Friday, 13th December 2024

ವಿಚಾರಣೆ ಎದುರಿಸಲಾಗದ ಹೇಡಿತನವೇಕೆ ?

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಅಂದು ಗುಜರಾತಿನಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾರನ್ನು ಇನ್ನಿಲ್ಲದಂತೆ ಕಾಡಿಸಿ, ಅವರು ಅದರಿಂದ ಹೊರಬಂದು, ಈಗ ಏನಾಗಿzರೆಂದು ಜನ ನೋಡುತ್ತಿರುವುದು. ಯಡಿಯೂರಪ್ಪನವರೇ ಜೈಲುವಾಸ ಅನುಭವಿಸಿ ಹೊರಬಂದಮೇಲೂ ಮುಖ್ಯಮಂತ್ರಿಯಾಗಿ ಇಂದಿಗೂ ಪ್ರಭಾವಿ ವ್ಯಕ್ತಿಯಾಗಿದ್ದಾರಲ್ಲವೇ?

ಏನೇನೂ ತಪ್ಪು ಮಾಡದ ದಾಕ್ಷಾಯಿಣಿ ದೇವಿ ಅಗ್ನಿಕುಂಡದಲ್ಲಿ ಬೀಳುತ್ತಾಳೆ. ಯಾವುದೇ ತಪ್ಪು ಮಾಡದ ರಾಜಾ ಸತ್ಯಹರಿಶ್ಚಂದ್ರ ಅರಮನೆಯ ವೈಭೋಗ, ರಾಜ್ಯ ತೊರೆದು ಸ್ಮಶಾನ ಕಾಯುತ್ತಾನೆ. ಯಾವುದೇ ತಪ್ಪು ಮಾಡದ ಶ್ರೀರಾಮಚಂದ್ರ ವನವಾಸ ಅನುಭವಿ ಸುತ್ತಾನೆ. ಮುಗ್ಧ ಸೀತಾಮಾತೆ ತುಂಬಗರ್ಭಿಣಿಯಾಗಿದ್ದಾಗಲೂ ತನ್ನ ಪಾತಿ ವ್ರತ್ಯ ನಿರೂಪಿಸಲು ಮತ್ತೆ ಕಾಡುಸೇರುತ್ತಾಳೆ. ಧೀರ ಪಾಂಡವರು ಅಜ್ಞಾತವಾಸ ಅನುಭವಿಸಿ ಕುರುಕ್ಷೇತ್ರದಲ್ಲಿ ಯುದ್ಧ ಎದುರಿಸಿ ಧರ್ಮವನ್ನು ಗೆಲ್ಲುತ್ತಾರೆ…. ಭಾರತದಲ್ಲಿ ಈ ಪರಂಪರೆ ಹೀಗೆಯೇ ಮುಂದುವರಿಯುತ್ತದೆ.

ಭಾರತೀಯರು ಇಸ್ಲಾಂ ದಾಳಿಕೋರರಿಂದ ಶತಮಾನಗಳ ಕಾಲ ರಣಹಿಂಸೆ ಅನುಭವಿ ಸಿದ್ದು, ಬ್ರಿಟಿಷರ ಗುಲಾಮಗಿರಿಯಲ್ಲಿ ನಾಯಿ ಗಳಂತೆ ನರಳಿದ್ದು, ದೇಶಕ್ಕಾಗಿ ಬದುಕನ್ನೇ ಸಮರ್ಪಿಸಿದ್ದ ನೇತಾಜಿಯವರನ್ನೇ ದೇಶದ್ರೋಹಿಯಂತೆ ಬಿಂಬಿಸಿದ್ದು, ಪ್ರಥಮ ಪ್ರಧಾನಿ ಯಾಗುವುದಕ್ಕೆ ಸರ್ವಾನುಮತದ ಶಕ್ತಿಯಾಗಿದ್ದ ಪಟೇಲರನ್ನೇ ತುಳಿದು ಪ್ರಧಾನಿ ಹುದ್ದೆ ತಪ್ಪಿಸಿದ್ದು, ದೇಶದ ಒಳಿತಿಗಾಗಿ ಬದಕು ಮೀಸಲಿಟ್ಟ ವೀರ ಸಾವರ್ಕರ್ ಅವರು ಅಮಾನವೀಯ ಕರಿನೀರಿನ ಶಿಕ್ಷೆಗೆ ಒಳಗಾಗಿದ್ದು, ದೇಶಕ್ಕೆ ಸಂವಿಧಾನದಂಥ ಕೊಡುಗೆ ನೀಡಿದ ಡಾ. ಬಾಬಾಸಾಹೇಬರನ್ನೇ ಸೋಲಿಸಿ ಕೊನೆಗೆ ಅವರ ಸಮಾಧಿಗೂ ಜಾಗಕೊಡದೆ ಅವಮಾನಿಸಿದ್ದು… ಒಬ್ಬರೇ ಇಬ್ಬರೇ ಈ ದೇಶದಲ್ಲಿ ಮಾಡದ ತಪ್ಪಿಗೆ ಶೀಕ್ಷೆಗೊಳಗಾದವರು.

ಅದಕ್ಕೆಲ್ಲ ಕಾರಣರಾದವರ ಸಂತಾನವೇ ಇದೀಗ ದೇಶಕ್ಕಾಗಿ ಶ್ರಮಿಸುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನೇ ಹೀನಾಯವಾಗಿ ದೂಷಿಸುತ್ತಿದೆ. ಭಯೋತ್ಪಾದನೆ, ಮಾನವಬಾಂಬ್ ದಾಳಿ, ಅಕ್ರಮ ಶಸಾಸ ಸಾಗಣೆ…ಹೀಗೆ ಮನುಕುಲ ವಿರೋಧಿ ವಿಧ್ವಂಸಕ ಕೃತ್ಯ ಗಳಿಂದಾಗಿ ಸಮಾಜದಲ್ಲಿ ಇಂದು ಜನಸಾಮಾನ್ಯಅಮಾಯಕರೂ ಅನೇಕ ರೀತಿಯ ಹಿಂಸೆಗೊಳಪಟ್ಟು ಬದುಕಬೇಕಾದ ಅನಿವಾರ್ಯ ತಲೆದೋರಿದೆ. ತತ್‌ಪರಿಣಾಮ ವಿಧಾನಸೌಧದಿಂದ ಹಿಡಿದು ತಿರುಪತಿ ತಿಮ್ಮಪ್ಪನ ಸನ್ನಿಧಿಯವರೆಗೆ ಎಲ್ಲೆಡೆ ಸಾಮಾನ್ಯರ ಪ್ರಜೆ ಗಳನ್ನೂ ಅನುಮಾನದ ದೃಷ್ಟಿಯಿಂದಲೇ ನೋಡಿ ಆಮೂಲಾಗ್ರ ತಪಾಸಣೆಗೆ ಒಳಪಡಿಸಿ ಪ್ರವೇಶ ನೀಡಲಾಗುತ್ತಿದೆ.

ನೆರೆ ದೇಶದ ಭಯೋತ್ಪಾದಕ ಕೃತ್ಯಗಳಿಂದಾಗಿ ಯಾವ ತಪ್ಪನ್ನೂ ಮಾಡಿರದ ದೇಶವಾಸಿಗಳನ್ನೇ ಅನುಮಾನಿಸಿ ತಪಾಸಣೆ ನಡೆಸು ವಂಥ ಪರಿಸ್ಥಿತಿ ತಲೆದೋರಿರುವುದು ನಮ್ಮ ದೇಶದ ದೌರ್ಭಾಗ್ಯ. ಮೆಟ್ರೋ ರೈಲಿಗಾಗಿ ನಿಲ್ದಾಣ ಪ್ರವೇಶಿಸುವ ವ್ಯಕ್ತಿ ‘ನಾನು
ಅಮಾಯಕ. ನನ್ನನ್ನೇಕೆ ತಪಾಸಣೆಗೆ ಒಳಪಡಿಸಬೇಕು? ನಾನೇನು ಭಯೋತ್ಪಾದಕನಾ?’ ಎಂದು ನೇರವಾಗಿ ಪ್ರಶ್ನಿಸಿದರೆ ಆತನನ್ನು
ದಸ್ತಗಿರಿ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ.

ನಿಯಮ ಹಾಗಿದೆ. ಹೀಗೆ ಈ ನೆಲದಲ್ಲೇ ಹುಟ್ಟಿ ಬೆಳೆದ, ಯಾವುದೇ ತಪ್ಪನ್ನು ಮಾಡದ ಶ್ರೀಸಾಮಾನ್ಯ ತನ್ನ ದೇಶದ ಒಳಗೇ ಅನೇಕ ಸ್ಥಳಗಳಲ್ಲಿ ಅನುಮಾನದ ಕಟ್ಟಳೆಗೆ ಒಳಪಟ್ಟು ತನಗಾಗುವ ಮಜುಗರವನ್ನು ಎದುರಿಸಿ ವ್ಯವಸ್ಥೆಗೆ ಸಹಕರಿಸಿಕೊಂಡು ಹೋಗುತ್ತಿದ್ದಾನೆ. ಇದು ಆತನ ಸ್ವಾಭಿಮಾನ, ಅಮಾಯಕತನ, ಸತ್ಯನಿಷ್ಠುರತೆಯನ್ನು ಪರೋಕ್ಷವಾಗಿ ಅವಮಾನಿಸಿದಂತೆಯೇ ಅಲ್ಲವೇ? ಇಷ್ಟೆಲ್ಲ ಪೀಠಿಕೆ ಯಾದ ಮೇಲೆ ನೇರವಾಗಿ ವಿಷಯಕ್ಕೆ ಬರೋಣ. ಈಗ ನ್ಯಾಷನಲ್ ಹೆರಾಲ್ಡ್ ಪ್ರಕಣದಲ್ಲಿ ಜಾರಿನಿರ್ದೇಶನಾಲಯ (ಇ.ಡಿ.) ದಿಂದ ವಿಚಾರಣೆಗೆ ಒಳಗಾಗಿರುವ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಪರ, ತಾತ್ವಿಕ ನೆಲೆಗಟ್ಟನ್ನೂ ದಾಟಿ ಪಕ್ಷದ ನಾಯರು, ಸದಸ್ಯರು ಪ್ರತಿಭಟನೆಗಿಳಿದಿರುವುದು ಕಾಂಗ್ರೆಸ್‌ನ ಹೊಣೆಗೇಡಿತನವನ್ನು ತೋರಿಸು ತ್ತಿದೆ.

ಅಸಲಿಗೆ ಇ.ಡಿ. ವಿಚಾರಣೆಯನ್ನು ಪರಿಪಕ್ವ ವ್ಯಕ್ತಿಗಳು ಒಂದು ಅವಮಾನದಂತೆ ಭಾವಿಸಬೇಕಿಲ್ಲ. ಇಂಥದ್ದನ್ನೆ ಅಗ್ನಿ ಪರೀಕ್ಷೆಯಂತೆ ಸ್ವೀಕರಿಸುತ್ತಾರೆ. ಅದರಲ್ಲಿ ಗೆದ್ದುಬಂದು ಬೀಗುವ ಮಜವೇ ಬೇರೆ. ಆದರೆ ತಾನು ತಪ್ಪೇ ಮಾಡಿಲ್ಲವೆಂದ ಮೇಲೆ ತನಿಖೆಗೆ ಪರೀಕ್ಷೆಗೆ ಒಳ
ಪಡುವ ಅವಶ್ಯಕತೆಯೇ ಇಲ್ಲ ಎಂಬ ಮನೋಭಾವ ನಮ್ಮ ಮಣ್ಣಿನ ಪರಂಪರೆಯ ಇಲ್ಲ. ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಿಯೇ ಮೇಲೆ ಹೆಸರಿಸಲಾದ ಎಲ್ಲ ವ್ಯಕ್ತಿಗಳು ಐತಿಹಾಸಿಕ ವ್ಯಕ್ತಿ ಗಳೆನಿಸಿದವರು, ಪುರುಷೋತ್ತಮರೆನಿಸಿದವರು.

ದಶಕಗಳ ಕಾಲ ಅನುಮಾನಗಳ ಹುತ್ತವಾಗಿ ನಿಂತಿದ್ದ ನ್ಯಾಷನಲ್ ಹೆರಾಲ್ಡ ಪ್ರಕರಣಕ್ಕೆ ಸಂಬಂಧಿಸಿ ರಾಹುಲ್‌ಗಾಂಧಿ ವಿಚಾರಣೆಗಾಗಿ (ಮಾಹಿತಿಗಾಗಿ) ಇ.ಡಿ ಕಚೇರಿಗೆ ಹೊರಟ ಮಾತ್ರಕ್ಕೆ ಅವರೇನೋ ವಿನಾಕಾರಣಕ್ಕೆ ತಿಹಾರಜೈಲಿಗೋ, ಪರಪ್ಪನ ಅಗ್ರಹಾರಕ್ಕೋ ತಳ್ಳಲ್ಪಡುತ್ತಿದ್ದಾರೆನ್ನುವಂತೆ ಬೀದಿ ಹೋರಾಟಕ್ಕಿಳಿದಿರುವುದು ಬಾಲಿಶವಾಗಿ ಕಾಣುತ್ತಿದೆ. ಇಷ್ಟಕ್ಕೂ ಇ.ಡಿ. ಎಂಬುದು ಪರದೇಶದ
ಸಂಸ್ಥೆಯೇನಲ್ಲ. ಅದು ನಮ್ಮದೇ ದೇಶದ ಒಂದು ಸಂವಿಧಾನಿಕ ಸಂಸ್ಥೆ. ಅದು ಕೆಲವರನ್ನು ಅನಿವಾರ್ಯ ಕಾರಣಕ್ಕೆ ಅನುಮಾನಿಸಿ ಮಾಹಿತಿಗಾಗಿ ಕರೆದಾಗ ಎಂಥವನೂ ತೆರಳಿ ತನಿಖೆಗೆ ಸಹಕರಿಸಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಬದ್ಧತೆ.

ಇಷ್ಟಕ್ಕೂ ಇ.ಡಿ.ಯು ಈ ಪ್ರಕರಣದಲ್ಲಿ ಇನ್ನೂ ಯಾರನ್ನೂ ಆರೋಪಿಯೆಂದು ಪರಿಗಣಿಸಿಲ್ಲ. ಕೇವಲ ಮಾಹಿತಿ ಸಂಗ್ರಹದ ಹಂತದಲ್ಲಿದೆ. ಇಂಥ ಸಮಯದಲ್ಲಿ ಕಾಂಗ್ರೆಸ್ ತನಗೆ ಮುಜಗರವಾದರೆ ತನ್ನ ವಕೀಲರನ್ನು ನೇಮಿಸಿಕೊಂಡು ನ್ಯಾಯಾಂಗ ವ್ಯವಸ್ಥೆಯ ಹೋರಾಟ ಮಾಡಬಹುದಾಗಿತ್ತು. ಇದೇ ಸಿದ್ದರಾಮಯ್ಯನವರಿಗೆ ವಕೀಲಿಕೆಯ ಬತ್ತದ ಉತ್ಸಾಹವಿದೆ. ಹಿಂದೆ ತಾನು ರಾಜಕಾರಣ ತೊರೆದರೆ ವಕೀಲಿಕೆ ವೃತ್ತಿ ಮಾಡುತ್ತೇನೆಂದು ಹೇಳಿಕೊಂಡಿದ್ದರು. ಈಗ ಅವರೇ ಕಪ್ಪುಕೋಟು ಧರಿಸಿ ಈ ಪ್ರಕರಣದಲ್ಲಿ ವಕಾಲತ್ತು ವಹಿಸಿ ತಮ್ಮ ನಾಯಕರನ್ನು ರಕ್ಷಿಸುವ ಪ್ರಯತ್ನ ಮಾಡಬಹುದಿತ್ತಲ್ಲವೇ? ಹಾಗೆ ಮಾಡಿದರೆ ಅವರು ಹೈಕಮಾಂಡ್‌ನ ಅದ್ವಿತೀಯ ನಾಯಕರಾಗಿ ಕಂಗೊಳಿಸಬಹುದಲ್ಲವೇ? ಕಪಿಲ್ ಸಿಬಲ್ ಪಕ್ಷ ತೊರೆದ ಹೋದ ಮೇಲೆ ಅಪಾರವಾದ ನ್ಯಾಯಾಂಗದ ಅರಿವಿರುವ ಮುತ್ಸದ್ಧಿ ನಾಯಕ,
ಸಿದ್ದರಾಮಯ್ಯನವರ ಹೊರತಾಗಿ ಬೇರೆ ಸಿಗಲಿಕ್ಕಿಲ್ಲ.

ಕಾನೂನೇ ಬೇರೆ ರಾಜಕೀಯವೇ ಬೇರೆ. ಕಾನೂನಿನ ನಿಯಂತ್ರಣದಲ್ಲಿ ರಾಜಕೀಯವಿದೆಯೇ ಹೊರತು ರಾಜಕೀಯದೊಳಗೆ ಕಾನೂನು ಇರಬೇಕೆಂದು ಯಾವ ರಾಜಕಾರಣಿಗಳೂ ಬಯಸಬಾರದು. ಕಾನೂನು ಅದರ ಕೆಲಸವನ್ನು ಅದು ಮಾಡುತ್ತದೆ. ಹಾಗೆ ಮಾಡಿದ್ದರಿಂದಲೇ ಅಂದು ಗುಜರಾತಿನಲ್ಲಿ ಮೋದಿಯವರನ್ನು ಮತ್ತು ಅಮಿತ್ ಶಾ ಅವರನ್ನು ಇನ್ನಿಲ್ಲದಂತೆ ಕಾಡಿದ್ದು ಮತ್ತು ನಂತರ ಅವರು ಅದರಿಂದ ಹೊರಬಂದು ಈಗ ದೇಶಕ್ಕೆ ಏನಾಗಿದ್ದಾರೆಂದು ಜನ ನೋಡುತ್ತಿರುವುದು. ನಮ್ಮ ಯಡಿಯೂರಪ್ಪನವರನ್ನೇ ನೋಡಿ, ಜೈಲುವಾಸ ಅನುಭವಿಸಿ ಹೊರಬಂದಮೇಲೂ ಮೂರು ಬಾರಿ ಮುಖ್ಯಮಂತ್ರಿಯಾಗಿ ಇಂದಿಗೂ ಪ್ರಭಾವಿ ವ್ಯಕ್ತಿಯಾಗಿದ್ದಾರಲ್ಲವೇ? ಇದರ ಹೊರತಾಗಿಯೂ ನಮ್ಮ ದೇಶದ ವಿಚಿತ್ರವೇನೆಂದರೆ ಕಳ್ಳ, ಕೊಲೆಗಾರ ಜೈಲುಸೇರಿ ಕೈದಿಯಾಗಿ ಕೊಳೆತು ಪರಿವರ್ತಿತನಾಗುವ ಸಾಧ್ಯತೆ ಇರುತ್ತದೆ. ಆದರೆ ಆತನಿಗಿಂತ ಅಪಾಯಕಾರಿ ರಾಜಕಾರಣಿಗಳು ಜೈಲು ಸೇರಿದರೆ ದೇಶದ ನೇತಾರರಾಗಿಬಿಡುತ್ತಾರೆ. ಮತ್ತು ಪಕ್ಷದ ರಾಜ್ಯಾಧ್ಯಕ್ಷನೂ ಆಗಿಬಿಡುತ್ತಾನೆ.

ಹೀಗಿರುವಾಗ ಜೈಲುಸೇರುವುದಿರಲಿ, ಪ್ರಾಥಮಿಕ ವಿಚಾರಣೆಗೆ ಒಳಪಡುವುದನ್ನೇ ವಿರೋಧಿಸಿದರೆ ಏನರ್ಥ? ಈಗಾಗಲೇ ಸೋನಿಯ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ವಿದೇಶಿ ಮೂಲದವರೆಂದು ವಿರೋಧಿಗಳು ಆರೋಪಿಸುತ್ತಿದ್ದಾರೆ. ಹೀಗಿರುವಾಗ ಅವರು ಇದೇ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ತಿರಸ್ಕರಿಸಿದರೆ ಅವರನ್ನು ಇನ್ನೇನೆಂದು ಕರೆಯುತ್ತಾರೆ? ‘ನೋಡಿ, ಇದು ಪ್ರತಿಭಟನೆ ಮಾಡುವ
ಸಂದರ್ಭವಲ್ಲ, ರಾಜಕಾರಣದಲ್ಲಿ ಪಕ್ವವಾಗುವ ಸಮಯ.

ನಾವು ಯಾವ ತಪ್ಪೂ ಮಾಡಿಲ್ಲವೆಂಬುದನ್ನು ನಿರೂಪಿಸೋಣ. ಇ.ಡಿ. ಆದರೇನು? ಸುಪ್ರೀಂ ಕೋರ್ಟ್ ಆದರೇನು? ಸತ್ಯವನ್ನು ಯಾರೂ ಕೊಲ್ಲಲು ಸಾಧ್ಯವಿಲ್ಲ. ಇದೊಂದು ಅಗ್ನಿಪರೀಕ್ಷೆಯೆಂದೇ ಪರಿಭಾವಿಸೋಣ. ಇ.ಡಿ.ಗೆ ಸಹಕರಿಸೋಣ. ಆದದ್ದು ಆಗಲಿ, ನಮ್ಮೊಂದಿಗೆ ನ್ಯಾಯದೇವತೆ ಇದ್ದಾಳೆ, ನೀವೆಲ್ಲರೂ ಶಾಂತರಾಗಿರಿ’ ಎಂದು ಸೋನಿಯಾ ಅವರಾಗಲಿ ರಾಹುಲ್ ಅವರಾಗಲಿ ಕರೆಕೊಟ್ಟು ಇಂಥ ಸಮಯದಲ್ಲಿ ಪ್ರಬುದ್ಧತೆ ಮೆರೆದಿದ್ದರೆ ಕಾರ್ಯಕರ್ತರಲ್ಲಿ ಅನುಕಂಪ, ಗೌರವ ಹೆಚ್ಚಾಗುತ್ತಿತ್ತು. ಹೆಚ್ಚಾಗಿ ಸೋನಿಯಾ ಅವರು ‘ನನಗೆ ಕರೋನಾ ಸೋಂಕಿದ್ದರೂ ಪರವಾಗಿಲ್ಲ ಆದರೆ ಇ.ಡಿ.ಕಚೇರಿಗೆ ಆಗಮಿಸಲು ವಿಶೇಷ ವೈದ್ಯ ವ್ಯವಸ್ಥೆಯನ್ನು ಮಾಡಿಕೊಡಿ, ಖುದ್ದು ಹಾಜರಾಗಿ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ.

ನನ್ನ ಆರೋಗ್ಯಕ್ಕಿಂತ ದೇಶದಲ್ಲಿ ನಮ್ಮ ಮೇಲಿನ ನಂಬಿಕೆ ಗೌರವ ಹೆಚ್ಚು. ಅದನ್ನು ಮೊದಲು ಕಾಪಾಡಿಕೋಳ್ಳುತ್ತೇನೆ’ ಎಂದು ಒಂದು ಹೇಳಿಕೆ ನೀಡಿದ್ದರೆ ಇಷ್ಟೊತ್ತಿಗೆ ಕಾಂಗ್ರೆಸ್ ಪಕ್ಷ ಅದೆ ಹೋಗಿಬಿಡುತ್ತಿತ್ತು. ಹಾಗೆಯೇ ಅಸಾಮಾನ್ಯ ನಾಯಕ ರಾಹುಲ್ ಗಾಂಧಿ  ವಿದೇಶ ಗಳಿಗೆ ತಾವೊಬ್ಬರೇ ತೆರಳುವಂತೆ ಇ.ಡಿ. ಕಚೇರಿಗೂ ಬೆಟಾಲಿಯನ್‌ಗಳನ್ನು ಬಿಟ್ಟು ಸಿಂಹದಂತೆ ಒಬ್ಬರೇ ಹೋಗಿಬಂದಿದ್ದರೆ ಅವರ ಘನತೆ ಇನ್ನೂ ಹೆಚ್ಚಾಗುತ್ತಿತ್ತು. ಆದರೆ ಈಗ ನೋಡಿ ‘ನಮ್ಮ ರಾಹುಲ್ ಗಾಂಧಿಯ ಮೇಲೆ ಅತ್ಯಾಚಾರ ಆಗುತ್ತಿದೆ’ ಎನ್ನುವ ನಲಪಾಡು ಮತ್ತು ಗೊರಿ ಸೀನನಿಂದ ಪಕ್ಷಕ್ಕಿರುವ ಚೂರುಪಾರು ಗೌರವವೂ ಇನ್ನಿಲ್ಲದಂತಾಗುತ್ತಿದೆ.

ಕಳೆದ ಒಂದು ವಾರದಿಂದ ಯಾವೊಬ್ಬರೂ ಪ್ರಬುದ್ಧತೆ ಹೇಳಿಕೆಯನ್ನು ನೀಡಲಿಲ್ಲ. ಬರಿಯ ಪ್ರತಿಭಟನೆ, ಅಸಹ್ಯ ಹೇಳಿಕೆಗಳು, ಅಸಂಬದ್ಧ ಆಕ್ರೋಶಗಳು, ಪೊಲೀಸರಿಗೆ ದಾಳಿ ಮಾಡಲು ಪ್ರಚೋದಿಸುವಂಥ ನಾಟಕಗಳೇ ರಂಗೇರಿದೆಯಷ್ಟೆ! ಇಂಥ ಪರಿಸ್ಥಿತಿಯಲ್ಲಿ ಬೇಕಿರುವುದು
ಕಾನೂನನ್ನು ಎದರಿಸುವ ಎದೆಗಾರಿಕೆ, ತಾಳ್ಮೆ, ಸಹನೆ, ಧೈರ್ಯವೇ ಹೊರತು ಅನೈತಿಕವಾಗಿ ಪ್ರತಿಭಟಿಸುವ ಕರೋನಾ ಕಾಲಿಡಿಯುವ ಹೇಡಿತನವಲ್ಲ.

ಇತ್ತೀಚೆಗೆ ಕಾಂಗ್ರೆಸ್ ಯಾವುದಕ್ಕೆ ಹೋರಾಟ ಮಾಡಬೇಕು, ಯಾವ ವಿಚಾರಕ್ಕೆ ಹೋಗಬಾರದು, ಯಾವ ವಿಷಯದ ಪರ ನಿಂತರೆ ಜನ ನಮ್ಮನ್ನು ಬೆಂಬಲಿಸುತ್ತಾರೆ, ಮತದಾರರ ವಿಶ್ವಾಸ ಗಳಿಸ ಬೇಕಾದರೆ ಯಾವ ಪರಿಸ್ಥಿತಿಯಲ್ಲಿ ಎಂಥ ವ್ಯಕ್ತಿತ್ವವನ್ನು ಪ್ರದರ್ಶಿಸಬೇಕೆಂಬ ವೈಚಾರಿಕತೆಯೇ ಇಲ್ಲದೆ ಏನೇನನ್ನೋಮಾಡುತ್ತಿರುವುದು ದುರದೃಷ್ಟಕರ. ಕರ್ನಾಟಕದ ನೋಡಿ, ಹಿಜಾಬ್ ಪ್ರಕರಣವನ್ನು ಬಹಳ ಸುಲಭವಾಗಿ ಸಹಕರಿಸಿ ಬಗೆಹರಿಸಬಹುದಾಗಿತ್ತು. ಆ ಕೆಲಸ ಮಾಡಲಿಲ್ಲ. ಆ ನಂತರ ನ್ಯಾಯಾಲಯ, ಸಂವಿಧಾನದ ವಿರುದ್ಧವಾಗಿ
ಪ್ರತಿಭಟನೆಗಿಳಿದವರನ್ನು ಬೆಂಬಲಿಸಿ ಅದು ಅವರ ಹಕ್ಕು ಎಂದು ಪ್ರಚೋದಿಸಲಾಯಿತು.

ಶಾಲೆಯ ಮಕ್ಕಳಿಗೂ ಆರ್‌ಎಸ್‌ಎಸ್ ಏನೆಂದು ತಿಳಿದಿದ್ದರೂ ಅವೈಜ್ಞಾನಿಕವಾಗಿ ಅಸಂಬದ್ಧವಾಗಿ ತಿಂಗಳುಗಟ್ಟಲೆ ಸಂಘ ಪರಿವಾರದ ಮೇಲೆ ಮುಗಿಬಿದ್ದರು. ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲೂ ತಮ್ಮ ಅಧಿಕಾರಾವಧಿಯಲ್ಲೇ ಯಡವಟ್ಟುಗಳು ನಡೆದು ಹೋಗಿದ್ದರೂ ಆಗೆಲ್ಲ ಸುಮ್ಮನಿದ್ದು ಈಗ ಹಿಂದೂಗಳ ಭಾವನೆಗೆ ಬೆಲೆ ಕೊಡದೆ ಪ್ರತಿಭಟಿಸುತ್ತಿರುವುದನ್ನು ಮತದಾರರು ಗಂಭೀರವಾಗಿ ಪರಿಗಣಿಸುತ್ತಾರೆ.

ಮಾತೆತ್ತಿದರೆ ಅದಾನಿ, ಅಂಬಾನಿಯನ್ನು ದೂಷಿಸಿ ಅವರು ದೇಶವನ್ನು ಲೂಟಿ ಮಾಡುತ್ತಿದ್ದಾರೆಂದು ಬಾಯಿಗೆ ಬಂದಂತೆ ತಲೆಗೆ ತೋಚಿದ ವಿಷಯಗಳನ್ನು ವಾಚಾಮಗೋಚರ ನಿಂದಿಸುವ ಅವಿವೇಕಿ ರಾಜಕಾರಣಿಗಳು ಉತ್ತರಿಸಬೇಕಾದ ವಿಚಾರವೆಂದರೆ ಅದಾನಿ, ಅಂಬಾನಿಯ ವರೇನೋ ಸಾವಿರಾರು ಕೋಟಿ ರು. ಆಸ್ತಿಯನ್ನು ಗಳಿಸುತ್ತಿರಬಹುದು. ಅದಕ್ಕೆ ಅವರಿಗೆ ಅವರದೇ ಆದ ಹೂಡಿಕೆ, ಉದ್ದಿಮೆ ಇದೆ. ಮತ್ತು ಅದಕ್ಕೆಲ್ಲ ದೇಶದ ಬೊಕ್ಕಸಕ್ಕೆ ಪ್ರತಿವರ್ಷ ತೆರಿಗೆ ತುಂಬುತ್ತಿದ್ದಾರೆ.

ದೇಶಕ್ಕೆ ಅವರ ಕೊಡುಗೆಗಳೇನೆಂಬುದು ಪ್ರಜೆಗಳಿಗೆ ಗೊತ್ತಿದೆ. ಆದರೆ ನಮ್ಮಿಂದಲೇ ದೇಶ ಎನ್ನುವ ಕುಟುಂಬಗಳು, ಗುಲಾಮಗಿರಿ ಸಂಕೇತದ ವಂಶಸ್ಥರು ಕಳೆದ ಎಪ್ಪತ್ತು ವರ್ಷಗಳಿಂದ ಅದ್ಯಾವ ಸಾರ್ವಜನಿಕ ಉದ್ದಿಮೆ ನಡೆಸಿ ಬೆವರು ಹರಿಸಿ ಅದರ ಆದಾಯದಿಂದ ಸಾವಿರಾರು ಕೋಟಿಗಳ ಸರದಾರರಾಗಿದ್ದಾರೆಂದು ಪ್ರಶ್ನಿಸುವ ಹಕ್ಕು ಸಾಮಾನ್ಯನಿಗೂ ಇದೆ. ಯಾವ ಬಿಸಿನೆಸ್‌ಗಳಿಲ್ಲದೇ ಸಾವಿರಾರು
ಕೋಟಿ ರು.ಗಳ ಒಡೆಯರಾಗುವ ಘನಕಾರ್ಯವನ್ನು ಸಾರ್ವಜನಿಕರಿಗೆ ಹೇಳುವವರು ಯಾರು? ಅಂಥ ರಹಸ್ಯಗಳನ್ನೇ ಬೇದಿಸುತ್ತಿದೆ ಇ.ಡಿ. ಅದರ ವಿರುದ್ಧ ಹೇಡಿತನವೇಕೆ?