವಣ್ಣ ನವರು ಆಯಾ ಕಾಲಘಟ್ಟದಲ್ಲಿ ಅವರ ವಿಚಾರ ಧಾರೆ ಹೇಳಿದರು ಎಂದು ಮತ್ತೊಮ್ಮೆ ಅಖಂಡ ಹಿಂದೂಧರ್ಮ ವನ್ನು ಪ್ರತಿಪಾದಿಸಿದ್ದಾರೆ. ಇನ್ನೇನು ಬೇಕಿದೆ ಸಮಾಜಕ್ಕೆ ಮತ್ತು ಹಿಂದೂಗಳ ಸಾಮರಸ್ಯ ಸಹಬಾಳ್ವೆಗೆ. ಚಿಮೂ ಅವರಂಥ ಇತಿಹಾಸ ಸತ್ಯನಿಷ್ಠ ಸಂಶೋಧಕರು ಶತಾಯುಷಿ ಶ್ರೀ ಶಿವಕುಮಾರಸ್ವಾಮೀಜಿಗಳಂಥ ಅನುಭವಿ ದಾರ್ಶನಿಕ ಮಹಾಶ್ರೇಷ್ಠರು, ಈಗಿನ ಬರಿಯ ವಚನಾನಂದರಲ್ಲ ಮಹಾ ಜ್ಞಾನಾನಂದರೇ ಆಗಿರುವ ಪಂಚಮಸಾಲಿ ಗುರುಪೀಠದ ವಚನಾ ನಂದ ಸ್ವಾಮೀಜಿಗಳಂಥ ಮೇಧಾವಿಗಳಿರುವಾಗ ಸೀಮೆಎಣ್ಣೆ ಖಾಲಿ ಡಬ್ಬದಂಥ ಕಾವಿಧಾರಿಗಳು, ಪದವಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೇಸದ ರಾಜಕಾರಣಿಗಳ ಅಪಾಯಕಾರಿ ಧೋರಣೆಗಳನ್ನು ತಿಪ್ಪೆಗೆ ಎಸೆಯ ಬೇಕಿದೆ.
ಬಾಂಗ್ಲದೇಶದಲ್ಲಿ ನೋಡಿ. ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ ಮಾಡುತ್ತಿರುವ ಮತಾಂಧ ಜಿಹಾದಿಗಳು ಹಿಂದೂಗಳನ್ನು ನೀನು ಲಿಂಗಾಯತನಾ, ಕುರುಬಾನ, ಬ್ರಾಹ್ಮಣನಾ, ದಲಿತನಾ ಎಂದು ಕೇಳುತ್ತಿಲ್ಲ. ಒಟ್ಟಾರೆ ಅವರೆಲ್ಲರೂ ಅವರ ಪಾಲಿಗೆ ‘ಬದುಕಲು ಹಕ್ಕಿಲ್ಲದ ಕಾಫೀರರು’ ಮಾತ್ರ. ಆದರೆ ಇದರ ವಿರುದ್ಧ ಕೊನೆಗೂ ಮೇಲೆದ್ದು ನಿಂತ ಅಲ್ಲಿನ ಹಿಂದೂಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೀದಿಗಿಳಿದು ಪ್ರತಿಭಟಿಸಿದ್ದು ಭಾರತದ ಹಿಂದೂ ಗಳ ‘ಗಂಡಸುತನವನ್ನುೞ ಪ್ರಶ್ನಿಸಿದಂತಿತ್ತು.
ಇಂಥ ಮಾನವ ವಿರೋಧಿ ಹಲ್ಲೆ ಅತ್ಯಾಚಾರ ಕೊಲೆಗಳಾಗುತ್ತಿದ್ದರೂ ರಾಜಕಾರಣಿಗಳು ಮಹಾನ್ ಮಾನವತಾವಾದಿಗಳು ಲದ್ದಿಜೀವಿಗಳು ಪ್ರಗತಿಪರರು, ವಿಚಾರ ವ್ಯಾಧಿಗಳು ಅನರ್ಥ ಪದ ಜಾತ್ಯತೀತರೆಂಬ ಡೋಂಗಿಗಳು ಮೌನವಾಗಿದ್ದಾರೆ. ಆದರೆ ದೂರದ ಯಹೂದಿಗಳಾದ ಇಸ್ರೇಲ್ ದೇಶ ಮಾತ್ರ ಬಾಂಗ್ಲದೇಶದ ಹಿಂದೂ ಗಳ ಪರವಾಗಿ ಹೇಳಿಕೆ ನೀಡಿರುವುದು ಹೆಮ್ಮೆಯ ವಿಚಾರ. ಆದರೆ ಇಲ್ಲಿ ಜಾತಿ ಉಪಜಾತಿ ಒಳಜಾತಿಗೊಬ್ಬ ಅವಿವೇಕಿ ಕಾವಿಧಾರಿ ಗಳು ಹುಟ್ಟಿಕೊಂಡು ಹಿಂದೂಧರ್ಮವನ್ನೇ ನಾಶಪಡಿಸುವ ಪ್ರಯತ್ನ ಕ್ಕಿಳಿದಿರುವ ಉದ್ರೇಕ ಉನ್ಮಾದ ಅತಿರೇಖಿಗಳಿಂದ ಇಂದಲ್ಲ ನಾಳೆ ನಿರೀಕ್ಷಿಸಬಹು ದಾದ್ದೇನೆಂದರೆ ಪೆನ್‌ಡ್ರೈವ್, ಸಿಡಿ, ಪೋಕ್ಸೋ ಜೈಲು ಕೊನೆಗೆ ಆತ್ಮಹತ್ಯೆ ಅಷ್ಟೇ !!
(ಲೇಖಕರು : ಹವ್ಯಾಸಿ ಬರಹಗಾರರು)