ಪ್ರಸ್ತುತ
ವಿಶ್ವನಾಥ್ ಹೆಗ್ಡೆ
ಅಮೆರಿಕದ ವಾಲ್ ಸ್ಟ್ರೀಟ್ನಲ್ಲಿ ವ್ಯಾಪಾರ ಮಾಡುವ ಚಿನ್ನ, ತೈಲ ಮತ್ತು ಇತರ ಸರಕುಗಳಿಗೆ ನೀರೂ ಸೇರಿದ್ದು, ಹೊಸದೊಂದು ಸಮಸ್ಯೆಯನ್ನು ಬಹಿರಂಗಪಡಿಸುತ್ತಿದೆ. ಇದು ಜೀವ ಉಳಿಸುವ ನೈಸರ್ಗಿಕ ಸಂಪನ್ಮೂಲವು ಪ್ರಪಂಚ ದಾದ್ಯಂತ ವಿರಳವಾಗ ಬಹುದು ಎಂಬ ಆತಂಕವನ್ನು ಎತ್ತಿ ತೋರಿಸುತ್ತದೆ. ಯುಎಸ್ನಲ್ಲಿ ಈ ರೀತಿಯ ಒಪ್ಪಂದ ಗಳನ್ನು ಸೆಪ್ಟೆಂಬರ್ನಲ್ಲಿ ಘೋಷಿಸಲಾಯಿತು.
ಅ ದು ಡಿಸೆಂಬರ್ 7, ಅಮೆರಿಕದ ಷೇರು ಮಾರುಕಟ್ಟೆಯಲ್ಲಿ ಅದೇನೋ ಹೊಸತನ, ಕಳವಳ. ಹೌದು ಪ್ರಥಮ ಬಾರಿಗೆ ಅಂದು
ನೀರು ಎಂಬ ಜೀವ ಜಲ ಷೇರು ಮಾರುಕಟ್ಟೆಗೆ ಕಾಲಿಟ್ಟಿತ್ತು. ಸಿಎಂಇ ಗ್ರೂಪ್ ವಿಶ್ವದ ಮೊದಲ ನೀರಿನ ಭವಿಷ್ಯದ ಒಪ್ಪಂದವನ್ನು ಷೇರು ಮಾರುಕಟ್ಟೆಯಲ್ಲಿ ಪ್ರಾರಂಭಿಸಿದ ದಿನವದು. ನೀವು ಕೇಳಬಹುದು, ಹಾಗಾದರೆ ಇದು ತುಂಬಾ ಒಳ್ಳೆಯದಲ್ಲವೇ? ನಾವು
ಕೂಡ ಚಿನ್ನ, ಬೆಳ್ಳಿ, ತೈಲದ ತರಹ ಇದನ್ನು ಕೂಡ ಷೇರು ಮಾರುಕಟ್ಟೆಯಲ್ಲಿ ಕೊಳ್ಳಬಹುದು ಹಾಗೂ ಮಾರಬಹುದಲ್ಲವೇ? ಅಲ್ಲಿಯೇ ಹೊರ ಬರುವುದು ನಿಜವಾದ ಹಿಂದಿನ ಕಥೆ. ಅಮೆರಿಕದ ವಾಲ್ ಸ್ಟ್ರೀಟ್ ನಲ್ಲಿ ವ್ಯಾಪಾರ ಮಾಡುವ ಚಿನ್ನ, ತೈಲ ಮತ್ತು ಇತರ ಸರಕುಗಳಿಗೆ ನೀರೂ ಸೇರಿದ್ದು, ಹೊಸದೊಂದು ಸಮಸ್ಯೆಯನ್ನು ಬಹಿರಂಗಪಡಿಸುತ್ತಿದೆ.
ಇದು ಜೀವ ಉಳಿಸುವ ನೈಸರ್ಗಿಕ ಸಂಪನ್ಮೂಲವು ಪ್ರಪಂಚದಾದ್ಯಂತ ವಿರಳವಾಗಬಹುದು ಎಂಬ ಆತಂಕವನ್ನು ಎತ್ತಿ ತೋರಿಸುತ್ತದೆ. ಯುಎಸ್ನಲ್ಲಿ ಈ ರೀತಿಯ ಒಪ್ಪಂದಗಳನ್ನು ಸೆಪ್ಟೆಂಬರ್ನಲ್ಲಿ ಘೋಷಿಸಲಾಯಿತು. ಇದು ನಮಗೆಲ್ಲರಿಗೂ ಆತಂಕಕ್ಕೆ ಕಾರಣವಾಗಿರುವ ಮಹತ್ವದ ವಿಷಯ. ಜೀವನಾ ಧಾರವಾದ ನೀರು ಇಂದು ತೈಲ, ಚಿನ್ನದ ರೀತಿ ಷೇರು ಮಾರುಕಟ್ಟೆ ಯಲ್ಲಿ ಬಂದಿರುವುದು ಜಿರ್ಣಿಸಿಕೊಳ್ಳಲಾಗದ ಸಂಗತಿ. ಇದರರ್ಥ ರೈತರು, ಹೂಡಿಕೆ ದಾರರು ನೀರಿನ ವ್ಯಾಪಾರ ಮಾಡಲು ಸಾಧ್ಯ ವಾಗುತ್ತದೆ.
ಚಿಕಾಗೊ ಮೆರ್ಕ್ಯಾಂಟಿಲಿ ಎಕ್ಸ್ಚೇಂಜ್ (Chicago Mercantile Exchange) ನೀರು ಸರಬರಾಜು ಮತ್ತು ಬೇಡಿಕೆಯ ಸ್ಪರ್ಧಾತ್ಮಕ ಬೇಡಿಕೆಗಳನ್ನು ಉತ್ತಮವಾಗಿ ಸಮತೋಲನಗೊಳಿಸುವ ಉದ್ದೇಶದಿಂದ ವಿಶ್ವದ ಮೊದಲ ನೀರಿನ (futers trade in share market) ಭವಿಷ್ಯದ ಒಪ್ಪಂದವನ್ನು ಪ್ರಾರಂಭಿಸಿತು. ನೀವು ಷೇರು ಮಾರುಕಟ್ಟೆ ಅಥವಾ ಇಂತಹ ವಿಷಯಗಳ ಬಗ್ಗೆ ಆಗಾಗ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ವರಾಗಿದ್ದರೆ ಖಂಡಿತ ಇದರ ಬಗ್ಗೆ ನೋಡಿರುತ್ತೀರಿ ಅಥವಾ ಕೇಳಿರಬಹುದು. ಇಂತಹ ಸನ್ನಿವೇಶದಲ್ಲಿ ರೈತರು ಹೂಡಿಕೆದಾರ ರಿಗಿಂತ ನೀರಿನ ಒಪ್ಪಂದಗಳನ್ನು ಹೆಚ್ಚು ಬಳಸಿಕೊಳ್ಳುತ್ತಾರೆ, ಏಕೆಂದರೆ ಹೆಚ್ಚುತ್ತಿರುವ ಅನಿಶ್ಚಿತ ಹವಾಮಾನ ವಾತಾವರಣದ ನಡುವೆ ತಮ್ಮ ಕೃಷಿಯ ಒಳಹರಿವಿನ ವೆಚ್ಚವನ್ನು ನಿಭಾಯಿಸಲು ಅವರು ನೋಡುತ್ತಾರೆ.
ಮುಂಬರುವ ದಿನಗಳಲ್ಲಿ ನೀರಿನ ಅಭಾವ ಖಂಡಿತ ಹೆಚ್ಚಾಗುವುದೆಂಬ ಭೀತಿಯು ಇದರ ಖರೀದಿಗೆ ಅವರನ್ನು ದೂಡಬಹುದು.
ಯು.ಎಸ್. ಪಶ್ಚಿಮ ಕರಾವಳಿಯನ್ನು ಶಾಖ ಮತ್ತು ಕಾಡ್ಗಿಚ್ಚುಗಳು ಧ್ವಂಸಗೊಳಿಸಿದವು ಮತ್ತು ಕ್ಯಾಲಿಫೋರ್ನಿಯಾ ಎಂಟು ವರ್ಷಗಳ ಬರಗಾಲದಿಂದ ತತ್ತರಿಸುತ್ತಿವೆ. ಮಾನವನ ಸ್ವಯಂಕೃತ ಅಪರಾಧದಿಂದ ಉಂಟಾಗುತ್ತಿರುವ ಹವಾಮಾನ ಬದಲಾ ವಣೆಯು ತೀವ್ರ ಬರ ಮತ್ತು ಹೆಚ್ಚಿನ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ವಿಶ್ವಸಂಸ್ಥೆಯು ಬಹಳ ಹಿಂದೆಯೇ ಎಚ್ಚರಿಸಿದೆ.
ಯು.ಎಸ್. ಬರಮಾಪನ ಪ್ರಕಾರ, ಡಿಸೆಂಬರ್ 2011ರಿಂದಲೂ ತೀವ್ರವಾದ ಬರ ವಿಸ್ತರಿಸುತ್ತಲೇ ಇದೆ. ಜುಲೈ 2014ರಲ್ಲಿ ಅತ್ಯಂತ ಭೀಕರ ಪರಿಣಾಮಗಳು ದೇಶವನ್ನೇ ಅಲುಗಾಡಿಸಿತ್ತು. ಹವಾಮಾನ ಬದಲಾವಣೆ, ಅನಾವೃಷ್ಟಿ, ಜನಸಂಖ್ಯೆಯ ಬೆಳವಣಿಗೆ ಮತ್ತು
ಮಾಲಿನ್ಯವು ನೀರಿನ ಕೊರತೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಮುಂದಿನ ವರ್ಷಗಳಲ್ಲಿ ಬೆಲೆ ನಿಗದಿಪಡಿಸುವ ವಿಷಯವಾಗಿದೆ ಎಂದು ಆರ್ ಬಿಸಿ ಕ್ಯಾಪಿಟಲ್ ಮಾರ್ಕೆಟ್ಸ್ ವ್ಯವಸ್ಥಾಪಕ ನಿರ್ದೇಶಕ ಮತ್ತು ವಿಶ್ಲೇಷಕ ಡೀನ್ ಡ್ರೇ ಹೇಳಿದ್ದಾರೆ.
ಇತ್ತೀಚಿನ ವರದಿ ಹೇಳುವ ಪ್ರಕಾರ 2020ರ ಆಗಸ್ಟ್ ತಿಂಗಳಿನಲ್ಲಿ ಪಶ್ಚಿಮ ಅಮೆರಿಕದಲ್ಲಿ ಭುಗಿಲೆದ್ದ ಬರಗಾಲವು ಈಗ
ಮತ್ತಷ್ಟು ವಿಸ್ತರಿಸಿದೆ ಮತ್ತು ತೀವ್ರಗೊಂಡಿದೆ. ಆಗಸ್ಟ್ ನಲ್ಲಿ, ಯುನೈಟೆಡ್ ಸ್ಟೇಟ್ಸ್ನ ಮೂರನೇ ಒಂದು ಭಾಗವು ಕನಿಷ್ಠ ಮಧ್ಯಮ ಮಟ್ಟದ ಬರವನ್ನು ಎದುರಿಸುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ, ಸರಿಸುಮಾರು ಅರ್ಧದಷ್ಟು ಪ್ರದೇಶವು ಬರದಿಂದ ಬಳಲಿದರೆ ಅಚ್ಚರಿ ಏನಿಲ್ಲ.
ಭಾರತದಲ್ಲೂ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಲೇ ಇದ್ದು ನಮಗೆಲ್ಲರಿಗೂ ಇದೊಂದು ಎಚ್ಚರಿಕೆಯ ಘಂಟೆಯಾಗಿದೆ. 2018ರಲ್ಲಿ ನೀತಿ ಆಯೋಗ ಬಿಡುಗಡೆ ಮಾಡಿದ ಕಾಂಪೋಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್ (ಸಿಡಬ್ಲ್ಯುಎಂಐ) ವರದಿಯ ಪ್ರಕಾರ, 21 ಪ್ರಮುಖ ನಗರಗಳು (ದೆಹಲಿ, ಬೆಂಗಳೂರು, ಚೆನ್ನೆೆ , ಹೈದರಾಬಾದ್ ಮತ್ತು ಇತರರು) ಕೆಲವೇ ವರುಷಗಳ ಒಳಗೆ ಶೂನ್ಯ ಅಂತರ್ಜಲ ಮಟ್ಟವನ್ನು ತಲುಪಲು ಸ್ಪರ್ಧಿಸುತ್ತಿದ್ದು, 10 ಕೋಟಿಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ
ಬೀರುತ್ತದೆ.
1.3 ಶತಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯ ಹೊರತಾಗಿಯೂ ಭಾರತವು ವಿಶ್ವದ ಸಿಹಿನೀರಿನ ಸಂಪನ್ಮೂಲಗಳಲ್ಲಿ ಕೇವಲ ಶೇ.4ರಷ್ಟನ್ನು ಹೊಂದಿದೆ. ಭಾರತ ಮತ್ತು ಪ್ರಪಂಚದಲ್ಲಿ ಹೆಚ್ಚಿನ ಜನಸಂಖ್ಯೆೆಯ ಬೆಳವಣಿಗೆಯೊಂದಿಗೆ, ವಿಶ್ವದಾದ್ಯಂತ
100 ನಗರಗಳಲ್ಲಿ ವಾಸಿಸುವ ಸುಮಾರು 400 ಮಿಲಿಯನ್ ಜನರು ನೀರಿನ ಬಿಕ್ಕಟ್ಟಿನ ಅಪಾಯವನ್ನು ಎದುರಿಸುತ್ತಿದ್ದಾರೆ.
ಏಕೆಂದರೆ ಈ ನಗರಗಳು ನೀರಿನ ಕೊರತೆ, ಪ್ರವಾಹ, ಹಲವಾರು ಪ್ರದೇಶಗಳಲ್ಲಿನ ಜಲಾಶಯಗಳನ್ನು ಒಣಗಿಸುವುದು, ಕೊರತೆ,
ಮೂಲ ಸೌಕರ್ಯಗಳು ಮತ್ತು ಅಂತರ್ಜಲ ಕ್ಷೀಣತೆ ಮತ್ತು ಮಾಲಿನ್ಯವು ಭಾರತದ ಎಲ್ಲಾ ಉನ್ನತ ನಗರಗಳನ್ನು ನೀರಿನ ಒತ್ತಡಕ್ಕೆ ಒಳಪಡಿಸಿದೆ ಎಂದು SaveWaterSaveCity.com ರಾಜ್ ಅಗ್ರವಾಲ್ ಹೇಳುತ್ತಾರೆ. ನೀರೇ ಇಲ್ಲದಿದ್ದರೆ ನಾವು ಎಷ್ಟು ಹಣ ಮಾಡಿ ಕೂಡಿಟ್ಟರೇನು, ಎಷ್ಟು ಎಕರೆಗಟ್ಟಲೆ ಜಾಗವಿದ್ದರೇನು ಬಂತು. ಯಾವುದು ಉಪಯೋಗಕ್ಕೆ ಬಾರದ ವಸ್ತುವಾಗಿ ಹೋಗುವುದಲ್ಲದೆ ಬೇರೇನೂ ಇಲ್ಲ. ಬರ ಎನ್ನುವುದು ನಮ್ಮ ರೈತರ ಮೊದಲ ಶತ್ರು. ನೀವೇ ನೋಡಿ ನಮ್ಮ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅಂತರ್ಜಲ ಪ್ರಪಾತಕ್ಕೆ ಇಳಿದ ರೀತಿ. ಇಲ್ಲಿ ಯಾವುದೇ ಭರವಸೆಗಳಿಲ್ಲ ಅಥವಾ ಪ್ರತಿದಿನದ ಕೃಷಿ ಕಾಯಕಕ್ಕೆ ಆಸ್ಪದವೇ ಇಲ್ಲ.
ಇನ್ನು ಇಲ್ಲಿಗೆ ನೀರು ತರಲು ಸಾವಿರ ಸಾವಿರ ಕೋಟಿಯ ಯೋಜನೆಯ ಮಾತನಾಡುತ್ತಾರೆ. ನಮ್ಮ ಘನವೆತ್ತ ನಾಯಕರುಗಳು. ಯೋಜನೆ ತರಬಾರದು ಅಂತಲ್ಲ. ಆದರೆ ಈ ಪರಿಸ್ಥಿತಿಗೆ ನಾವು ಬಂದಿದ್ದು ಹೇಗೆ? ನಾವೆಲ್ಲಿ ತಪ್ಪಿದ್ದೇವೆ ಎನ್ನುವ ಆಲೋಚನೆಗಳು ನಮ್ಮಲ್ಲಿ ಬರುವುದು ತುಂಬಾ ಕಡಿಮೆ. ಪಶ್ಚಿಮ ಘಟ್ಟಗಳಿಂದ ನೀರು ತಂದ ಮಾತ್ರಕ್ಕೆ ಎಲ್ಲವು ಸರಿಯಾಗುವುದು ಅಂದರೆ ಅದು
ಮೂರ್ಖತನವಷ್ಟೇ. ಪಶ್ಚಿಮ ಘಟ್ಟಗಳೇ ತೊಂದರೆಗೆ ಸಿಲುಕಿರುವ ಈ ಕಾಲಘಟ್ಟದಲ್ಲಿ ನಾವು ಅದರ ಮೇಲೆಯೇ ಇನ್ನಷ್ಟು ಅವಲಂಬಿಸುವುದು ಎಷ್ಟು ಸರಿ. ವರ್ಷಕ್ಕೆೆ ಎರಡು ಬಾರಿ ನೀರು ಮತ್ತು ಕಾಡಿನ ಬಗ್ಗೆ ಮಾತನಾಡಿ, ಮಕ್ಕಳ ಕಾರ್ಯಕ್ರಮ ರೂಪಿಸಿ ಗಿಡ ನೆಟ್ಟು ಮರೆತು ಹೋಗುವ ಕಾಲವಿದು.
ಹಾಗೆಯೇ ನೆನಪಿಡಿ ಅದರಲ್ಲಿಯೂ ಹಣ ಮಾಡಿ ಕೆಟ್ಟ ದಂಧೆ ಮಾಡುವ ಕಾಲವಿದು. ಅಂತೂ ನೀರನ್ನು ಮುಂದಿನ ದಿನಗಳಲ್ಲಿ
ಭಾರತದಲ್ಲಿಯೂ ಷೇರುಮಾರುಕಟ್ಟೆಯಲ್ಲಿ ವ್ಯವಹಾರ ಮಾಡುವ ದಿನ ಬರಬಹುದು. ಆದರೆ ನಮ್ಮದೇ ದುರಾಸೆಗಳಿಗೆ ನಾವೇ ಬಲಿಯಾಗಿ ನಮ್ಮದೇ ಜೀವ ಜಲವನ್ನು ವ್ಯವಹಾರವಾಗಿ ಬಳಸಿಕೊಳ್ಳುವ ಕಾಲ ಬರದೇ ಇರಲಿ ಎನ್ನುವುದು ಆಶಯವಷ್ಟೇ. ಪಾನಿ ಪೌಂಡೇಷನ್, ಮಿಷನ್ ಪಾನಿ ಯಾವುದಾದರೂ ಆಗಲಿ, ನಮ್ಮ ಜೀವ ಜಲ ನಮಗಾಗಿ ಉಳಿಯಬೇಕಷ್ಟೆೆ.
ಇಲ್ಲವಾದಲ್ಲಿ ಊರೆಲ್ಲ ಕೊಳ್ಳೆಹೊಡೆದು ಹೋದಮೇಲೆ ದಿಡ್ಡಿ ಬಾಗಿಲು ಹಾಕಿದ ಹಾಗೆ ಅನ್ನೋ ಪರಿಸ್ಥಿತಿಯಲ್ಲಿ ನಾವಿರು
ತ್ತೇವಷ್ಟೇ. ದಿನನಿತ್ಯದ ರಾಜಕೀಯ ಪ್ರಹಸನಗಳ ಮಧ್ಯೆ ಮುಳುಗಿ ಹೋಗಿರುವ ಮನುಜ ತಾನೇ ಹೆಣೆಯುತ್ತಿರುವ ಕುಣಿಕೆಯಲ್ಲಿ ತಾನೇ ಸಿಲುಕಿರುವುದಂತೂ ಸ್ಪಷ್ಟ.