ವ್ಯಕ್ತಿ ಚಿತ್ರ
ವಿನಾಯಕ ವೆಂ.ಭಟ್ಟ, ಅಂಬ್ಲಿಹೊಂಡ
ಪ್ರಪಂಚದಲ್ಲಿ ಒಬ್ಬರನ್ನು ಅಳುವಂತೆ ಮಾಡುವುದು ಸುಲಭದ ಕೆಲಸ ಇನ್ನೊಂದಿ ಮತ್ತು ನಗಿಸುವಷ್ಟು ಕಷ್ಟದ ಕೆಲಸ ಮತ್ತೊಂದಿಲ್ಲ ಎನ್ನುತ್ತಾರೆ. ‘ಶೃಂಗಾರ ವೀರ ಕರುಣಾದ್ಭುತ ಹಾಸ್ಯ ಭಯಾನಕಾಃ ಬಿಭತ್ಸ ರೌದ್ರ ಶಾಂತೋಪಿ ನಾವೋ ರಸಃ’. ಎಂದು ಒಂಬತ್ತು ರಸಗಳನ್ನು ನಮ್ಮ ಪ್ರಾಚೀನರು
ಗುರುತಿಸಿದ್ದಾರೆ.
ಈ ಒಂಬತ್ತೂ ರಸಾಭಿವ್ಯಕ್ತಿಗಳಲ್ಲಿ ಹಾಸ್ಯ ರಸದ ಅಭಿವ್ಯಕ್ತಿ ಅತ್ಯಂತ ಕಷ್ಟಕರವಾದದ್ದು ಎನ್ನುವುದು ಕಲಾವಿದರುಗಳ ಅಭಿಪ್ರಾಯ. ಚಾರ್ಲಿ ಚಾಪ್ಲಿನ್ ನಿಂದ ಹಿಡಿದು ಕನ್ನಡದ ನರಸಿಂಹರಾಜುವರೆಗೆ, ನಗೆ ಹಬ್ಬದ ಗಂಗಾವತಿ ಪ್ರಾಣೇಶ್ ತಂಡದಿಂದ ಹಿಡಿದು ಯಕ್ಷಗಾನ ಮತ್ತು ನಾಟಕಗಳ ಹಾಸ್ಯ ಕಲಾವಿದರವರೆಗೆ ಪ್ರಪಂಚವನ್ನು ನಗಿಸಲು ಪಣತೊಟ್ಟವರು ಸಾವಿರ ಸಂಖ್ಯೆಯಲ್ಲಿದ್ದರೂ ಯಶಸ್ವಿಯಾಗಲು ಸಾಧ್ಯವಾಗಿದ್ದು ಕೆಲವರಿಗೆ ಮಾತ್ರ.
ಕಪಿಲ್ ಶರ್ಮಾ ಅಂಥ ಯಶಸ್ವೀ ವಿದೂಷಕರ ಸಾಲಿಗೆ ಸೇರಬಹುದಾದ ಹಾಸ್ಯಕಲಾವಿದ ಅಂತ ಹೇಳಬಹುದು.
ಬಹುಮುಖ ಪ್ರತಿಭಾಸಂಪನ್ನರಾದ ಇವರು ಸ್ಟ್ಯಾಂಡ್ -ಅಪ್ ಹಾಸ್ಯನಟ, ದೂರದರ್ಶನ ನಿರೂಪಕ, ಸಿನೆಮಾ ನಟ, ಡಬ್ಬಿಂಗ್ ಕಲಾವಿದ, ನಿರ್ಮಾಪಕ ಮತ್ತು ಗಾಯಕರೂ ಹೌದು. ಕಪಿಲ್ ಶರ್ಮಾ ಭಾರತದಲ್ಲಿ ಅಷ್ಟೇ ಏಕೆ ಜಗತ್ತಿನಾದ್ಯಂತ ವಾಸಿಸುತ್ತಿರುವ ಭಾರತೀಯರಿಗೆ ಇಂದು ಯಾವುದೇ ಪರಿಚಯದ ಅಗತ್ಯವಿಲ್ಲದಷ್ಟು ವಿಸ್ತಾರವಾಗಿ ಬೆಳೆದು ನಿಂತ ಕಲಾವಿದ ಎನ್ನಬಹುದು. ಇಂದು, ಕಪಿಲ್ ಶರ್ಮಾ ಭಾರತದಲ್ಲಿ ಅತಿ ಹೆಚ್ಚು ಬೇಡಿಕೆಯುಳ್ಳ ಮತ್ತು
ಸಂಭಾವನೆ ಪಡೆಯುವ ಹಾಸ್ಯಕಲಾವಿದರಲ್ಲಿ ಒಬ್ಬರು. ನಾವು ಅವರ ಆಸ್ತಿಯ ನಿವ್ವಳ ಮೌಲ್ಯ ಮತ್ತು ಅವರು ಹೊಂದಿರುವ ಐಷಾರಾಮಿ ವಸ್ತು ಗಳನ್ನು ಗಮನಿಸಿದರೆ ಅಚ್ಚರಿ ಆಗುವುದಂತೂ ಗ್ಯಾರಂಟಿ.
ಪಂಜಾಬಿನ ಸಣ್ಣ ಪಟ್ಟಣದ ಕೆಳ ಮಧ್ಯಮ ಕುಟುಂಬದಿಂದ ಬಂದ ಕಪಿಲ್ ಶರ್ಮಾ ಎಂಬ ಒಬ್ಬ ಪಡ್ಡೆ ಹುಡುಗ, ಹಾಸ್ಯವನ್ನೇ ವೃತ್ತಿಯಾಗಿಸಿಕೊಂಡು ಭಾಷೆ – ದೇಶಗಳ ವ್ಯಾಪ್ತಿಗಳನ್ನು ಮೀರಿ ಜಗತ್ತಿನಾದ್ಯಂತ ಹೆಸರುಗಳಿಸಿದ ಕಥೆ ನಿಜಕ್ಕೂ ಪ್ರೇರಣಾದಾಯಕವಾದದ್ದಾಗಿದೆ. ಶರ್ಮಾ ಅವರು ಅಮೃತಸರದ ಪಂಜಾಬಿ ಕುಟುಂಬವೊಂದರಲ್ಲಿ ಜನಿಸಿದರು. ಅವರ ತಂದೆ ಜೀತೇಂದ್ರ ಕುಮಾರ್ ಪುಂಜ್ ಪಂಜಾಬ್ ಪೊಲೀಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿದ್ದರೆ, ಅವರ ತಾಯಿ ಜನಕ್ ರಾಣಿ ಗೃಹಿಣಿ. ಅಮೃತಸರದ ಶ್ರೀ ರಾಮ್ ಆಶ್ರಮ ಹಿರಿಯ ಮಾಧ್ಯಮಿಕ ಶಾಲೆ ಮತ್ತು ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಕಪಿಲ್ ಅವರು ಜಲಂಧರ್‌ನ ಅಪೀಜಯ್ ಕಾಲೇಜ್ ಆಫ್ ಫೈನ್ ಆರ್ಟ್ಸ್‌ನ ಪದವೀಧರರಾಗಿದ್ದಾರೆ.
ಶರ್ಮಾ ಅವರು ಯಶಸ್ಸಿನ ಉತ್ತಂಗದಲ್ಲಿzಗ ತಮ್ಮ ಬಾಲ್ಯದ ಗೆಳತಿ ಗಿನ್ನಿ ಚತ್ರತ್ ಅವರ ಜೊತೆಗೆ ವಿವಾಹವಾಗಿ, ಈಗ ಆ ಸುಂದರ ಜೋಡಿಗೆ ಇಬ್ಬರು ಮುzದ ಮಕ್ಕಳೂ ಇದೆ. ಕಪಿಲ್ ಅವರು ಬೆಳ್ಳಿಯ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿರಲಿ, ಅವರ ಬಾಲ್ಯವು ಕಠಿಣವಾಗೇ ಇತ್ತು. ಏಕೆಂದರೆ, ಆಗ ಅವರ ಕುಟುಂಬವು ಜೀವನೋಪಾಯಕ್ಕಾಗಿ ಬಹಳ ಕಷ್ಟಪಡುವ ಪರಿಸ್ಥಿತಿ ಇತ್ತು. ಸಂಬಳ ತರುತ್ತಿದ್ದ ತಂದೆಯ ಅಕಾಲಿಕ ಮರಣದ ತರುವಾಯ
ಅವರು ತನ್ನ ತಾಯಿಗೆ ಮನೆಕೆಲಸಗಳಲ್ಲಿ ಸಹಾಯ ಮಾಡುವುದರ ಜೊತೆಗೆ ಕುಟುಂಬವನ್ನು ನಿರ್ವಹಿಸಲು ಸಣ್ಣ ವಯಸ್ಸಿನ PCO ಬೂತ್‌ನಲ್ಲಿ ಮತ್ತು ಜವಳಿ ಉತ್ಪಾದನಾ ಘಟಕದಲ್ಲಿ ಸಹ ಕೆಲಸ ಮಾಡುತ್ತಿದ್ದರು.
ಕುಟುಂಬದ ಹಣಕಾಸಿನ ತೊಂದರೆಗಳ ಹೊರತಾಗಿಯೂ ಅವರಿಗಿರುವ ಕನಸನ್ನು ಮಾತ್ರ ಮಾಸಲು ಬಿಡಲಿಲ್ಲ, ಅವರು ೨೦೦೭ ರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿ ರಿಯಾಲಿಟಿ ಶೋ, ದಿ ಗ್ರೇಟ್ ಇಂಡಿಯನ್ ಲಾ-ರ್ ಚಾಲೆಂಜ್ ಸೀಸನ್ ೩ ಅನ್ನು ಗೆದ್ದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಬಂದು ಅನೇಕ ಅಭಿಮಾನಿಗಳನ್ನು ಗಳಿಸಿದ್ದರು. ಈ ಗೆಲುವು ಅವರ ಹಾಸ್ಯದ ವೃತ್ತಿಜೀವನದಲ್ಲಿ ಮಹತ್ವದ ತಿರುವು ನೀಡಿತ್ತು ಮತ್ತು ಅವರ ಆತ್ಮವಿಶ್ವಾಸವನ್ನು
ನೂರ್ಮಡಿ ಹೆಚ್ಚಿಸಿತು. ಅಲ್ಲಿಂದ ಮುಂದೆ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೆ ಒಂದರಂತೆ ಯಶಸ್ಸನ್ನು ಸಾಧಿಸುತ್ತಾ ಮುಂದೆ ಸಾಗಿದರು. ಉತ್ತಮ ಹಾಡುಗಾರರೂ ಆಗಿರುವ ಶರ್ಮ, ೨೦೧೧ ರಲ್ಲಿ ಸಂಗೀತದ ರಿಯಾಲಿಟಿ ಶೋ ಸ್ಟಾರ್ ಯಾ ರಾಕ್‌ಸ್ಟಾರ್ ನಲ್ಲಿ ಭಾಗವಹಿಸಿ ಎರಡನೇ ರನ್ನರ್ ಅಪ್ ಆಗಿ ಮಿಂಚಿದ್ದರು.
ಆದಾಗ್ಯೂ, ಕಪಿಲ್ ಶರ್ಮಾ ಅವರಿಗೆ ದೊಡ್ಡ ಬ್ರೇಕ್ ಅಂತ ಸಿಕ್ಕಿದ್ದು ೨೦೧೩ ರಲ್ಲಿ. ಅವರು ತಮ್ಮದೇ ಆದ ‘ಕಾಮಿಡಿ ನೈಟ್ಸ್ ವಿತ್ ಕಪಿಲ್’ ಕಾರ್ಯ ಕ್ರಮವನ್ನು ಧೈರ್ಯದಿಂದ ಪ್ರಾರಂಭಿಸಿದಾಗ. ಈ ಹೊಸ ಮಾದರಿಯ ಕಾರ್ಯಕ್ರಮವು ಬಹು ಬೇಗನೆ ಜನರನ್ನು ತಲುಪಿ ತ್ವರಿತವಾಗಿ ‘ಹಿಟ’ ಆಯಿತು ಮತ್ತು ಕಪಿಲ್ ಶರ್ಮಾ ಅವರನ್ನು ದೇಶದೆಡೆ ಮನೆಮಾತಾಗುವಂತೆ ಮಾಡಿತು. ನಂತರ ಅವರು ‘ದಿ ಕಪಿಲ್ ಶರ್ಮಾ ಶೋ’ ಅನ್ನು ಪ್ರಾರಂಭಿಸಿದರು, ಅದೂ ಕೂಡಾ ಭಾರಿ ಹಿಟ್ ಆಯಿತು. ಸಧ್ಯ, ಗ್ರೇಟ್ ಇಂಡಿಯನ್ ಕಪಿಲ್ ಶೋ ಮಾರ್ಚ್ ೨೦೨೪ ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ತನ್ನ ಹೊಸ ಅವತಾರದಲ್ಲಿ ಪ್ರಸಾರವಾಗುತ್ತಿದೆ ಮತ್ತು ನಿರೀಕ್ಷೆಯಂತೆ ಜನಮನ್ನಣೆ ಗಳಿಸುತ್ತಿದೆ.
ಚಿತ್ರೀಕರಣದ ಸಮಯದಲ್ಲಿ ವೇದಿಕೆಯ ಮುಂದಿರುವ ಪ್ರೇಕ್ಷಕರನ್ನು, ವೇದಿಕೆಯ ಮೇಲಿರುವ ಅತಿಥಿ ಗಳನ್ನು ಮತ್ತು ಪರೋಕ್ಷವಾಗಿ ಟಿವಿಯಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುವ ಕೋಟ್ಯಂತರ ವೀಕ್ಷಕರನ್ನು ಸಮಾನವಾಗಿ ಮತ್ತು ಸತತವಾಗಿ ನಗಿಸುವುದು ಖಂಡಿತ ಸಣ್ಣಕೆಲಸವಲ್ಲ. ಶರ್ಮಾ ಅವರ ಕಾರ್ಯಕ್ರಮದ ವೀಕ್ಷಣೆಯಿಂದ ಖಿನ್ನತೆಯಿಂದ ಈಚೆ ಬಂದು ಹೊಸ ಜೀವನೋತ್ಸಾಹ ಮೂಡುವಂತಾಯಿತು ಎಂದು ಖ್ಯಾತ ನಟ ಅಮಿರ್ ಖಾನ್
ಅವರನ್ನೂ ಸೇರಿ ಅನೇಕ ಖ್ಯಾತನಾಮರು ಹೇಳುತ್ತಾರೆ.
ಈ ಕಾರ್ಯಕ್ರಮದ ಯಶಸ್ಸಿಗೆ ಕಪಿಲ್ ಒಬ್ಬರೇ ಕಾರಣವಲ್ಲ, ಸುನಿಲ್ ಗ್ರೋವರ್ ಮತ್ತು ಮುಂತಾದ ಪ್ರತಿಭಾನ್ವಿತ ಸಹಕಲಾವಿದರಿಂದಾಗಿ ಕಪಿಲ್ ಶರ್ಮಾ ಶೋ ಯಶಸ್ವಿಯಾಗುತ್ತದೆ ಎಂಬ ವಿಮರ್ಷೆಯೂ ಮೊದಮೊದಲು ಇತ್ತು. ಹಾಗಲ್ಲ, ಅವರ ಕಾರ್ಯಕ್ರಮದ ಸ್ವರೂಪದಿಂದಾಗಿಯೇ ಕಪಿಲ್ ಶರ್ಮಾ ಶೋ ಯಶಸ್ವಿಯಾಗುತ್ತದೆ ಎಂದೂ ಅಭಿಪ್ರಾಯ ಪಟ್ಟವರಿದ್ದಾರೆ. ಆದರೆ, ಅವರ ಕಾರ್ಯಕ್ರಮದ ಸ್ವರೂಪ, ಅದರ ಲೈವ್ ಪ್ರೇಕ್ಷಕರು, ಪೂರ್ವ ಭಾವಿ ಹಾಸ್ಯ, ಅವರು ಮಾತನಾಡುವ ಸಹಜ ಹಾಸ್ಯದ ಶೈಲಿ, ‘ಶೋ’ಗೆ ಕರೆತರುವ ಸೆಲೆಬ್ರಿಟಿಗಳಿಂದಾಗಿ ಪ್ರದರ್ಶನ ವಿಶಿಷ್ಟವಾಗಿರುತ್ತದೆ ಮತ್ತು ಆ ಕಾರಣ ದಿಂದ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ ಎನ್ನುವುದು ಸಾರ್ವತ್ರಿಕವಾದ ಅಭಿಪ್ರಾಯ.
ಅರಳು ಹುರಿದಂತೆ ಪಟಪಟಾ ಅಂತ ವೇಗವಾಗಿ ಸಂಭಾಷಸುವ ಅವರ ಶೈಲಿ ಮತ್ತು ಸಂದರ್ಭೋಚಿತವಾಗಿ ಹಾಸ್ಯವನ್ನು ಅಲ್ಲ ಹುಟ್ಟುಹಾಕುವ ಪ್ರತ್ಯುತ್ಪನ್ನದ ಕಾರಣದಿಂದ ಕಪಿಲ್ ಅವರು ತಂಡದ ಇತರ ಸದಸ್ಯರಿಗಿಂತ ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಅವರ ಶೋನಲ್ಲಿ ‘ಸ್ಕ್ರಿ’ ಎನ್ನುವುದು ಇರುತ್ತದಾದರೂ ಅಲ್ಲಿ ‘ಸ್ಕ್ರಿ’ನಲ್ಲಿ ಇಲ್ಲದ ಬಹಳಷ್ಟು ಘಟನೆಗಳು ನಡೆಯುತ್ತವೆ. ಕಪಿಲ್ ತನ್ನ ಅತಿಥಿಗಳು ಮತ್ತು ಪ್ರೇಕ್ಷಕರಿಗೆ ಇದ್ದಕ್ಕಿದ್ದಂತೆ ಹಾಸ್ಯಾ ತ್ಮಕವಾದ ಪ್ರಶ್ನೆಯನ್ನು ಕೇಳುವ ಮೂಲಕ ಅವರು ನಿರೀಕ್ಷಿಸದ ಪರಿಸ್ಥಿತಿಯನ್ನು ಸೃಷ್ಟಿಸಿಬಿಡುತ್ತಾರೆ. ಪ್ರೇಕ್ಷಕರ ನಡುವೆಯೇ ಇರಬುದಾದ ಹಾಸ್ಯ ಪ್ರವೃತ್ತಿಯ ಜನರನ್ನು ಮಾತಾಡಿಸುತ್ತಾರೆ. ಇದು ಪ್ರೇಕ್ಷಕರಲ್ಲಿ ಸ್ವಾಭಾವಿಕವಾಗಿ ವಿಪುಲ ನಗುವನ್ನು ಸೃಷ್ಟಿಸಿಬಿಡುತ್ತದೆ.
ನಿರಂತರವಾಗಿ ಹೊಸತನವನ್ನು ನೀಡುವ ಅವರ ಸಾಮರ್ಥ್ಯ. ಅವರು ತಮ್ಮ ಪ್ರದರ್ಶನದಲ್ಲಿ ವೈವಿಧ್ಯತೆಯೊಂದಿಗಿನ ಪ್ರಯೋಗಶೀಲತೆಯನ್ನು ಅಳವಡಿಸಿಕೊಳ್ಳುವುದು ಮುಂತಾದ ಸಂಗತಿಗಳು ಕಪಿಲ್ ಶರ್ಮಾ ಶೋ ಸತತವಗಿ ಯಶಸ್ಸನ್ನು ಕಾಣಲು ಕಾರಣವಾಗುತ್ತದೆ. ಸಿನೆಮಾ ಪ್ರಚಾರಕ್ಕೆ
ಬರುವವ ನಟ ನಟಿಯರನ್ನೂ ಸೇರಿ ಅವರು ಎಲ್ಲಾ ವರ್ಗದ ಅತಿಥಿಗಳನ್ನು ಶೋ ಕ್ಕೆ ಕರೆತರುತ್ತಾರೆ. ಅಮಿತಾಬ್ ಬಚ್ಚನ್‌ರಿಂದ ಹಿಡಿದು ವಿರಾಟ್ ಕೋಹ್ಲಿಯವರೆಗೆ, ಸಾನಿಯಾ ಮಿರ್ಜಾರಿದ ಹಿಡಿಡು ಸುಖ್ವಿಂದರ್ ಸಿಂಗ್ ವರೆಗೆ ಹಾಗೂ ಸುಧಾಮೂರ್ತಿಯವರಿಂದ ಹಿಡಿದು ಸನ್ನಿ ಲಿಯೋನ್‌ವರೆಗೆ ದೇಶ ವಿದೇಶಗಳ ಖ್ಯಾತ ನಾಮರುಗಳು ಇವರ ಶೋ ಗೆ ಬಂದು ಹೋಗಿದ್ದಾರೆ.
ಇವರ ಶೋಗೆ ಬರದಿದ್ದ ಸಿಲೆಬ್ರಿಟಿಗಳೇ ಇಲ್ಲ ಎನ್ನಬಹುದೇನೋ! ಇವರ ಶೋದಲ್ಲಿ ಭಾಗವಹಿಸುವುದು ಎಂದರೆ ಗೌರವದ ವಿಷಯ ಅಂತ ಅವರುಗಳೂ ಭಾವಿಸುತ್ತಾರೆ. ಇದು ಅವರ ಶೋ ಕ್ಕೆ ಇರುವ ಜನಪ್ರಿಯತೆ ಮತ್ತು ವಿಶ್ವಾಸಾರ್ಹತೆಯನ್ನು ತೋರಿಸುತ್ತದೆ. ಪ್ರತಿ ಸೀಸನ್‌ಗೆ ಹೊಸ ಹೊಸ ಪಾತ್ರಗಳನ್ನು ಹುಟ್ಟುಹಾಕುವುದರಿಂದಲೂ ಅವರ ಪ್ರದರ್ಶನ ದಶಕಗಳ ನಂತರವೂ ತಾಜಾತನವನ್ನು ಉಳಿಸಿಕೊಂಡಿದೆ ಎನ್ನಬಹುದು. ಕಪಿಲ್ ಶರ್ಮಾ ಅವರ ತಂಡದ ಸುನಿಲ್ ಗ್ರೋವರ್, ಕೀಕು ಶಾರದಾ, ಕೃಷ್ಣಾ ಅಭಿಷೇಕ್ ಮತ್ತು ಸುಮೋನಾರಂಥಾ ಅದ್ಭುತ ಹಾಸ್ಯ ಪ್ರತಿಭೆಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ತರುತ್ತಾರೆ. ತನ್ನ ಕುಟುಂಬವನ್ನು ಬಹುವಾಗಿ ಪ್ರೀತಿಸುವ ಕಪಿಲ್, ಬಹುತೇಕ ‘ಎಪಿಸೋಡ್’ಗಳ ಚಿತ್ರೀಕರಣದಲ್ಲಿ ತನ್ನ ತಾಯಿಯನ್ನೂ ಕರೆಸಿಕೊಂಡು ಕಾರ್ಯಕ್ರಮದ ಹಾಸ್ಯದ ಭಾಗವಾಗಿಸಿಕೊಳ್ಳುತ್ತಾರೆ.
ತನ್ನ ತಾಯಿಯ ಮುಂದೆ ಪ್ರತಿಭಾ ಪ್ರದರ್ಶನ ಮಾಡುವುದು ಯಾವ ಮಗನಿಗಾದರೂ ಹೆಮ್ಮೆಯ ಸಂದರ್ಭವೇ! ಹಾಗೂ ತನ್ನ ಮಗ ವೇದಿಕೆಯಲ್ಲಿ ಮಿಂಚುವುದನ್ನು ನೋಡುವುದು ಯಾವ ತಾಯಿಗಾದರೂ ಧನ್ಯತೆಯ ಕ್ಷಣವೇ ತಾನೆ! ಆ ಭಾವನಾತ್ಮಕವಾದ ಕ್ಷಣಗಳನ್ನು ಸೃಷ್ಟಿ ಮಾಡಿ ಪ್ರೇಕ್ಷಕರ
ಹೃದಯಗೆಲ್ಲುತ್ತಾರೆ ಕಪಿಲ. ಇವರು ಇಲ್ಲಿಯವರೆಗೆ ಐದುಭಾರತೀಯ ದೂರದರ್ಶನ ಅಕಾಡೆಮಿ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. CNN&IBN ಇಂಡಿಯನ್ ಆಫ್ ದಿ ಇಯರ್ ಅವಾರ್ಡ್ಸ್ ೨೦೧೩ ರಲ್ಲಿ, ಅನುಭವಿ ನಟ ಅಮೋಲ್ ಪಾಲೇಕರ್ ಅವರಿಂದ ಮನರಂಜನಾ ವಿಭಾಗದಲ್ಲಿ ಭಾರತೀಯ ವರ್ಷದ ವ್ಯಕ್ತಿ ಪ್ರಶಸ್ತಿಯೊಂದಿಗೆ ಶರ್ಮಾ ಅವರನ್ನು ಗೌರವಿಸಲಾಗಿತ್ತು.
ಶರ್ಮಾ ಅವರು ಪ್ರಾಣಿಗಳ ಹಕ್ಕುಗಳನ್ನು ರಕ್ಷಿಸುವ ತಮ್ಮ ಪ್ರಯತ್ನಗಳಿಗೂ ಹೆಸರುವಾಸಿಯಾಗಿದ್ದಾರೆ. ಅವರ ಜನಪ್ರಿಯತೆಯನ್ನು ಗಮನಿಸಿ ೨೦೧೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಅವರನ್ನು ದೆಹಲಿ ಚುನಾವಣಾ ಆಯೋಗವು ರಾಯಭಾರಿ ಆಗಿ ನೇಮಿಸಿತ್ತು ಮತ್ತು ಶರ್ಮಾ ಅವರನ್ನು
೨೦೧೪ ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಅಭಿಯಾನದ ರಾಯಭಾರಿಯಾಗಿ ಕೂಡಾ ನೇಮಿಸಿದ್ದರು. ಖಾಲಿ ಕಿಸೆ ಇಟ್ಟುಕೊಂಡು ಅಮೃತಸರದಿಂದ ಬಂದಿದ್ದ ಕಪಿಲ್ ಶರ್ಮಾ ಅವರ ಆಸ್ತಿಯ ನಿವ್ವಳ ಮೌಲ್ಯ ಇಂದು ೩೦೦ ಕೋಟಿಗೂ ಮೀರಿದೆ ಎಂದು ಅಂದಾಜಿಸ ಲಾಗಿದ್ದು ಅವರು ಪ್ರತಿ ಸಂಚಿಕೆಗೆ ೫೦ ಲಕ್ಷ ರುಪಾಯಿಗಳ ಸಂಭಾವನೆಯನ್ನು ಪಡೆಯುತ್ತಾರಂತೆ.
ಕಪಿಲ, ಮುಂಬೈನ ಅಂಧೇರಿ ಪಶ್ಚಿಮ ಪ್ರದೇಶದಲ್ಲಿ ವಾಸವಾಗಿದ್ದು, ಇದು ಅನೇಕ ಖ್ಯಾತ ಬಾಲಿವುಡ್ ತಾರೆಯರು ವಾಸಿಸುವ ಬಹು ಬೇಡಿಕೆಯ ತಾಣ ವಾಗಿದೆ. ಅವರು Mercedes BenzS350, ರೇಂಜ್ ರೋವರ್ ಇವೊಕ್, ವೋಲ್ವೋ XC90 ಮತ್ತು ೫.೫ ಕೋಟಿ ಮೌಲ್ಯದ ಐಷಾರಾಮಿ ವ್ಯಾನಿಟಿ ವ್ಯಾನ್ ಅನ್ನು ಹೊಂದಿದ್ದಾರೆ. ಕಪಿಲ್ ಶರ್ಮಾ ಅವರಿಗೆ ದೊರೆತ ಈ ಎಲ್ಲ ಅಭೂತಪೂರ್ವ ಯಶಸ್ಸುಗಳು ಆಕಸ್ಮಿಕವಾಗಿರಲಿಕ್ಕೆ ಖಂಡಿತಾ ಸಾಧ್ಯವಿಲ್ಲ ಮತ್ತು ಬರೀ ಅದೃಷ್ಟ ವಂತೂ ಅಲ್ಲವೇ ಅಲ್ಲ. ಅವರ ಯಶಸ್ಸಿನ ಪಯಣವನ್ನು ಪರಾಂಬರಿಸಿದಾಗ, ಹೇರಳವಾದ ಪ್ರತಿಭೆ ಮತ್ತು ದಣಿವರಿಯದ ಪರಿಶ್ರಮ ಇದೆ ಎಂದು ಯಾರಿಗಾದರೂ ಅನಿಸದೇ ಇರಲಾರದು.
ಅವರ ಸ್ವಂತ ಸಾಮರ್ಥ್ಯದ ಜೊತೆಗೆ, ತನ್ನಂತೆ ಹಾಸ್ಯವನ್ನು ಸೃಜಿಸುವ ಕ್ಷಮತೆ ಹೊಂದಿರುವ ಪ್ರತಿಭಾವಂತ ವ್ಯಕ್ತಿಗಳಿಂದ ಕೂಡಿದ ತಂಡವನ್ನು ರೂಪಿಸಿ ಪ್ರದರ್ಶನವನ್ನು ನಡೆಸಲು ಸಾಧ್ಯವಾದದ್ದು ಅವರಲ್ಲಿ ಮೆಚ್ಚಬೇಕಾದ ಇನ್ನೊಂದು ಸಂಗತಿ. ತಂಡದ ಇತರ ಸದಸ್ಯರು ಇವರ ಯಶಸ್ಸಿಗೆ ಪೂರಕ ಕೊಡುಗೆ ಕೊಡುತ್ತಾರೆ ಎನ್ನುವ ಅಭಿಪ್ರಾಯವನ್ನು ಶರ್ಮಾ ಕೂಡಾ ಒಪ್ಪುತ್ತಾರೆ. ತಮಗಿಂತ ಹೆಚ್ಚು ಸಮರ್ಥ ವ್ಯಕ್ತಿಗಳಿಂದ ಕೂಡಿರುವ ತಂಡವನ್ನು ನಿರ್ಮಿಸುವ ನಾಯಕರು ಮಾತ್ರ ಅಸಾಧಾರಣ ಫಲಿತಾಂಶಗಳನ್ನು ಪಡೆಯುತ್ತಾರೆ ಎನ್ನುವ ಮಾತಿಗೆ ಕಪಿಲ್ ಶರ್ಮ ಜೀವಂತ ನಿದರ್ಶನ ಎನ್ನಬಹುದು.
ಕಪಿಲ್ ಅವರಿಗೆ ತಮ್ಮ ತಂಡವನ್ನು ವರ್ಷಗಳಿಂದ ಒಟ್ಟಿಗೆ ಇರಿಸಿಕೊಳ್ಳಲು ಸಾಧ್ಯವಾಗಿದೆ ಎಂದರೆ, ತಂಡದ ಸದಸ್ಯರ ಕ್ಷಮತೆ ಮತ್ತು ದೌರ್ಬಲ್ಯಗಳನ್ನು ತಿಳಿದು ಅವರನ್ನು ಪ್ರೋತ್ಸಾಹಿಸುತ್ತಾ ಕೆಲಸ ತೆಗೆಯುವ ಕಲೆ ಕರಗತವಾಗಿದೆ ಎಂದರ್ಥ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಾಯಕರುಗಳು ಎನಿಸಿಕೊಂಡ ವರು ಮತ್ತು ನಾಯಕರಾಗುವ ಹಂತದಲ್ಲಿರುವವರಿಗೆ ಇವರ ಗುಣಗಳು ನಿಜಕ್ಕೂ ಅನುಸರಣೀಯವಾಗಿವೆ. ಎತ್ತರವನ್ನು ಸಾಧಿಸುವುದಕ್ಕಿಂತ ಅಲ್ಲಿ ಬಹಳ ಕಾಲ ಇರುವುದು ಹೆಚ್ಚು ಸವಾಲಿನ ಕೆಲಸ ಎನ್ನುವ ಮಾತಿದೆ ತಾನೆ? ಕಪಿಲ್ ಅವರ ಹಲವಾರು ನವೀನ ಆಲೋಚನೆಗಳು ಮತ್ತು ನಿರಂತರ ಸುಧಾರಣೆ ಯ ಮನೋಭಾವದಿಂದಾಗಿಯೇ ಏರಿದ ಎತ್ತರವನ್ನು ಉಳಿಸಿಕೊಳ್ಳಲು ಮತ್ತು ಹೊಸ ಎತ್ತರವನ್ನು ಗುರುತಿಸಲು ಅವರಿಗೆ ಸಾಧ್ಯವಾಗಿದೆ ಎನ್ನಬಹುದು.
ನನಗಿರುವ ಪ್ರತಿ ಭೆಯ ಅಭಿವ್ಯಕ್ತಿಗೆ ಸರಿಯಾದ ವೇದಿಕೆಯೇ ಸಿಗುತ್ತಿಲ್ಲ ಎಂದು ಗೊಣಗುವ ಜನಗಳ ಮಧ್ಯೆ, ಸ್ವತಃ ತಾನೇ ವೇದಿಕೆಯ ನಿರ್ಮಾಣ ಮಾಡಿ ಕೊಂಡು ಯಶಸ್ವಿಯಾಗಿ ಬೆಳೆಯಬಹುದು ಎಂದು ಸಾಧಿಸಿ ತೋರಿಸಿದ್ದಾರೆ. ವೈವಿಧ್ಯತೆ, ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯ, ಮಹತ್ವಾಕಾಂಕ್ಷೆಯ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ವಿವಿಧ ಅಂಶಗಳಲ್ಲಿ ಯಾವತ್ತೂ ತಮ್ಮನ್ನು ತಾವೇ ಬೆಸ್ಟ್ ಎಂದುಕೊಳ್ಳದೇ ನಿರಂತರ
ಸುಧಾರಣೆಯ ಪಥದಲ್ಲಿ ಸಾಗುವ ಕಪಿಲ್ ಶರ್ಮ ಅವರಂಥವರು ಮಾತ್ರ ಐಕಾನ್‌ಗಳಾಗಲು ಸಾಧ್ಯವಾಗುತ್ತದೆ.
(ಲೇಖಕರು: ಪ್ರಚಲಿತ ವಿದ್ಯಮಾನಗಳ ವಿಷ್ಲೇಶಕರು)