Wednesday, 11th December 2024

ಭಾರತೀಯ ಸೇನೆಯ ಅಡಿಪಾಯ ವೀರ ಸಾವರ್ಕರ್‌

ವೀಕೆಂಡ್ ವಿತ್ ಮೋಹನ್

camohanbn@gmail.com

ವೀರ ಸಾವರ್ಕರ್ ಹಾಗೂ ಸುಭಾಷ್ ಚಂದ್ರ ಬೋಸ್’ರ ಕ್ರಾಂತಿಕಾರಿ ಚಿಂತನೆಯಿಂದ ಹುಟ್ಟಿಕೊಂಡ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಸ್ವಾತಂತ್ರ್ಯಾನಂತರ ನೆಹರು ಹಾಗೂ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. 1953ರಲ್ಲಿ ಆಕ್ರಮಣಕಾರಿ ಚೀನಾ ದೇಶದ ಬಾಯಿಗೆ ಅಸಹಾಯಕ ‘ಟಿಬೆಟ್’ ದೇಶವನ್ನು ದೂಡಿ ನೆಹರು ‘ಹಿಂದಿ-ಚೀನೀ ಭಾಯಿ ಭಾಯಿ’ ಎಂದಿದ್ದರು.

ಸುಭಾಷ್ ಚಂದ್ರ ಬೋಸರು ಜರ್ಮನಿ ಹಾಗೂ ಜಪಾನಿನ ಭಾರತೀಯ ಯುದ್ಧಕೈದಿ ಗಳನ್ನೊಳಗೊಂಡಿದ್ದ ‘ಇಂಡಿಯನ್ ನ್ಯಾಷನಲ್ ಆರ್ಮಿ’ ಎಂಬ ಬೃಹತ್ ಸೈನ್ಯವನ್ನು ಕಟ್ಟಿ ಬ್ರಿಟಿಷರ ಮೇಲೆ ಮುಗಿಬಿದ್ದುದರ ಪರಿಣಾಮವಾಗಿ ಬ್ರಿಟಿಷರು ಭಾರತ ವನ್ನು ಬಿಟ್ಟುಹೋಗಬೇಕಾಯಿತು. ಸುಭಾಷರ ಕ್ರಾಂತಿಕಾರಿ ವ್ಯಕ್ತಿತ್ವಕ್ಕೆ ಮಹತ್ವ ನೀಡದ ಕಾಂಗ್ರೆಸ್, ಅಹಿಂಸೆಯಿಂದ ಮಾತ್ರ ಬ್ರಿಟಿಷರನ್ನುಓಡಿಸಲು ಸಾಧ್ಯವೆಂದು ಹೇಳಿತ್ತು.

ಅಂದಿನ ದಿನಗಳಲ್ಲಿ ಸುಭಾಷರ ಕ್ರಾಂತಿಕಾರಿ ಹೋರಾಟಕ್ಕೆ ಬೆಂಬಲವಾಗಿ ನಿಂತವರು ‘ವೀರ ಸಾವರ್ಕರ್’. ಅಂದು ವೀರ ಸಾವರ್ಕರ್ ಸುಭಾಷರಿಗೆ ನೀಡಿದ ಸಲಹೆಗಳ ಅನು ಷ್ಠಾನವೇ ’ಇಂಡಿಯನ್ ನ್ಯಾಷನಲ ಆರ್ಮಿ’. 1940ರಲ್ಲಿ ಎರಡನೇ ಮಹಾ ಯುದ್ಧದ ಸಮಯ ಜರ್ಮನಿಯು ಫ್ರಾನ್ಸ್ ದೇಶವನ್ನು ಯುದ್ಧದಲ್ಲಿ ಸೋಲಿಸಿತ್ತು. ಅದೇ ಸಮಯ ದಲ್ಲಿ ಸುಭಾಷರು ಸಾವರ್ಕರರ ಜತೆ ರಾಜಕೀಯವಾಗಿ ಕೆಲವು ವಿಷಯಗಳನ್ನು ಚರ್ಚಿಸಲು ಬಂಗಾಳದಿಂದ ಬಂದಿದ್ದರು.

ಸುಭಾಷರು ಅಖಿಲ ಭಾರತೀಯ ಯೋಜನೆಯೊಂದನ್ನು ಕೈಗೆತ್ತಿಕೊಳ್ಳುವುದರ ಬಗ್ಗೆ ಸಾವರ್ಕರ್ ಬಳಿ ಚರ್ಚಿಸಲು ಬಂದಿದ್ದರು. ದೇಶದಾದ್ಯಂತ ಇದ್ದಂತಹ ಬ್ರಿಟಿಷ್ ಸ್ಮಾರಕ ಪ್ರತಿಮೆಗಳನ್ನು ಉರುಳಿಸುವ ಯೋಜನೆ ಅದಾಗಿತ್ತು. ಸ್ವತಃ ಸುಭಾಷರೇ ಕೋಲ್ಕತ್ತಾ ದಲ್ಲಿ ಪ್ರತಿಮೆಗಳನ್ನು ಉರುಳಿಸುವ ಮೂಲಕ ಚಳವಳಿಗೆ ಚಾಲನೆಯನ್ನು ನೀಡು ವವರಿದ್ದರು. ಸಾವರ್ಕರರ ಬಳಿ ಈ ವಿಷಯ ವನ್ನು ಪ್ರಸ್ತಾಪಿಸಿದಾಗ, ಸುಭಾಷರಂತಹ ಪ್ರತಿಭಾವಂತ ಮುಖಂಡರು ಭಾರತದೊಳಗೆ ಬ್ರಿಟಿಷರ ಪ್ರತಿಮೆ ಉರುಳಿಸುವ ಚಳವಳಿಗಳನ್ನು ಕೈಗೊಂಡು, ನಂತರ ಸೆರೆವಾಸ ಅನುಭವಿಸುವುದರಿಂದ ಸಮಯ ವ್ಯರ್ಥವಾಗುತ್ತದೆ, ಹಾಗಾಗಿ ಬ್ರಿಟಿಷರನ್ನು ರಾಜಕೀಯವಾಗಿ ಮುಗಿಸುವ ಯೋಜನೆಯೊಂದನ್ನು ತಯಾರು ಮಾಡಬೇಕೆಂಬ ವಿಷಯವನ್ನು ಮುಂದಿಟ್ಟಿದ್ದರು.

ನಿಜವಾದ ರಾಜಕಾರಣವೆಂದರೆ ಶತ್ರುವನ್ನು ತಡೆಗಟ್ಟುವುದು ಹಾಗೂ ಬಂಧಿಸುವುದೇ ಹೊರತು ನಾವು ಸಿಕ್ಕಿಹಾಕಿ ಕೊಳ್ಳುವುದಲ್ಲ ಎಂಬುದನ್ನು ಸುಭಾಷರಿಗೆ ಸಾವರ್ಕರರು ಮನವರಿಕೆ ಮಾಡಿಕೊಟ್ಟರು. ಸಶಸ್ತ್ರ ಕ್ರಾಂತಿಗೆ ನಾಂದಿಯಾಗುವ ಉದ್ದೇಶದಿಂದ ಸಾವರ್ಕರ್ ತಾವು ಹಿಂದೂ ಯುವಕರನ್ನು ಸೈನ್ಯಕ್ಕೆ ಸೇರಿಸಲು ಪ್ರೇರೇಪಿಸುತ್ತಿರುವುದಾಗಿ ಸುಭಾಷರಿಗೆ ಹೇಳಿದರು. ಅತ್ತ ಉಪಾಯವಾಗಿ ಹಿಂದೂ ಯುವಕರನ್ನು ಸೈನ್ಯಕ್ಕೆ ಸೇರಿಸಿ ತರಬೇತಿ ಸಿಗುವಂತೆ ಮಾಡಿ, ಮುಂದೊಂದು ದಿನ ಬ್ರಿಟಿಷರ ವಿರುದ್ಧ ಅದೇ ಸೈನಿಕರು ಮುಗಿಬಿದ್ದು ಬ್ರಿಟಿಷರನ್ನು ಭಾರತದಿಂದ ಓಡಿಸುವ ತಂತ್ರಗಾರಿಕೆಯನ್ನು ಸಾವರ್ಕರ್ ಮಾಡಿದ್ದರು.

ಸಾವರ್ಕರರ ತಂತ್ರಗಾರಿಕೆಯನ್ನು ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ಬೇಕಂತಲೇ ಇತಿಹಾಸದ ಪುಟಗಳಲ್ಲಿ ತಪ್ಪಾಗಿ ಬಿಂಬಿಸಿ ಬ್ರಿಟಿಷ್ ಸೈನ್ಯದ ‘ನೇಮಕಾತಿ ಏಜೆಂಟ್’ ಎಂದು ಕರೆದರು. ಸುಭಾಷರ ಬಳಿ ಸಾವರ್ಕರರು ಸೈನಿಕ ಕ್ರಾಂತಿಯ ಬಗ್ಗೆ ಮಾತಾ ನಾಡುವಾಗ ಮೊದಲನೇ ಮಹಾಯುದ್ಧದಲ್ಲಿ ನಡೆದ ಕೆಲವೊಂದಷ್ಟು ಘಟನೆಗಳನ್ನು ಹೇಳಿದರು. ಭಾರತೀಯ ಕ್ರಾಂತಿಕಾರಿಗಳು ಹೇಗೆ ಜರ್ಮನಿಯೊಡನೆ ಸೇರಿಕೊಂಡರು, ಜರ್ಮನಿಯಲ್ಲಿದ್ದ ಯುದ್ಧಕೈದಿಗಳ ಜತೆಗೂಡಿ ಹೇಗೆ ಕ್ರಾಂತಿಸೈನ್ಯವನ್ನು ಕಟ್ಟಿದ್ದರೆಂಬ ವಿಷಯಗಳ ಬಗ್ಗೆ ಸುಭಾಷರ ಬಳಿ ಚರ್ಚಿಸಿದರು.

ಜಪಾನ್ ಎರಡನೇ ಮಹಾಯುದ್ಧಕ್ಕೆ ಪ್ರವೇಶಿಸುವ ಮುನ್ಸೂಚನೆಯನ್ನು ಸುಭಾಷರಿಗೆ ಸಾವರ್ಕರರು ಕೊಟ್ಟರು. ಹಾಗೇನಾದರೂ ಆದರೆ ಪೂರ್ವದಲ್ಲಿ ಚದುರಿಹೋಗಿ, ಚೆನ್ನಾಗಿ ತರಬೇತಿ ಪಡೆದಿರುವ ಭಾರತೀಯ ಸೈನಿಕ ಬಲದಿಂದ ಜರ್ಮನಿ ಹಾಗೂ ಜಪಾನ್
ದೇಶಗಳ ಬೆಂಬಲ ಪಡೆದು ಒಳನುಗ್ಗಿದರೆ ಬ್ರಿಟಿಷರಿಂದ ಭಾರತವನ್ನು ಮುಕ್ತಗೊಳಿಸಬಹುದೆಂಬ ಸಲಹೆಯನ್ನು ನೀಡಿದರು.
ಜರ್ಮನಿ ಹಾಗೂ ಇಟಲಿಯಲ್ಲಿರುವ ಭಾರತೀಯ ಯುದ್ಧಕೈದಿಗಳನ್ನು ಸಂಘಟಿಸಿ, ಅವರಿಗೆ ಮಾರ್ಗದರ್ಶಕರಾಗಿ ಎಂಬ ಸಲಹೆ ಯನ್ನು ನೀಡಿದ್ದು ವೀರ ಸಾವರ್ಕರ್. ಈ ಮಾದರಿಯ ಪ್ರಚಂಡ ಹೋರಾಟ ನಡೆಯದೆ ಬ್ರಿಟಿಷರು ಭಾರತವನ್ನು ಬಿಟ್ಟು ತೊಲ ಗುವುದಿಲ್ಲ, ಅಂತಹ ಮಹತ್ತರ ಕಾರ್ಯವನ್ನು ನಿಭಾಯಿಸುವ ಎದೆಗಾರಿಕೆ ನಿಮಗೆ ಮಾತ್ರ ಇದೆಯೆಂದು ಬೋಸರಿಗೆ ಹೇಳಿದ್ದರು.

ಸಾವರ್ಕರರ ಭೇಟಿಯಾದ ಕೆಲವೇ ಕೆಲವು ತಿಂಗಳುಗಳಲ್ಲಿ ಸುಭಾಷ್ ಚಂದ್ರ ಬೋಸರು ಬ್ರಿಟಿಷರಿಗೆ ಚಳ್ಳೆಹಣ್ಣು ತಿನ್ನಿಸಿ ಭಾರತ ದಿಂದ ಅದೃಶ್ಯರಾದರು. ನಂತರ ನಡೆದಿದ್ದು ಇತಿಹಾಸ. ಬೋಸರು ಜರ್ಮನಿ ಹಾಗೂ ಜಪಾನಿನ ಸಹಾಯದಿಂದ ’ಇಂಡಿಯನ್ ನ್ಯಾಷನಲ ಆರ್ಮಿ’ ಕಟ್ಟಿದರು. ದಕ್ಷಿಣದಲ್ಲಿ ಅಂಡಮಾನ್ ಹಾಗೂ ನಿಕೋಬಾರ್ ದ್ವೀಪವನ್ನು ಬ್ರಿಟಿಷರಿಂದ ವಶಪಡಿಸಿ ಕೊಂಡರು. 1944ರ ಹೊತ್ತಿಗೆ ‘ಇಂಡಿಯನ್ ನ್ಯಾಷನಲ ಆರ್ಮಿ’ ಬರ್ಮಾ ಗಡಿಯಲ್ಲಿ ಬ್ರಿಟಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿ ಮಣಿಪುರ ವನ್ನು ವಶಪಡಿಸಿಕೊಂಡಿತು. ಈ ಸಮಯದಲ್ಲಿ ನೆಹರು, ಸುಭಾಷರು ಅಥವಾ ಅವರ ಸೈನ್ಯವು ಭಾರತಕ್ಕೆ ಕಾಲಿಟ್ಟರೆ ಅವರೊ ಡನೆ ಯುದ್ಧಮಾಡಿ ಹಿಂದಕ್ಕೆ ಓಡಿಸುವೆನೆಂದು ಘೋಷಿಸಿದ್ದರು. ಸಾವರ್ಕರರನ್ನು ಬ್ರಿಟಿಷರ ಏಜೆಂಟರೆಂದು ಜರಿಯುವ ಕಾಂಗ್ರೆಸ್ಸಿಗರು, ನೆಹರುರನ್ನು ಏನೆಂದು ಕರೆಯುತ್ತಾರೆ? ನಿಜವಾದ ಬ್ರಿಟಿಷರ ಏಜೆಂಟರಾಗಿದ್ದು ಯಾರೆಂದು ನೆಹರೂರ ಈ ಮನಸ್ಥಿತಿಯಿಂದ ತಿಳಿಯುತ್ತದೆ.

ಇದಾದ ನಂತರ ದುರದೃಷ್ಟವಶಾತ್ ಜರ್ಮನ್ ಹಾಗೂ ಜಪಾನ್ ಯುದ್ಧದಲ್ಲಿ ಸೋತಿತ್ತು, ಸುಭಾಷರು ಅದೃಶ್ಯರಾದರು.
ಸಾವರ್ಕರರು ಹಚ್ಚಿದ್ದ ‘ಸೈನಿಕ ಕ್ರಾಂತಿ’ ಅಲ್ಲಿಗೇ ನಿಲ್ಲಲಿಲ್ಲ,‘ಇಂಡಿಯನ್ ನ್ಯಾಷನಲ ಆರ್ಮಿ’ಯ ವಿರುದ್ಧ ಕ್ರಮ ಕೈಗೊಳ್ಳುವು ದನ್ನು ಬ್ರಿಟಿಷ್ ಅಧಿಕಾರಿಗಳೇ ವಿರೋಧಿಸಿದ್ದರು, ಆದರೆ ನೆಹರು ಮಾತ್ರ ವಿರೋಧಿಸಲಿಲ್ಲ. ಸುಭಾಷರು ಕಟ್ಟಿದ ಸೈನ್ಯದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಹಿರಂಗವಾಗಿ ಹೇಳಿದ್ದ ನೆಹರು, ಸುಭಾಷರು ಅದೃಶ್ಯರಾದ ನಂತರವೂ ಇಂಡಿಯನ್ ನ್ಯಾಷನಲ ಆರ್ಮಿಯ ಪರವಾಗಿ ನಿಲ್ಲಲಿಲ್ಲ.

ಸೈನ್ಯದಲ್ಲಿದ್ದ ಭಾರತೀಯ ಸೈನಿಕರ ಸಹನೆ ಮೀರಿತ್ತು, ಬ್ರಿಟಿಷರ ವಿರುದ್ಧ ಅವರೇ ಬೀದಿಗಿಳಿದರು. ಸ್ವಾತಂತ್ರ್ಯದ ಕಿಚ್ಚು
ಕಾಡ್ಗಿಚ್ಚಿ ನಂತೆ ಹರಡಿತು, 1946ರಲ್ಲಿ ಕರಾಚಿಯಲ್ಲಿದ್ದ ವಿಮಾನಪಡೆಯ ಸೈನಿಕರಿಂದ ಆರಂಭವಾದಂತಹ ಮುಷ್ಕರ ಮುಂಬೈ, ಲಾಹೋರ್, ದೆಹಲಿಯವರೆಗೂ ಹರಡಿತು. ಸುಮಾರು 5200 ಸೈನಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು, ಇದಾದ ನಂತರ ನೌಕಾದಳದ ಸುಮಾರು 5000 ಸೈನಿಕರು ಮುಷ್ಕರ ಕೈಗೊಂಡರು. ಕೋಲ್ಕತ್ತಾ, ಕರಾಚಿ, ಮದ್ರಾಸ್, ರಂಗೂನ್, ಅಂಬಾಲಾ ಹೀಗೆ ಬಹುತೇಕ ಪ್ರತಿಯೊಂದು ಸೈನಿಕ ಕೇಂದ್ರಗಳಲ್ಲಿ ಸೈನಿಕರು ಮುಷ್ಕರ ಆರಂಭಿಸಿದ್ದರು.

ಭೂಸೇನೆ, ವಾಯುಸೇನೆ, ನೌಕಾಪಡೆಗಳ ಶಸಾಸಗಳು ಬ್ರಿಟಿಷರ ವಿರುದ್ಧ ತಿರುಗಿಬಿದ್ದವು. ಬ್ರಿಟಿಷರಿಗೆ ತಮ್ಮ ಪರಿಸ್ಥಿತಿಯ ಅರಿವಾಯಿತು. ಇನ್ನು ತಾವು ಇಲ್ಲಿದ್ದರೆ ’ಇಂಡಿಯನ್ ನ್ಯಾಷನಲ ಆರ್ಮಿ’ಯ ಸೈನಿಕರು ತಮ್ಮ ವಿರುದ್ಧ ದೊಡ್ಡ ಯುದ್ಧ ಸಾರಿ ಭಾರತವನ್ನು ಬಿಟ್ಟು ಓಡಿಸುತ್ತಾರೆಂಬ ಭಯ ಶುರುವಾಗಿತ್ತು. ನಮಗೆ ರಾಜ್ಯ ಬೇಕಿಲ್ಲ,ನೀವು ಇಲ್ಲೇ ಇರಿ ಎಂದರೂ ಇರುವುದಿಲ್ಲ ವೆಂದು ಬ್ರಿಟಿಷರು ಹೇಳಿದರು.

ಕೇವಲ ಅಹಿಂಸೆಯಿಂದ ಮಾತ್ರ ಸ್ವತಂತ್ರ ಗಳಿಸಿದೆವೆಂಬುದು ಸುಳ್ಳು, ಬ್ರಿಟಿಷರಿಗೆ ಭಾರತೀಯರನ್ನು ಒಡೆದು ಅಳುವ ನೀತಿ
ತಿಳಿದಿತ್ತು. ಯೋಜನಾಬದ್ಧವಾಗಿ ಕ್ರಾಂತಿಕಾರಿಗಳ ಮೂಲಕವೇ ಕುತಂತ್ರಿ ಬ್ರಿಟಿಷರನ್ನು ಓಡಿಸಬೇಕೆಂಬ ಸ್ಪಷ್ಟತೆ ಸಾವರ್ಕರರಿಗೆ ಇತ್ತು, ಅದರಲ್ಲಿ ಅವರು ಜಯ ಗಳಿಸಿದ್ದರು. ತಮ್ಮ ವಿದ್ಯಾರ್ಥಿ ಜೀವನದಿಂದಲೂ ಯುವಕರಿಗೆ ಕ್ರಾಂತಿಪಾಠ ಮಾಡಿ, ದೇಶಸೇವೆಗೆ ಸಿದ್ದಪಡಿಸಿದ ಕೀರ್ತಿ ಸಾವರ್ಕರರಿಗೆ ಸಲ್ಲಬೇಕು. ಸಾವರ್ಕರ್ ಲಂಡನ್ನಿನಲ್ಲಿ ಬ್ಯಾರಿಸ್ಟರ್ ಪದವಿಗೆಂದು ಹೋದರೂ, ಅಲ್ಲಿ ಓದಲು ಬಂದಿದ್ದಂತಹ ಭಾರತೀಯ ಯುವಕರಲ್ಲಿ ಕ್ರಾಂತಿಯ ಕಿಡಿ ಹಚ್ಚುವುದನ್ನು ಬಿಡಲಿಲ್ಲ.

ಸ್ವಾತಂತ್ರ್ಯ ಹೋರಾಟದಲ್ಲಿ ಯುವಕರನ್ನು ಸಜ್ಜುಗೊಳಿಸುತ್ತಿದ್ದಂತಹ ಸಾವರ್ಕರ್ ಬ್ರಿಟಿಷರಿಗೆ ‘ಭಯೋತ್ಪಾದಕ’ರಾಗಿ ಕಂಡರು, ಅದೇ ವಿಚಾರಕ್ಕಾಗಿ ಅವರಿಗೆ ‘ಕರಿನೀರ’ ಶಿಕ್ಷೆ ವಿಧಿಸಲಾಗಿತ್ತು. ಬ್ರಿಟಿಷರಿಗೆ ಭಯೋತ್ಪಾದಕರಾಗಿ ಕಂಡಂತಹ ಸಾವರ್ಕರ್ ಭಾರತೀಯರಿಗೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಆದರೆ ಕಾಂಗ್ರೆಸ್ಸಿಗರು ಇಂದಿಗೂ ಸಾವರ್ಕರ್ ಭಯೋತ್ಪಾದಕರಾಗಿದ್ದ ಕಾರಣ ‘ಕರಿನೀರ’ ಶಿಕ್ಷೆಯನ್ನು ಅನುಭವಿಸಿದರೆಂದು ಹೇಳುತ್ತಾರೆ, ಕಾಂಗ್ರೆಸ್ ಇಂದಿಗೂ ಬ್ರಿಟಿಷರ ಏಜೆಂಟಾಗಿ ವರ್ತಿಸುತ್ತಿರುವುದು ಇದರಿಂದ ಸ್ಪಷ್ಟವಾಗುತ್ತದೆ.

‘ವೀರ ಸಾವರ್ಕರ್ ಹಾಗೂ ಸುಭಾಷ್ ಚಂದ್ರ ಬೋಸ್’ರ ಕ್ರಾಂತಿಕಾರಿ ಚಿಂತನೆಯಿಂದ ಹುಟ್ಟಿಕೊಂಡ ‘ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಸ್ವಾತಂತ್ರ್ಯಾನಂತರ ನೆಹರು ಹಾಗೂ ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. 1953ರಲ್ಲಿ ಆಕ್ರಮಣಕಾರಿ ಚೀನಾ ದೇಶದ ಬಾಯಿಗೆ ಅಸಹಾಯಕ ‘ಟಿಬೆಟ್’ ದೇಶವನ್ನು ದೂಡಿ ನೆಹರು ‘ಹಿಂದಿ-ಚೀನೀ ಭಾಯಿ ಭಾಯಿ’ ಎಂದಿದ್ದರು. 1962ರ ಚೀನಾ ಯುದ್ಧದ ವೇಳೆ ನಮ್ಮ ಸೈನಿಕರಿಗೆ ಸರಿಯಾದ ಯುದ್ಧ ಸಾಮಗ್ರಿಗಳನ್ನು ಪೂರೈಸುವಲ್ಲಿ ನೆಹರು ಸೋತಿದ್ದರು, ಸಾವಿ ರಾರು ಸೈನಿಕರು ಕಾಲಿಗೆ ‘ಶೂ’ ಇಲ್ಲದೆ ಹಿಮಾಲಯದ ತಪ್ಪಲಿನಲ್ಲಿ ಯುದ್ಧ ಮಾಡಿದ್ದರು.

ಅಮೆರಿಕ ದೇಶ ಭಾರತದ ಸಹಾಯಕ್ಕೆಂದು ವಿಮಾನಗಳ ಮೂಲಕ ಯುದ್ಧಸಾಮಗ್ರಿಗಳನ್ನು ಪೂರೈಸಿದರೆ, ವಿಮಾನ ಕೋಲ್ಕತ್ತಾ ದಲ್ಲಿ ಇಳಿದ ನಂತರ ಅಲ್ಲಿನ ಕಮ್ಯುನಿಸ್ಟ್ ಬೆಂಬಲಿತ ಸಂಘಟನೆಗಳು ಕೂಲಿ ಕಾರ್ಮಿಕರ ಮುಷ್ಕರಕ್ಕೆ ಕರೆಕೊಟ್ಟು ವಿಮಾನ ದಲ್ಲಿನ ಯುದ್ಧಸಾಮಗ್ರಿಗಳು ವಾರಗಟ್ಟಲೆಳಗಿಳಿಯದಂತೆ ನೋಡಿಕೊಂಡವು. ಕಮ್ಯುನಿಸ್ಟರಿಗೆ ಭಾರತವು ಚೀನಾ ದೇಶದ ವಿರುದ್ಧ ಸೋಲಬೇಕಿತ್ತು, ನೆಹರು ಚೀನಾ ದೇಶದ ವಿರುದ್ಧದ ಯುದ್ಧವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಚೀನಾ ದೇಶಕ್ಕೆ ಸಹಾಯ ಮಾಡಲು ಯುದ್ಧಸಾಮಗ್ರಿಗಳನ್ನುಕೆಳಗಿಳಿಸಲು ಬಿಡದ ಪರದೇಶದ ಏಜೆಂಟರಾದ ಕಮ್ಯುನಿಸ್ಟರು ವೀರ ಸಾವರ್ಕರರ ಬಗ್ಗೆ ಮಾತನಾಡುತ್ತಾರೆ.

1954ರಿಂದಲೇ ಚೀನಾ ದೇಶ ಭಾರತದ ಗಡಿಯನ್ನು ಆಕ್ರಮಿಸಿಕೊಂಡು ಬರುತ್ತಿತ್ತು, ಇಡೀ ದೇಶವೇ ಅದರ ಬಗ್ಗೆ ಎಚ್ಚರಿಕೆ ನೀಡಿದರೂ ನೆಹರು ನಿದ್ರೆ ಮಾತ್ರ ಭಂಗಗೊಳ್ಳಲಿಲ್ಲ. ನೆಹರುರಿಗೆ ಭಾರತೀಯರಿಗಿಂತ ಚೀನಾದ ‘ಮಾವೋ’ವಿನ ಮೇಲೆ ನಂಬಿಕೆ ಹೆಚ್ಚಾಗಿತ್ತು. ಅರುಣಾಚಲ ಪ್ರದೇಶದ ಚೀನಾ ಗಡಿಯ ವಿಚಾರದಲ್ಲಿ ಉನ್ನತ ಮಟ್ಟದ ಸೈನ್ಯಾಧಿಕಾರಿಗಳು ಸ್ಪಷ್ಟವಾಗಿ ಹೇಳಿದರೂ ನೆಹರು ತಲೆಕೆಡಿಸಿಕೊಳ್ಳಲಿಲ್ಲ. ಚೀನಾ ಭಾರತದ ಮೇಲೆ ಆಕ್ರಮಣ ಮಾಡುತ್ತದೆಯೆಂದು ಹೇಳುವುದು ಸುಳ್ಳೆಂದು 1962ರ ಆಗಸ್ಟ್ ತಿಂಗಳಲ್ಲಿ ಲೋಕಸಭೆಯಲ್ಲಿ ಹೇಳಿದ್ದರು.

ಲಢಾಕ್ ಪ್ರಾಂತ್ಯಕ್ಕೆ ನುಗ್ಗಿದ ಚೀನಾಸೇನೆ ಭಾರತದ ಬಹುದೊಡ್ಡ ಭೂಭಾಗವನ್ನು ಆಕ್ರಮಿಸಿಕೊಂಡಿತು, ಸರಿಯಾದ ಯುದ್ಧ ಸಾಮಗ್ರಿಗಳಿಲ್ಲದೆ ನಮ್ಮ ಸೈನಿಕರು ಗಡಿಯಲ್ಲಿ ಪ್ರಾಣ ಕಳೆದುಕೊಂಡರು. ಬ್ರಿಟಿಷರ ವಿರುದ್ಧ ಹೋರಾಡಲು ಡ್ಡದೊಂದು ಕ್ರಾಂತಿಕಾರಿ ಸೈನ್ಯವನ್ನು ಕಟ್ಟುವಲ್ಲಿ ಯಶಸ್ವಿಯಾದ ಸಾವರ್ಕರರನ್ನು ಹೇಡಿ ಎನ್ನುವವರು, ಚೀನಾ ದೇಶದ ವಿರುದ್ಧ ಭಾರತೀಯ ಸೈನ್ಯವನ್ನು ಗಟ್ಟಿಗೊಳಿಸದೆ ಸಾವಿರಾರು ಚದರ ಕಿಲೋಮೀಟರ್ ಭೂಭಾಗವನ್ನು ಚೀನಾ ದೇಶಕ್ಕೆ ಬಿಟ್ಟುಕೊಟ್ಟ
ನೆಹರುರನ್ನು ಏನೆನ್ನುತ್ತಾರೆ? ‘ದೇಶಭಕ್ತಿಯ ಅಪರಾಧ’ಕ್ಕಾಗಿ ಭಾರತೀಯ ಮಹಾವಿದ್ಯಾಲಯವೊಂದರ ವಸತಿಗೃಹದಿಂದ ಹೊರದೂಡಲ್ಪಟ್ಟ ಮೊಟ್ಟಮೊದಲ ವಿದ್ಯಾರ್ಥಿ ವೀರ ಸಾವರ್ಕರ್, ವಿದೇಶಿ ಬಟ್ಟೆಗಳಿಗೆ ಬೆಂಕಿಯಿಟ್ಟು ಹೋಳಿಹಬ್ಬ ಆಚರಿಸಿದ
ಮೊದಲ ಸ್ವದೇಶಾಭಿಮಾನಿ ವೀರ ಸಾವರ್ಕರ್, ವಿದೇಶಿ ‘ಸಿಗಾರ್’ ಹಚ್ಚುತ್ತಿದ್ದ ಕಾಂಗ್ರೆಸ್ಸಿನ ನೆಹರು ಯಾರ ಏಜೆಂಟರು? ಬ್ರಿಟಿಷರ ವಿರುದ್ಧ ನಿಂತಿದ್ದಕ್ಕಾಗಿ ತಾನು ಗಳಿಸಿದ್ದಂತಹ ಬಿ.ಎ.ಪದವಿಯನ್ನೇ ಕಳೆದುಕೊಂಡ ಮೊದಲ ಭಾರತೀಯ ಪದವೀಧರ ಸಾವರ್ಕರ್.

ನೆಹರು ತಮ್ಮ ಬಾಲ್ಯದಲ್ಲಿ ಅಥವಾ ಕಾಲೇಜಿನಲ್ಲಿ ಎಂದಾದರೂ ಬ್ರಿಟಿಷರ ವಿರುದ್ಧ ಹೋರಾಟ ಮಾಡಿರುವ ಕಥೆಗಳನ್ನು ಕೇಳಿದ್ದೀರಾ? ನೆಹರುರನ್ನುಬ್ರಿಟಿಷರು ಸರಪಳಿಗಳೊಂದಿಗೆ ಬಂಧಿಸಿ ಜೈಲಿಗಟ್ಟಿರುವ ಒಂದಾದರೂ ಘಟನೆ ಇದೆಯಾ? ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಸಾವರ್ಕರರಿಗೆ ಕರಿನೀರ ಶಿಕ್ಷೆ ಸಿಕ್ಕಿದ ಮೇಲೆ, ಸ್ವಾತಂತ್ರ್ಯ ಹೋರಾಟಗಾರ ನೆಹರುರಿಗೆ ಯಾಕೆ
ಬ್ರಿಟಿಷರು ಕರಿನೀರ ಶಿಕ್ಷೆ ವಿಧಿಸಲಿಲ್ಲ? ಎರಡು ಕರಿನೀರ ಶಿಕ್ಷೆಗೊಳಗಾದ ವೀರ ಸಾವರ್ಕರ್ ಹೇಡಿಯಂತೆ, ‘ಗೆಸ್ಟ್ ಹೌಸ್ ’ಗಳನ್ನೇ ಜೈಲು ಮಾಡಿಕೊಂಡಿದ್ದ ನೆಹರು ಸ್ವಾತಂತ್ರ್ಯ ಹೋರಾಟಗಾರರಂತೆ. ಸುಭಾಷ್ ಚಂದ್ರ ಬೋಸರು ಸ್ಥಾಪಿಸಿದ ‘ಇಂಡಿಯನ್ ನ್ಯಾಷನಲ ಆರ್ಮಿ’ಯ ಮೂಲಕಲ್ಪನೆಯ ಪಿತಾಮಹ ವೀರ ಸಾವರ್ಕರ್, ಹುಟ್ಟಿನಿಂದಲೇ ಕ್ರಾಂತಿಕಾರಿಯಾಗಿದ್ದ ವೀರ ಸಾವರ್ಕರ್ ತಮ್ಮ ಸಾವಿನ ಕಟ್ಟಕಡೆಯ ಕ್ಷಣದವರೆಗೂ ಭಾರತೀಯತೆಯ ಬಗ್ಗೆ ಸ್ಪಷ್ಟತೆ ಇದ್ದಂತಹ ವ್ಯಕ್ತಿ.

ವೀರ ಸಾವರ್ಕರ್ ಹಾಗೂ ಸುಭಾಷರು ಹಾಕಿದ ಅಡಿಪಾಯದಿಂದಾಗಿಯೇ ಇಂದು ಭಾರತೀಯ ಸೈನ್ಯವು ಜಗತ್ತಿನ ಆಕ್ರಮಣಕಾರಿ ಸೈನ್ಯಗಳಂದಾಗಿದೆ. ಗ್ರೆಸ್ಸಿನ ‘ಶಸಗಳ ನಿಶ್ಶಕ್ತೀಕರಣ’ ನೀತಿಯಿಂದ ನಮ್ಮ ಸೈನಿಕರು ಚೀನಾ ಯುದ್ಧದಲ್ಲಿ ಪ್ರಾಣ ಕಳೆದುಕೊಳ್ಳ ಬೇಕಾಯಿತು, ಇಲ್ಲದಿದ್ದರೆ ಭಾರತೀಯ ಸೇನೆ ಅಂದೇ ಚೀನಾವನ್ನು ಹಿಮ್ಮೆಟ್ಟಿಸುತ್ತಿತು