ವ್ಯಕ್ತಿತ್ವ ವಿಕಸನ
ಪರಿಣಿತ ರವಿ
parinithabravi@gmail.com
ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ|
ಚಿನ್ನದಾತುರಕಿಂತ ಹೆಣ್ಣುಗಂಡೊಲವು||
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ|
ತಿನ್ನುವುದಾತ್ಮವನೇ- ಮಂಕುತಿಮ್ಮ||
ಅನ್ನದ ಬಯಕೆಗಿಂತ ಚಿನ್ನದ ಮೇಲಿನ ಆಸೆಯ ತೀವ್ರತೆ ಹೆಚ್ಚು. ಅದಕ್ಕಿಂತ ತೀಕ್ಷ್ಣ ವಾದುದು ಹೆಣ್ಣು-ಗಂಡಿನ ಆಕರ್ಷಣೆಯ ತೀವ್ರತೆ. ಇವೆಲ್ಲಕ್ಕಿಂತ ಮೀರಿದ್ದು ಮನ್ನಣೆಯ ಬಯಕೆ, ಕೀರ್ತಿಯ ದಾಹ, ಪ್ರಚಾರದ ಹುಚ್ಚು. ಇದು ಆತ್ಮವನ್ನೇ ತಿನ್ನುತ್ತದೆ ಅನ್ನುತ್ತಾರೆ ಮಾನ್ಯ ಡಿವಿಜಿಯವರು ತಮ್ಮ ಮಂಕುತಿಮ್ಮನ ಕಗ್ಗದಲ್ಲಿ.
ಮನ್ನಣೆಯ ದಾಹದಿಂದ ಜಗತ್ತನ್ನು ಮೆಚ್ಚಿಸಲು ಹೊರಟವರು ಏನು ಬೇಕಾದರೂ ಮಾಡುತ್ತಾರೆ ಅನ್ನುವುದಕ್ಕೆ ಅದೆಷ್ಟೋ ದೃಷ್ಟಾಂತಗಳು ಪುರಾಣ, ಚರಿತ್ರೆಗಳಲ್ಲಿ ಮಾತ್ರವಲ್ಲ ಪ್ರಸ್ತುತ ಸಮಾಜದಲ್ಲೂ, ನಮ್ಮ ಸುತ್ತಮುತ್ತಲೂ ಕಾಣಸಿಗುತ್ತವೆ. ನಮಗೆ ಒಬ್ಬ ಸಜ್ಜನ ವ್ಯಕ್ತಿಯಲ್ಲಿರಬೇಕಾದ ಒಳ್ಳೆಯ ಗುಣಗಳು ಯಾವವು ಅಂತ ಗೊತ್ತಿದೆ. ಒಬ್ಬ ಪ್ರಾಮಾಣಿಕ ವ್ಯಕ್ತಿ ಹೇಗಿರಬೇಕು ಎಂದು ತಿಳಿದಿದೆ. ಸಮಾಜ ಒಪ್ಪುವ ಗುಣಾವಗುಣಗಳು ಏನೇನು ಅನ್ನುವುದರ ಅರಿವಿದೆ. ಸೌಜನ್ಯದ ಸನ್ನಡತೆಯ ಕುರಿತು ಬೇಕಾದಷ್ಟು ಜ್ಞಾನ ವಿದೆ.
ಎಂತಹ ವ್ಯಕ್ತಿಯನ್ನು ಸಮಾಜ ಒಳ್ಳೆಯವನೆಂದು ಆದರಿಸುತ್ತದೆ ಎಂದು ಚೆನ್ನಾಗಿ ಬವು. ಇದೆಲ್ಲವೂ ನಮ್ಮಲ್ಲಿ ಇರಲಿ ಇಲ್ಲದೇ ಇರಲಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಎಲ್ಲಾ ಸದ್ಗುಣಗಳು ನಮ್ಮಲ್ಲಿವೆ ಎಂದು ಭಾವಿಸಿ ಕೊಂಡು ಆ ಭಾವನೆಯ ಆಧಾರದಲ್ಲಿ ನಮ್ಮ ಬಗ್ಗೆ ಒಂದು ಸುಂದರವಾದ ಕಲ್ಪನೆಯನ್ನು ಮಾಡಿಕೊಂಡು ನಾನೊಬ್ಬ ‘ಸದ್ಗುಣ ಸಂಪನ್ನ’ ಅನ್ನುವ ಭ್ರಮೆಯಲ್ಲಿ ಬದುಕುತ್ತೇವೆ.
ಈ ಎಲ್ಲಾ ಸದ್ಗುಣಗಳು ನಮ್ಮೊಳಗೆ ಮೈಗೂಡಿಸಿಕೊಳ್ಳದಿದ್ದರೂ, ಸಜ್ಜನರೆಂದು ಬಾಹ್ಯ ಜಗತ್ತಿಗೆ ನಂಬಿಕೆ ಹುಟ್ಟಿಸುವ ಕಾರ್ಯ ದಲ್ಲಿ ನಿರತರಾಗುತ್ತೇವೆ. ಜನರು ನಮ್ಮನ್ನು ಯಾವ ರೀತಿ ನೋಡಬೇಕು, ಗೌರವಿಸಬೇಕು ಅನ್ನುವುದರ ಸ್ಪಷ್ಟ ಕಲ್ಪನೆಯನ್ನು ಮಾಡಿಕೊಂಡಿರುತ್ತೇವೆ. ಈ ಪ್ರಜ್ಞೆ ನಮ್ಮೊಳಗೆ ಸದಾ ಜಾಗೃತವಾಗಿದ್ದು ಅದಕ್ಕೆ ಪೂರಕವಾಗಿಯೇ ನಡೆದುಕೊಳ್ಳುವಂತೆ
ಎಚ್ಚರಿಕೆ ವಹಿಸುತ್ತೇವೆ. ನಮ್ಮ ಎ ಕ್ರಿಯೆ ಪ್ರತಿಕ್ರಿಯೆಗಳು ಈ ಪ್ರಜ್ಞೆಯ ಭಾಗವಾಗಿಯೇ ಇರುತ್ತವೆ.
ಈ ಕಲ್ಪನೆಯ ‘ನಾನು’ ಮತ್ತು ವಾಸ್ತವದ ‘ನಾನು’ ಎರಡೂ ಒಂದೇ ಆಗಿದ್ದರೆ ಎಲ್ಲವೂ ಸುಂದರ, ಸರಳ, ಸುಲಲಿತ. ಇಂತಹ
ಅದೆಷ್ಟೋ ಸಜ್ಜನ ಮಹಾನುಭಾವರು ನಮ್ಮ ನಡುವೆ ಅನುಕರಣೀಯರಾಗಿ ಇzರೆ. ಇವರು ಎಲ್ಲಿದ್ದರೂ, ಹೇಗಿದ್ದರೂ ಅವರು ಅವರೇ ಆಗಿದ್ದು ಸದಾ ಗೌರವಕ್ಕೆ ಪಾತ್ರರಾಗುತ್ತಾರೆ. ಯಾವ ಹೆಸರು, ಕೀರ್ತಿ, ಪುರಸ್ಕಾರಗಳೂ ಇವರನ್ನು ಬಾಧಿಸಲಾರದು. ಯಾವ ಹೊಗಳಿಕೆಗೂ, ತೆಗಳಿಕೆಗೂ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ.
ಇವರ ನಡೆ-ನುಡಿ, ಬದುಕು-ಬರಹ ಎಲ್ಲವೂ ಆದರ್ಶಪ್ರಾಯವಾಗಿರುತ್ತದೆ. ಇಂತಹವರನ್ನು ನಮ್ಮ ಬದುಕಿನ ಮಾದರಿಯಾಗಿ ಮಾಡಿ ಪೂಜನೀಯ ಭಾವದಿಂದ ಕಾಣುತ್ತೇವೆ. ಯಾವಾಗ ಈ ಕಲ್ಪನೆಯ ‘ನಾನು’ ಹಾಗೂ ವಾಸ್ತವದ ‘ನಾನು’ ಎರಡಕ್ಕೂ
ಸಂಬಂಧವೇ ಇರುವುದಿಲ್ಲವೋ ಆಗ ಎಲ್ಲವೂ ಅಸ್ತವ್ಯಸ್ತ, ಅತಂತ್ರ, ಅಸ್ವಭಾವಿಕ. ಯಾವಾಗ ಇವೆರಡರ ನಡುವೆ ಹೊಂದಾಣಿಕೆ ಇರುವುದಿಲ್ಲವೋ ಆಗ ಎಲ್ಲವೂ ಕೃತಕ ತೋರಿಕೆಯಾಗಿ ವಿಜೃಂಭಿಸುತ್ತದೆ. ಹೀಗೆ ಭ್ರಮೆ- ವಾಸ್ತವದ ‘ನಾನು’ವಿನ ನಡುವಿನ ಗುದ್ದಾಟದಲ್ಲಿ ಬದುಕಿನ ನೆಮ್ಮದಿಯನ್ನು ಕಳೆದುಕೊಂಡು ಒzಡುತ್ತೇವೆ. ಆಗ ಜಗತ್ತನ್ನು ಮೆಚ್ಚಿಸುವ, ಓಲೈಸುವ ಕೆಲಸದಲ್ಲಿ ತೊಡಗುತ್ತೇವೆ.
ಜನರನ್ನು ಮೆಚ್ಚಿಸಿಯಾದರೂ ‘ನಾನು ಬಹಳ ಒಳ್ಳೆಯವನು’ ಅನ್ನುವ ಭ್ರಮೆಯನ್ನು ಗಟ್ಟಿಮಾಡುವ ಕಾರ್ಯದಲ್ಲಿ ತೊಡಗು ತ್ತೇವೆ. ತನ್ಮೂಲಕ ನೆಮ್ಮದಿಯನ್ನು ಹುಡುಕುವ ಪ್ರಯತ್ನ ನಿರಂತರ ಸಾಗುತ್ತಿರುತ್ತದೆ. ಮಾಡುತ್ತಿರುವುದು ತಪ್ಪೆಂದು ಗೊತ್ತಿದ್ದರೂ ಅದನ್ನೇ ಮಾಡಲು ಮುಂದಾಗುತ್ತೇವೆ. ಮಹಾಭಾರತದಲ್ಲಿ ದುರ್ಯೋಧನ ಕೃಷ್ಣನಲ್ಲಿ ಒಂದು ಮಾತು ಹೇಳುತ್ತಾನೆ ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ| ಜಾನಾಮ್ಯಧರ್ಮಂ ನ ಚ ಮೇ ನಿವೃತ್ತಿಂ ಎಂದು. ಅಂದರೆ ಧರ್ಮವೇನೆಂಬುದು ಚೆನ್ನಾಗಿ ಬನಾ ದರೂ ನನಗೆ ಅದರತ್ತ ಒಲವಿಲ್ಲ.
ಅಧರ್ಮವೇನೆಂಬುದನ್ನೂ ಅಷ್ಟೇ ಚೆನ್ನಾಗಿ ಬನಾದರೂ ನಾನದನ್ನು ಬಿಡಲಾರೆ ಎಂದು. ಏನಾದರೂ ಸರ್ಕಸ್ ಮಾಡಿ ಜಗತ್ತನ್ನು ಮೆಚ್ಚಿಸ ಹೊರಟವರೂ ಕೂಡಾ ಸರಿ ತಿಳಿದೂ ಹಾಗೇ ನಡೆಯದ, ತಪ್ಪೆಂದು ತಿಳಿದೂ ಬಿಡಲಾರದ ದುರ್ಯೋಧನ ನಿಗಿಂತ ಭಿನ್ನರೆಂದು ಹೇಳಲಾದೀತೇ? ಜನರನ್ನು ಮೆಚ್ಚಿಸುವ ಕಾರ್ಯದಲ್ಲಿ ನಿರತರಾಗಿರುವ ಇಂತಹ ಮಂದಿ ತಮ್ಮ ಸುತ್ತ ಬಲಿಷ್ಟವಾದ ಕೃತ್ರಿಮ ಕೋಟೆಯನ್ನು ಕಟ್ಟಿಕೊಂಡು ಮೆರೆಯುವುದನ್ನು ಕಾಣಬಹುದು.
ಇವರ ಬಣ್ಣದ ಮುಖವಾಡ, ಸುಳ್ಳಿನ ಸೌಧ, ಜೇನಿನಂತಹ ಹುಸಿನುಡಿ, ಒಳಗೊಂದು-ಹೊರಗೊಂದು ಧೋರಣೆ ಇವೆಲ್ಲದರ ಅರಿವು ಎಲ್ಲರಿಗೂ ಇರುತ್ತದೆ. ಆದರೂ ಇವರಿಗೆ ಮನ್ನಣೆಯನ್ನು ಕೊಡಲೇಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮುಂದೊಂದು
ದಿನ ಇವರೇ ಸಾಧಕ ಮಾದರಿ ಪುರುಷರಾಗಿ ಅವತರಿಸುವುದನ್ನು ಕಂಡು ಶಿರಬಾಗಿ ಕರಮುಗಿಯಬೇಕಾಗುತ್ತದೆ. ಇ ಮನುಷ್ಯ ಸಹಜ ಸಾಮಾನ್ಯ ಕ್ರಿಯೆಗಳೂ ಮಿತಿಮೀರಿ ವೈಭವೀಕರಿಸಲ್ಪಡುತ್ತವೆ.
ಉದಾಹರಣೆಗೆ ಬಾಯಾರಿ ಗಂಟಲು ಒಣಗಿ ನೀರಿಗಾಗಿ ಪರಿತಪಿಸುವವನಿಗೆ ಒಂದು ಲೋಟ ನೀರು ಕೊಡುತ್ತೀರಿ ಎಂದು ಭಾವಿಸೋಣ. ಆದರೆ ಅದನ್ನೇ ‘ನಾನು ನೀರು ಕೊಡದೇ ಇರುತ್ತಿದ್ದರೆ ಅವನು ಸತ್ತೇ ಹೋಗುತ್ತಿದ್ದ’ ಎಂದೋ, ‘ಸಾಯುತ್ತಿದ್ದವನ ಪ್ರಾಣ ಉಳಿಸಿದೆ’ ಎಂದೋ ಇದಕ್ಕೆ ಬೇರೆಯೇ ಬಣ್ಣ ಹಚ್ಚಿ ಬಿಂಬಿಸುತ್ತೀರಿ. ಮರುದಿನ ಪತ್ರಿಕೆಯಲ್ಲೂ, ಸಾಮಾಜಿಕ ಜಾಲತಾಣ ಗಳಲ್ಲೂ ‘ಪ್ರಾಣ ಉಳಿಸಿದ ಜೀವ ರಕ್ಷಕ’ ಅಂತ ಸುದ್ದಿಯೂ ಬರುತ್ತದೆ. ಪ್ರಶಂಸೆ, ಲೈಕು, ಕಮೆಂಟುಗಳ ಮಹಾಪೂರವೇ ಹರಿದು ಬರುತ್ತದೆ. ಇದೊಂದು ಮಹತ್ತರವಾದ ಸಾಮಾಜಿಕ ಸೇವೆಯೆಂದು ಪರಿಗಣಿಸಿ ಒಂದು ಪ್ರಶಸ್ತಿಯೂ ಬರುತ್ತದೆ.
ಪ್ರಪಂಚ ಹೊಗಳಿದ್ದೇ ಹೊಗಳಿದ್ದು. ದೈವತ್ವಕ್ಕೆ ಏರಿಸಿದ್ದೇ ಏರಿಸಿದ್ದು. ಆಯ್ತಲ್ಲ… ಅಲ್ಲಿಗೆ ಮಿಶನ್ ಕಂಪ್ಲೀಟೆಡ್. ಇಲ್ಲಿ ಯೋಚಿಸ ಬೇಕಾದುದು ಅಪ್ರಾಮಾಣಿಕತೆಯೇ ಸಾಧನೆ ಎಂದಾದರೆ ಪ್ರಾಮಾಣಿಕತೆಗೆ ಎಲ್ಲಿರುತ್ತದೆ ಬೆಲೆ? ಕೃತ್ರಿಮವೇ ನಾಗರೀಕತೆ ಎಂದಾದರೆ ನಿಷ್ಠೆಗೆ ಎಲ್ಲಿರುತ್ತದೆ ಮೌಲ್ಯ? ಡಾಂಭಿಕವೇ ಸ್ವಾಭಾವಿಕ ಎಂದಾದರೆ ನೈಜತೆಗೆ ಎಲ್ಲಿರುತ್ತದೆ ನೆಲೆ? ಈ ಚಿಂತೆಗಳು ಗೆದ್ದಲಿನಂತೆ ಮನಸ್ಸನ್ನು ಸದಾ ಕೊರೆಯುತ್ತಲೇ ಇರುತ್ತವೆ.
ಮಲಯಾಳಂನ ಕಥೆಗಾರರಾದ ವೈಕಮ್ ಮೊಹಮ್ಮದ್ ಬರ್ಶೀ ಅವರ ‘ವಿಶ್ವವಿಖ್ಯಾತಮಾಯ ಮೂಕ್’ (ವಿಶ್ವವಿಖ್ಯಾತವಾದ ಮೂಗು) ಅನ್ನುವ ಕಥೆಯಲ್ಲಿ ಹೇಗೆ ಒಂದು ಕ್ಷುಲ್ಲಕ ಕಾರಣವೂ ಒಬ್ಬ ಅವಿದ್ಯಾವಂತ ವ್ಯಕ್ತಿಯನ್ನು ಜನಪ್ರಿಯತೆಯ ತುತ್ತತುದಿ ಗೇರಿಸುತ್ತದೆ, ಅಲ್ಪ ಅಮುಖ್ಯ ಕಾರಣವೂ ಹೇಗೆ ಮಂದಿಯನ್ನು ಮರುಳಾಗಿಸುತ್ತದೆ ಎಂದು ಬಹಳ ವಿಡಂಬನಾತ್ಮಕವಾಗಿ ಅಷ್ಟೇ ಹಾಸ್ಯಾತ್ಮಕವಾಗಿ ಚಿತ್ರಿಸಿದ್ದಾರೆ.
ಇದರ ಇಂಗ್ಲೀಷ್ ಅನುವಾದ ’Seಛಿ Uಟ್ಟ್ಝb ಛ್ಞಿಟಡ್ಞಿಛಿb ಘೆಟoಛಿ’ ಗೂಗಲ್‌ನಲ್ಲಿ ಲಭ್ಯವಿದೆ. ಓದಿದ ಮೇಲೆಯೂ ಇಲ್ಲಿನ ತಮಾಷೆ, ವಿಡಂಬನೆ, ವ್ಯಂಗ, ಹಾಸ್ಯ ಇವೆಲ್ಲವೂ ತೀವ್ರವಾಗಿ ಕಾಡುತ್ತದೆ. ಬ್ರಹ್ಮಕುಮಾರಿ ಶಿವಾನಿ ದೀದಿಯವರು ಒಂದು
ಉಪನ್ಯಾಸದಲ್ಲಿ ಮೆಚ್ಚುಗೆಯ ಹಂಬಲದ ಕುರಿತು ವ್ಯಕ್ತಪಡಿಸಿದ ಅಭಿಪ್ರಾಯದ ಸಾರ ಹೀಗಿದೆ. ಜಗತ್ತನ್ನು ಮೆಚ್ಚಿಸಬೇಕೆಂಬ ಈ
ಬಯಕೆಯನ್ನು ಪುಟ್ಟ ಮಕ್ಕಳಿರುವಾಗಲೇ ನಾವೇ ಬಿತ್ತುತ್ತೇವೆ ಎಂದು. ಅದು ಹೇಗೆಂದರೆ ನಮ್ಮ ಮನೆಗೆ ಅತಿಥಿಗಳು ಬಂದಾ ಗಲೋ ಅಥವಾ ನಾವು ಬಂಧುಗಳ ಮನೆಗೆ ಮಕ್ಕಳ ಜತೆ ಹೋದಾಗಲೋ ಸಣ್ಣ ಮಕ್ಕಳಲ್ಲಿ ಒಂದು ಹಾಡು ಹೇಳುವಂತೆಯೋ, ನೃತ್ಯ ಮಾಡುವಂತೆಯೋ ಹೇಳುತ್ತೇವೆ.
ಮಗು ಹಾಗೆಯೇ ಮಾಡುತ್ತದೆ. ಸುತ್ತಲಿನ ಜನರು ವೆರಿಗುಡ್ ಎಂದು ಚಪ್ಪಾಳೆ ತಟ್ಟಿ ಪ್ರಶಂಸಿಸುತ್ತಾರೆ. ಮಗು ಅಂದುಕೊಳ್ಳುತ್ತದೆ
ನಾನು ಇವರಿಗೆ ಬೇಕಾದ ಹಾಗೆ ಪರ್ ಫ್ಯೂರ್ಮ್ ಮಾಡಿದರೆ ಎಲ್ಲರಿಗೂ ಖುಷಿ ಆಗುತ್ತದೆ, ನನ್ನನ್ನು ಜನ ಇಷ್ಟ ಪಡುತ್ತಾರೆ ಎಂದು.
ಹಾಗಾಗಿ ಪರ್ ಫ್ಯೂರ್ಮ್ ಮಾಡುವುದನ್ನು, ಚಪ್ಪಾಳೆ ಗಿಟ್ಟಿಸುವುದನ್ನು ರೂಢಿಸಿಕೊಳ್ಳುತ್ತದೆ ಅಂತೆ. ‘ಪೀಪಲ್ ಅಪ್ರಿಷಿಯೇಟ್ ಮಿವೆನ್ ಐ ಪರ್ ಫ್ಯೂರ್ಮ್’ ಅನ್ನುವುದು ಅಭ್ಯಾಸ ಆಗಿ ಬಿಡುತ್ತದೆ.
ನಾನು ಎಷ್ಟು ಉತ್ತಮವಾಗಿ ಅಭಿನಯಿಸುತ್ತೇನೆಯೋ ಅಷ್ಟು ಹೆಚ್ಚು ನನ್ನ ಸುತ್ತಲಿನ ಜನರು ಸಂತೋಷ ಪಡುತ್ತಾರೆ ಅನ್ನುವುದು ಮಗುವಿನ ಮನಸ್ಸಲ್ಲಿ ಅಚ್ಚೊತ್ತಿರುತ್ತದೆ ಅಂತೆ. ಇದನ್ನು ನಾವೆಲ್ಲರೂ ಮಾಡಿರುತ್ತೇವೆ ಹಾಗೂ ಬೇರೆಯವರು
ಮಾಡಿರುವುದನ್ನೂ ಕಂಡಿರುತ್ತೇವೆ. ಹೌದಲ್ಲವೇ? ಯಾವಾಗ ಜನರು ನಮ್ಮನ್ನು ಒಳ್ಳೆಯವರು, ಸಜ್ಜನರು, ಸದ್ಗುಣಿ ಎಂದು ಹೇಳುತ್ತಾರೋ ಆಗ ನಾವು ಅದಾಗಿ ಬಿಡುತ್ತೇವೆ.
ನಮ್ಮ ಒಳ್ಳೆತನವನ್ನು ಸರ್ಟಿ- ಮಾಡಲು ಮಂದಿಯ ಅಪ್ರೂವಲ್ ಮ ಆಗುತ್ತದೆ. ಮಂದಿಯ ಅಪ್ರೂವಲ್ ಸಿಗಬೇಕಾದರೆ ಅವರನ್ನು ಮೆಚ್ಚಿಸಬೇಕು. ಅಲ್ಲಿಗೇನು? ನಮ್ಮ ಕ್ರಿಯೆಗಳೆಲ್ಲವೂ ಜಗತ್ತನ್ನು ಮೆಚ್ಚಿಸುವ ಸಲುವಾಗಿಯೇ ಆಗಿ ಬಿಡುತ್ತವೆ. ಆದರೆ ಅದು ನಿಜವಾಗಿ ಇರಬೇಕಾದುದು ಹಾಗೆಯೇ? ನಾವು ಒಳ್ಳೆಯವರಾಗಿರುವುದು, ಪ್ರಾಮಾಣಿಕರಾಗಿರುವುದು, ಸಜ್ಜನರಾಗಿರುವುದು
ಯಾರಿಗೋ ಸಂತೋಷ ಆಗಲೆಂದೋ ಅಥವಾ ಜಗತ್ತನ್ನು ಮೆಚ್ಚಿಸಬೇಕೆಂದೋ? ಅಲ್ಲವಲ್ಲ. ಬದಲಾಗಿ ನಮ್ಮ ಸಂತೋಷಕ್ಕಾಗಿ, ನಮ್ಮ ತೃಪ್ತಿಗಾಗಿ ಅಲ್ಲವೇ? ಏಕೆಂದರೆ ನಮ್ಮ ಕ್ರಿಯೆಗಳೆಲ್ಲವೂ ಜಗತ್ತನ್ನು ಮೆಚ್ಚಿಸುವುದಕ್ಕಾಗಿ ಎಂದಾದರೆ ಬದುಕು ನೀರಸವಾಗಿ ಬಿಡಬಹುದು.
ಜಗತ್ತು ಮೆಚ್ಚದ ದಿನ ನಮ್ಮ ಸಾಧನೆಗಳೆಲ್ಲವೂ, ಬದುಕಿನ ಗಳಿಕೆಗಳೆಲ್ಲವೂ ಅರ್ಥಹೀನ ಅನಿಸಬಹುದು. ಏಕೆಂದರೆ ಜಗತ್ತು ಬದಲಾಗುತ್ತಲೇ ಇರುತ್ತದೆ. ಹಾಗಾಗಿ ನಾವು ಏನೇ ಮಾಡಿದರೂ ಅದು ಮೊದಲು ನಮಗೆ ಮೆಚ್ಚುಗೆಯಾಗಬೇಕು ಮತ್ತು ಇತರರಿಗೆ ಕೆಡುಕುಂಟು ಮಾಡಬಾರದು ಅಷ್ಟೇ. ಜನರು ಮೆಚ್ಚಲಿ, ಬಿಡಲಿ ನಮ್ಮ ನಡೆಗಳಲ್ಲಿ ನಮಗೆ ಆತ್ಮತೃಪ್ತಿ ಇದ್ದರಷ್ಟೇ ಸಾಕು. ಕೆ.ಎಸ್.
ಶಿವರುದ್ರಪ್ಪನವರು ಹೇಳಿದಂತೆ ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ’
ಎಂದಾಗಬೇಕು.
ಪ್ರಪಂಚವನ್ನು ಮೆಚ್ಚಿಸ ಹೊರಟ ವ್ಯಾಪಾರಿಯ ಕಥೆಯನ್ನು ನೀವೆಲ್ಲ ಕೇಳಿರಬಹುದು. ಹಣ್ಣಿನ ವ್ಯಾಪಾರಿಯೊಬ್ಬ ‘ಇಲ್ಲಿ
ತಾಜಾ ಹಣ್ಣುಗಳು ಮಾರಾಟಕ್ಕಿವೆ’ ಎಂದು ತನ್ನ ಅಂಗಡಿ ಮುಂದೆ ಬೋರ್ಡ್ ಹಾಕಿದ್ದ. ಒಬ್ಬ ಬಂದು ಅಂದನಂತೆ ‘ತಾಜಾ ಅಲ್ಲದೇ ಇನ್ನೇನು ಕೊಳೆತ ಹಣ್ಣುಗಳನ್ನು ಮಾರುತ್ತಿಯಾ? ಇಲ್ಲ ತಾನೇ? ಮತ್ತೆ ಈ ತಾಜಾ ಅನ್ನುವ ಶಬ್ದ ಯಾಕೆ? ತೆಗೆದುಬಿಡು’ ಎಂದು. ಅಂಗಡಿಯಾತ ಹಾಗೇ ಮಾಡಿದ. ಇನ್ನೊಬ್ಬ ಬಂದು ಹೇಳಿದ ‘ಹಣ್ಣಿನ ಅಂಗಡಿಯಲ್ಲಿ ಹಣ್ಣುಗಳಲ್ಲದೆ ಮತ್ತೇನು ಮಾರಲು ಸಾಧ್ಯ? ಹಣ್ಣುಗಳು ಅನ್ನುವ ಪದದ ಅಗತ್ಯವಿಲ್ಲ’ ಎಂದು.
ಸರಿ ಈಗ ಫಲಕದ ಮೇಲೆ ಬರೀ ‘ಮಾರಾಟಕ್ಕಿದೆ’ ಅನ್ನುವ ಪದವೊಂದೇ ಉಳಿಯಿತು. ಆಗ ಮತ್ತೊಬ್ಬ ಅಂದ ‘ಏನು ಮಾರಾಟ ಮಾಡುತ್ತಿ ಎಂದೇ ಗೊತ್ತಾಗುವುದಿಲ್ಲ. ಬರೀ ‘ಮಾರಾಟಕ್ಕಿದೆ’ ಅಂದ್ರೆ ಏನು ಅರ್ಥ ಬೇಕಾದರೂ ಬರಬಹುದು. ಹಾಗಾಗಿ ಬೋರ್ಡ್ ಹಾಕದೇ ಇರುವುದೇ ಸೂಕ್ತ’ ಎಂದು. ಸರಿ…ಈಗ ಅಂಗಡಿ ಮುಂದೆ ನಾಮಫಲಕ ಇಲ್ಲದಾಯಿತು. ಆಗ ಹೊಸಬನೊಬ್ಬ ಬಂದು ಹೇಳಿದ ‘ಇದು ಏನು ಅಂಗಡಿ, ಇನು ಸಿಗೊತ್ತೆ ಅಂತಲೇ ಗೊತ್ತಾಗೋಲ್ಲ.
ಒಂದು ಬೋರ್ಡ್ ಆದ್ರೂ ಬರ್ದು ಹಾಕ್ಬಾರ್ದಾ?’ ಅಂತ. ಈಗ ತಲೆಗೆ ಕೈಹೊತ್ತು ಕುಳಿತುಕೊಳ್ಳುವ ಸರದಿ ಅಂಗಡಿಯಾತನದ್ದಾ ಯಿತು(ಈ ಕತೆಯ ಬೇರೆ ಬೇರೆ ವರ್ಷನ್ ಗಳನ್ನು ನೀವು ಕೇಳಿರಬಹುದು). ನಾವು ಏನೇ ಮಾಡಿದರೂ ಅದರಲ್ಲಿ ನಮ್ಮತನ ಇರಬೇಕೇ ಹೊರತು ಸಮಾಜವನ್ನು ಮೆಚ್ಚಿಸಲು ಹೊರಟರೆ ಅದು ಕೈಲಾಗದ ಮಾತು. ಏಕೆಂದರೆ ಮಂದಿ ಅವರವರ ಅವಶ್ಯಕತೆ ಗಳಿಗೆ ಅನುಗುಣವಾಗಿ ಇಷ್ಟ ಪಡುತ್ತಾರೆಯೇ, ಮೆಚ್ಚಿಕೊಳ್ಳುತ್ತಾರೆಯೇ ಹೊರತು ನಮ್ಮ ಗುಣದೋಷ ಗಳಿಂದ ಅಲ್ಲ.
ಒಮ್ಮೆ ಒಂದು ನಿರ್ಧಾರ ತೆಗೆದುಕೊಂಡರೆ, ಜವಾಬ್ದಾರಿ ವಹಿಸಿಕೊಂಡರೆ, ಅದು ನಮ್ಮ ದೃಷ್ಟಿಕೋನದಲ್ಲಿ ಸರಿಯಾಗಿದ್ದು, ಯಾರಿಗೂ ಹಾನಿಯಾಗದೇ ಇದ್ದರೆ ಅಲ್ಲಿಗೆ ಮುಗಿಯಿತು. ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ನಾವು ಮೆಚ್ಚುವಂತಿರಬೇಕೇ ಹೊರತು ಪ್ರಪಂಚವಲ್ಲ. ‘ಪ್ರಶಂಸೆಯ ಹಂಬಲ’ ಅನ್ನುವ ಮುಕ್ತಕದಲ್ಲಿ ಡಿವಿಜಿಯವರು ಮನಮುಟ್ಟುವಂತೆ ನಮಗೆ ಬುದ್ಧಿಮಾತು ಹೇಳಿರುವುದು ಇಲ್ಲಿ ಉಖಿಸುವುದು ಸೂಕ್ತವೆನಿಸುತ್ತದೆ.
ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ?|
ಕಸದೊಳಗೆ ಕಸವಾಗಿ ಹೋಹನಲೆ ನೀನು?||
ಮುಸಕಲೀ ಧರೆಯ ಮರೆವೆನ್ನನ್, ಎನ್ನುತ ಬೇಡು|
ಮಿಸುಕದಿರು ಮಣ್ಣಿನಲಿ-ಮಂಕುತಿಮ್ಮ ||
ಕಸದಲ್ಲಿ ಕಸವಾಗಿ ಹೋಗುವ ನಾವು ಕೀರ್ತಿ, ಹೆಸರಿಗಾಗಿ ಹಂಬಲಿಸುವುದಾದರೂ ಯಾಕೆ? ಹೆಸರನ್ನು ಗಳಿಸುವುದಕ್ಕೆ ಹಾಗೂ ಗಳಿಸಿದ ಹೆಸರನ್ನು ಉಳಿಸುವುಕ್ಕೆ ದಣಿಯುವುದಾದರೂ ಯಾಕೆ? ಜಗತ್ತಿನ ಮರೆವು ನನ್ನ ಹೆಸರನ್ನು ಮರೆಮಾಡಿಬಿಡಲಿ, ಕೀರ್ತಿಗೆ ಸೋಲದಿರಲಿ ಎಂದು ದೇವರನ್ನು ಬೇಡಬೇಕೆಂದು ಖ್ಯಾತಿಯ ಹಿಂದೆ ಓಡುವವರಿಗೆ ಅದ್ಭುತವಾದ ಕಿವಿಮಾತನ್ನು ಡಿವಿಜಿ ಯವರು ಇಲ್ಲಿ ಹೇಳಿದ್ದಾರೆ.
ಹೌದು… ನಮ್ಮ ಪಾಲಿಗೆ ದೊರೆತ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಆತ್ಮತೃಪ್ತಿಯನ್ನು ಹೊಂದಿ ದರೆ ಅದುವೇ ಶ್ರೇಷ್ಠವಾದುದು ಅಲ್ಲವೇ?.