Friday, 27th December 2024

Vinutha Hegde Column: ಜಗತ್ತಿನ ಮೊದಲ ಹಸಿರು ನ್ಯಾನೋ ಔಷಧದ ಅವಿಷ್ಕಾರ

ಹೆಗ್ಗಳಿಕೆ

ವಿನುತಾ ಹೆಗಡೆ, ಶಿರಸಿ

ಇದು ಅನಂತಕುಮಾರ್ ಹೆಗಡೆಯವರ ‘ಕದಂಬ’ ಸಂಸ್ಥೆಯ ಮಹೋನ್ನತ ಸಾಧನೆ ಮತ್ತು ಕನ್ನಡದ ನೆಲದಲ್ಲಿ ಸಾಕಾರಗೊಂಡ ಕನಸು

ನ್ಯಾನೋ ಔಷಧ ತಂತ್ರಜ್ಞಾನದ ಬಗೆಗೆ ಜಗತ್ತು ಇನ್ನೂ ಮಾತನಾಡುತ್ತಿರುವಾಗಲೇ, ಕನ್ನಡದ ನೆಲದಲ್ಲಿ ಜಗತ್ತಿ ನಲ್ಲೇ ಮೊದಲ ಬಾರಿಗೆ ಈ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇನ್ನಿಲ್ಲದ ಸಾಧನೆ ಮೆರೆಯಲಾಗಿದೆ. ಆಧುನಿಕ ನ್ಯಾನೋ ತಂತ್ರಜ್ಞಾನ ಹಾಗೂ ಭಾರತದ ಪಾರಂಪರಿಕ ವೈದ್ಯಪದ್ಧತಿ ಯನ್ನು ಸಮನ್ವಯಗೊಳಿಸುವಲ್ಲಿ ಉತ್ತರ ಕನ್ನಡದ ಶಿರಸಿಯಲ್ಲಿ ಪ್ರಾರಂಭಗೊಂಡ ‘ಕದಂಬ’ ಸಂಸ್ಥೆ ಯಶಸ್ವಿಯಾಗಿದೆ.

ಸಂಸ್ಥೆಯ ವತಿಯಿಂದ ನ್ಯಾನೋ ತಂತ್ರಜ್ಞಾನಾಧಾರಿತ ಸಸ್ಯಜನ್ಯ ಅತಿಥಿಗಳ, ಸುಧಾರಿತ ಕ್ರಿಯಾತ್ಮಕ ಆಹಾರೋ ತ್ಪನ್ನಗಳು ಮತ್ತು ಪಾನೀಯಗಳನ್ನಲ್ಲದೆ ಹಲವು ಅತ್ಯಮೂಲ್ಯ ಸೌಂದರ್ಯ ವರ್ಧಕಗಳನ್ನು ತಯಾರಿಸಿ
ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಹೌದು, ಮಾಜಿ ಸಂಸದ ಅನಂತಕುಮಾರ್ ಹೆಗಡೆಯವರು ಇಂಥ ಮಹತ್ವದ ಸಂಶೋಧನೆಯ ಮೂಲ ಪ್ರೇರಕಶಕ್ತಿ. ಅವರ ಸಾರಥ್ಯದ ‘ಕದಂಬ’, ಸುಸ್ಥಿರ ಹಸಿರು ನ್ಯಾನೋ
ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ. ಕದಂಬ ಕೈಗೊಂಡಿರುವ ‘ಗ್ರೀನ್ ನ್ಯಾನೋ ತಂತ್ರಜ್ಞಾನ’ ಉಪಕ್ರಮಗಳು ಅನಾರೋಗ್ಯ, ಪರಿಸರ ಮಾಲಿನ್ಯ ಸೇರಿದಂತೆ ಹತ್ತು ಹಲವು ಸಮಕಾಲೀನ ಗಂಭೀರ ಸಮಸ್ಯೆಗಳಿಗೆ ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತಿದೆ.

ಆಧುನಿಕ ಕೈಗಾರಿಕಾ ಯುಗದಲ್ಲಿ ಸಹಜವಾಗಿ ಪರ್ಯಾಯವಾಗಿ ಸಮತೋಲನವನ್ನು ಸಾಧಿಸಲಾಗದೇ ಅನೇಕ ಪಾರಿಸರಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಪರಿಣಾಮ, ಆರೋಗ್ಯ ಸೇರಿದಂತೆ ಹಲವು ಕ್ಷೇತ್ರಗಳು ಭೀಕರ ಸವಾಲನ್ನು ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಆಯುರ್ವೇದ ಸೇರಿದಂತೆ ಭಾರತೀಯ ಪಾರಂಪರಿಕ ಜ್ಞಾನದ ಜತೆಗೆ ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಸುಸ್ಥಿರ ಮತ್ತು ವಿನೂತನ ಪರಿಹಾರವನ್ನು ಕಟ್ಟಿಕೊಡುವಲ್ಲಿ ‘ಕದಂಬ’ ಮೊದಲ ಹೆಜ್ಜೆಯಿಟ್ಟಿದೆ. ಸಂಸ್ಥೆಯ ‘ಹಸಿರು ನ್ಯಾನೋ ತಂತ್ರಜ್ಞಾನ’ಧಾರಿತ ವಿನೂತನ ಪರಿಹಾರಗಳು ಭರವಸೆಯ ಆಶಾಕಿರಣವಾಗಿ ಹೊರಹೊಮ್ಮಿವೆ.

ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಂಸ್ಥೆಯು ಹಸಿರು ಉಪಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಮಿಳಿತ ಗೊಳಿಸಿದ್ದು, ತನ್ಮೂಲಕ ಪರಿಸರದ ಮೇಲಿನ ದುಷ್ಪರಿಣಾಮಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದು, ಈ ದಿಸೆಯಲ್ಲಿ, ಕೈಗಾರಿಕೆಗಳಲ್ಲಿನ ವಿಷಕಾರಿ ರಾಸಾಯನಿಕಗಳು ಮತ್ತು ತ್ಯಾಜ್ಯವನ್ನು ಸಂಸ್ಕರಣೆಗೊಳಿಸಿ ನಿವ್ವಳ ಶೂನ್ಯ ಇಂಗಾಲ ವ್ಯರ್ಥ (net zero carbon) ಹೆಜ್ಜೆಗುರುತುಗಳನ್ನು ಮೂಡಿಸುವಂಥ ಜಾಗತಿಕ ಸವಾಲನ್ನು ಎದುರಿಸಿ ಸಾಧಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ.

ಆರೋಗ್ಯ, ಆಹಾರದಂಥ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಿತ ಹಸಿರು ನ್ಯಾನೋ ತಂತ್ರಜ್ಞಾನದ ಸಮರ್ಥ ಬಳಕೆಯ ಮೂಲಕ, ಭವಿಷ್ಯಕ್ಕೆ ಸಮರ್ಥನೀಯ ಕೊಡುಗೆ ನೀಡಿದೆ.

ನ್ಯಾನೋ ತಂತ್ರಜ್ಞಾನ: ಸಂಸ್ಥೆಯ ಧ್ಯೇಯದ ಪ್ರಥಮ ಹೆಜ್ಜೆಯಾಗಿ, ಜೈವಿಕ ವೈದ್ಯಕೀಯ ಅನ್ವಯಿಕೆ (ಬಯೋ
ಮೆಡಿಕಲ್ ಅಪ್ಲಿಕೇಷನ್)ಗಳು, ಆಹಾರ ಮತ್ತು ಪಾನೀಯಗಳ ಉದ್ಯಮ, ಇಲೆಕ್ಟ್ರಾನಿಕ್ಸ್, ಹಸಿರು ಇಂಧನ ಕೃಷಿ ಮತ್ತು ಪರಿಸರ ವಿಜ್ಞಾನಗಳಂಥ ಕ್ಷೇತ್ರಗಳಲ್ಲಿ ಹೊಸ ‘ಕ್ರಾಂತಿಕಾರಕ’ ಉತ್ಪನ್ನಗಳನ್ನು ಆವಿಷ್ಕರಿಸಲಾಗಿದೆ.

ಭಾರತೀಯ ಪಾರಂಪರಿಕ ವೈದ್ಯದಲ್ಲಿ ಬಳಸುತ್ತಿದ್ದ ಹಲವು ಗಿಡಮೂಲಿಕೆಗಳಲ್ಲಿನ ಉತ್ಕರ್ಷಣ-ನಿರೋಧಕ, ಸಮೃದ್ಧ ಸಸ್ಯಜನ್ಯ ರಾಸಾಯನಿಕಗಳನ್ನು ಇಲೆಕ್ಟ್ರಾನ್ ಮೂಲಗಳಾಗಿ ಬಳಸಿಕೊಂಡು ಹಸಿರು ನ್ಯಾನೋ ಕಣ ಗಳನ್ನು ಉತ್ಪಾದಿಸುವ ಭವಿಷ್ಯದ ತಂತ್ರಜ್ಞಾನದ ಅಭಿವೃದ್ಧಿಯೊಂದಿಗೆ ಕ್ಯಾನ್ಸರ್ ಕೋಶಗಳ ನಿರೋಧಕಗಳೂ ಸೇರಿದಂತೆ ಶೇ.100ರಷ್ಟು ನೈಸರ್ಗಿಕವಾದ ಹಲವು ನ್ಯಾನೋ ಔಷಧಗಳು, ಸೌಂದರ್ಯವರ್ಧಕಗಳು ಮತ್ತು ಆಹಾರೋತ್ಪನ್ನಗಳನ್ನು ಜಗತ್ತಿನಲ್ಲಿಯೇ ಮೊಟ್ಟ ಮೊದಲಬಾರಿಗೆ ತಯಾರಾಗಿಸಲಾಗಿದೆ.

ಭವಿಷ್ಯದ ಉದ್ಯಮ: ಹಸಿರು ನ್ಯಾನೋ ತಂತ್ರಜ್ಞಾನವು ಭವಿಷ್ಯದ ಆರ್ಥಿಕ ಹಾಗೂ ಔದ್ಯಮಿಕ ಕ್ಷೇತ್ರಗಳಲ್ಲೂ
ನಿರ್ಣಾಯಕ ಪಾತ್ರವನ್ನು ವಹಿಸಲಿದೆ ಎಂಬುದರಲ್ಲಿ ಈಗ ಅನುಮಾನಗಳು ಉಳಿದಿಲ್ಲ. ಒಂದು ಅಂಕಿ-ಅಂಶದ
ಪ್ರಕಾರ, ಹಸಿರು ನ್ಯಾನೋ ತಂತ್ರಜ್ಞಾನದ ಮಾರುಕಟ್ಟೆಯು ಗಮನಾರ್ಹ ವಿಸ್ತರಣೆ ಕಾಣುತ್ತಿದ್ದು, ಇದು 2030ರಲ್ಲಿ
417.35 ಶತಕೋಟಿ ಡಾಲರ್‌ನಷ್ಟು ಗರಿಷ್ಠ ವಹಿವಾಟು ದಾಖಲಿಸುವ ನಿರೀಕ್ಷೆಯಿದೆ. ಜತೆಗೆ ಹಸಿರು ಭವಿಷ್ಯದ ಕಡೆಗೆ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯ ಮಾರ್ಗವನ್ನು ರೂಪಿಸಿಕೊಡಲಿದೆ. ಹೀಗಾಗಿ ಹೊಸ ತಲೆಮಾರಿನ ತಂತ್ರ ಜ್ಞಾನ, ಸುಸ್ಥಿರತೆ ಮತ್ತು ಆರ್ಥಿಕ ಸಮೃದ್ಧಿಯ ಸೇತುವೆಯಾಗಿ ಹಸಿರು ನ್ಯಾನೋ ತಂತ್ರಜ್ಞಾನ ಕೆಲಸ ಮಾಡಲಿದೆ ಎನ್ನುತ್ತಾರೆ ಅನಂತಕುಮಾರ್ ಹೆಗಡೆ.

ಕದಂಬದ ವಿಶಿಷ್ಟ ಉತ್ಪನ್ನಗಳು: ಕದಂಬ ನ್ಯಾನೋ ಮೆಡಿಸಿನ್ ಹೆಸರಿನಲ್ಲಿ ಭಾರತೀಯ ಹಾಗೂ ಜಗತ್ತಿನ ಅನೇಕ
ಮೂಲಗಳಿಂದ ಸಂಗ್ರಹಿಸಲ್ಪಟ್ಟ ಸಸ್ಯಗಳಿಂದ ಸಸ್ಯ ಜನ್ಯ ರಾಸಾಯನಿಕಗಳನ್ನು ಸಂಸ್ಕರಿಸಿ ಅವುಗಳನ್ನು ನ್ಯಾನೋ
ಕಣಗಳನ್ನಾಗಿ ಪರಿವರ್ತಿಸಿ ನ್ಯಾನೋ ಔಷಧಗಳನ್ನು ಮತ್ತು ಆರೋಗ್ಯ ವರ್ಧಕಗಳನ್ನು ಅಭಿವೃದ್ಧಿಪಡಿಸುವ ಮೂಲಕ ಜಗತ್ತಿಗೆ ಸವಾಲಾಗಿರುವ ನೂರಾರು ಮಹಾರೋಗಗಳಿಗೆ ಯಾವುದೇ ಅಡ್ಡಪರಿಣಾಮಗಳಿಲ್ಲದ ವೈದ್ಯ ಕೀಯ ಪರಿಹಾರವನ್ನು ನೀಡಲಾಗುತ್ತಿದೆ. ಇಂಥದೊಂದು ಇವರ ಪ್ರಯತ್ನ ಜಗತ್ತಿನಲ್ಲಿಯೇ ಇದು ನೂತನ ವಾಗಿದ್ದು, ಭವಿಷ್ಯದಲ್ಲಿ ಕದಂಬ ಪ್ರಪಂಚದ ಮನೆಮನೆಗಳಿಗೆ ತಲುಪಿ ಕರುನಾಡ ಹಿರಿಮೆಯನ್ನು ಹರಡುವುದರಲ್ಲಿ ಸಂದೇಹವೇ ಇಲ್ಲ. ಅಲ್ಲದೇ ಅತ್ಯಾಧುನಿಕ ಕೈಗಾರಿಕಾ ಕ್ಷೇತ್ರದಲ್ಲಿ ಪರಿಸರ ಪೂರಕ ಹಸಿರು ಕ್ರಾಂತಿಯನ್ನು ಹುಟ್ಟು ಹಾಕಿದೆ. ಅದಕ್ಕೆ ಬೇಕಾದ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿದೆ. ಇಂಥದೊಂದು ಸಾಧನೆ ಜಗತ್ತಿನಲ್ಲಿಯೇ ಪ್ರಾರಂಭಿಸಿದ್ದು ಕದಂಬ.

ಮೂಲಭೂತ ಮತ್ತು ಗ್ರೀನ್ ಮಿಷನ್ ಧ್ಯೇಯಾಧಾರಿತ ಸಂಶೋಧನೆಗಳು ನಿರಂತರ ಮುಂದುವರಿದಿದ್ದು, ಹಸಿರು
ನ್ಯಾನೋ ತಂತ್ರಜ್ಞಾನ ಬಳಕೆಯನ್ನೊಳಗೊಂಡ ಹಲವು ಪರಿಸರ-ಸ್ನೇಹಿ ವಸ್ತುಗಳು, ಸ್ಮಾರ್ಟ್ ಆಹಾರಗಳು,
ಜೀವರಕ್ಷಕ ಔಷಧಗಳನ್ನು ಇಷ್ಟರಲ್ಲೇ ಪರಿಚಯಿಸಲಾಗುತ್ತಿದೆ ಎನ್ನುತ್ತಾರೆ ಅನಂತಕುಮಾರ್ ಹೆಗಡೆ. ಬ್ರ್ಯಾಂಡ್ ಹೆಸರು KING – Kadamba Integrative Nano Green medicine – ಅಂದರೆ, ಅತ್ಯಾಧುನಿಕ ಅನ್ನುವ ವಿಧಾನಗಳನ್ನು ಅಳವಡಿಸಿಕೊಂಡ, ನಮ್ಮ ಭಾರತೀಯ ಸಸ್ಯಜನ್ಯ ನ್ಯಾನೋದ ಪ್ರಯೋಗ. ಈಗಾಗಲೇ ಸಾವಿರಾರು ರೋಗಗಳನ್ನು ಪಾರ್ಶ್ವ ಪರಿಣಾಮಗಳಿಲ್ಲದೆ ವಾಸಿಮಾಡಿರುವ, ಪ್ರಪಂಚದ ಅತ್ಯುನ್ನತ ಔಷಽಯ ಸಂಸ್ಥೆಯಾಗಿ ಕದಂಬ ಹೊರ ಹೊಮ್ಮುವ ಕ್ಷಣವು ಶೀಘ್ರದಲ್ಲೇ ಬರಲಿದೆ.

ಇದಲ್ಲದೆ, ‘ಪಿಟೋನ್’ ಎಂಬ ಹೆಸರಿನ ಭವಿಷ್ಯದ ತಲೆಮಾರಿನ ಶಕ್ತಿಯ ಉತ್ಪನ್ನದ ತಯಾರಿಕೆಗೆ ಇವರು
ಮುಂದಾಗಿದ್ದು, ಈ ದಿಸೆಯಲ್ಲಿ ಅಸಾಧಾರಣವಾದ ಹೊಸ ಸಂಶೋಧನೆ ನಡೆಯುತ್ತಿದೆ. ಇದರಲ್ಲಿ ಸಸ್ಯ ಜನ್ಯ ಪ್ರೋಟೀನ್ ಗಳನ್ನು ಮತ್ತು ಬಾಹ್ಯ ಕೀಟೋನ್ ಅಣುಗಳನ್ನು ಸುತ್ತುವರಿಯಲು ಹಸಿರು ನ್ಯಾನೋ ತಂತ್ರಜ್ಞಾನ ವನ್ನು ಬಳಸಲಾಗುತ್ತಿರುವುದು ವಿಶೇಷ. ಈ ಸಂಶೋಧನೆಯು ಜಗತ್ತಿನಲ್ಲೇ ಮೊದಲು ಎನ್ನಲಾಗಿದ್ದು, ಇದು ನಿರ್ದಿಷ್ಟವಾದ ಬಳಸಿಕೊಳ್ಳುತ್ತದೆ.

ನಮ್ಮ ನೆಲಮೂಲದ ಸಸ್ಯ ಜನ್ಯ ಪ್ರೋಟೀನ್‌ಗಳಲ್ಲಿನ ಪೌಷ್ಟಿಕಾಂಶದ ಸಮರ್ಥ ಬಳಕೆಗಾಗಿ ಕೀಟೋನ್ ಕಾಯ ಗಳನ್ನು ಸಂಯೋಜಿಸಲಾಗುತ್ತಿದೆ. ಇದರಿಂದಾಗಿ, ಕ್ಯಾನ್ಸರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಪರಿಸರ-ಸ್ನೇಹಿ ‘ಎನ್‌ಕ್ಯಾಪ್ಸುಲೇಷನ್’ ರೂಪದ ಉತ್ಪನ್ನಗಳು ‘ಕದಂಬ’ದ ಮೂಲಕ ಇಷ್ಟರಲ್ಲೇ ಜಗತ್ತಿಗೆ ದಕ್ಕಲಿವೆ. ಈ ಸುಧಾರಿತ ತಂತ್ರಜ್ಞಾನವು ನ್ಯೂಟ್ರಾಸ್ಯುಟಿಕಲ್ ಮತ್ತು ಆಹಾರ ಉದ್ಯಮಗಳಲ್ಲಿ ಗಮನಾರ್ಹ ಪ್ರಗತಿಗೆ ಕಾರಣವಾಗಲಿದೆ. ಇದು ಆರೋಗ್ಯ ಕ್ಷೇತ್ರಕ್ಕೆ ಮಹತ್ತರ, ಗಣನೀಯ ಕೊಡುಗೆ ಎನಿಸುವುದರಲ್ಲಿ ಅನುಮಾನವಿಲ್ಲ.

‘ಮಾಜಿ ಆದ ನಂತರ ಸುದ್ದಿಯೇ ಇಲ್ಲ’ ಎಂದು ಯೋಚಿಸುತ್ತಿದ್ದವರಿಗೆ ಅನಂತಕುಮಾರ್ ಹೆಗಡೆಯವರು ಯಾರೂ ನಿರೀಕ್ಷಿಸದ ಉತ್ತರವನ್ನು ಕದಂಬ ಮೂಲಕ ಅನಾವರಣಗೊಳಿಸಿದ್ದಾರೆ. ಭಾರತೀಯ ಆಯುರ್ವೇದ ಮತ್ತು ಆಹಾರ ಸಂಸ್ಕೃತಿಯ ಹಿರಿಮೆಯನ್ನು ಜಗತ್ತಿಗೇ ಸಾರಿದ್ದಾರೆ, ಅದೂ ಅತ್ಯಾಧುನಿಕ ನ್ಯಾನೋ ತಂತ್ರಜ್ಞಾನದ ಮೂಲಕ. ಇಂಥದೊಂದು ಯೋಜನೆಗೆ ಅವರು ತಮ್ಮ ‘ಕದಂಬ’ ಮೂಲಕ ಯಾವತ್ತೋ ಪೀಠಿಕೆ ಬರೆದಾಗಿತ್ತು, ಇಂದು ಅದು ಜಗಕ್ಕೆ ಸ್ಪಷ್ಟವಾಗಿ ಗೋಚರಿಸಿದೆ.

ಹೌದು ಆರೇಳು ವರ್ಷಗಳ ನಿರಂತರ ಶ್ರಮ, ಅಧ್ಯಯನದ ಫಲಶ್ರುತಿಯಾಗಿ ಈಗ ಪ್ರಪಂಚದ ಮೊಟ್ಟಮೊದಲ, ಗ್ರೀನ್ ನ್ಯಾನೋ ತಂತ್ರಜ್ಞಾನದ ಔಷಧಿಯ ಉತ್ಪನ್ನಗಳನ್ನು ಅನಂತಕುಮಾರ್ ಹೆಗಡೆಯವರು ’ಕದಂಬ’ಮೂಲಕ
ನಾವರಣಗೊಳಿಸಿದ್ದಾರೆ. ಪಾಶ್ಚಿಮಾತ್ಯ ಪದ್ಧತಿಯ ವೈದ್ಯಕೀಯ ಪ್ರಯೋಗಗಳ ಜತೆಯ ಅನೇಕ ಸಂದೇಶಗಳ
ಪ್ರಯೋಗಾಲಯ ಪರೀಕ್ಷೆಗಳಲ್ಲಿ ಮತ್ತು ವೈದ್ಯ ವಿಜ್ಞಾನದ ಹೊಸದೊಂದು ಮೈಲುಗಲ್ಲನ್ನು ನಿರ್ಮಿಸುವ ಮುಖಾಂತರ ಭಾರತೀಯ ಆಯುರ್ವೇದ ಔಷಧಿಯ ಮೂಲಚಿಂತನೆಯನ್ನು ಇವತ್ತು ಪಶ್ಚಿಮದಲ್ಲಿ ವೈದ್ಯಕೀಯ
ಸಂಶೊಧನೆಗಳನ್ನು ಜೊತೆಯಲ್ಲಿ ಗೆದ್ದು ತೋರಿಸುವ ಭರವಸೆ ಕೊಟ್ಟಿದ್ದಾರೆ. ಅನಂತಕುಮಾರ್ ಹೆಗಡೆಯವರ ಈ
ಸಾಧನೆಯನ್ನು ಗುರುತಿಸಿ ‘ಅಹಮದಾಬಾದ್ ಇಂಡಸ್ ಯೂನಿವರ್ಸಿಟಿ’ಯಿಂದ ಇಂದು ಅವರಿಗೆ ಗೌರವ
ಡಾಕ್ಟರೇಟ್ ಅನ್ನು ಕೂಡ ನೀಡಲಾಗುತ್ತಿದೆ.

(ಲೇಖಕಿ ಪತ್ರಕರ್ತೆ)

ಇದನ್ನೂ ಓದಿ: PatitaPavana Das Column: ಬಾಂಗ್ಲಾ ಗಲಭೆ ಮತ್ತು ಕೃಷ್ಣ ಪ್ರಜ್ಞೆಯ ಪ್ರಚಾರ