ವೀಕೆಂಡ್ ವಿತ್ ಮೋಹನ್
camohanbn@gmail.com
ದ್ವಾರಕದಲ್ಲಿರುವ ದ್ವೀಪಗಳು ತನಗೆ ಸೇರಬೇಕೆಂದು ಗುಜರಾತ್ ವಕ್ಫ್ ಮಂಡಳಿ ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಿತ್ತು. ಅದನ್ನು ತಿರಸ್ಕರಿಸಿದ ನ್ಯಾಯಾಲಯ, ಕೃಷ್ಣನಗರಿಯಲ್ಲಿನ ದ್ವೀಪಕ್ಕೂ ವಕ್ ಮಂಡಳಿಗೂ ಎಲ್ಲಿಯ ಸಂಬಂಧವೆಂದು ಛೀಮಾರಿ ಹಾಕಿತ್ತು.
ತಮಿಳುನಾಡಿನ ಮುಲ್ಲಿಕಾಪುರ ಗ್ರಾಮದ ರಾಜಗೋಪಾಲ್ ಎಂಬುವವರು ತಮ್ಮ ಒಂದು ಎಕರೆ ಎರಡು ಗುಂಟೆ ಜಮೀನನ್ನು ಮಾರಲು ಬಯಸಿದರು. ಅದರ ನಿಮಿತ್ತ ಉಪನೋಂದಣಿ ಕಚೇರಿಗೆ ಭೇಟಿಯಿತ್ತು ಜಮೀನಿನ ಪತ್ರಗಳನ್ನು ಅವಲೋಕಿಸಿದಾಗ, ‘ಮಾಲೀಕರು- ತಮಿಳುನಾಡಿನ ವಕ್ ಮಂಡಳಿ’ ಎಂದು ಅದರಲ್ಲಿ ನಮೂದಾಗಿದ್ದು ಕಂಡು ಅವರಿಗೆ ದಿಗ್ಭ್ರಮೆ ಯಾಯಿತು.
ತಲೆಮಾರುಗಳಿಂದ ಕೃಷಿಕಾರ್ಯ ನಡೆಸಿಕೊಂಡು ಬಂದಂಥ ಜಮೀನಿನ ಮಾಲೀಕ ತಾವಲ್ಲ ಎಂದಾಗ ಅಷ್ಟು ಸುಲಭವಾಗಿ ಸಹಿಸಿಕೊಳ್ಳಲಾದೀತೇ? 250 ಪುಟಗಳ ದಾಖಲೆ ತೋರಿಸಿದ ಉಪನೋಂದಣಾಧಿಕಾರಿ, ಸದರಿ ಸ್ವತ್ತನ್ನು ಮಾರಲು ಕೇಂದ್ರ ವಕ್ಫ್ ಮಂಡಳಿಯ ಅನುಮತಿ ಬೇಕಿರುವು ದರಿಂದ ಅಲ್ಲಿಂದ ‘ನಿರಾಕ್ಷೇಪಣಾ ಪತ್ರ’ ತರುವಂತೆ ಸೂಚಿಸಿದರು. ರಾಜಗೋಪಾಲ್ ಈ ಘಟನೆಯನ್ನು ಊರಿನ ಜನರಿಗೆ ವಿವರಿಸಿದಾಗ, ಇಡೀ ಹಳ್ಳಿಯೇ ವಕ್ ಮಂಡಳಿಯ ಆಸ್ತಿಯಾಗಿರುವುದು ಕಂಡುಬಂತು. ನೂರಾರು ವರ್ಷಗಳಿಂದ ಅನು ಭೋಗಿಸುತ್ತಿರುವ ತಮ್ಮ ಹಳ್ಳಿ ಅದ್ಯಾವಾಗ ವಕ್ಫ್ ಮಂಡಳಿಯ ಆಸ್ತಿಯಾಯಿತೆಂಬ ಆತಂಕ ಎಲ್ಲರಲ್ಲೂ ಮೂಡಿತು.
ತಮಿಳುನಾಡಿನ ವಕ್ಫ್ ಮಂಡಳಿಯು ತನ್ನ ಆಸ್ತಿಯನ್ನು ಹಲವರು ಕಬಳಿಸಿದ್ದು, ಅವುಗಳ ಮಾರಾಟ ನೋಂದಣಿ ಮಾಡಬಾ ರದು ಎಂದು ರಾಜ್ಯಾದ್ಯಂತದ ಹಲವು ಉಪ ನೋಂದಣಿ ಅಧಿಕಾರಿಗಳಿಗೆ ಸೂಚಿಸಿತ್ತು. ಈ ಸೂಚನೆಯ ಭಾಗವಾಗಿ ರಾಜ ಗೋಪಾಲರ ಜಮೀನು ಮಾರಾಟ ಸಾಧ್ಯವಾಗಲಿಲ್ಲ. ವಕ್ಫ್ ಮಂಡಳಿಯ ಈ ಸೂಚನೆ ಬಹಳ ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದು, ಸಿಕ್ಕಸಿಕ್ಕಲ್ಲೆಲ್ಲ ತನ್ನ ಆಸ್ತಿಯ ವಿವರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸುತ್ತಿದೆ. ತಮಾಷೆಯೆಂದರೆ, ತಿರುಚಿನಾಪಳ್ಳಿ ಜಿಲ್ಲೆಯ ‘ತಿರುಚೆಂದುರೈ’ ಹಳ್ಳಿಯ ಆಸ್ತಿಯ ವಿಷಯದಲ್ಲಿ, ಗ್ರಾಮಸ್ಥರ ಆಸ್ತಿಯ ಜತೆಜತೆಗೆ 1500 ವರ್ಷ ದಷ್ಟು ಹಳೆಯ ಹಿಂದೂ ದೇವಸ್ಥಾನವನ್ನೂ ವಕ್ ಮಂಡಳಿ ತನ್ನ ಸ್ವತ್ತೆಂದು ಘೋಷಿಸಿಕೊಂಡಿದೆ.
ಅಷ್ಟೇ ಅಲ್ಲ, ತಿರುಪ್ಪೂರ್ ಜಿಲ್ಲೆಯ ಕೆಲವು ಹಳ್ಳಿಗಳ ರೈತರ ಆಸ್ತಿಯೂ ವಕ್ ಮಂಡಳಿಯ ಹೆಸರಲ್ಲಿರುವ ವಿಷಯ ಬೆಳಕಿಗೆ ಬಂದಿದೆ. ತನಿಖೆ ನಡೆಸುತ್ತೇವೆಂದು ತಿಪ್ಪೆ ಸಾರಿಸುವ ಹೇಳಿಕೆ ನೀಡಿರುವ ತಮಿಳುನಾಡು ಸರಕಾರ, ಅಲ್ಪ ಸಂಖ್ಯಾತರ ಓಲೈಕೆಯ ನೆಪದಲ್ಲಿ ಏನನ್ನೂ ಮಾಡುವುದಿಲ್ಲ ಎಂಬುದು ನಿಜ.
ಇಸ್ಲಾಮಿನ ಪ್ರಕಾರ ಆಸ್ತಿಯೊಂದು ಒಮ್ಮೆ ‘ವಕ್ಫ್’ನ ಪಾಲಾದರೆ ಅದು ಅಲ್ಲಾಹುವಿನ ಆಸ್ತಿ ಎಂದರ್ಥ. ಷರಿಯಾ ಕಾನೂನಿನ ಪ್ರಕಾರ, ಒಮ್ಮೆ ಅಲ್ಲಾಹುವಿಗೆ ನೀಡಿದ ಆಸ್ತಿಯನ್ನು ವಾಪಸ್ ಕೇಳುವಂತಿಲ್ಲ. ಆ ಜಾಗದಲ್ಲಿ ಪ್ರಾರ್ಥನೆ ಅಥವಾ ಸೇವಾ ಚಟುವಟಿಕೆಗಳನ್ನಷ್ಟೇ ಮಾಡಬಹುದು. ವಕ್ಫ್ ಇತಿಹಾಸ ಇಂದು-ನೆನ್ನೆಯದಲ್ಲ, ದೆಹಲಿಯ ಸುಲ್ತಾನರ ಕಾಲದಿಂದ ಶುರುವಾದ ಪದ್ಧತಿಯಿದು. ಅಂದಿನ ಸುಲ್ತಾನರು ೨ ಹಳ್ಳಿಗಳನ್ನು ಜಾಮಿಯಾ ಮಸೀದಿಗೆಂದು ನೀಡುತ್ತಾರೆ; ಅಲ್ಲಿಂದ ಮುಂದೆ ಆಳಿದ ದೆಹಲಿಯ ಸುಲ್ತಾನರು ತಮ್ಮ ಅವಧಿಯಲ್ಲಿ ಹಲವು ಜಾಗಗಳನ್ನು ವಕ್ ಹೆಸರಿನಲ್ಲಿ ನೀಡಿದರು.
19ನೇ ಶತಮಾನದಲ್ಲಿ ಬ್ರಿಟಿಷರ ಅವಧಿಯಲ್ಲಿ ವಕ್ ಆಸ್ತಿಯ ವಿವಾದವೊಂದು ಲಂಡನ್ನಿನ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ, ನಾಲ್ವರು ಬ್ರಿಟಿಷ್ ನ್ಯಾಯಾಧೀಶರು ‘ವಕ್ಫ್’ ಅನ್ನು ‘ಅತ್ಯಂತ ಕೆಟ್ಟ ಮತ್ತು ವಿನಾಶಕಾರಿ’ ಅಂಶವೆಂದು ಹೇಳಿದ್ದರು. ಆದರೆ ಬ್ರಿಟಿಷ್ ನ್ಯಾಯಾಧೀಶರ ಆದೇಶವನ್ನು ಮುಸಲ್ಮಾನರು ಒಪ್ಪಲಿಲ್ಲ, ಅಂದು 1913ರ ಕಾಯ್ದೆಯೊಂದು ವಕ್ಫ್ ಮಂಡಳಿಯನ್ನು ರಕ್ಷಿಸಿತ್ತು. ಅಂದಿನಿಂದ ಇಂದಿನವರೆಗೂ ವಕ್ ಹೆಸರಿನಲ್ಲಿ ನಡೆಯುತ್ತಿರುವ ಭೂಕಬಳಿಕೆ ನಿಯಂತ್ರಿಸಲು ಯಾವ ಕ್ರಮಗಳನ್ನೂ ಕೈಗೊಂಡಿಲ್ಲ.
ಭಾರತೀಯ ರೇಲ್ವೆ ಮತ್ತು ಸೇನಾ ಸಚಿವಾಲಯದ ನಂತರ ವಕ್ ಮಂಡಳಿಯು ಭಾರತದಲ್ಲಿ ಅತಿಹೆಚ್ಚು ಆಸ್ತಿ ಹೊಂದಿದೆ. ಉತ್ತರ ಪ್ರದೇಶವೊಂದರಲ್ಲೇ ಸುಮಾರು 162229ರಷ್ಟು ಸ್ವತ್ತುಗಳು ವಕ್ ಮಂಡಳಿಯ ವಶದಲ್ಲಿದ್ದು, ಇದರಲ್ಲಿ ಸುಮಾರು ೧,೫೦,೦೦೦ದಷ್ಟು ಸುನ್ನಿ ವಕ್ಫ್ ಮಂಡಳಿಯ ವಶದಲ್ಲಿದ್ದರೆ ಮಿಕ್ಕವು ಶಿಯಾ ವಕ್ಫ್ ಮಂಡಳಿಯ ಸುಫರ್ದಿನಲ್ಲಿವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಸರಕಾರ ರಾಜ್ಯದ ವಕ್ ಮಂಡಳಿಯ ಆಸ್ತಿಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಈಗಾಗಲೇ ಆದೇಶಿಸಿದೆ.
ಉತ್ತರ ಪ್ರದೇಶದ ಕಂದಾಯ ಇಲಾಖೆಯು ಕೃಷಿಗೆ ಯೋಗ್ಯವಲ್ಲದ ಸಾವಿರಾರು ಎಕರೆ ಭೂಮಿಯನ್ನು 1989ರಲ್ಲಿ ವಕ್ಫ್ ಮಂಡಳಿಯ ಹೆಸರಲ್ಲಿ ನೋಂದಣಿ ಮಾಡಿತ್ತು. ಅಷ್ಟೂ ನೋಂದಣಿಯ ಬಗ್ಗೆ ತನಿಖೆ ನಡೆಸಿ ಕಡತಗಳನ್ನು ಸರಿಪಡಿಸಬೇಕೆಂದು
ಯೋಗಿ ಸರಕಾರ ಸೂಚಿಸಿದೆ. ಉತ್ತರ ಪ್ರದೇಶದಲ್ಲಿ 1960ರಲ್ಲಿ ಮತ್ತೊಂದು ವಕ್ ಕಾಯ್ದೆಯಿತ್ತು. ಇದನ್ನು ದುರುಪಯೋಗ ಪಡಿಸಿಕೊಂಡು ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸದೆ ಸಾವಿರಾರು ಎಕರೆ ಭೂಮಿಯನ್ನು ಕಬಳಿಸಿರುವ ಶಂಕೆ ವ್ಯಕ್ತವಾಗಿದೆ.
ಓಲೈಕೆ ರಾಜಕಾರಣದ ಪಿತಾಮಹ ನೆಹರು ಅವರು 1954ರಲ್ಲಿ ವಕ್ಫ್ ಕಾಯ್ದೆಯನ್ನು ಕೇಂದ್ರೀಕೃತಗೊಳಿಸಿ, ರಾಜ್ಯಗಳ ವಕ್ಫ್ ಮಂಡಳಿಗಳು ಕೇಂದ್ರ ವಕ್ಫ್ ಮಂಡಳಿಯ ಅಧೀನದಲ್ಲಿ ಕೆಲಸ ಮಾಡಬೇಕೆಂಬ ಕಾಯ್ದೆಯನ್ನು ತಂದರು. 1995ರಲ್ಲಿ ವಕ್ಫ್ ಕಾಯ್ದೆಗೆ ಮತ್ತಷ್ಟು ತಿದ್ದುಪಡಿ ಮಾಡಿದ ಕಾಂಗ್ರೆಸ್ ಸರಕಾರ ವಕ್ಫ್ ಮಂಡಳಿಗೆ ‘ಸೂಪರ್ ಪವರ್’ ನೀಡುವ ಮೂಲಕ ಮುಸಲ್ಮಾನರ ಓಲೈಕೆಯನ್ನು ಉತ್ತುಂಗಕ್ಕೇರಿಸಿತು.
ಈ ಕಾಯ್ದೆಯನ್ವಯ, ವಕ್ಫ್ ಮಂಡಳಿಯ ಹೆಸರಲ್ಲಿ ಭೂಮಿ ಕಳೆದುಕೊಂಡ ವ್ಯಕ್ತಿ ದಾವೆ ಹೂಡಲು ಸಿವಿಲ್ ನ್ಯಾಯಾಲಯಕ್ಕೆ
ಹೋಗುವಂತಿಲ್ಲ, ಈ ಕಾಯ್ದೆಯಡಿ ಸೃಷ್ಟಿಯಾಗಿರುವ ವಕ್ಫ್ ನ್ಯಾಯಾಲಯಕ್ಕೇ ಹೋಗಬೇಕು. ಅಲ್ಲಿಯೇ ತನ್ನ ಆಸ್ತಿಯ
ದಾಖಲೆ ತೋರಿಸಿ ಅದು ತನ್ನದೆಂದು ವಾದಿಸಬೇಕು. ಎಂಥ ವಿಪರ್ಯಾಸ ನೋಡಿ! ಭೂಮಿಯನ್ನು ಕಬಳಿಸಿದವರ ಬಳಿಯೇ ಹೋಗಿ ‘ಇದು ನನ್ನ ಭೂಮಿ’ ಎಂದು ವಾದಿಸಿದರೆ ಆತನಿಗೆ ನ್ಯಾಯ ಸಿಗುವುದೇ? ಷರಿಯಾ ಕಾನೂನಿನನ್ವಯ ಜಾರಿಗೆ ತಂದಿರುವ ಈ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಬೇಕಿದೆ.
ಬಹುಸಂಖ್ಯಾತರ ದೇಗುಲಗಳ ಬಳಿಯೂ ಇಲ್ಲದಷ್ಟು ಆಸ್ತಿಯಿಂದು ಅಲ್ಪಸಂಖ್ಯಾತರ ಕಲ್ಯಾಣದ ಹೆಸರಿನಲ್ಲಿ ವಕ್ ಮಂಡಳಿಯ ಬಳಿಯಿದೆ. ಆದರೆ, ಅಲ್ಪಸಂಖ್ಯಾತರು ಭಾರತದಲ್ಲಿ ಸುರಕ್ಷಿತವಾಗಿಲ್ಲವೆಂದು ಪುಂಗಿಯೂದುವ ಜಾತ್ಯತೀತವಾದಿಗಳು ನಿದ್ರಿಸು ತ್ತಿದ್ದಾರೆ. ಲೆಫ್ಟಿಸ್ಟುಗಳಿಗೆ ಜೈನರು, ಪಾರ್ಸಿಗಳು, ಸಿಖ್ಖರು ಅಲ್ಪಸಂಖ್ಯಾತರಾಗಿ ಕಾಣುವುದಿಲ್ಲ, ಹಾಗೆ ಕಾಣುವುದು
ಮುಸಲ್ಮಾನರು ಮಾತ್ರವೇ! ಜೈನರಿಗಿಲ್ಲದ ವಿಶೇಷ ಸವಲತ್ತುಗಳು ಮುಸಲ್ಮಾನರಿಗೆ ಮಾತ್ರ ಏಕೆ? ಪಾರ್ಸಿಗಳಿಗೆ,
ಸಿಖ್ಖರಿಗೆ ಇಲ್ಲದ ವಕ್ಫ್ ಮಾದರಿಯ ಮಂಡಳಿ ಕೇವಲ ಮುಸಲ್ಮಾನರಿಗೆ ಏಕೆ? ಚಾಮರಾಜಪೇಟೆಯ ಮೈದಾನದ ವಿಷಯ ದಲ್ಲೂ ಅಷ್ಟೇ- ಇದು ವಕ್ ಮಂಡಳಿಯ ಆಸ್ತಿಯೆಂಬುದಕ್ಕೆ ದಾಖಲೆಯಿಲ್ಲ.
ಆದರೆ, ೧೮೫೦ರಿಂದ ಅದು ವಕ್ಫ್ ಮಂಡಳಿಯ ಆಸ್ತಿಯಾಗಿದ್ದರಿಂದ ಅದು ಅವರಿಗೆ ಸೇರಿದ್ದಂತೆ. ಒಮ್ಮೆ ವಕ್ಫ್ ನ ಆಸ್ತಿಯಾದರೆ, ಆಜೀವಪರ್ಯಂತ ವಕ್ಫ್ ಮಂಡಳಿಯ ವಶದಲ್ಲಿರುತ್ತದೆ ಯೆಂಬುದು ಮುಸಲ್ಮಾನರ ವಾದ. ಇತ್ತೀಚೆಗೆ ಗುಜರಾತ್ ವಕ್ಫ್ ಮಂಡಳಿ, ಸೂರತ್ ಪಾಲಿಕೆಯ ಕಟ್ಟಡ ತನಗೆ ಸೇರಬೇಕೆಂದು ಹೇಳಿತ್ತು. ಈ ಹಿಂದೆ ಮೊಘಲರ ಕಾಲದಲ್ಲಿ ಆ ಜಾಗ ಹಜ್ ಯಾತ್ರಿಗಳ ವಿಶ್ರಾಂತಿ ಸ್ಥಳವಾಗಿತ್ತಂತೆ. ಬ್ರಿಟಿಷರ ಆಡಳಿತಾವಧಿಯಲ್ಲಿ ಆ ಜಾಗವು ಬ್ರಿಟಿಷ್ ಸರಕಾರದ ವಶಕ್ಕೆ ಹೋಯಿತು. ಸ್ವಾತಂತ್ರ್ಯಾನಂತರ ಅದು ಭಾರತ ಸರಕಾರಕ್ಕೆ ಸೇರಿತ್ತು.
ತದನಂತರ ಕಂದಾಯ ಇಲಾಖೆಯ ದಾಖಲೆಗಳು ತಿದ್ದುಪಡಿಯಾಗದ ಕಾರಣ, ಮೊಘಲರ ಕಾಲದಲ್ಲಿ ಈ ಜಾಗ ‘ವಕ್ಫ್’ ಆದ ಕಾರಣ, ಷರಿಯಾ ಕಾನೂನಿನಡಿಯಲ್ಲಿ ಅದು ವಕ್ಫ್ ಮಂಡಳಿಗೆ ಸೇರಬೇಕಂತೆ. ಮೊಘಲರನ್ನು ಒದ್ದು ಓಡಿಸಿದ ಶಿವಾಜಿ ಮಹಾರಾಜರ ಕಾಲದ ಆಸ್ತಿಗಳಿಗೆ ಮತ್ತು ಹಿಂದೂ ದೇವಸ್ಥಾನದ ಮಂಡಳಿಗಳಿಗೆ ಇಲ್ಲದ ಹಕ್ಕು, ಭಾರತದ ಮೇಲೆ ದಾಳಿ ಮಾಡಿ ವಶಪಡಿಸಿಕೊಂಡಂಥ ಮೊಘಲ್ ಸಂತಾನಕ್ಕಿದೆಯಂತೆ!
ಮತ್ತೊಂದು ವಿಚಿತ್ರ ಸಂಗತಿ ನೋಡಿ. ದ್ವಾರಕೆಯಲ್ಲಿರುವ ದ್ವೀಪಗಳು ತನಗೆ ಸೇರಬೇಕೆಂದು ಗುಜರಾತ್ ವಕ್ಫ್ ಮಂಡಳಿ
ಅಲ್ಲಿನ ಉಚ್ಚ ನ್ಯಾಯಾಲಯದಲ್ಲಿ ಅಹವಾಲು ಸಲ್ಲಿಸಿತ್ತು. ಅದನ್ನು ತಿರಸ್ಕರಿಸಿದ ನ್ಯಾಯಾಲಯ, ಕೃಷ್ಣನಗರಿಯಲ್ಲಿನ ದ್ವೀಪಕ್ಕೂ ವಕ್ ಮಂಡಳಿಗೂ ಎಲ್ಲಿಯ ಸಂಬಂಧವೆಂದು ಛೀಮಾರಿ ಹಾಕಿತ್ತು. ಅಪಾರ್ಟ್ಮೆಂಟ್ ಮಾಲೀಕರ ಸಂಘಕ್ಕೆ
ತಿಳಿಯದಂತೆ, ವ್ಯಕ್ತಿಯೊಬ್ಬ ಅಪಾರ್ಟ್ಮೆಂಟ್ನಲ್ಲಿರುವ ತನ್ನ ಮನೆಯನ್ನು ವಕ್ ಮಂಡಳಿಗೆ ನೀಡಬಹುದು. ಸೂರತ್
ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಇಂಥದೇ ಘಟನೆ ನಡೆದು, ವಕ್ಫ್ ಮಂಡಳಿಗೆ ನೀಡಲ್ಪಟ್ಟ ಮನೆಯೊಂದರಲ್ಲಿ
ಮುಸಲ್ಮಾನರು ನಮಾಜ್ ಮಾಡಲು ಶುರುಮಾಡಿದ್ದರು.
ಭಾರತ ಜಾತ್ಯತೀತ ದೇಶವೆಂದು ಹೇಳಿದ ಮೇಲೆ ಸರ್ವ ಧರ್ಮದವರಿಗೂ ಸಮಪಾಲಿರಬೇಕು; ಕೇವಲ ಒಂದು ಧರ್ಮಕ್ಕೆ ಈ ಮಟ್ಟದ ಸವಲತ್ತುಗಳನ್ನು ಕೊಡುವುದು ಸಂವಿಧಾನದಲ್ಲಿರುವ ಜಾತ್ಯತೀತತೆಗೆ ಮಾಡಿದ ಬಹುದೊಡ್ಡ ಅವಮಾನ. ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆ. ಅಲ್ಪಸಂಖ್ಯಾತರೆಂಬ ಹಣೆಪಟ್ಟಿ ಹೊಂದಿರುವ ಮುಸಲ್ಮಾನರ ಓಲೈಕೆಯ ನೆಪದಲ್ಲಿ ಸಂವಿಧಾನ-ವಿರೋಧಿ ಕಾನೂನೊಂದನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ಗೆ ಸಲ್ಲಬೇಕು. ಇದೇ ವಿಷಯವಾಗಿ ಅಶ್ವಿನ್ ಕುಮಾರ್ ಉಪಾಧ್ಯಾಯ್ ಎಂಬ ವಕೀಲರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಅಲ್ಲಿಸಿ, ವಕ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದರು.
ಇದನ್ನು ಪುರಸ್ಕರಿಸಿದ ನ್ಯಾಯಾಲಯ, ವಕ್ಫ್ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವದ ಕುರಿತು ವರದಿ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿದೆ. ಇಸ್ಲಾಮಿಕ್ ರಾಷ್ಟ್ರವೆಂದು ಘೋಷಿಸಿಕೊಂಡಿರುವ ಟರ್ಕಿ, ಇರಾಕ್, ಲಿಬಿಯಾ, ಈಜಿಪ್ಟ್, ಸೂಡಾನ್, ಜೋರ್ಡಾನ್ ದೇಶಗಳಲ್ಲೇ ಇಲ್ಲದ ವಕ್ಫ್ ಪರಿಕಲ್ಪನೆ ಭಾರತದಲ್ಲಿ ಮಾತ್ರ ಏಕೆ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ.
ಹಿಂದುತ್ವದ ಬಗ್ಗೆ ಕಿಡಿಕಾರುವ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ರಿಂದ ಅಲ್ಲಿನ ರೈತರಿಗೆ ನ್ಯಾಯ ಸಿಗುವ ಲಕ್ಷಣ ಕಾಣುತ್ತಿಲ್ಲ. ಅಲ್ಪಸಂಖ್ಯಾತರ ಓಲೈಕೆಯಲ್ಲೇ ನಿರತವಾಗಿರುವ ರಾಜ್ಯವದು. ಕ್ರಿಶ್ಚಿಯನ್ ಮಿಷನರಿಗಳ ಉಪಟಳಕ್ಕೆ ಸಿಲುಕಿ,
ಲಕ್ಷಾಂತರ ಮಂದಿ ಮತಾಂತರವಾಗಿರುವ ರಾಜ್ಯವದು. ದಕ್ಷಿಣ ಭಾರತದಲ್ಲಿ ಅತಿಹೆಚ್ಚು ದೇವಸ್ಥಾನಗಳನ್ನು ಹೊಂದಿದ್ದರೂ, ಪೆರಿಯಾರ್ನ ಟೊಳ್ಳು ಚಳವಳಿಯ ಹಿಂದೆ ಬಿದ್ದು, ದೇವರನ್ನು ನಂಬದ ಪಕ್ಷಕ್ಕೆ ಅಲ್ಲಿನ ಜನ ಮಣೆ ಹಾಕುತ್ತ ಬಂದಿದ್ದರ ಫಲ ವನ್ನು ಇಂದು ತಿನ್ನಬೇಕಾಗಿದೆ.
ಕರ್ನಾಟಕದಲ್ಲಿ ವಕ್ಫ್ ಹೆಸರಿನಲ್ಲಿ ಸಾವಿರಾರು ಎಕರೆ ಭೂಮಿಯನ್ನು ಕಾಂಗ್ರೆಸ್ ನಾಯಕರು ನುಂಗಿರುವ ವರದಿಯನ್ನು
ಅನ್ವರ್ ಮಾಣಿಪ್ಪಾಡಿ ಸಮಿತಿ ನೀಡಿತ್ತು. ೨೦೧೨ರಲ್ಲಿ ನೀಡಿದ್ದ ಆ ವರದಿಗೆ ಕಿಮ್ಮತ್ತು ನೀಡದೆ ಕಪಾಟಿನಲ್ಲಿ ಇಡಲಾಗಿತ್ತು.
ಈಗ ಅದರ ಅನುಷ್ಠಾನಕ್ಕೆ ರಾಜ್ಯ ಸರಕಾರ ಸಿದ್ಧವಾಗಿದೆ. ಕರ್ನಾಟಕದಲ್ಲೂ ವಕ್ ಹೆಸರಿನಲ್ಲಿ ಕಬಳಿಕೆಯಾಗಿರುವ ಆಸ್ತಿಗಳ ಸಮೀಕ್ಷೆ ನಡೆಯುವ ಸಾಧ್ಯತೆಯಿದೆ. ಉತ್ತರ ಪ್ರದೇಶದಲ್ಲಿ ಮದರಸಾಗಳ ನಿಯಂತ್ರಣದ ನಂತರ ಸರಕಾರ ವಕ್ಫ್ ಆಸ್ತಿಯ ಸಮೀಕ್ಷೆಗೆ ಚಾಲನೆ ನೀಡಿದ್ದು, ಅದು ಭೂಗಳ್ಳರ ನಿದ್ರೆ ಕೆಡಿಸಿದೆ.
ಒಟ್ಟಾರೆ ಹೇಳುವುದಾದರೆ, ಬಹುಸಂಖ್ಯಾತ ಹಿಂದೂಗಳ ರಾಷ್ಟ್ರದಲ್ಲಿ ಅಲ್ಪಸಂಖ್ಯಾತರೆಂಬ ರಕ್ಷಾಕವಚದಡಿಯಲ್ಲಿ ಲಕ್ಷಾಂತರ ಎಕರೆ ಭೂಮಿಯನ್ನು ಕಬಳಿಸಿದ ಕೀರ್ತಿ ವಕ್ಫ್ ಮಂಡಳಿಗೆ ಸೇರುತ್ತದೆ.