ಪ್ರತಿಧ್ವನಿ
ವೀರಕಪುತ್ರ ಶ್ರೀನಿವಾಸ್
ತನ್ನ ನೆಚ್ಚಿನ ನಾಯಕ ಪುಣ್ಯಭೂಮಿಯನ್ನು ಸ್ಪರ್ಶಿಸಲು ಅವಕಾಶ ನೀಡುತ್ತಿಲ್ಲ ದಿ.ಬಾಲಕೃಷ್ಣ ಅವರ ಕುಟುಂಬ. ಈವರೆಗೂ ಅಭಿಮಾನಿ ಗಳ ನಿತ್ಯದ ದರ್ಶನಕ್ಕೆ, ಹುಟ್ಟುಹಬ್ಬ, ಪುಣ್ಯಸ್ಮರಣೆಗೆ ಅವಕಾಶ ಮಾಡಿಕೊಡುತ್ತಿದ್ದ ದಿ.ಬಾಲಕೃಷ್ಣ ಅವರ ಕುಟುಂಬ ಇದೀಗ ಅನುಮಾನಾ ಸ್ಪದ ರೀತಿಯಲ್ಲಿ ವರ್ತಿಸುತ್ತಿದೆ.
ಭಾರತೀಯ ಸಿನಿಮಾ ರಂಗದ ಹೆಸರಾಂತ ನಟ, ಮೇರು ವ್ಯಕ್ತಿತ್ವದ ಕಲಾವಿದರಾಗಿದ್ದ ಡಾ.ವಿಷ್ಣುವರ್ಧನ್ ಅವರು ನಮ್ಮನ್ನಗಲಿ ಭರ್ತಿ ಹದಿನಾಲ್ಕು ವರ್ಷಗಳು. ಬದುಕಿನುದ್ದಕ್ಕೂ ಕಲಾರಸಿಕರನ್ನು ಮನರಂಜಿಸುತ್ತಾ, ನಾಡು ನುಡಿ ರಕ್ಷಣೆಗಾಗಿ ಸದಾ ಸಿದ್ಧರಾಗಿದ್ದ ಡಾ.ವಿಷ್ಣುವರ್ಧನ್ ಅವರು ಅಗಲಿ
ಡಿ.೩೦ಕ್ಕೆ ಒಂದೂವರೆ ದಶಕ ಕಳೆದರೂ, ಇಂದಿಗೂ ಅವರು ನೋವಿನಿಂದ ಮುಕ್ತವಾಗಿಲ್ಲ ಎನ್ನುವುದು ನಾಡಿಗೆ ನಾಡೇ ತಲೆತಗ್ಗಿಸಬೇಕಾದ ಸಂಗತಿ.
ಶ್ರೀರಾಮಚಂದ್ರನ ವನವಾಸಕ್ಕೂ ಒಂದು ಅಂತ್ಯವಿತ್ತು. ಆದರೆ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿ (ಸಮಾಧಿ) ವಿವಾದಕ್ಕೆ ಇದುವರೆಗೂ ಅಂತ್ಯ ಕಾಣಲಿಲ್ಲ ಎನ್ನೋದು ಅತ್ಯಂತ ನೋವಿನ ಸಂಗತಿ. ಏನಾಯಿತು ಪುಣ್ಯಭೂಮಿಗೆ? ಎಲ್ಲರದ್ದೂ ಬಿಲಿಯನ್ ಡಾಲರ್ ಪ್ರಶ್ನೆ. ಉತ್ತರ ಸಿಂಪಲ್. ಹಿರಿಯ ಕಲಾವಿದ ಬಾಲಕೃಷ್ಣ ಅವರಿಗೆ ಸರ್ಕಾರ ಅನುದಾನವಾಗಿ ನೀಡಿರುವ ಜಾಗವೇ ಅಭಿಮಾನ್ ಸ್ಟುಡಿಯೋ. ಕನ್ನಡ ಸಿನಿಮಾಗಳ ನಿರ್ಮಾಣಕ್ಕೆ ಕನ್ನಡಿಗರು
ಮದರಾಸಿಗೆ ಹೋಗುವ ಅನಿವಾರ್ಯತೆಯ ದಿನಗಳವು. ಇದನ್ನು ತಪ್ಪಿಸಬೇಕು ಎಂದು ಬಾಲಣ್ಣನವರು ಸರ್ಕಾರದ ಬಳಿ ಇಪ್ಪತ್ತು ಎಕರೆ ಜಾಗವನ್ನು ಅನುದಾನವಾಗಿ ಪಡೆದು ಅಭಿಮಾನ್ ಸ್ಟುಡಿಯೋ ನಿರ್ಮಿಸಿದ್ದರು.
ತಕ್ಕ ಮಟ್ಟಿಗೆ ಬಾಲಕೃಷ್ಣ ಅವರ ಕನಸು ಈಡೇರಿತ್ತು. ಆದರೆ ಅವರ ಅಗಲಿಕೆಯ ನಂತರ ೨೦೦೪ರಲ್ಲಿ ಅವರ ಮಕ್ಕಳು ಅಪ್ಪನ ಆಸೆಯನ್ನೇ ಮುಂದು ವರೆಸಿಕೊಂಡು ಹೋದರಾ? ಅಭಿಮಾನ ಸ್ಟುಡಿಯೋವನ್ನು ಒಂದು ಸಲ ಪರಿಶೀಲಿಸಿದರೆ ಬೇರೆಯದ್ದೇ ಉತ್ತರ ಸಿಗುತ್ತದೆ. ಸರಕಾರ ನೀಡಿದ್ದ ೨೦ ಎಕರೆ ಯಲ್ಲಿ ಹತ್ತು ಎಕರೆ ಜಾಗವನ್ನು ಈಗಾಗಲೇ ಬಾಲಣ್ಣನವರ ಮಕ್ಕಳು ಮಾರಾಟ ಮಾಡಿ ಜೇಬು ತುಂಬಿಸಿಕೊಂಡಿದ್ದಾರೆ.
ಅಭಿಮಾನ್ ಸ್ಟುಡಿಯೋ ಪಕ್ಕದಲ್ಲಿಯೇ ಇರುವ ಬಡಾವಣೆ ಸರ್ಕಾರದ ಅನುದಾನಿತ ಜಾಗ. ದಿ.ಬಾಲಕೃಷ್ಣ ಅವರ ಮಗಳು, ಮಹಿಳಾ ಉತ್ತರಾಧಿಕಾರಿ ಕಾಯ್ದೆ ಅನ್ವಯ ಬಡಾವಣೆ ನಿರ್ಮಾಣಕ್ಕಾಗಿ ಮಾರಾಟವಾದ ಭೂಮಿಯ ಹಣದಲ್ಲಿ ನನಗೂ ಪಾಲು ಬೇಕು ಅಥವಾ ಉಳಿದ ಹತ್ತು ಎಕರೆಗೆ ನನ್ನನ್ನೂ ಉತ್ತರಾಧಿಕಾರಿಯನ್ನಾಗಿಸಬೇಕು ಎಂದು ಕೋರಿ ೨೦೦೪ರಲ್ಲಿ ಕೋರ್ಟಿನಲ್ಲಿ ಮೊಕದ್ದಮೆಯನ್ನು ಹೂಡಿದ್ದರು. ಈ ಕೌಟುಂಬಿಕ ಮೊಕದ್ದಮೆ ಕೋರ್ಟಿ ನಲ್ಲಿರುವಾಗಲೇ ಅಂದರೆ ೨೦೦೯ರಲ್ಲಿ ಡಾ.ವಿಷ್ಣುವರ್ಧನ್ ಅವರು ನಮ್ಮನ್ನಗಲಿದರು. ಅವರ ಅಂತ್ಯಸಂಸ್ಕಾರ ಎಲ್ಲಿ ಮಾಡಬೇಕು ಎಂಬ ಚರ್ಚೆಗಳು ನಡೆಯುತ್ತಿದ್ದಾಗ ದಿ.ಬಾಲಕೃಷ್ಣ ಅವರ ಮಗ ಗಣೇಶ್ ಅವರೇ ಮುಂದೆ ಬಂದು ಅಭಿಮಾನ್ ಸ್ಟುಡಿಯೋದಲ್ಲಿಯೇ ಅಂತ್ಯಸಂಸ್ಕಾರ ಮಾಡಿ ಎಂದು
ಒಪ್ಪಿಗೆಯನ್ನು ಸೂಚಿಸಿದರು.
ನಂತರ ಸರ್ಕಾರ ಆ ಜಾಗದ ಪೂರ್ವಾಪರ ವಿಚಾರಿಸದೆಯೇ ಅಂತ್ಯಸಂಸ್ಕಾರ ನೆರವೇರಿಸಿ ಬಿಟ್ಟಿತು. ಅಲ್ಲಿಂದಾಚೆಗಷ್ಟೇ ಆ ಅಭಿಮಾನ್ ಸ್ಟುಡಿಯೋ
ಸುತ್ತ ಇರುವ ವಿವಾದಗಳು, ಅವರು ಭೂಮಿಯನ್ನು ಮಾರಾಟ ಮಾಡಿಕೊಂಡಿರುವುದು, ನ್ಯಾಯಾಲಯದ ಮೊಕದ್ದಮೆ ದಾಖಲಿಸಿರುವ ಸಂಗತಿಗಳು ನಾಡಿನ ಜನರಿಗೆ ಅರಿವಾದದ್ದು. ದಿ.ಬಾಲಣ್ಣ ನವರ ಕುಟುಂಬದವರ ಜೊತೆ ದಿ.ಅಂಬರೀಷ್ ಅವರು, ಚಿತ್ರರಂಗದವರು, ಡಾ.ವಿಷ್ಣು ಕುಟುಂಬ
ದವರು, ಜಿಲ್ಲಾಧಿಕಾರಿ ಸೇರಿದಂತೆ ಹತ್ತಾರು ಸಂಧಾನ ಸಭೆಗಳು ಆದರೂ ಅವರು ಯಾವ ಸಂಧಾನಕ್ಕೂ ಬಾರದೇ ಹೋದರು.
ಸ್ಟುಡಿಯೋ ನಿರ್ಮಾಣಕ್ಕೆ ಸರಕಾರ ನೀಡಿದ ಇಪ್ಪತ್ತು ಎಕರೆಯಲ್ಲಿ ಹತ್ತು ಎಕರೆಯನ್ನು ಬಡಾವಣೆ ನಿರ್ಮಾತೃ ಗಳಿಗೆ ಮಾರಾಟ ಮಾಡಲಾಗಿದೆ. ಹೀಗೆ ಮಾಡಿದ ದಿ.ಬಾಲಕೃಷ್ಣ ಅವರ ಕುಟುಂ ಬದವರ ನಡೆಯನ್ನು ಅಂದಿನ ಜಿಲ್ಲಾಧಿಕಾರಿಗಳಾದ ಶಂಕರ್ ಅವರು ಶೋಕಾಸ್ ನೋಟೀಸ್ ನೀಡಿ ಪ್ರಶ್ನಿಸಿ ದ್ದರು. ಅವರು ಸೂಕ್ತ ಉತ್ತರ ನೀಡದ ಹಿನ್ನಲೆಯಲ್ಲಿ ಉಳಿದ ಹತ್ತು ಎಕರೆ ಮುಟ್ಟುಗೋಲಿಗೂ ಆದೇಶಿಸಿದ್ದರು. ಆಗ ಆ ಕುಟುಂಬದವರು ಸಂಧಾನಕ್ಕೆ ಬಂದರಾ ದರೂ ನಂತರದಲ್ಲಿ ಕೋರ್ಟಿನ ಮೂಲಕ ತಡೆಯಾe ಯನ್ನು ತಂದು ಮುಟ್ಟುಗೋಲು ಆದೇಶವನ್ನು ಪ್ರಶ್ನಿಸಿದ್ದರು.
ಹೀಗೆ, ಏಳು ವರ್ಷಗಳ ಕಾಲ ಕಾದರೂ ಬೆಂಗಳೂರಿನಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಾಗದ ಹಿನ್ನೆಲೆಯಲ್ಲಿ ಡಾ.ವಿಷ್ಣು ಕುಟುಂಬದವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಮಾಡುವ ನಿರ್ಧಾರ ತಾಳಿದರು. ಆದರೆ ಇತ್ತ ಅಭಿಮಾನಿಗಳು ಅಂತ್ಯಸಂಸ್ಕಾರಗೊಂಡ ಜಾಗದಲ್ಲಿಯೇ ಪುಣ್ಯಭೂಮಿಯಾಗಬೇಕು ಎಂದು ಹಠವಿಡಿದು ಕೂತುಬಿಟ್ಟರು. ಇಂದಿಗೂ ಅಭಿಮಾನಿಗಳೇ ಪ್ರತಿವರ್ಷ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಮೈಸೂರಿನಲ್ಲಿ ಲೋಕಾರ್ಪಣೆಗೊಂಡಿದ್ದರೂ ಇಂದಿಗೂ ನಾಡಿನ ಪ್ರತಿ ಅಭಿಮಾನಿಯೂ ಅಭಿ ಮಾನ್ ಸ್ಟುಡಿಯೋದಲ್ಲಿಯೇ ಡಾ.ವಿಷ್ಣು ಇರುವಿಕೆಯನ್ನು ನಂಬಿದ್ದಾರೆ.
ಅದಕ್ಕೆ ಸಾಕ್ಷಿ ಎನ್ನುವಂತೆ ಕಳೆದ ವರ್ಷ ಡಾ.ವಿಷ್ಣು ಕಟೌಟ್ ಜಾತ್ರೆಗೆ ಸುಮಾರು ಎರಡೂವರೆ ಲಕ್ಷ ಜನ ಅಭಿಮಾನ್ ಸ್ಟುಡಿಯೋಗೆ ಬಂದಿದ್ದರೆಂಬುದು ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ಅವರ ಪ್ರತಿ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಯ ದಿನಗಳಂದು ಇಂದಿಗೂ ಐವತ್ತು
ಸಾವಿರಕ್ಕೂ ಹೆಚ್ಚು ಜನ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಗೆ ಬಂದು ದರ್ಶನಮಾಡಿ ಹೋಗುತ್ತಿzರೆ. ಸ್ಮಾರಕ ಎ ಇರಲಿ, ಪುಣ್ಯಭೂಮಿ ಮಾತ್ರ ಅಂತ್ಯ ಸಂಸ್ಕಾರಗೊಂಡ ಜಾಗದಲ್ಲಿಯೇ ಇರಲಿ ಎಂಬ ಮನೋಭಾವ ಪ್ರತಿ ಅಭಿಮಾನಿಯದು.
ತನ್ನ ನೆಚ್ಚಿನ ನಾಯಕ ಪುಣ್ಯಭೂಮಿಯನ್ನು ಸ್ಪರ್ಶಿಸಲು ಅವಕಾಶ ನೀಡುತ್ತಿಲ್ಲ ದಿ.ಬಾಲಕೃಷ್ಣ ಅವರ ಕುಟುಂಬ. ಈವರೆಗೂ ಅಭಿಮಾನಿಗಳ ನಿತ್ಯದ ದರ್ಶನಕ್ಕೆ, ಹುಟ್ಟುಹಬ್ಬ, ಪುಣ್ಯಸ್ಮರಣೆಗೆ ಅವಕಾಶ ಮಾಡಿಕೊಡುತ್ತಿದ್ದ ದಿ.ಬಾಲಕೃಷ್ಣ ಅವರ ಕುಟುಂಬ ಇದೀಗ ಅನುಮಾನಾಸ್ಪದ ರೀತಿಯಲ್ಲಿ
ವರ್ತಿಸುತ್ತಿದೆ. ಪ್ರತಿನಿತ್ಯ ಐನೂರಕ್ಕೂ ಹೆಚ್ಚು ಜನ ದರ್ಶನಕ್ಕಾಗಿ ಬರುತ್ತಿzರೆ. ಆದರೆ ಅವರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕಳೆದ ಪುಣ್ಯಸ್ಮರಣೆ ದಿನದಂದು ಹೂವಿನ ಅಲಂಕಾರ ಮಾಡಲೂ ಅವಕಾಶ ನೀಡಿರಲಿಲ್ಲ.
ತಿಂಗಳ ಹಿಂದೆಯಷ್ಟೇ ಡಾ.ವಿಷ್ಣುವರ್ಧನ್ ಅವರ ತಲೆಭಾಗದಲ್ಲಿ ಇಟ್ಟಿದ್ದ ಅವರ ಫೋಟೋವನ್ನು ಮಟಮಟ ಮಧ್ಯಾಹ್ನವೇ ಎತ್ತಿ ಆಚೆಗಿಟ್ಟು ಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ದಿ.ಬಾಲಕೃಷ್ಣ ಅವರ ಮಕ್ಕಳ ನಡೆಯನ್ನು ನಾವು ಅನುಮಾನಿಸುವಂತಾಗಿದೆ. ಅವರು ಈ ಅಭಿಮಾನ್ ಸ್ಟುಡಿಯೋ ವನ್ನು ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸುವ ಹುನ್ನಾರ ನಡೆಸುತ್ತಿzರೆಂದು ಅಭಿಮಾನಿ ವಲಯದಲ್ಲಿ ಚರ್ಚೆಗಳಾಗುತ್ತಿವೆ. ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡುವ ಉದ್ದೇಶದಿಂದ ದಿನಕ್ಕೊಂದು ಕ್ಯಾತೆ ತಗೆಯುತ್ತಿದ್ದಾರೆ ಬಾಲಣ್ಣ ಕುಟುಂಬ.
ಸರಕಾರಕ್ಕೆ ಈ ಎಲ್ಲ ವಿಷಯ ಗೊತ್ತಿದ್ದರೂ, ಅಭಿಮಾನಿಗಳು ಈಗಾಗಲೇ ಗಮನಕ್ಕೆ ತಂದಿದ್ದರೂ, ಸರಕಾರ ಇನ್ನೂ ಸುಮ್ಮನಿರುವುದು ನಿಜಕ್ಕೂ ಆತಂಕದ ವಿಷಯ. ರಾಜಧಾನಿಯಲ್ಲಿ ಪರಭಾಷಿಕರ ಭವನಗಳಿಗೆ, ಕೈಗಾರಿಕೆಗಳಿಗೆ, ವಿವಿದೋದ್ದೇಶಗಳಿಗೆ ಎಕರೆಗಟ್ಟಲೆ ಜಮೀನನ್ನು ಧಾರೆಯೆರೆಯ ತ್ತಿರುವ ಸರಕಾರಗಳು ಕನ್ನಡದ ಮೇರುನಟನ ಸಮಾಧಿಗೆ ಬೇಕಾದ ಅಂಗೈಯಗಲ ಜಾಗ ನೀಡಲು ಸೋತಿರುವುದು ನಿಜಕ್ಕೂ ನೋವಿನ ವಿಷಯ.
ಒಂದು ವೇಳೆ ಒಬ್ಬ ನಟನಿಗೆ ಬೆಂಗಳೂರು, ಮೈಸೂರು ಎರಡೆರಡು ಕಡೆ ಭೂಮಿ ಕೊಡುವುದು ಕಷ್ಟವೆನ್ನುವುದಾದರೆ, ಬೆಂಗಳೂರಿ ನಲ್ಲಿರುವ
ಡಾ.ವಿಷ್ಣುವರ್ಧನ್ ಅವರ ಸಮಾಧಿ ಇರುವ ಭೂಮಿಯ ವೆಚ್ಚವನ್ನು ಅಭಿಮಾನಿ ಗಳಾದ ನಾವೇ ಸರಕಾರದ ಖಜಾನೆಗೆ ಅಥವಾ ದಿ.ಬಾಲಕೃಷ್ಣ ಅವರ ಕುಟುಂಬದ ಖಾತೆಗೆ ನೀಡಲು ಸಿದ್ದರಿದ್ದೇವೆ.
ಹೇಳಿ ಕೇಳಿ ಅಭಿಮಾನಿಗಳು ಭಾವುಕರು. ಒಂದು ವೇಳೆ ದಿ.ಬಾಲಕೃಷ್ಣ ಅವರ ಕುಟುಂಬದವರು ದುರುದ್ದೇಶ ದಿಂದ ಸಮಾಧಿ ಸ್ಥಳವನ್ನು ತೆರವು ಗೊಳಿಸಿದರೆ ಮುಂದೆ ಆಗುವ ಜೀವಹಾನಿಗೆ ಸರ್ಕಾರವೇ ಹೊಣೆ ಆಗಬೇಕಾಗುತ್ತದೆಯಲ್ಲವೇ? ಅದಕ್ಕೂ ಮುಖ್ಯವಾಗಿ ಕಲಾವಿದರ ರಕ್ಷಣೆ ಸರ್ಕಾರದ
ಆದ್ಯತೆಯ ಲ್ಲವೇ? ಒಂದು ಸಮಾಧಿ ಉಳಿಸಿಕೊಳ್ಳುವು ದಕ್ಕಾಗಿ ಈ ನಾಡಿನಲ್ಲಿ ಹೋರಾಟಗಳು ಆಗಬೇಕೆ? ಅಷ್ಟು ಅಂತಃಕರಣಹೀನ ವ್ಯವಸ್ಥೆಯಲ್ಲಿ ನಾವಿದ್ದೇವೆಯೇ? ಶ್ರೀರಾಮಚಂದ್ರನ ವನವಾಸದ ಅವಽ ಹದಿನಾಲ್ಕು ವರ್ಷ. ಡಾ.ವಿಷ್ಣುವರ್ಧನ್ ಅವರು ನಮ್ಮನ್ನಗಲಿಯೂ ಹದಿನಾಲ್ಕು ವರ್ಷ. ಇನ್ನಾದರೂ ಶ್ರೀರಾಮನಿಗೆ ರಾಜ್ಯ ದಕ್ಕಿದಂತೆ, ಡಾ.ವಿಷ್ಣುವರ್ಧನ್ ಅವರಿಗೆ ಸಮಾಧಿಯ ನ್ಯಾಯ ದಕ್ಕಲಿ.
(ಲೇಖಕರು ವಿಷ್ಣು ಸೇನೆ ಅಧ್ಯಕ್ಷರು ಹಾಗೂ ಪ್ರಕಾಶಕರು)