Saturday, 14th December 2024

ಯಾರಿಗೆ ಬೇಕು ಬಿಲಿಯನೇರ್ ಪ್ರೆೆಸಿಡೆಂಟ್ ಹುದ್ದೆೆ?

ಪ್ರಜಾಪ್ರಭುತ್ವದ ಇತಿಹಾಸದುದ್ದಕ್ಕೂ ನೋಡಿ. ರಾಜಕಾರಣಿಗಳಿಗೆ ಚುನಾವಣೆಯ ಖರ್ಚಿಗೆಂದು ಹಣ ನೀಡುತ್ತಲೇ ಬಂದಿದ್ದಾಾರೆ. ತನ್ಮೂಲಕ ಸರಕಾರವನ್ನು ನಿಯಂತ್ರಿಸುತ್ತಿದ್ದಾರೆ. ಅವರದು ಒಂಥರಾ ವಿಶೇಷವಾದ ಸಮಾಜಸೇವೆ!

*ಅಲನ್ ಜೇಕಬ್

ಇಂದು ಶ್ರೀಮಂತ ಅಲ್ಪಸಂಖ್ಯಾಾತರು ಪ್ರಜಾಪ್ರಭುತ್ವವನ್ನು ನಿಯಂತ್ರಿಿಸುತ್ತಿಿದ್ದಾಾರೆ. ಜನಸಮಾನ್ಯರಿಗೆ ಇದು ಒಳ್ಳೆೆಯದೇನಲ್ಲ. ಆದರೆ ಪರಿಸ್ಥಿಿತಿ ಇರುವುದೇ ಹೀಗೆ. ಪ್ರಜಾಪ್ರಭುತ್ವದಲ್ಲಿ ಶತಕೋಟ್ಯಧಿಪತಿಗಳ ಆರಾಧನೆ ತಾರಕಕ್ಕೇರಿ, ಶ್ರೀಮಂತ ಕುಳಗಳು ಚುನಾವಣಾ ವ್ಯವಸ್ಥೆೆಯನ್ನು ಹೈಜಾಕ್ ಮಾಡಿರುವುದರಿಂದ ಸಮಾಜ ಒಡೆದಿದೆ ಎಂಬ ಮಾತೂ ನಮ್ಮ ಕಿವಿಗೆ ಬೀಳುತ್ತಿಿದೆ. ಚೀಲಗಳ ಮೇಲೆ ಕುಳಿತ ಮೋಜುಗಾರ ಪುರುಷ ಮತ್ತು ಮಹಿಳೆಯರು ಸರಕಾರ ನಡೆಸಲು ನಮ್ಮನ್ನು ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ಯೋಚಿಸುತ್ತಿಿದ್ದಾಾರೆ. ದುಡ್ಡು ಮಾಡುವ ಕೆಲಸ ಮುಗಿಸಿ, ಸಮಾಜಕ್ಕಾಾಗಿ ಹಾಗೂ ದೇಶಕ್ಕಾಾಗಿ ಅದನ್ನು ಕೊಡಲು ಶುರುಮಾಡಿದ ಮೇಲೆ ಆ ಸೋಗಿನಲ್ಲಿ ಮತ ಕೇಳುವುದಕ್ಕೆೆ ಅವರಿಗೆ ಯಾವ ರೀತಿಯಲ್ಲೂ ನಾಚಿಕೆಯಾಗುತ್ತಿಿಲ್ಲ.

ಇದಕ್ಕೆೆ ಕಾರಣ, ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿಿರುವ ಮೌಲ್ಯವೇ ದುರಾಸೆಯಾಗಿರುವುದು. ಇಂದು ಚುನಾವಣಾ ಪ್ರಚಾರಕ್ಕೆೆ ಖರ್ಚು ಮಾಡಲು ಹಾಗೂ ಮತದಾರರನ್ನು ಸೆಳೆಯಲು ದುಡ್ಡಿಿದ್ದರೂ ಸಾಲದು. ಹೀಗಾಗಿ ಹಣದಿಂದ ಪ್ರಭಾವ ಬರುತ್ತದೆ, ಹೆಚ್ಚು ಹಣದಿಂದ ಹೆಚ್ಚು ಪ್ರಭಾವ ಬರುತ್ತದೆ.
ಪ್ರಜಾಪ್ರಭುತ್ವದ ಇತಿಹಾಸದುದ್ದಕ್ಕೂ ನೋಡಿ. ಶ್ರೀಮಂತರು ರಾಜಕಾರಣಿಗಳಿಗೆ ಚುನಾವಣೆಯ ಖರ್ಚಿಗೆಂದು ಹಣ ನೀಡುತ್ತಲೇ ಬಂದಿದ್ದಾಾರೆ. ತನ್ಮೂಲಕ ಸರಕಾರವನ್ನು ನಿಯಂತ್ರಿಿಸುತ್ತಿಿದ್ದಾಾರೆ. ಅವರದು ಒಂಥರಾ ವಿಶೇಷವಾದ ಸಮಾಜಸೇವೆ. ಆ ಸಮಾಜಸೇವೆಯಿಂದ ಅವರು ಸರಕಾರದ ನೀತಿ ನಿರೂಪಣೆಯ ಮೇಲೂ ಪ್ರಭಾವ ಬೀರುತ್ತಾಾರೆ, ಜತೆಗೆ ತಮ್ಮ ಉದ್ದಿಮೆಗಳ ಹಿತಾಸಕ್ತಿಿಯನ್ನೂ ಕಾಪಾಡಿಕೊಳ್ಳುತ್ತಾಾರೆ.

ಸಾಮಾನ್ಯವಾಗಿ ಇಂತಹ ಶ್ರೀಮಂತರನ್ನು ಒಂಚೂರು ಎಡಕ್ಕೆೆ ವಾಲಿದ ತಟಸ್ಥ ಎಂದು ಬಿಂಬಿಸಲಾಗುತ್ತದೆ. ಇತ್ತೀಚೆಗೆ ಇವರು ತಮಗಿರುವಷ್ಟೂ ಶಕ್ತಿಿ ಬಳಸಿ ಅಮೆರಿಕದ ಅಧ್ಯಕ್ಷ ಡೊನಾಲ್‌ಡ್‌ ಟ್ರಂಪ್ ಅವರನ್ನು ಬೈಯತೊಡಗಿದ್ದಾಾರೆ. ಹಿಂದೆ ಇವರು ಹೀಗಿರಲಿಲ್ಲ. ಇಂದು ಭೂಮಿಯ ಮೇಲಿರುವ ಅತ್ಯಂತ ದ್ವೇಷಿಸಲ್ಪಡುವ ವ್ಯಕ್ತಿಿಯ ವಿರುದ್ಧ ಇವರು ನಿರಂತರವಾಗಿ ಪ್ರಚಾರ ಮಾಡುತ್ತಿಿದ್ದಾಾರೆ.
ಮಾಡುವುದಕ್ಕೆೆ ಬೇರೇನೂ ಕೆಲಸವಿಲ್ಲದೆ ಹಿಂದೊಮ್ಮೆೆ ಇದೇ ಶತಕೋಟ್ಯಧಿಪತಿ ರಿಯಲ್ ಎಸ್ಟೇಟ್ ಉದ್ಯಮಿ ಡೊನಾಲ್‌ಡ್‌ ಟ್ರಂಪ್ ಟಿ.ವಿ ಶೋಗಳ ಲೈವ್‌ನಲ್ಲಿ ನೌಕರರನ್ನು ಕೆಲಸದಿಂದ ಕಿತ್ತುಹಾಕುತ್ತಾಾ ಕಾಲಯಾಪನೆ ಮಾಡಿಕೊಂಡಿದ್ದರು. ನಂತರ ಒಂದು ದಿನ ತನ್ನ ಉದ್ಯಮವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನರಿಗೆ ಪರಿಚಯಿಸಬೇಕು ಅನ್ನಿಿಸಿತು. ಹೀಗಾಗಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಜಗತ್ತಿಿನ ಅತ್ಯಂತ ಶಕ್ತಿಿಶಾಲಿ ವ್ಯಕ್ತಿಿಯಾದರು. 2016ರಲ್ಲಿ ಟ್ರಂಪ್ ಗೆದ್ದಿದ್ದು ನೋಡಿ ಹೀಗೇ ಹಣದ ರಾಶಿಯ ಮೇಲೆ ಕುಳಿತ ಇನ್ನಷ್ಟು ವೃದ್ಧ ಶ್ರೀಮಂತರಿಗೆ ಸ್ಫೂರ್ತಿ ಉಕ್ಕಿಿತು. ತಾವೂ ಏಕೆ ಶ್ವೇತಭವನದಲ್ಲಿ ಕುಳಿತು ಜಗತ್ತಿಿನಲ್ಲಿ ತಮ್ಮದೇ ಹೆಜ್ಜೆೆ ಗುರುತು ಮೂಡಿಸಬಾರದು ಎಂದು ಲೆಕ್ಕಹಾಕಿದರು. ಅಂತಹವರಲ್ಲಿ ಮೈಕಲ್ ಬ್ಲೂಮ್‌ಬರ್ಗ್ ಕೂಡ ಒಬ್ಬ.

ನ್ಯೂಯಾರ್ಕ್ ಸಿಟಿಯ ಮೇಯರ್ ಹಾಗೂ ಮಾಧ್ಯಮಲೋಕದ ಬಿಲಿಯನೇರ್ ಉದ್ಯಮಿಯಾದ ಬ್ಲೂಮ್‌ಬರ್ಗ್ ತಮ್ಮದೇ ಬ್ರಾಾಂಡ್‌ನ ನ್ಯೂಸ್‌ಗಳಿಂದ ಸಾಕಷ್ಟು ಹೆಸರು ಗಳಿಸಿದ್ದಾಾರೆ. ಅವರು ಕೊಡುವ ಸುದ್ದಿಗಳಿಗೆ ಬ್ರಾಾಂಡೆಡ್ ನ್ಯೂಸ್ ಅನ್ನಬಹುದು! ಹಿಂದೆ ಯಾರೂ ಇಂತಹದ್ದೊೊಂದು ನ್ಯೂಸ್ ಇದೆ ಎಂದೂ ಯೋಚಿಸಿರಲಿಲ್ಲ. ಆದರೆ, ಬ್ಲೂಮ್‌ಬರ್ಗ್ ತನ್ನ ಮಾಧ್ಯಮ ಸಾಮ್ರಾಾಜ್ಯವನ್ನು ಕಟ್ಟಲು ಸುದ್ದಿಗೂ ಬ್ರಾಾಂಡ್ ಸೃಷ್ಟಿಿಸಿ ಯಶಸ್ವಿಿಯಾದರು. ಇತ್ತೀಚೆಗೆ ಅವರು ಡೆಮಾಕ್ರೆೆಟಿಕ್ ಪಕ್ಷದಿಂದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಪಟ್ಟಿಿಗೆ ಸೇರಿಕೊಂಡಿದ್ದಾಾರೆ. ಈ ಪಕ್ಷದ ಇನ್ನಿಿತರ ಬಳಿ ತನ್ನಲ್ಲಿರುವಷ್ಟು ದುಡ್ಡಿಿಲ್ಲ ಎಂಬುದು ಬ್ಲೂಮ್‌ಬರ್ಗ್‌ಗೆ ಗೊತ್ತು. ದುಡ್ಡಿಿಲ್ಲದಿದ್ದರೆ ಟ್ರಂಪ್‌ರನ್ನು ಸೋಲಿಸುವುದು ಕಷ್ಟ. ಏಕೆಂದರೆ, ನಾನಾ ವೈಫಲ್ಯಗಳ ಹೊರತಾಗಿಯೂ ಟ್ರಂಪ್‌ಗಿರುವ ಬೆಂಬಲ ಕಡಿಮೆಯಾಗಿಲ್ಲ.

ಆದರೆ, ಟ್ರಂಪ್‌ಗಿಂತ ಹೆಚ್ಚಾಾಗಿ ಡೆಮಾಕ್ರೆೆಟಿಕ್ ಪಕ್ಷದಲ್ಲೇ ಬ್ಲೂಮ್‌ಬರ್ಗ್‌ಗೆ ಇರುವ ಅಡ್ಡಿಿಯೆಂದರೆ ಸಮಾಜವಾದಿ ನಾಯಕಿ ಎಲಿಜಬೆತ್ ವಾರನ್. ಇನ್ನೊೊಂದು ಅಡ್ಡಿಿಯೆಂದರೆ ಸಮಾಜವಾದಿ ನಾಯಕ ಬರ್ನಿ ಸ್ಯಾಾಂಡರ್ಸ್. ಇವರಿಬ್ಬರೂ ಅಮೆರಿಕದಲ್ಲಿ ನಡೆಯುತ್ತಿಿರುವ ಆಗರ್ಭ ಶ್ರೀಮಂತರ ರಾಜಕಾರಣಕ್ಕೆೆ ಇತಿಶ್ರೀ ಹಾಡಬೇಕೆಂದು ಹೊರಟಿದ್ದಾಾರೆ. ಎಲ್ಲರಿಗೂ ಉಚಿತ ಶಿಕ್ಷಣದಿಂದ ಹಿಡಿದು ಶ್ರೀಮಂತರಿಗೆ ಆಸ್ತಿಿ ತೆರಿಗೆ ವಿಧಿಸುವವರೆಗೆ ನಾನಾ ವಿಷಯಗಳ ಕುರಿತು ಇವರು ಮಾತನಾಡುತ್ತಿಿದ್ದಾಾರೆ.

‘ಶ್ರೀಮಂತ ಅಲ್ಪಸಂಖ್ಯಾಾತ’ ಅಭ್ಯರ್ಥಿಗಳಿಗೂ ಇವರಿಗೂ ಇರುವ ವ್ಯತ್ಯಾಾಸ ಮೇಲ್ನೋೋಟಕ್ಕೇ ಕಾಣಿಸುತ್ತದೆ. ಆದರೆ, ಇವರೇನು ಹೇಳುತ್ತಿಿದ್ದಾಾರೆಂದು ಜನರಿಗೆ ಸರಿಯಾಗಿ ಅರ್ಥವಾಗುತ್ತಿಿಲ್ಲ. ಫೇಸ್‌ಬುಕ್‌ನಂತಹ ದೊಡ್ಡ ಟೆಕ್ ಕಂಪನಿಗಳು ವಿಪರೀತ ದೊಡ್ಡದಾಗಿ ಬೆಳೆದುಬಿಟ್ಟಿಿವೆ. ಅವುಗಳನ್ನು ಒಡೆಯಬೇಕು ಎಂದು ವಾರನ್ ಹೇಳುತ್ತಿಿದ್ದಾಾರೆ. ಮಾಹಿತಿಯ ಹರಿವಿನ ಮೇಲೆ ಫೇಸ್‌ಬುಕ್ ಏಕಸ್ವಾಾಮ್ಯ ಸಾಧಿಸಿದೆ. ಅದರಿಂದಾಗಿ ಫೇಸ್‌ಬುಕ್‌ನ ಸಂಸ್ಥಾಾಪಕ ಮಾರ್ಕ್ ಜುಕರ್‌ಬರ್ಗ್ ನೂರಾರು ಕೋಟಿ ಡಾಲರ್ ಸಂಪಾದಿಸಿದ್ದಾಾನೆ ವಾರನ್ ಆರೋಪಿಸುತ್ತಾಾರೆ. ನಿಜ, ಜುಕರ್‌ಬರ್ಗ್ ಬಳಿ 70 ಬಿಲಿಯನ್ ಡಾಲರ್ ಆಸ್ತಿಿಯಿದೆ. ಆದರೆ, ಅದು ಸುಮ್ಮನೆ ಬಂದಿದ್ದಲ್ಲ. ಅವರು ನಡೆಸುತ್ತಿಿರುವ ಯಶಸ್ವಿಿ ಕಂಪನಿ ಇತ್ತೀಚೆಗಷ್ಟೇ 6.09 ಬಿಲಿಯನ್ ಡಾಲರ್ ಲಾಭ ಗಳಿಸಿದೆ.

ಬ್ಲೂಮ್‌ಬರ್ಗ್ ಆಸ್ತಿಿ 52.3 ಬಿಲಿಯನ್ ಡಾಲರ್. ಟ್ರಂಪ್‌ರ ಓಟಕ್ಕೆೆ ತಡೆಯೊಡ್ಡಲೇಬೇಕು ಮತ್ತು ಅದು ತನ್ನಂತಹ ಬಿಲಿಯನೇರ್‌ಗಳಿಂದ ಮಾತ್ರ ಸಾಧ್ಯ ಎಂದು ಅವರು ನಂಬಿದ್ದಾಾರೆ. ವಾರನ್ ತಾನು ಗೆದ್ದರೆ 1 ಬಿಲಿಯನ್ ಡಾಲರ್‌ಗಿಂತ ಹೆಚ್ಚು
ಆಸ್ತಿಿ ಇರುವವರಿಗೆ ಬಿಲಿಯನ್ ಡಾಲರ್‌ನ ನಂತರದ ಗಳಿಕೆಗೆ ಶೇ.6ರಷ್ಟು ಆಸ್ತಿಿ ತೆರಿಗೆ ವಿಧಿಸುವುದಾಗಿ ಪ್ರಚಾರ ಮಾಡುತ್ತಿಿದ್ದಾಾರೆ. ಇದೂ ಒಂದು ರೀತಿಯಲ್ಲಿ ತ್ಯಾಾಗ ಎನ್ನುತ್ತಿಿರುವ ಇನ್ನೊೊಬ್ಬ ಡೆಮಾಕ್ರೆೆಟಿಕ್ ಆಕಾಂಕ್ಷಿ ಮತ್ತು ಬಿಲಿಯನೇರ್ ಟಾಮ್ ಸ್ಟೇಯರ್, ಬ್ಲೂಮ್‌ಬರ್ಗ್ ಇದನ್ನು ಬೆಂಬಲಿಸಬೇಕು ಎಂದು ಆಗ್ರಹಿಸುತ್ತಿಿದ್ದಾಾರೆ. 77 ವರ್ಷದ ಬ್ಲೂಮ್‌ಬರ್ಗ್ ಈಗಾಗಲೇ ತಮ್ಮ ಆಸ್ತಿಿಯಲ್ಲಿ 8 ಬಿಲಿಯನ್ ಡಾಲರ್ ಹಣವನ್ನು ಸಮಾಜಸೇವೆಗೆ ದಾನ ಮಾಡಿದ್ದಾಾರೆ. ಹೀಗಾಗಿ ಅವರೂ ‘ಸಮಾಜಸೇವೆಗೆ ಜೀವನ ಮುಡಿಪಾಗಿಟ್ಟ ಅಧ್ಯಕ್ಷರಾಗಲು’ ಹೊರಟವರೆ.

ಇವರ ನಂತರ ಕಿರಿಯರಾದ ಅಮೆಜಾನ್‌ನ ಜೆಫ್ ಬೆಜೋಸ್ ಹಾಗೂ ಫೇಸ್‌ಬುಕ್‌ನ ಮಾರ್ಕ್ ಜುಕರ್‌ಬರ್ಗ್‌ಗಳಿದ್ದಾಾರೆ. ಅಮೆರಿಕದ ರಾಜಕೀಯಕ್ಕೆೆ ತಮ್ಮ ಕೈಲಾದ್ದನ್ನು ಕೊಡಲು ಇವರೂ ಉತ್ಸುಕರಾಗಿರಬಹುದು. ಆದರೆ ಮುಂದಿನ ವರ್ಷದ ಅಧ್ಯಕ್ಷೀಯ ಚುನಾವಣೆಗೆ ವೃದ್ಧ ಶ್ರೀಮಂತ ಕುಳಗಳಾದ ಟ್ರಂಪ್ (3.1 ಬಿಲಿಯನ್ ಡಾಲರ್), ಬ್ಲೂಮ್‌ಬರ್ಗ್ ಹಾಗೂ ಸ್ಟೇಯರ್ (1.6 ಬಿಲಿಯನ್ ಡಾಲರ್) ಮುಂತಾದವರು ಕಣದಲ್ಲಿರುವುದರಿಂದ ಈ ಕಿರಿಯರು ಇನ್ನೂ ಕೆಲ ವರ್ಷ ಕಾಯಬಹುದು. ಅಮೆರಿಕದಲ್ಲಿ ಹೆಚ್ಚುಕಮ್ಮಿಿ 607 ಬಿಲಿಯನೇರ್‌ಗಳಿದ್ದಾಾರೆ.

2020ರ ಅಧ್ಯಕ್ಷೀಯ ಚುನಾವಣೆಯ ರೇಸ್ ಟೇಕಾಫ್ ಆಗುವುದಕ್ಕೂ ಮೊದಲೇ ಕುತೂಹಲ ಹುಟ್ಟಿಿಸುತ್ತಿಿದೆ. ಕಣಕ್ಕಿಿಳಿಯಲು ಉತ್ಸುಕರಾಗಿರುವ ಶ್ರೀಮಂತ ಅಭ್ಯರ್ಥಿಗಳ ಪರವಾಗಿ ಈಗಾಗಲೇ ಒಂದು ಅಲೆ ಸೃಷ್ಟಿಿಯಾಗುತ್ತಿಿರುವಂತಿದೆ. ಏಕೆಂದರೆ ಇವರು ಪ್ರಚಾರಕ್ಕೆೆ ಮನಸೋ ಇಚ್ಛೆೆ ಹಣ ಚೆಲ್ಲುವುದರಿಂದ ಜನರ ಕೈಲಿ ಹೆಚ್ಚು ಹಣ ಓಡಾಡತೊಡಗುತ್ತದೆ. ಅದರಿಂದ ಖರೀದಿ ಹೆಚ್ಚುತ್ತದೆ. ಉದ್ಯೋೋಗಗಳು ಸೃಷ್ಟಿಿಯಾಗುತ್ತವೆ. ಆರ್ಥಿಕತೆ ಬೆಳೆಯುತ್ತದೆ.

ಆದರೆ, ಅಮೆರಿಕದ ಪ್ರಜಾಪ್ರಭುತ್ವ ಇಂತಹ ಶತಕೋಟಿ ಒಡೆಯರ ಲಾಭೋದ್ದೇಶದ ಸಮಾಜಸೇವೆಯನ್ನೂ ಮೀರಿ ಮುಂದಕ್ಕೆೆ ಹೋಗಿದೆ. ಇವರ ಜತೆಗೆ ಇನ್ನಷ್ಟು ಜಾಣರು ಕೂಡ ಕಣಕ್ಕಿಿಳಿದಿದ್ದಾಾರೆ. ಅವರು ತಮ್ಮ ಅಜೆಂಡಾಗಳನ್ನು ಮತದಾರರಿಗೆ ಚೆನ್ನಾಾಗಿ ಮನವರಿಕೆಯಾಗುವಂತೆ ಹೇಳುತ್ತಿಿದ್ದಾಾರೆ. ಸ್ಟೇಯರ್ ಅವರು ಡೆಮಾಕ್ರೆೆಟಿಕ್ ಅಭ್ಯರ್ಥಿಗಳಿಗೆ ಖಾಸಗಿ ವಿಮಾನ ಬಿಟ್ಟು ಜನಸಾಮಾನ್ಯರ ಜೊತೆ ಕಮರ್ಷಿಯಲ್ ವಿಮಾನಗಳಲ್ಲಿ ಓಡಾಡುವಂತೆ ಕರೆ ನೀಡುತ್ತಿಿದ್ದಾಾರೆ. ನಾನು ಬಯಸಿದರೆ ಖಾಸಗಿ ವಿಮಾನದಲ್ಲೇ ಓಡಾಡಬಲ್ಲೆೆ, ಆದರೆ ಪರಿಸರದ ಉಳಿವಿಗಾಗಿ ಕಮರ್ಷಿಯಲ್ ವಿಮಾನದಲ್ಲಿ ಓಡಾಡುತ್ತೇನೆ ಎನ್ನುತ್ತಿಿದ್ದಾಾರೆ.

ಅಮೆರಿಕದ ಶ್ರೀಮಂತರು ಇಂದು ರಾಜಕೀಯ ಹೋರಾಟ ಹಾಗೂ ಸರಕಾರದ ಮೇಲೆ ಸಾತ್ವಿಿಕ ರೀತಿಯಲ್ಲಿ ಪ್ರಭಾವ ಬೀರುವಂತಹ ಚಟುವಟಿಕೆಗಳಿಂದ ಹೊರಬಂದಿದ್ದಾಾರೆ. ಇದಕ್ಕೆೆ ಟ್ರಂಪ್‌ರ ಬೆಳವಣಿಗೆ. ಟ್ರಂಪ್ ವಾಷಿಂಗ್ಟನ್ *ಡಿ.ಸಿ.ಯಲ್ಲಿದ್ದ ಶೂನ್ಯವನ್ನು ತಮ್ಮಂತಹ ಇನ್ನಷ್ಟು ಶ್ರೀಮಂತ ಕುಳಗಳಿಂದ ತುಂಬಿಬಿಟ್ಟಿಿದ್ದಾಾರೆ. ಅವರೆಲ್ಲ ದುಡ್ಡಿಿನಿಂದಾಗಿಯೇ ಸರಕಾರವನ್ನು ನಿಯಂತ್ರಿಿಸತೊಡಗಿದ್ದಾಾರೆ. ಅವರನ್ನು ನೋಡಿ ಇನ್ನಷ್ಟು ಶ್ರೀಮಂತರಲ್ಲಿ ರಾಜಕೀಯ ಪ್ರವೇಶಕ್ಕೆೆ ಸ್ಫೂರ್ತಿ ಬಂದಿದೆ. ಈ ಶ್ರೀಮಂತರು ಮಾಧ್ಯಮ ಸಂಸ್ಥೆೆಗಳನ್ನು ಹೊಂದಿದ್ದಾಾರೆ, ಬ್ಯಾಾಂಕುಗಳನ್ನು ನಡೆಸುತ್ತಿಿದ್ದಾಾರೆ, ಟೆಕ್ ಕಂಪನಿಗಳನ್ನು ಹೊಂದಿದ್ದಾಾರೆ, ಮನೆಗಳನ್ನು ಮಾರಾಟ ಮಾಡುತ್ತಿಿದ್ದಾಾರೆ ಮತ್ತು ಕಿರಾಣಿ ವ್ಯಾಾಪಾರದಲ್ಲೂ ಇದ್ದಾಾರೆ. ಇವರೆಲ್ಲ ಈಗ ಸಮಾಜಸೇವೆಯನ್ನು ಮಾರಲು ಮುಂದಾಗಿದ್ದಾಾರೆ!

ಈಗ ಬ್ಲೂಮ್‌ಬರ್ಗ್‌ಗೆ ಟ್ರಂಪ್‌ರನ್ನು ಕೆಳಗಿಳಿಸಲು ಇದ್ದರೆ ಒಂದಲ್ಲಾಾ ಒಂದು ದಿನ ಜೆಫ್ ಬೆಜೋಸ್, ಜುಕರ್‌ಬರ್ಗ್ ಹಾಗೂ ಬಿಲ್ ಗೇಟ್‌ಸ್‌‌ಗಳು ಕಣಕ್ಕಿಿಳಿಯಬಹುದು. ಕೇವಲ 22 ವರ್ಷಕ್ಕೇ ಬಿಲಿಯನೇರ್ ಆಗಿರುವ ಅಮೆರಿಕದ ಅತಿ ಕಿರಿಯ ಕೋಟ್ಯಧಿಪತಿ ಕೈಲಿ ಜೆನ್ನರ್‌ಗೂ ರಾಜಕೀಯಕ್ಕೆೆ ಬರಬೇಕು ಅನ್ನಿಿಸಿ ಸಮಾಜಸೇವೆಗೆ ಹಣ ದಾನ ಮಾಡಲು ಆರಂಭಿಸಬಹುದು.
ಮತದಾರರಿಗೆ ಅಮೆರಿಕದ ಅಧ್ಯಕ್ಷ ಹುದ್ದೆೆಯೆಂಬುದು ಬಿಲಿಯನೇರ್‌ಗಳು ಕೊಟ್ಟ ಉಡುಗೊರೆ. ಟ್ರಂಪ್‌ರ ಅವಧಿ ಇದನ್ನೊೊಂದು ಲಾಭದಾಯಕ ಉದ್ದಿಮೆಯನ್ನಾಾಗಿ ಮಾಡಿರಬಹುದು. ಆದರೆ, ಮುಂದಿನ ಹಂತ ಚಾರಿಟೇಬಲ್ ಆಗಿರಲಿ ಎಂದು