ವೀಕೆಂಡ್ ವಿತ್ ಮೋಹನ್
camohanbn@gmail.com
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಹೋರಾಡುವ ಮಹಾನ್ ಕ್ರಾಂತಿಕಾರಿಗಳ ರಾಜ್ಯವಾಗಿತ್ತು ಬಂಗಾಳ. ಬಂಗಾಳದಲ್ಲಿದ್ದಂತಹ ಸ್ವಾತಂತ್ರ್ಯದ ಕಿಚ್ಚಿನ ಭಯದಿಂದ ಬ್ರಿಟಿಷರು ರಾಜಧಾನಿಯನ್ನು ‘ದೆಹಲಿ’ಗೆ ವರ್ಗಾಯಿಸಬೇಕಾಯಿತು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬಂಗಾಳದವರೆಂದರೆ
ಸಾಕು ದೇಶಭಕ್ತರು, ಬುದ್ಧಿವಂತರು, ಕಾನೂನಿನ ವಿಚಾರಗಳನ್ನು ಹೆಚ್ಚು ಅರಿತವರು, ಅಪ್ರತಿಮ ಕ್ರಾಂತಿಕಾರಿಗಳೆಂದು ದೇಶದ ಜನ ಮಾತನಾಡಿಕೊಳ್ಳು ತ್ತಿದ್ದರು.
ಸುಭಾಷ್ ಚಂದ್ರ ಬೋಸ್‌ರಂತಹ ಮಹಾನ್ ಕ್ರಾಂತಿಕಾರರನ್ನು ಭಾರತ ಮಾತೆಯಾ ಸೇವೆಗೆ ನೀಡಿದ ರಾಜ್ಯ ಬಂಗಾಳ. ಬೋಸರು ಅಹಿಂಸಾವಾದದಿಂದ ಸ್ವಾತಂತ್ರ್ಯ ಸಿಗುವುದಿಲ್ಲವೆಂದು ಅರಿತ ಮೇಲೆ, ವೀರ ಸಾವರ್ಕರ್‌ರ ಸಲಹೆಯನ್ವಯ ಜರ್ಮನಿ ಹಾಗೂ ಜಪಾನ್ ದೇಶದಲ್ಲಿದಂತಹ ಭಾರತೀಯ ಬ್ರಿಟಿಷ್
ಯುದ್ಧ ಕೈದಿಗಳನ್ನು ಒಂದೆಡೆ ಸೇರಿಸಿ ’ಇಂಡಿಯನ್ ನ್ಯಾಷನಲ್ ಆರ್ಮಿ’ಯನ್ನು ಕಟ್ಟಿ ಬ್ರಿಟಿಷರ ಮೇಲೆ ಆಕ್ರಮಣ ಮಾಡಿರಲಿಲ್ಲವೆಂದಿದ್ದರೆ ನಮಗೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ.
ಮೊಟ್ಟ ಮೊದಲ ಬ್ರಿಟಿಷೇತರ ‘ಸಂಪೂರ್ಣ ಭಾರತೀಯ ಸರಕಾರ’ ಸ್ಥಾಪಿಸಿದ ಕೀರ್ತಿ ಬೋಸರಿಗೆ ಸಲ್ಲಬೇಕು. ಬ್ರಿಟಿಷರ ‘ಗೃಹ ಬಂಧನ’ದಿಂದ ತಪ್ಪಿಸಿ ಕೊಂಡು ದೇಶಬಿಟ್ಟು, ತಿಂಗಳುಗಟ್ಟಲೆ ಹಡಗುಗಳಲ್ಲಿ, ಸಬ್ ಮರೀನ್‌ಗಳಲ್ಲಿ ಕದ್ದುಮುಚ್ಚಿ ಜರ್ಮನ್‌ಗೆ ತೆರಳಿ ಹಿಟ್ಲರ್‌ನ ಸ್ನೇಹ ಸಂಪಾದಿಸಿ ಭಾರತೀಯ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಬ್ರಿಟಿಷರ ವಿರುದ್ಧ ಸೈನ್ಯ ಕಟ್ಟುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ, ಇಂತಹ ಮಹಾನ್ ಕಾರ್ಯವನ್ನು ಮಾಡಿದಂತಹ ಬೋಸರು ಹುಟ್ಟಿದ ನಾಡು ಬಂಗಾಳ.
ಬ್ರಿಟಿಷರನ್ನು ಭಾರತದಿಂದ ಓಡಿಸಲು ಬಹುದೊಡ್ಡ ಸೈನ್ಯವನ್ನೇ ಕಟ್ಟಿದ ಬೋಸರ ಬಂಗಾಳದ ಇಂದಿನ ಪರಿಸ್ಥಿತಿ ಏನಾಗಿದೆ ? ಪಕ್ಕದ ಬಾಂಗ್ಲಾದೇಶ ದಿಂದ ಲಕ್ಷಾಂತರ ಮುಸ್ಲಿಮರನ್ನು ಕಮ್ಯುನಿ ಹಾಗು ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರ ಅಕ್ರಮವಾಗಿ ಒಳಗೆ ಬಿಟ್ಟುಕೊಂಡಿದೆ, ಅವರಿಗೆ ಇಲ್ಲ
ಸಲ್ಲದ ಸವಲತ್ತುಗಳೆಲ್ಲವನ್ನೂ ನೀಡಿ ಭದ್ರವಾದಂತಹ ಮತ ಬ್ಯಾಂಕ್ ಮಾಡಿಕೊಂಡಿದೆ. ಬೋಸರು ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರೆ, ಕಮ್ಯುನಿಸ್ಟರು ತಮ್ಮ ಸ್ವಾರ್ಥಕ್ಕಾಗಿ ಅಸಂಖ್ಯಾತ ಮೂಲ ಬಂಗಾಳಿಗರ ರಕ್ತ ಚೆಲ್ಲುವ ಕೆಲಸವನ್ನು ಸುಮಾರು ೫೦ ವರ್ಷಗಳ ಆಡಳಿತದಲ್ಲಿ
ಮಾಡಿದ್ದಾರೆ.
ಬ್ರಿಟಿಷರನ್ನು ದೇಶದಿಂದ ಓಡಿಸಿದ ಬೋಸರ ಬಂಗಾಳದ ಇಂದಿನ ಪರಿಸ್ಥಿತಿಯಂತೂ ಎಷ್ಟು ಹೀನಾಯವಾಗಿದೆಯೆಂದರೆ, ಹಿಂದೂ ಹಬ್ಬಗಳನ್ನು ಸಾರ್ವಜನಿಕವಾಗಿ ಸಂಭ್ರಮಿಸಲು ಸಂಪೂರ್ಣ ಸ್ವಾತಂತ್ರ್ಯವಿಲ್ಲ, ಆದರೆ ಮುಸಲ್ಮಾನರಿಗೆ ಮಾತ್ರ ತಮ್ಮ ಹಬ್ಬಗಳನ್ನು ಆಚರಿಸಲು ಎಲ್ಲಿಲ್ಲದ ಸ್ವಾತಂತ್ರ್ಯ ಬಂಗಾಳದಲ್ಲಿದೆ. ತನ್ನ ಆಡಳಿತಾವಧಿಯುದ್ದಕ್ಕೂ ಮುಸಲ್ಮಾನರ ಓಲೈಕೆಯಲ್ಲಿ ತೊಡಗಿರುವ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ನೂರಾರು ಹಿಂದೂ ಕಾರ್ಯಕರ್ತರ ಕೊಲೆಗಳಾದವು. ಅ ಹುಟ್ಟಿ ಅ ಬೆಳೆದ ಬಂಗಾಳದ ಮೂಲ ಜನರ ಜೊತೆಗೆ ನಿಲ್ಲದೇ ಬಾಂಗ್ಲಾದೇಶದಿಂದ ಬಂದಂತಹ ಮುಸಲ್ಮಾನರ ಜೊತೆಗೆ ನಿಲ್ಲುವ ಮೂಲಕ ಬಂಗಾಳದ ಸ್ವಾತಂತ್ರ್ಯ ವೀರರಿಗೆ ದೊಡ್ಡ ಅವಮಾನ ಮಾಡಿದ್ದಾರೆ.
ತರುಣರ ಆಶಾಕಿರಣ ಸ್ವಾಮಿ ವಿವೇಕಾನಂದರು ಜನಿಸಿದಂತಹ ನಾಡು ಬಂಗಾಳ, ಹತ್ತೊಂಬತ್ತನೆಯ ಶತಮಾನದಲ್ಲಿ ಬಂಗಾಳದಿಂದ ಇಡೀ ದೇಶದ ಯುವಕರನ್ನು ಪ್ರೇರೇಪಿಸಿ ಸದೃಢ ದೇಶ ಕಟ್ಟುವ ಸಲುವಾಗಿ ಇಡೀ ದೇಶವನ್ನೇ ಸುತ್ತಿ ದೊಡ್ಡದೊಂದು ಯುವ ಪಡೆಯನ್ನು ಸಜ್ಜಾಗಿಸಿದವರು ಸ್ವಾಮಿ ವಿವೇಕಾನಂದರು. ಒಂದು ಶತಮಾನದ ಹಿಂದೆ ಅವರು ಹೇಳಿದ ಮಾತುಗಳನ್ನು ಕೇಳಿದರೆ ಇಂದಿಗೂ ರೋಮಾಂಚನವಾಗುತ್ತದೆ. ವಿವೇಕಾನಂದರ ಸುಂದರ ಭಾರತದ ಕಲ್ಪನೆಯ ಹಿಂದಿನ ಶಕ್ತಿ ನವ ತರುಣರು, ಅವರು ಹಾಕಿದ ಭದ್ರ ಬುನಾದಿಯು ಇಂದಿಗೂ ಸಮಾಜ ಕಟ್ಟುವಲ್ಲಿ ತರುಣರಿಗೆ ಯಥಾ ಪ್ರಕಾರ ಅನ್ವಯವಾಗುತ್ತದೆ.
ವಿವೇಕಾನಂದರ ದೂರದೃಷ್ಟಿ ಎಷ್ಟಿತ್ತೆಂದರೆ ನಾವು ಈಗ ಯೋಚಿಸುವ ಭವ್ಯ ಭಾರತದ ಕನಸನ್ನು ನೂರು ವರ್ಷಗಳ ಹಿಂದೆಯೇ ಕಂಡಿದ್ದರು. ತರುಣ ಪಡೆಯನ್ನು ದೇಶದ ಅಭಿವೃದ್ಧಿಗಾಗಿ ಸಜ್ಜುಗೊಳಿಸಿದರೆ ಭಾರತವು ಪಾಶ್ಚಿಮಾತ್ಯ ದೇಶಗಳಿಗಿಂತಲೂ ಮುಂದುವರೆಯುವುದರಲ್ಲಿ ಯಾವುದೇ ಅನುಮಾನವಿಲ್ಲವೆಂಬ ಕನಸು ಅವರದ್ದಾಗಿತ್ತು. ಅಮೆರಿಕದ ಚಿಕಾಗೊ ಸಮ್ಮೇಳನದಲ್ಲಿ ಶತಮಾನದ ಹಿಂದೆ ಸರ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಬಗ್ಗೆ ಅವರು ಮಾಡಿದ ಭಾಷಣವು ಇಡೀ ವಿಶ್ವವನ್ನೇ ಮಂತ್ರಮುಗ್ಧರನ್ನಾಗಿ ಮಾಡಿತ್ತು. ನಮ್ಮ ಧರ್ಮವನ್ನು ಆಡಿಕೊಂಡು ನಗುತ್ತಿದ್ದವರ ಮುಂದೆ ಭಾರತೀಯರ ಶಕ್ತಿಯನ್ನು ಆಳವಾಗಿ ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲಬೇಕು.
ಕಿರಿಯ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕರಿಸಿ ದೇಶದ ಒಳಿತಿಗಾಗಿ ತರುಣರ ಪಡೆಯನ್ನು ಸಜ್ಜುಪಡಿಸಿ, ತಮ್ಮ ವಾಕ್ಚಾತುರ್ಯದ ಮೂಲಕ ಯುವಕರನ್ನು ದೇಶ ಕಟ್ಟುವ ಕೆಲಸದೆಡೆಗೆ ಕರೆತಂದಂತಹ ಮಹಾನ್ ಸಂತನು ಜನಿಸಿದ ಬಂಗಾಳದಲ್ಲಿ ಇಂದು ಹಿಂದೂಗಳ ಪರಿಸ್ಥಿತಿ ಏನಾಗಿದೆ? ದುರ್ಗಾಷ್ಟಮಿಯ
ದಿನದ ಮೆರವಣಿಗೆಯನ್ನು ನಡೆಸಲು ಮಮತಾ ಬ್ಯಾನರ್ಜಿ ನೇತೃತ್ವದ ಸರಕಾರದ ಅನುಮತಿ ಕೇಳಬೇಕಾದಂತಹ ಪರಿಸ್ಥಿತಿ ಒದಗಿ ಬಂದಿದೆ. ಅನುಮತಿ ನೀಡಿದರೂ ರಾತ್ರಿ ಹತ್ತು ಘಂಟೆಯ ಮೇಲೆ ಮೆರವಣಿಗೆ ಮಾಡುವಂತಿಲ್ಲ, ಅನ್ಯ ಧರ್ಮದವರಿಗೆ ಧಕ್ಕೆಯುಂಟಾಗುತ್ತದೆಯೆಂಬ ಕಾರಣ ನೀಡಿ ಹಲವೆಡೆ ಅನುಮತಿಯುಯನ್ನೇ ನೀಡುತ್ತಿರಲಿಲ್ಲ.
ಶತಮಾನದ ಹಿಂದೆ ಪಾಶ್ಚಿಮಾತ್ಯರ ಮುಂದೆ ಹಿಂದೂ ಧರ್ಮದ ವಿಚಾರಧಾರೆಗಳನ್ನು ಆಳವಾಗಿ ಮಂಡಿಸಿದ ಸ್ವಾಮಿ ವಿವೇಕಾನಂದರ ಬಂಗಾಳದಲ್ಲಿ ಇಂದು ಹಿಂದೂ ಧರ್ಮದ ಆಚರಣೆಗಳಿಗೆ ಯಾವ ರೀತಿಯ ತೊಡಕುಂಟಾಗಿದೆ. ಹಿಂದೂ ಧರ್ಮದ ಪರವಾಗಿ ಮಾತನಾಡುವ ತರುಣರ ಕೊಲೆ ಗಳಾಗುತ್ತವೆ, ಮೂರು ದಶಕಗಳ ಕಾಲ ಆಳಿದ ಕಮ್ಯುನಿಸ್ಟರು ಬಂಗಾಳದ ಯುವಕರನ್ನು ನಿರುದ್ಯೋಗಿಗಳನ್ನಾಗಿಸಿದರು. ಸ್ವಾಮಿ ವಿವೇಕಾನಂದರ ಆಶಯದಂತೆ ಬಂಗಾಳದ ಯುವಕರನ್ನು ಬಳಸಿ ದೇಶ ಕಟ್ಟುವುದಿರಲಿ, ಕನಿಷ್ಠ ಬಂಗಾಳ ರಾಜ್ಯವನ್ನು ಅಭಿವೃದ್ಧಿ ಮಾಡಲಿಲ್ಲ.ಹಿಂದುಳಿದ ರಾಜ್ಯಗಳ
ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ರಾಜ್ಯವೂ ಸೇರುವಂತೆ ಮಾಡಿದ ಕೀರ್ತಿ ಬ್ಯಾನರ್ಜಿಗೆ ಸಲ್ಲಬೇಕು. ಕೆಲಸವಿಲ್ಲದ ಕೋಲ್ಕತ್ತಾದ ತರುಣರು ಕೆಲಸ ಆರಿಸಿ ದೇಶದ ವಿವಿಧ ನಗರಗಳಿಗೆ ವಲಸೆ ಬರುವಂತಾಯಿತು.
ಕಳೆದ ಹತ್ತು ವರ್ಷಗಳಲ್ಲಿ ಬೆಂಗಳೂರಿನಲ್ಲಿ ವಲಸಿಗ ಬಂಗಾಳಿಗಳರ ಸಂಖ್ಯೆ ಅದೆಷ್ಟು ಹೆಚ್ಚಾಗಿದೆಯೆಂದರೆ ತಮಿಳರಗಿಂತಲೂ ಹೆಚ್ಚಾಗಿ ಬಂಗಾಳಿಗಳು ಕಾಣಿಸುತ್ತಾರೆ. ಕಾವಿ ತೊಟ್ಟು ಸರ್ವ ಧರ್ಮ ಸಮ್ಮೇಳನದಲ್ಲಿ ಪಾಶ್ಚಿಮಾತ್ಯರ ಮುಂದೆ ನಿಂತಂಹ ಬಂಗಾಳದ ಸ್ವಾಮಿ ವಿವೇಕಾನಂದರ ನಾಡಿನಲ್ಲಿ ಕೇಸರಿ ಬಣ್ಣ ಕಂಡರೆ ಮಮತಾ ಬ್ಯಾನರ್ಜಿ ಉರಿದು ಬೀಳುತ್ತಾರೆ, ಇಂತಹ ಸಂತ ಹುಟ್ಟಿದ ನಾಡಿನಲ್ಲಿ ಕಾವಿಗಿರುವ ಪ್ರಸ್ತುತ ಬೆಲೆಯಿದು. ಜೈ ಶ್ರೀರಾಮ್ ಘೋಷಣೆ ಕೂಗಿದವರ ಕೊಲೆಗಳಾಗುತ್ತವೆ, ಪಾಕಿಸ್ತಾನದ ಉಗ್ರ ಸಂಘಟನೆಗಳಿಗಿಂತಲೂ ಉಗ್ರವಾಗಿ ಹಿಂದೂ ಕಾರ್ಯಕರ್ತರ ಬರ್ಬರ ಕೊಲೆಗಳು ಬಂಗಾಳದಲ್ಲಿ ಕಳೆದ ಒಂದು ದಶಕದ್ದಾಗಿವೆ.
ಒಂದು ಕಾಲದಲ್ಲಿ ಬ್ರಿಟಿಷರ ರಾಜಧಾನಿಯಾಗಿದ್ದಂತಹ ಕೋಲ್ಕತ್ತಾ ನಗರದಲ್ಲಿ ಇಂದಿಗೂ ಸಾರ್ವಜನಿಕ ಸಾರಿಗೆಯಲ್ಲಿ ಓಡಾಡಲು ಕಷ್ಟವಾಗುತ್ತದೆ. ಅಲ್ಲಿ ಓಡಾಡುವ ಸಾರ್ವಜನಿಕ ಬಸ್ಸುಗಳ ಪರಿಸ್ಥಿತಿ ಅಷ್ಟೊಂದು ಚಿಂತಾಜನಕವಾಗಿದೆ. ಪಶ್ಚಿಮ ಬಂಗಾಳದಲ್ಲಿ ನೂತನ ಕಂಪನಿಗಳು ಹೊಸದೊಂದು ಕಾರ್ಖಾನೆಯನ್ನು ಶುರುಮಾಡಬೇಕಾದರೆ ಭಯ ಪಡುತ್ತವೆ. ಕಮ್ಯುನಿಸ್ಟರಿಗೆ ತಾವು ಉದ್ದಾರವಾಗಬಾರದು, ಮಾಲೀಕನೂ ಉದ್ದಾರವಾಗಬಾರದು, ತನ್ನ ಪ್ರಜೆಗಳೂ ಸಹ ಉದ್ದಾರವಾಗಬಾರದು. ತಾನು ಅಳುತ್ತಿರುವ ರಾಜ್ಯ ಬಡತನದಿಂದಲೇ ಕೂಡಿರಬೇಕು, ಜಗತ್ತಿಗೆ ಅದನ್ನೇ ತೋರಿಸಿ ತಮ್ಮ ಪ್ರಾಬಲ್ಯ ಮೆರೆಯಬೇಕು.
ಬಂಗಾಳದಲ್ಲಿ ಕಮ್ಯುನಿಸ್ಟರ ಹಾವಳಿ ಅದೆಷ್ಟಿತ್ತೆಂದರೆ, ೧೯೬೨ ರ ಚೀನಾ ಯುದ್ಧದಲ್ಲಿ ಭಾರತಕ್ಕೆ ಅಮೆರಿಕ ಕಳುಹಿಸಿಕೊಟ್ಟಂತಹ ಶಸ್ತ್ರಾಸ್ತ್ರಗಳು
ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ, ಅಸ್ತ್ರಗಳನ್ನು ವಿಮಾನದಿಂದ ಕೆಳಗಿಳಿಸಲು ಕೂಲಿಯಾಳುಗಳು ವಿಮಾನ ನಿಲ್ದಾಣವನ್ನು ಪ್ರವೇಶಿಸ ದಂತೆ ದೊಡ್ಡದೊಂದು ಪ್ರತಿಭಟನೆಯನ್ನು ಮಾಡಿಸಲಾಯಿತು. ಒಂದು ವಾರಗಳ ಕಾಲ ಪ್ರತಿಭಟನೆ ಮಾಡಿ ನಮ್ಮ ಸೈನಿಕರಿಗೆ ಶಶ್ತ್ರಾಸ್ತ್ರ ಗಳಿಲ್ಲದಂತೆ ಮಾಡಲಾಯಿತು. ಜ್ಯೋತಿ ಬಸುವೆಂಬ ಕಮ್ಯುನಿ ಮುಖ್ಯಮಂತ್ರಿ ೨೩ ವರ್ಷಗಳ ಕಾಲ ಪಶ್ಚಿಮ ಬಂಗಾಳದಲ್ಲಿ ಆಡಳಿತ ನಡೆಸಿ ರಾಜ್ಯವನ್ನು ಅಧಃಪತನ ದೆಡೆಗೆ ತೆಗೆದುಕೊಂಡು ಹೋಗಿದ್ದನ್ನು ಮರೆಯುವ ಹಾಗಿಲ್ಲ. ಬಾವಿಯೊಳಗಿನ ಕಪ್ಪೆಯಂತೆ ಅಲ್ಲಿನ ಜನರು ಇವರ ಆಡಳಿತವೇ ಅಂತಿಮವೆಂಬಂತೆ ಹೊರಜಗತ್ತಿನ ಸ್ಪರ್ಧೆಯ ಬಗ್ಗೆ ಚಿಂತಿಸಲೇ ಇಲ್ಲ.
ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ನೆಲಮಟ್ಟದಲ್ಲಿ ಅನುಷ್ಠಾನಗೊಳಿಸಿದ ಕೀರ್ತಿ ಸೋದರಿ ನಿವೇದಿತರಿಗೆ ಸಲ್ಲಬೇಕು. ದೂರದ ಯೂರೋಪಿ ನಿಂದ ಬಂದು ಬಂಗಾಳದಲ್ಲಿ ನೆಲೆಸಿ ಸ್ವಾಮೀಜಿಯ ಚಿಂತನೆಗಳನ್ನು ಬಂಗಾಳದ ಯುವಕ, ಯುವತಿಯರಿಗೆ ಆದರ್ಶವನ್ನಾಗಿಸಿದ್ದರು. ರಾಜಕೀಯ ವಾಗಿಯೂ ನಿವೇದಿತಾ ಅದೆಷ್ಟು ಪ್ರಬುದ್ಧರಾಗಿ ದ್ದರೆಂದರೆ ದೊಡ್ಡ ದೊಡ್ಡ ರಾಜಕೀಯ ನಾಯಕರೆಲ್ಲರೂ ಅವರ ಸಲಹೆ ಪಡೆಯುತ್ತಿದ್ದರು. ಜಗದೀಶ್ ಚಂದ್ರ ಬೋಸ್ ರಂತಹ ಬಂಗಾಳದ ಖ್ಯಾತ ವಿಜ್ಞಾನಿ ಸೋದರಿ ನಿವೇದಿತಾರ ಸಲಹೆಯನ್ನು ಪಡೆಯುತ್ತಿದ್ದರು. ವಿಜ್ಞಾನ ಜಗತ್ತಿಗೆ ಬಂಗಾಳದ ಜಗದೀಶ್ ಚಂದ್ರ ಬೋಸರ ಕೊಡುಗೆಯನ್ನು ಹೇಗೆ ತಾನೇ ಮರೆಯಲು ಸಾಧ್ಯ? ಭೌತಶಾಸ್ತ್ರ, ಸಸ್ಯಶಾಸ್ತ್ರ, ರೇಡಿಯೋ ವಿಜ್ಞಾನಗಳಲ್ಲಿ ಅಪಾರ ಸಾಧನೆಗೈದ ವಿಜ್ಞಾನಿಯೋರ್ವ ಬಂಗಾಳದವರಾಗಿರುವುದು ಅಲ್ಲಿನ ಜನರ ಹೆಮ್ಮೆ.
ಇಂತಹ ವಿಜ್ಞಾನಿ ಹುಟ್ಟಿದ ಬಂಗಾಳದ ಇಂದಿನ ವಿಜ್ಞಾನದ ಪರಿಸ್ಥಿತಿ ಏನಾಗಿದೆ? ಸ್ವಾತಂತ್ರ್ಯ ಪೂರ್ವದಲ್ಲಿ ಬಂಗಾಳದದ ಚಳುವಳಿಗಳು, ಕ್ರಾಂತಿಕಾರಕ ನಿರ್ಧಾರಗಳು, ಬ್ರಿಟಿಷರ ವಿರುದ್ದದ ಹೋರಾಟಗಳು, ವಿಜ್ಞಾನದದಂತಹ ಆವಿಷ್ಕಾರಗಳು, ತರುಣರನ್ನು ಹುರಿದುಂಬಿಸಿದ ಘಟನೆಗಳ ನ್ನೊಮ್ಮೆ ನೆನೆದು ಇಂದಿನ ಬಂಗಾಳದ ಪರಿಸ್ಥಿತಿಯನ್ನು ನೆನೆದರೆ ಕಣ್ಣುಗಳು ಒದ್ದೆಯಾಗುತ್ತವೆ. ಎಂತೆಂತ ಘಟಾನುಘಟಿಗಳನ್ನು ಭಾರತಾಂಬೆಯ ಸೇವೆಗೆ ನೀಡಿದ ರಾಜ್ಯ ದಲ್ಲಿ ದೇಶವಿರೋಧಿ ಕೃತ್ಯಗಳು ದಶಕಗಳಿಂದ ನಡೆದುಕೊಂಡು ಬರುತ್ತಿರುವುದು ದುರದೃಷ್ಟಕರ ಸಂಗತಿ. ಭಾರತಕ್ಕೆ ರಾಷ್ಟ್ರಗೀತಯನ್ನು ಕೊಡುಗೆ ಯಾಗಿ ನೀಡಿದಂತಹ ರವೀಂದ್ರನಾಥ ಟಾಗೋರ್ ಬಂಗಾಳದವರು.
ಇಂತಹ ಬಂಗಾಳದಲ್ಲಿ ರಾಷ್ಟ್ರಗೀತೆಯನ್ನು ಹಾಡಿ ಪೊಲೀಸರಿಂದ ಏಟು ತಿಂದಂತಹ ಪ್ರಸಂಗಗಳು ಮಮತಾ ಬ್ಯಾನರ್ಜಿಯ ಆಡಳಿತದಲ್ಲಿ ಕೇಳಿಬರು ತ್ತಲೇ ಇವೆ. ಅತಿ ಹೆಚ್ಚು ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ರೋಹಿಂಗ್ಯಾ ಮುಸಲ್ಮಾನರಿಗಂತೂ ಮಮತಾ ಬ್ಯಾನರ್ಜಿ ಮಾಡಿರುವ ಸಹಾಯ ಅಂತಿಂತದ್ದಲ್ಲ, ಬಂಗಾಳದ ಮೂಲ ನಾಗರಿಕರಿಗೆ ಸಿಗದ ಸೌಲಭ್ಯಗಳನ್ನು ರೋಹಿಂಗ್ಯಗಳಿಗೆ ಮಮತಾ ನೀಡಿzರೆ. ವಂದೇ ಮಾತರಂ ಭಾರತೀ
ಯರು ಹೆಮ್ಮೆ ಪಟ್ಟು ಭಾರತಾಂಬೆಯ ನೆನೆದು ಹಾಡುವ ಹಾಡು, ಭಾರತೀಯ ಸೈನಿಕರು ಗಡಿಯಲ್ಲಿ ಶತ್ರುಗಳನ್ನು ಸದೆಬಡಿಯಬೇಕಾದರೆ ತಮ್ಮ ಆತ್ಮಸ್ಥೈರ್ಯಕ್ಕಾಗಿ ಹಾಡುವ ಹಾಡು, ಕ್ರೀಡೆಯಲ್ಲಿ ವಿಜೇತರಾದ ಬಳಿಕ ಪ್ರತಿಯೊಬ್ಬ ಭಾರತೀಯನ ಸಂಭ್ರಮದಲ್ಲಿ ಅಡಗಿರುವ ಹಾಡು, ಇಂತಹ
ಹಾಡನ್ನು ಬರೆದ ಕವಿಯನ್ನು ಕೊಟ್ಟಂತಹ ರಾಜ್ಯ ಬಂಗಾಳದಲ್ಲಿ ಇಂದು ವಂದೇ ಮಾತರಂ ಹೇಳಿದರೆ ಮಮತಾ ಬ್ಯಾನರ್ಜಿಗೆ ಮೆಣಸಿನಕಾಯಿ ತಿಂದಂತಹ ಅನುಭವವಾಗುತ್ತದೆ.
ರಾಮಕೃಷ್ಣ ಪರಮಹಂಸ,ಸ್ವಾಮಿ ವಿವೇಕಾನಂದ, ಸುಭಾಷ್ ಚಂದ್ರ ಬೋಸ್, ಸಿಸ್ಟರ್ ನಿವೇದಿತಾ, ಬಂಕಿಮ ಚಂದ್ರ ಚಟರ್ಜಿ, ಜಗದೀಶ್ ಚಂದ್ರ ಬೋಸ್, ರವೀಂದ್ರ ನಾಥ್ ಠಾಗೋರ್‌ರಂತಹ ಅಪ್ರತಿಮ ದೇಶಭಕ್ತರು, ವಿಜ್ಞಾನಿಗಳು, ಕವಿಗಳನ್ನು ದೇಶಕ್ಕೆ ನೀಡಿದಂತಹ ಬಂಗಾಳದ ಸ್ವಾತಂತ್ರ್ಯ ನಂತರದ ಇತಿಹಾಸ ಬಹಳ ಕಠಿಣವಾಗಿದೆ. ಸ್ವಾತಂತ್ರ್ಯಾನಂತರ ಆಳಿದ ಪಕ್ಷಗಳು ಬಂಗಾಳದ ಐತಿಹಾಸಿಕ ಸಾಧನೆಗಳನ್ನು ಮರೆತವು, ಪಶ್ಚಿಮ ಬಂಗಾಳವೆಂದರೆ ವಾಕರಿಕೆ ಬರುವ ರೀತಿಯಲ್ಲಿ ಆಡಳಿತ ನಡೆಸಿದ ಕೀರ್ತಿ ಕಮ್ಯುನಿ ಹಾಗೂ ಮಮತಾ ಬ್ಯಾನರ್ಜಿಗೆ ಸಲ್ಲಬೇಕು.
ಇವರ ಆಡಳಿತದಲ್ಲಿ ಬಂಗಾಳದಲ್ಲಿ ಸ್ವಾಮಿ ವಿವೇಕಾನಂದರ ಆದರ್ಶಗಳಿಗೆ ಬೆಲೆಯಿಲ್ಲದಂತಾಗಿದೆ, ಬ್ರಿಟಿಷರ ವಿರುದ್ಧ ಸುಭಾಷ್ ಚಂದ್ರ ಬೋಸರಿಗಿ ದ್ದಂತಹ ಕ್ರಾಂತಿಕಾರಿ ನಿಲುವುಗಳು ಪುನಃ ಪುಟಿದೇಳಲಿಲ್ಲ. ರವೀಂದ್ರನಾಥ್ ಠಾಗೂರರು ರಚಿಸಿದ ರಾಷ್ಟ್ರಗೀತೆಗೆ ಎಗ್ಗಿಲ್ಲದೆ ಅಪಮಾನಗಳಾ ದರೂ ಸಹ ಅದನ್ನು ಖಂಡಿಸುವ ಸರಕಾರ ಬಂಗಾಳದಲ್ಲಿ ಅಧಿಕಾರಕ್ಕೇರಲಿಲ್ಲ, ಮಹಾನ್ ನಾಯಕರ ಗತವೈಭವ ಬಂಗಾಳದಲ್ಲಿ ಮತ್ತೊಮ್ಮೆ ಮರುಕಳಿಸುವ ಕಾಲಕ್ಕೆ ಕಾಯಬೇಕಿದೆ.