ತನ್ನಿಮಿತ್ತ
ರಾಸುಮ ಭಟ್
೧೪೯೮ ಮೇ ೨೦ ರಂದು ಪೋರ್ಚುಗೀಸ್ ನಾವಿಕ ವಾಸ್ಕೋಡಗಾಮ ಭಾರತದ ಕರಾವಳಿ ತೀರದ ಕೇರಳ ರಾಜ್ಯದ ಕಲ್ಲಿಕೋಟೆ ಅಥವಾ ಕ್ಯಾಲಿಕಟ್‌ಗೆ ಬಂದಿಳಿದ ದಿನವಾಗಿದೆ. ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ಮೊದಲ ನಾವಿಕ ಮತ್ತು ಇಲ್ಲಿಂದ ಸಂಪೂರ್ಣ ಭಾರತದ ಚರಿತ್ರೆ ಬದಲಾಗುತ್ತಾ ಸಾಗುತ್ತದೆ ಹಾಗೂ ಈ ಸಮುದ್ರ ಮಾರ್ಗದ ಶೋಧನೆಯಿಂದ ಭಾರತಕ್ಕೆ ಯುರೋಪಿನ್ನರಾದ ಬ್ರಿಟಿಷರು, ಡಚ್ಚರು ಬರಲು ಇದು ಮುನ್ನುಡಿ ಬರೆಯಿತು.
ಅಟೋಮನ್ ಟರ್ಕರು ನಿರಂತರ ಎರಡು ತಿಂಗಳ ಯುದ್ಧದ ನಂತರ ಮೇ ೨೯ ೧೪೫೩ ರಂದು ಕಾನ್ಸ್ಟಾಂಟಿನೋಪಲ್ ಅಂದರೆ ಈಗಿನ ಇಸ್ತಾಂಬುಲ್ ಮತ್ತು ಟರ್ಕಿಯ ಪ್ರದೇಶವನ್ನು ವಶಪಡಿಸಿಕೊಳ್ಳುತ್ತಾರೆ. ಇದರಿಂದಾಗಿ ಅಲ್ಲಿಯವರೆಗೆ ಕೇವಲ ಭಾರತ ಮತ್ತು ಯುರೋಪಿಯನ್ ದೇಶಗಳ ನಡುವಿನ ಭೂ ಸಂಪರ್ಕ ಈ ಪ್ರದೇಶದಿಂದಲೆ ಆಗುತ್ತಿತ್ತು.
ಈ ಮಧ್ಯಯುಗದ ಸಮಯದಲ್ಲಿ ಯುರೋಪಿನಲ್ಲಿ ಚಳಿಗಾಲ ಬಹು ತೀವ್ರವಾಗಿರುತ್ತಿತ್ತು. ಆರು ತಿಂಗಳಿಗಿಂತಲು ಹೆಚ್ಚು ಕಾಲ ಯುರೋಪ್ ದೇಶಗಳು
ಮಂಜುಗಡ್ಡೆಯಾಗಿರುತ್ತಿದ್ದವು. ಇಂತಹ ಸಮಯದಲ್ಲಿ ಚಳಿಗಾಲಕ್ಕೆ ಆಹಾರವಾಗಿ ಸುತ್ತ ಮುತ್ತಲಿನ ಎಲ್ಲಾ ಪ್ರಾಣಿಗಳನ್ನು ಕೊಂದು ಆಹಾರವಾಗಿ ಸಂರಕ್ಷಣೆ ಮಾಡುತ್ತಿದ್ದರು ಇದಕ್ಕೆ ಬೇಕಾದ ಬಹು ಮುಖ್ಯ ಪದಾರ್ಥ ಉಪ್ಪು ಮತ್ತು ಮಸಾಲೆಗಳು ಅದರಲ್ಲೂ ಮೆಣಸು ಬಹು ಅಗತ್ಯವಾಗಿ ಬೇಕಾಗುತ್ತದೆ. ಉಪ್ಪು ಸುಲಭವಾಗಿ ಯುರೋಪಿಯನ್ನರಿಗೆ ದೊರಕುತ್ತಿತ್ತು , ಆದರೆ ಮಸಲಾ ಪದಾರ್ಥಗಳಿಗೆ ಭಾರತದ ಮೇಲೆ ಅವಲಂಬಿಸಿದ್ದವು.
೧೪೫೩ ರ ನಂತರ ಅಟೋಮನ್ ರು ಕಾನ್ಸ್ಟಾಂಟಿನೋಪಲ್ ನ್ನು ಗೆದ್ದ ಮೇಲೆ ಸಂಬಾರು ಪದಾರ್ಥಗಳ ಮೇಲೆ ಏಕಸ್ವಾಮ್ಯ ಸಾಧಿಸಿ , ಭಾರತ ಮತ್ತು ಏಷ್ಯಾ ದೇಶಗಳಿಂದ ತಂದ ಸಾಂಬಾರು ಪದಾರ್ಥಗಳನ್ನು ಹೆಚ್ಚಿನ ಬೆಲೆಗೆ ಯುರೋಪಿನಲ್ಲಿ ಮಾರುತ್ತಿದ್ದರು ಮತ್ತು ಈ ಪ್ರದೇಶದಲ್ಲಿ ಸಂಚರಿಸಲು ಯುರೋಪಿನ ವ್ಯಾಪಾರಿಗಳು ಹೆಚ್ಚಿನ ಸುಂಕ ಪಾವತಿಸಬೇಕಾಗಿತ್ತು. ಇದರಿಂದ ಅನಿವಾರ್ಯವಾಗಿ ಯುರೋಪಿನ ದೇಶಗಳು ಬೇರ ಮಾರ್ಗಗಳನ್ನು ಕಂಡುಹಿಡಿಯಲು ಪ್ರಾರಂಭಿಸಿದರು.
ಇವರ ಮುಖ್ಯ ಆಯ್ಕೆ ಸಮುದ್ರ ಮಾರ್ಗವಾಗಿತ್ತು. ಇದೆ ಸಮಯದಲ್ಲಿ ಕೊಲಂಬಸ್ ೧೪೯೨ ರಲ್ಲಿ ಭಾರತವೆಂದು ತಿಳಿದು ಅಮೆರಿಕಾ ಖಂಡವನ್ನು ಕಂಡುಹಿಡಿದನು. ಇದೆ ಹಾದಿಯಲ್ಲಿ ವಾಸ್ಕೋಡಗಾಮ ೧೪೯೭ರ ಜುಲೈ ೮ರಂದು ಲಿಸ್ಬನ್‌ನಿಂದ ಪ್ರಯಾಣ ಕೈಗೊಂಡು ಸಮುದ್ರಯಾನ ಪ್ರಯಾಣದ
ಸಮಯದಲ್ಲಿ ವಾಸ್ಕೋಡಿಗಾಮನ ನೌಕಾಪಡೆ ಕ್ರಿಸ್‌ಮಸ್ ದಿನದಂದು ನಟಾಲ್ ತೀರವನ್ನು ತಲುಪಿತು. ಅಲ್ಲಿಂದ ಆಫ್ರಿಕಾದ ಕೇಪ್ ಆಫ್ ಗುಡ್ ಹೋಪ್ ತಲುಪಿ ನಂತರ ವಿವಿಧ ನದಿಗಳನ್ನು ದಾಟಿ ಮೊಜಾಂಬಿಕ್ ಎಂಬ ದ್ವೀಪದಲ್ಲಿ ನೌಕಾಪಡೆ ಸೇರಿತು ಅ ಒಂದು ತಿಂಗಳ ಕಾಲ ನೆಲೆಸಿ ನಂತರ ಈಗಿನ ಕೀನ್ಯಾದ ಮೋಂಬಾಸ್ ಗೆ ಬಂದು ಅಲ್ಲಿ ಗುಜರಾತ್ ನ ನಾವಿಕನ ಸಹಾಯದಿಂದ ಭಾರತದ ಮಾರ್ಗವನ್ನು ಕಂಡು ಕೊಂಡು ೧೪೯೮ ಮೇ ೨೦ ರಂದು ಕ್ಯಾಲಿಕಟ್ ಬಂದಿಳಿಯುತ್ತಾರೆ.
ಈ ದಿನದಿಂದ ಅತ್ಯಂತ ಶ್ರೀಮಂತವಾಗಿದ್ದು ಭಾರತದ ಗುಲಾಮಗಿರಿಯ ದಿನಗಳು ಪ್ರಾರಂಭವಾದವು. ಅತ್ಯಂತ ಕ್ರೂರಿಗಳಾಗಿದ್ದ ವಾಸ್ಕೋಡಗಾಮ ಮತ್ತು ಸಂಗಡಿಗರು ಕೇರಳದ ರಾಜ ಸಮುತ್ತರಿ ಅಥವಾ ಜಮೋರಿನ್ ಕಳಿಸಿದ ರಾಜದೂತನ ಕಿವಿಯನ್ನು ಕತ್ತರಿಸುತ್ತಾರೆ ಮತ್ತು ಸಮುದ್ರ ಮಾರ್ಗದಲ್ಲಿ ಎದರಾಗುವ ಹಡಗುಗಳನ್ನು ದೋಚಿ ನಾಶಪಡಿಸುತ್ತಾರೆ. ನಂತರ ಭಾರತಕ್ಕೆ ಬಂದ ಎಲ್ಲಾ ಯುರೋಪಿಯನ್ ಶಕ್ತಿಗಳನ್ನು ಸೋಲಿಸಿದ ಬ್ರಿಟಿಷರು
ಭಾರತವನ್ನು ೨೫೦ ವರ್ಷಗಳಿಗೂ ಹೆಚ್ಚು ಕಾಲ ಗುಲಾಮರನ್ನಾಗಿಸಿ, ಸುಮಾರು ೪೫ ಟ್ರಲಿಯನ್ ಡಾಲರ್ ನಷ್ಟು ಸಂಪತ್ತನ್ನು ದೋಚಿದರು. ಪ್ರಸ್ತುತ ಅಮೆರಿಕದ ಜಿಡಿಪಿ ೨೮ ಟ್ರಿಲಿಯನ್ ಡಾಲರ್‌ಗಳೆಂದರೆ ಭಾರತ ಸಂಪತ್ತನ್ನು ತುಂಬಾ ದೊಡ್ಡದಾಗಿದೆ. ಮೇ ೨೦ ಭಾರತ ವಸಾಹತುಕರಣಕ್ಕೆ ಒಳಗಾಗಲು ಪ್ರಾರಂಭವಾದ ದಿನವಾಗಿದೆ.