Friday, 13th December 2024

‘ಕಮ್ಯುನಿಸ್ಟರ’ ಮಾತು ಕೇಳಿ ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚಿದ ‘ಕಿರಾತಕರು’

ವೀಕೆಂಡ್‌ ವಿಥ್‌ ಮೋಹನ್

ಮೋಹನ್‌ವಿಶ್ವ

ಕರೋನಾ ಸಂಕಷ್ಟದ ಸಮಯದಲ್ಲಿ ವ್ಯವಹಾರವಿಲ್ಲದೆ ಹಲವು ಉದ್ದಿಮೆಗಳು ಮುಚ್ಚಿ ಹೋಗಿರುವ ವಿಷಯ ನಮಗೆಲ್ಲರಿಗೂ ತಿಳಿದಿದೆ. ಅಮೆರಿಕಾದಂಥ ದೊಡ್ಡಣ್ಣನೇ ಟ್ರಿಲಿಯನ್‌ಗಟ್ಟಲೆ ಆರ್ಥಿಕ ನಷ್ಟವನ್ನುಅನುಭವಿಸುವಂತಾಯಿತು, ಯೂರೋಪಿನ ಹಲವು ರಾಷ್ಟ್ರಗಳು ಬಿಲಿಯನ್ ಗಟ್ಟಲೆ ಆರ್ಥಿಕ ನಷ್ಟವನ್ನು ಅನುಭವಿಸಿದವು.

ಭಾರತವೂ ಸಹ ಇದಕ್ಕೆ ಹೊರತಲ್ಲ, ಬಿಲಿಯನ್ ಗಟ್ಟಲೆ ಆರ್ಥಿಕ ನಷ್ಟವನ್ನು ಅನುಭವಿಸಿತು. ಕೆಲಸವನ್ನು ಕಳೆದುಕೊಂಡು ಹಲವು ಜನರು ನಗರ ಪ್ರದೇಶಗಳಿಂದ ತಮ್ಮ ಹುಟ್ಟೂರುಗಳಿಗೆ ವಾಪಾಸ್ ಬಂದು ಕೃಷಿಯನ್ನು ಶುರು ಮಾಡಿದ್ದರು. ಆಟೋ ಚಾಲಕರಿಗೆ ಪ್ರಯಾಣಿಕರಿರಲಿಲ್ಲ, ಕ್ಯಾಬ್ ಚಾಲಕರಿಗೆ ಪ್ರಯಾಣಿಕರಿರಲಿಲ್ಲ, ಹೋಟೆಲುಗಳಿಗೆ ಗ್ರಾಹಕರು ಪೂರ್ಣ ಪ್ರಮಾಣದಲ್ಲಿ ಬರುತ್ತಿಲ್ಲ. ಎದರೊಂದು ಸಣ್ಣ ಕೆಲಸ ಸಿಕ್ಕರೂ ಸಾಕೆಂದು ಸಾವಿರಾರು ಯುವಕರು ಹಪಹಪಿಸುತ್ತಿದ್ದರು.

ಎಲ್ಲವನ್ನೂ ಮೀರಿ ಈಗ ಭಾರತದ ಆರ್ಥಿಕತೆಯು ಚೇತರಿಕೆ ಕಾಣುತ್ತಿದ್ದ ಸಮಯದಲ್ಲಿ ಕೋಲಾರದ ನರಸಾಪುರ ಕೈಗಾರಿಕಾ
ಪ್ರದೇಶದಲ್ಲಿ ‘ವಿಸ್ಟ್ರಾನ್’ಎಂಬ ‘ತೈವಾನ್’ ಮೂಲದ ಕಂಪನಿಯಲ್ಲಿ ನಡೆದ ಗಲಾಟೆಯಲ್ಲಿ ಕಾರ್ಮಿಕರು ಕೈಗೆ ಸಿಕ್ಕ ವಸ್ತುಗಳನ್ನು ದ್ವಂಸ ಮಾಡಿದರು, ಕಾರ್ಖಾನೆಯ ವಸ್ತುಗಳಿಗೆ ಬೆಂಕಿ ಹಚ್ಚಿದರು. ಜಗತ್ತಿನ ಸುಪ್ರಸಿದ್ದ ಮೊಬೈಲ್ ಬ್ರಾಂಡ್ ‘ಐ ಫೋನ್’ ತಯಾರಿಕಾ ಘಟಕವು ನಮ್ಮ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ.

ಪಕ್ಕದ ಚೀನಾ ದೇಶವು ತನ್ನ ಬಾಲ ಬಿಚ್ಚುವ ಮೂಲಕ ಭಾರತದ ಮೇಲೆ ಅಪ್ರಚೋದಿತ ದಾಳಿ ನಡೆಸುತ್ತಿರಬೇಕಾದರೆ, ಅಂತಹ
ದೇಶವನ್ನು ಬಿಟ್ಟು ನಮ್ಮ ರಾಜ್ಯದಲ್ಲಿ ಬಂದು ತಯಾರಿಕಾ ಘಟಕವನ್ನು ಪ್ರಾರಂಭಿಸುವುದು ಸುಲಭದ ಮಾತಲ್ಲ. ‘ಮೇಕ್ ಇನ್ ಇಂಡಿಯಾ’ ಅಭಿಯಾನದಡಿಯಲ್ಲಿ ಭಾರತದಲ್ಲಿ  ತಯಾರಿಕಾ ಘಟಕಗಳನ್ನು ಪ್ರಾರಂಭಿಸುವಂತೆ ವಿದೇಶಿ ಕಂಪನಿಗಳ ಬಳಿ ಕೇಳಿ ಕೊಂಡಾಗ, ನಮ್ಮ ಮಾತಿಗೆ ಸ್ಪಂದಿಸಿ ಬಂಡವಾಳವನ್ನು ಹೂಡಿದರೆ ಕೆಲವು ಸಮಾಜ ಘಾತುಕ ಶಕ್ತಿಗಳು ಒಂದೆಡೆ ಸೇರಿಕೊಂಡು ಅಂತಹ ಘಟಕವನ್ನೇ ಧ್ವಂಸ ಮಾಡಿzರೆ.

‘ವಿಸ್ಟ್ರಾನ್’ ಕಂಪನಿಯು ಮುಂದಿನ ಎರಡು ವರ್ಷದಲ್ಲಿ ಸುಮಾರು  ಜನರಿಗೆ ಉದ್ಯೋ  ನೀಡುವ ಭರವಸೆಯನ್ನು ನೀಡಿತ್ತು.
25000 ಜನರಿಗೆ ನೇರ ಉದ್ಯೋಗವೆಂದರೆ ಕಡಿಮೆಯೆಂದರೂ ೧,೦೦,೦೦೦ ಪರೋಕ್ಷ ಉದ್ಯೋಗವು ಸುತ್ತ ಮುತ್ತಲಿನ ಜಾಗಗಳಲ್ಲಿ ಸೃಷ್ಟಿಯಾಗುತ್ತದೆ. ಈಗಾಗಲೇ ಸುಮಾರು ೮೧೦೦ ಜನರಿಗೆ ಉದ್ಯೋಗವನ್ನು ‘ವಿಸ್ಟ್ರಾನ್’ ಕಂಪನಿಯು ನೀಡಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಕಾರ್ಖಾನೆಗಳಲ್ಲಿ ಕಂಪನಿ ಹಾಗೂ ನೌಕರರ ನಡುವಿನ ಕಿತ್ತಾಟ ನಿನ್ನೆ ಮೊನ್ನೆಯದಲ್ಲ. ಪ್ರತಿನಿತ್ಯವೂ ಏನಾದರೊಂದು ವಿಚಾರಕ್ಕೆ ಮಾತಿನ ಚಕಮಕಿಗಳು ನಡೆಯುತ್ತಿರುತ್ತವೆ.

ಸಂಬಳ ಕಡಿಮೆಯಾಯಿತು, ಹಾಜರಾತಿ ಸರಿಯಿಲ್ಲ, ಹೆಚ್ಚುವರಿ ಸಮಯದ ಸಂಬಳದ ಕೊರತೆ, ಇವೆಲ್ಲವೂ ಸಾಮಾನ್ಯವಾಗಿ ಕೇಳಿಬರುವ ಸಾಮಾನ್ಯ ಸಮಸ್ಯೆಗಳು. ಪೀಣ್ಯ ಕೈಗಾರಿಕಾ ವಲಯದಲ್ಲಿರುವ ಪ್ರತಿಯೊಂದು ಕಾರ್ಖಾನೆಯ ಮಾಲೀಕ ಅಥವಾ ನೌಕರರನ್ನು ಕೇಳಿದರೆ ಅವರೂ ಸಹ ಇದನ್ನೇ ಹೇಳುತ್ತಾರೆ. ಮಾಲೀಕ ಹಾಗೂ ನೌಕರರ ನಡುವೆ ಎಷ್ಟೇ ವ್ಯತ್ಯಾಸ ಗಳಿದ್ದರೂ
ಸಹ, ಮಾತುಕತೆಗಳ ಮೂಲಕ ಬಹೆಹರಿಸಿಕೊಂಡು ಕಾರ್ಖಾನೆ ನಡೆಸಿಕೊಂಡು ಹೋಗುತ್ತಿರುತ್ತಾರೆ. ಮಾತು ಕಥೆ ಸಫಲ
ವಾಗುವುದಕ್ಕೆ ವಿಳಂಬವಾಗಬಹುದೇ ಹೊರತು ತನಗೆ ಅನ್ನ ನೀಡುತ್ತಿರುವ ಕಾರ್ಖಾನೆಯನ್ನು ಸುಡುವ ಮಟ್ಟಕ್ಕೆ ಯಾರೂ ಸಹ
ಹೋಗುವುದಿಲ್ಲ.

‘ವಿಸ್ಟ್ರಾನ್’ ಕಂಪನಿ ಧ್ವಂಸ ಪ್ರಕರಣದಲ್ಲಿ ಸಂಬಳದ ವಿಚಾರದಲ್ಲಿ ಹಲವು ಆರೋಪಗಳು ಕೇಳಿಬಂದಿವೆ. ಕೆಲಸಕ್ಕೆ ತೆಗೆದು ಕೊಳ್ಳುವಾಗ ಹೇಳಿದ ಸಂಬಳವನ್ನು ಕೊಡದೆ ಕೇವಲ ಅರ್ಧದಷ್ಟು ಸಂಬಳವನ್ನು ಮಾತ್ರ ನೀಡುತ್ತಿದ್ದರಂತೆ, ದಿನದ
ಮೂರು ಪಾಳಿಯಲ್ಲಿ ಕೆಲಸ ಮಾಡಿಸಿಕೊಂಡು ಒಂದು ದಿನವೂ ರಜೆ ನೀಡುತ್ತಿರಲಿಲ್ಲವಂತೆ, ಹೆಚ್ಚುವರಿ ಸಮಯದ ಸಂಬಳ ವನ್ನು ನೀಡುತ್ತಿರಲಿಲ್ಲವಂತೆ. ಇಂತಹ ಆರೋಪಗಳು, ಸಮಸ್ಯೆಗಳು ಪ್ರತಿಯೊಂದು ಕಾರ್ಖಾನೆಯಲ್ಲೂ ಸರ್ವೇ ಸಾಮಾನ್ಯ. ಒಂದೆಡೆ ಕಾರ್ಖಾನೆಯ ನೌಕರರು ಹೇಳುವಂತೆ ಜಿಲ್ಲಾಧಿಕಾರಿಗಳಿಗೆಅಕ್ಟೋಬರ್ ತಿಂಗಳಲ್ಲಿ ಈ ಬಗ್ಗೆ ದೂರು ನೀಡಲಾಗಿದೆ ಯಂತೆ, ಕಾರ್ಖಾನೆಯ ಮಾನವ ಸಂಪನ್ಮೂಲ ವ್ಯವಸ್ಥಾಪಕನ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರಂತೆ.

ಅವರೇ ಹೇಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕೇವಲ ಎರಡು ತಿಂಗಳು ಮಾತ್ರ ಕಳೆ ಞದೆ, ಎರಡು ತಿಂಗಳಲ್ಲಿ ಸಮಸ್ಯೆ ಪರಿಹಾರವಾಗಲಿಲ್ಲವೆಂಬ ಕಾರಣಕ್ಕೆ ಕಾರ್ಖಾನೆಯನ್ನೇ ಧ್ವಂಸ ಮಾಡುವುದೇ? ಕೈಗಾರಿಕಾ ಪ್ರದೇ ಶದಲ್ಲಿ ‘ಟೊಯೋಟಾ’ ಕಂಪನಿಯ ಮುಷ್ಕರವು ಶುರುವಾಗಿ ಅದೆಷ್ಟೋ ದಿನಗಳು ಕಳೆದಿವೆ, ಕಾರ್ಮಿಕರು ಮಾತ್ರ ತಾಳ್ಮೆ ದಲೇ ವರ್ತಿಸುತ್ತಿzರೆ. ವರ‍್ಯಾರೂ ಸಹ ಇವರ ರೀತಿಯಲ್ಲಿ ಕಾರ್ಖಾನೆಯನ್ನು ಧ್ವಂಸ ಮಾಡಲಿಲ್ಲವಲ್ಲ, ಶಾಂತಿಯಿಂದಲೇ ಪ್ರತಿಭಟನೆ ಮಾಡುವ ಮೂಲಕ ತಮ್ಮ ಸಮಸ್ಯೆಗಳನ್ನು ಮಾಲೀಕರ ಬಳಿ ಚರ್ಚಿಸುತ್ತಿದ್ದಾರೆ,

‘ವಿಸ್ಟ್ರಾನ್’ಕಂಪನಿಯಲ್ಲಿ 8100 ಮಂದಿ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು. ಕಂಪನಿಯವರು ಹೇಳುವ ಪ್ರಕಾರ ತಾನು ಗುತ್ತಿಗೆಯವನಿಗೆ ಸಂಪೂರ್ಣವಾಗಿ ಸಂಬಳದ ಹಣವನ್ನು ನೀಡಿದ್ದರಂತೆ. ಆತನು ಕೆಲಸಗಾರರಿಗೆ ಸರಿಯಾದ ಸಂಬಳವನ್ನು ನೀಡದಿದ್ದರೆ ‘ವಿಸ್ಟ್ರಾನ್’ ಕಂಪನಿ ಹೇಗೆ ತಾನೆ ಜವಾಬ್ದಾರನಾಗುತ್ತದೆ? ಸಂಬಳ ಸರಿಯಾಗಿ ನೀಡದಿದ್ದರೆ ತನಗೆ ಸಂಬಳ ನೀಡುತ್ತಿದ್ದಂತಹ ಗುತ್ತಿಗೆದಾರನ ಕತ್ತಿನ ಪಟ್ಟಿ ಹಿಡಿದು ಕೇಳಬೇಕಿತ್ತು, ಅದನ್ನು ಬಿಟ್ಟು ಕಾರ್ಖಾನೆಯನ್ನೇ ಧ್ವಂಸ ಮಾಡಬಾರದಿತ್ತು.

ಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕೆ ತೆಗೆದುಕೊಳ್ಳುವುದು ನೆನ್ನೆ ಮೊನ್ನೆಯ ಸಂಗತಿಯಲ್ಲ, ಹಲವು ದಶಕಗಳಿಂದ ನಡೆದು ಕೊಂಡು ಬಂದಿದೆ. ನೌಕರರೂ ಅಷ್ಟೇ ತಮಗೆ ನೇರವಾಗಿ ಕಂಪನಿಯಲ್ಲಿ ಕೆಲಸಬೇಕೆಂದು ಹಠ ಹಿಡಿದರೆ ಆಗುವುದಿಲ್ಲ, ಕೆಲವು ವರ್ಷಗಳ ಕಾಲ ಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡಿ ನಂತರವಷ್ಟೇ ಕಂಪನಿಯಲ್ಲಿ ನೇರವಾಗಿ ಕೆಲಸಕ್ಕೆ ಸೇರುತ್ತಿರುವುದು ಕೈಗಾರಿಕೆಗಳಲ್ಲಿ ನಡೆದು ಕೊಂಡು ಬಂದಿರುವಂತಹ ಅಭ್ಯಾಸ. ‘ವಿಸ್ಟ್ರಾನ್’ ಕಂಪನಿಯೂ ಅಷ್ಟೇ ಗುತ್ತಿಗೆಯ ಆಧಾರದ ಮೇಲೆ ೮,೧೦೦ ಜನರನ್ನು ಕೆಲಸಕ್ಕೆ ಸೇರಿಸಿಕೊಂಡಿತ್ತು, 1300 ಜನರನ್ನು ನೇರವಾಗಿ ಕೆಲಸಕ್ಕೆ ಸೇರಿಸಿಕೊಂಡಿತ್ತು.

ಇಷ್ಟೊಂದು ಉದ್ಯೋಗವನ್ನು ಸೃಷ್ಟಿಮಾಡಿದ್ದ ಕಂಪನಿಯ ಕಾರ್ಖಾನೆಯನ್ನು ಧ್ವಂಸ ಮಾಡುವ ಮೂಲಕ ದೇಶದಲ್ಲಿ ಕರ್ನಾಟಕಕ್ಕೆ ಒಂದು ದೊಡ್ಡ ಕಪ್ಪುಚುಕ್ಕೆಯನ್ನೇ ಕಿರಾತಕರು ತಂದಿಟ್ಟರು. ಮಾತು ಮಾತಿಗೂ ಉದ್ಯೋಗ ಸೃಷ್ಠಿಯಾಗಲಿಲ್ಲ, ಬಡತನ ನಿರ್ಮೂಲನೆಯಾಗಲಿಲ್ಲ, ಆರ್ಥಿಕತೆ ಕುಸಿಯುತ್ತಿದೆಯೆಂದು ಬೊಬ್ಬೆ ಹೊಡೆಯುತ್ತಿದ್ದಂತಹ ‘ಖಾಲಿಡಬ್ಬ’ದ ನಾಯಕರು ಇಂದು ಒಂದು ಮಾತನ್ನೂ ಹೇಳುತ್ತಿಲ್ಲವಲ್ಲವೇಕೆ? ಉದ್ಯೋಗ ಸೃಷ್ಟಿ ಮಾಡಿದರೆ ಇಂತಹ ವಿಧ್ವಂಸಕ ಕೃತ್ಯಗಳನ್ನು ಮಾಡುವ ಮೂಲಕ ತಮ್ಮ ತಲೆಯ ಮೇಲೆ ತಾವೇ ಚಪ್ಪಡಿಕಲ್ಲು ಹಾಕಿಕೊಳ್ಳುತ್ತಿದ್ದಾರೆ.

ಮೂರು ತಿಂಗಳಲ್ಲಿ ತಮ್ಮ ಸಮಸ್ಯೆ ಬಗೆಹರಿಯಲಿಲ್ಲವೆಂದು ಇಡೀ ಕಾರ್ಖಾನೆಯನ್ನೇ ಧ್ವಂಸ ಮಾಡಿರುವ ಕಿರಾತಕರನ್ನು ಒದ್ದು ಒಳಗೆ ಹಾಕಬೇಕು. ಪೊಲೀಸರಿಗೆ ಕಂಪನಿಯವರು ನೀಡಿದ ದೂರಿನಲ್ಲಿ ಸುಮಾರು ‘430’ ಕೋಟಿಯಷ್ಟು ನಷ್ಟವಾಗಿದೆಯೆಂದು ಮೊದಲು ಹೇಳಲಾಗಿತ್ತು, ಆದರೆ ಈಗ 57 ಕೋಟಿಯಷ್ಟು ನಷ್ಟವಾಗಿದೆಯೆಂದು ಹೇಳಲಾಗಿದೆ. ಇಷ್ಟಾದರೂ ಸಹ ಕಂಪನಿಯವರು ಪ್ರಧಾನ ಮಂತ್ರಿಯವರ ಕಚೇರಿಗೆ ಪತ್ರವನ್ನು ಬರೆದು ತಾವು ಭಾರತಕ್ಕೆ ನೀಡಿರುವ ಉದ್ಯೋಗ ಸೃಷ್ಟಿಯ ಆಶ್ವಾಸನೆಯನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆಂದು ಹೇಳಿದೆ. ಆದಷ್ಟು ಬೇಗ ಕಾರ್ಖಾನೆಯನ್ನು  ಪುನಃ ಶುರು ಮಾಡುವುದಾಗಿ ಹೇಳಿದೆ. ಆದರೆ ಪುಂಡರು ಮಾಡಿದ ಕೆಲಸದಿಂದ ಗುತ್ತಿಗೆಯ ಆಧಾರದ ಮೇಲೆ ಕೆಲಸಕ್ಕಿದಂತಹ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವುದು ಮಾತ್ರ ಅನುಮಾನ.

ಕಾರ್ಖಾನೆಯನ್ನು ಧ್ವಂಸ ಮಾಡುತ್ತಿರುವ ವಿಡಿಯೋ ತುಣುಕುಗಳನ್ನು ನೋಡುತ್ತಿದ್ದರೆ ಮೈಯೆಲ್ಲ ಉರಿಯುತ್ತದೆ. ಕೊಟ್ಟಷ್ಟು
ಸಂಬಳವನ್ನು ಪಡೆದು ಕೆಲಸ ಮಾಡಲು ಕಾರ್ಮಿಕರೇನು ಜೀತದಾಳುಗಳಲ್ಲ, ಆದರೆ ಕರ್ನಾಟಕದಲ್ಲಿ ‘ಕನಿಷ್ಠ ವೇತನ ಕಾಯ್ದೆ’ಯು ಜಾರಿಯಲ್ಲಿದೆ, ಇದರ ಪ್ರಕಾರ ತಿಂಗಳಿಗೆ 15000 ಕನಿಷ್ಠ ಸಂಬಳವನ್ನು ನೀಡಬೇಕು. ‘ಕನಿಷ್ಠ ವೇತನ ಕಾಯಿದೆ ’ಯಡಿ ಯಲ್ಲಿ ಇಷ್ಟೊಂದು ಹೆಚ್ಚಿನ ಸಂಬಳ ನೀಡಬೇಕೆಂದು ಕಾಯಿದೆಯ ಮೂಲಕ ಹೇಳಿರು ಅಪರೂಪದ ರಾಜ್ಯ ಕರ್ನಾಟಕ. ಇತರ ರಾಜ್ಯಗಳಿಗೆ ಹೋಲಿಸಿದರೆ ‘ಕನಿಷ್ಠ ವೇತನ’ ಕರ್ನಾಟಕದಲ್ಲಿ ಹೆಚ್ಚಿದೆ.

ಇಷ್ಟಾದರೂ ಸಹ ಕಾರ್ಮಿಕರು ಕಂಪನಿಯನ್ನು ಧ್ವಂಸ ಮಾಡಿದ್ದು ಮಾತ್ರ ನಾಚಿಕೆಗೇಡಿನ ಸಂಗತಿ. ಪೊಲೀಸರು ಈ ಪ್ರಕರಣ ದಲ್ಲಿ ‘”SFI’’ನ ಕೋಲಾರ ಜಿಧ್ಯಕ್ಷನನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ. ಕೆಲವು ಮಾಹಿತಿಗಳ ಪ್ರಕಾರ ಈತನೆ ಗಲಭೆ ಮಾಡಲು ವಾಟ್ಸಾಪ್ ಮೂಲಕ ಪ್ರಚೋದನೆ ನೀಡಿದ್ದನಂತೆ, ಇವನ ಪ್ರಚೋದನೆಯ ಮಾತನ್ನು ಕೇಳಿದ ನೌಕರರು ಕಾರ್ಖಾನೆಯನ್ನು ಧ್ವಂಸ ಮಾಡಿಸಿದ್ದಾರೆ.

ಸದಾ ಕೆಂಪು ಭಾವುಟ ಹಿಡಿದುಕೊಂಡು ಕಾರ್ಖಾನೆಯ ಮುಂದೆ ಬಂದು ನಿಲ್ಲುವ ಕಮ್ಯುನಿಸ್ಟ್ ಸಂಘಟನೆಯ ಅಂಗಸಂಸ್ಥೆ ‘ಖಊಐ’. ಇವರ ಕೃತ್ಯದ ಹಿಂದಿನ ಮರ್ಮವನ್ನು ನೋಡಿದರೆ ಬೇಕಂತಲೇ ಜಾಗತಿಕ ಮಟ್ಟದಲ್ಲಿ ಭಾರತದ ಹೆಸರನ್ನು ಹಾಳು ಮಾಡಲು ನಡೆಸಿದ ಷಡ್ಯಂತ್ರದಂತೆ ಕಾಣುತ್ತಿದೆ.

ಕಮ್ಯುನಿಷ್ಟ  ಸ್ವಾತಂತ್ರ್ಯಪೂರ್ವ ದಿಂದಲೂ ದೇಶಕ್ಕೆ ಒಳ್ಳೆಯದನ್ನು ಬಯಸಿದವರಲ್ಲ. ಎರಡನೇ ಮಹಾಯುದ್ಧದಲ್ಲಿ ಮೊದಮೊದಲು ಕಮ್ಯುನಿಸ್ಟ್ ‘ರಷ್ಯಾ’ ದೇಶಕ್ಕೆ ಬೆಂಬಲ ನೀಡುವ ಸಲುವಾಗಿ ಭಾರತದೊಳಗೆ ಬ್ರಿಟಿಷರ ವಿರುದ್ಧ ಸೆಟೆದು ನಿಂತಿದ್ದ ಕ್ರಾಂತಿಕಾರಿಗಳಿಗೆ ಬೆಂಬಲ ಸೂಚಿಸಿದ್ದರು. ಯಾವಾಗ ಎರಡನೇ ಮಹಾಯುದ್ಧದಲ್ಲಿ ‘ಜರ್ಮನ್’ನ ಅಧಃಪಥನ ಶುರುವಾಯಿತೋ, ಹಿಟ್ಲರ್ ಇನ್ನು ರಷ್ಯಾ ತಂಟೆಗೆ ಬರಲಾಗುವುದಿಲ್ಲವೆಂದು ಅರಿತ ಭಾರತದ ಕಮ್ಯುನಿಷ್ಟರು ಸುಮ್ಮನಾಗಿ ಬಿಟ್ಟರು, ತಮ್ಮ ಬ್ರಿಟಿಷರ ವಿರುದ್ಧದ ಹೋರಾಟವನ್ನು ನಿಲ್ಲಿಸಿಬಿಟ್ಟರು. ರಷ್ಯಾ ಬೆಂಬಲಿಸುವ ಸಲುವಾಗಿ ಬ್ರಿಟಿಷರ ವಿರುದ್ಧ ತಿರುಗಿಬಿದ್ದಂಥ ಕಮ್ಯುನಿಷ್ಟರು ತಾವೂ ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೇವೆಂದು ಸುಳ್ಳು ಹೇಳಿಕೊಂಡು ತಿರುಗುತ್ತಾರೆ.

ಚೀನಾ ವಿರುದ್ಧದ 1962ರ ಯುದ್ಧದಲ್ಲೂ ಅಷ್ಟೇ ಅಮೆರಿಕ ದೇಶವು ನಮಗೆ ಕಳುಹಿಸಿದ್ದಂಥ ಶಸಾಸಗಳನ್ನು ವಿಮಾನದಿಂದ ಇಳಿಯಲು ಬಿಡದೆ ವಿಮಾನ ನಿಲ್ದಾಣದಲ್ಲಿ ಕೂಲಿಯಾಳುಗಳ ಮುಷ್ಕರ ಮಾಡಿಸುವ ಮೂಲಕ ಚೀನಾ ದೇಶಕ್ಕೆ ಸಹಾಯ ಮಾಡಿದರು. ಈಗಲೂ ಅಷ್ಟೇ ಇವರ ಒಲವೇನಿದ್ದರೂ ಚೀನಾ ದೇಶದೆಡೆಗೆ ಮಾತ್ರ. ಚೀನಾ ದೇಶವು ತಾನು ‘ಕಮ್ಯುನಿಸ್ಟ್’ ರಾಷ್ಟ್ರವೆಂದು ಹೇಳಿಕೊಂಡು ಜಗತ್ತಿನಲ್ಲಿ ಅತೀ ಹೆಚ್ಚಿನ ‘ಬಂಡವಾಳ’ ಹೂಡಿರುವ ರಾಷ್ಟ್ರ. ಜಗತ್ತಿನ ಹೆಚ್ಚಿನ ‘ಬಿಲೇನಿಯರ್’ ಗಳಿರುವುದು ಚೀನಾದಲ್ಲಿ.

ಅಷ್ಟೊಂದು ‘ಬಿಲೇನಿಯರ್’ಗಳಿರುವ ಚೀನಾ ಹೇಗೆ ತಾನೆ ಕಮ್ಯುನಿಸ್ಟ್ ರಾಷ್ಟ್ರ ವಾಗುತ್ತದೆ? ಭಾರತಕ್ಕಿಂತಲೂ ಹೆಚ್ಚಿನ
ಬಂಡವಾಳಶಾಹಿಗಳನ್ನು ಹೊಂದಿರುವ ರಾಷ್ಟ್ರ ಚೀನಾ. ಸತ್ತು ಹೋಗಿರುವ ಕಮ್ಯುನಿಸ್ಟ್ ಸಿದ್ಧಾಂತಗಳನ್ನು ಹೇಳಿಕೊಂಡು ಹೆಚ್ಚಿನ ‘ಬಿಲೇನಿಯರ್’ಗಳನ್ನು ಸೃಷ್ಟಿಸುತ್ತಿರುವ ರಾಷ್ಟ್ರ ಚೀನಾ. ‘ಬಾಯ್ಕಾಟ್ ಚೀನಾ’ ಅಭಿಯಾನ ಶುರುವಾದ ಮೇಲೆ, ಚೀನಾ
ದೇಶದಿಂದ ಹಲವು ಕಂಪನಿಗಳು ಜಗತ್ತಿನ ಇತರ ದೇಶಗಳಿಗೆ ತಮ್ಮ ಕಾರ್ಖಾನೆಗಳನ್ನು ವರ್ಗಾಯಿಸುತ್ತಿವೆ.

ಇದನ್ನು ನೋಡಿಕೊಂಡು ಸುಮ್ಮನಿರುವ ದೇಶವಲ್ಲ ಚೀನಾ. ನೇರವಾಗಿ ಯುದ್ಧ ಮಾಡುವ ತಾಕತ್ತಿಲ್ಲದಿದ್ದರೂ ಸಹ, ತನ್ನ ಹಣ ಬಲದ ಮೂಲಕ ಇತರ ರಾಷ್ಟ್ರದಲ್ಲಿನ ಆಂತರಿಕ ದೇಶದ್ರೋಹಿಗಳನ್ನು ಬಳಸಿಕೊಂಡು ಅಶಾಂತಿ ಸೃಷ್ಟಿಸುವ ಕೆಲಸ ಮಾಡು ತ್ತಿರುತ್ತದೆ. ಭಾರತದಲ್ಲಿ ಚೀನಾ ದೇಶಕ್ಕೆ ಸಿಕ್ಕಿರುವಂಥ ಇಂತಹ ಒಂದು ಅಸವೆಂದರೆ ಕಮ್ಯುನಿಸ್ಟರು ಕಳೆದ ಏಳು ದಶಕಗಳಿಂದ ದೇಶದ ಪರವಾಗಿ ನಿಲ್ಲದೆ, ಸದಾ ಚೀನಾಹಾಗೂ ರಷ್ಯಾ ಪರವಾಗಿ ನಿಲ್ಲುವ ಸಂಘಟನೆ ಇದು. ಕೋಲಾರದ ನರಸಾಪುರ ಕೈಗಾರಿಕಾ ವಲಯದಲ್ಲಿನ ‘ವಿಸ್ಟ್ರಾನ್’ ಕಂಪನಿಯಲ್ಲಿನ ಗಲಾಟೆಯ ವಿಚಾರವು ಚೀನಾ ದೇಶದಲ್ಲಿನ ಪತ್ರಿಕೆಯೊಂದರಲ್ಲಿ ವರದಿಯಾಗುತ್ತದೆ.

ಚೀನಾ ದೇಶದ ಕೈಗಾರಿಕಾ ಉದ್ಯಮಿಗಳ ಸಂಘವೊಂದು ಪತ್ರಿಕಾ ಹೇಳಿಕೆಯಲ್ಲಿ ‘ಚೀನಾ’ ದೇಶವನ್ನು ಬಿಟ್ಟು ಭಾರತಕ್ಕೆ ಹೋದ ‘ವಿಸ್ಟ್ರಾನ್’ ಕಂಪನಿಯವರು ಭಾರತದಲ್ಲಿ ಇದನ್ನೇ ಅನುಭವಿಸಬೇಕೆಂದು ಹೇಳಿದ್ದಾರೆ. ‘ಕಾರ್ಮಿಕ’ ಸ್ನೇಹಿ ದೇಶ ಚೀನಾವನ್ನು ಬಿಟ್ಟು ಹೋದರೆ ಇಂತಹದ್ದೇ ಪರಿಸ್ಥಿತಿ ಬರುತ್ತದೆಯೆಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಹಾಗೂ ಭಾರತ ಮೇಲೆ ಕಪ್ಪು ಚುಕ್ಕಿ ಇಟ್ಟಿದ್ದಾರೆ. ಒಂದು ವರದಿಯ ಪ್ರಕಾರ ಭಾರತದಲ್ಲಿನ ಕಂಪನಿಗಳಲ್ಲಿ ಸುಮಾರು ಇಪ್ಪತ್ತು ಲಕ್ಷಕ್ಕೂ ಅಧಿಕ ಚೀನಾ ದೇಶದ ಗೂಢಚಾರಿ ಏಜೆಂಟರಿದ್ದಾರೆ.

ಇವರಿಗೆ ಹಣವನ್ನು ಸಂದಾಯ ಮಾಡಿ ಭಾರತ ದೊಳಗಿನ ಆಂತರಿಕ ವಿಷಯಗಳನ್ನು ಚೀನಾ ಸರಕಾರಕ್ಕೆ ಮುಟ್ಟಿಸುವ ಕೆಲಸ ನಡೆಯುತ್ತಿದೆ. ಇಲ್ಲಿನ ಸಂಘಟನೆಗಳಿಗೆ ಹಣವನ್ನು ನೀಡಿ ಗಲಾಟೆ ಮಾಡಿಸುವ ಮೂಲಕ ದೇಶದಲ್ಲಿ ಆಂತರಿಕ ಭದ್ರತೆಯನ್ನು ಅಲುಗಾಡಿಸುವ ಪ್ರಯತ್ನ ಚೀನಾ ದೇಶದಿಂದ ನಡೆಯುತ್ತಿದೆ. ಕಳೆದ ಒಂದೂವರೆ ವರ್ಷದಿಂದ ಗಮನಿಸಿದರೆ ಭಾರತವು ಯಾವುದೇ ಐತಿಹಾಸಿಕ ನಿರ್ಣಯಗಳನ್ನು ಕೈಗೊಂಡರೂ ಸಹ ಸುಳ್ಳು ಸುದ್ದಿ ಗಳನ್ನು ಹಬ್ಬಿಸಿ ಪ್ರತಿಭಟನೆಗಳನ್ನು ನಡೆಸಲಾಗು ತ್ತಿದೆ.

ಪೌರತ್ವ ಕಾಯಿದೆ ತಿದ್ದುಪಡಿ, ಕಾಶ್ಮೀರದ ಸಮಸ್ಯೆ ಬಗೆಹರಿದದ್ದು, ರೈತರ ಪರವಾದ ಮಸೂದೆಯು ಮಂಡನೆಯಾದದ್ದು ಎಲ್ಲವೂ ಸಹ ಒಳ್ಳೆಯದೇ ಆಗುತ್ತಿದ್ದರೂ ಸಹ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಪ್ರತಿಭಟನೆಯನ್ನು ಮಾಡಿಸಲಾಗುತ್ತಿದೆ. ಇದೆಲ್ಲದರ ಹಿಂದೆ ಖಂಡಿತ ವಾಗಿಯೂ ಚೀನಾ ದೇಶದ ಕೈವಾಡವಿರುವುದಲ್ಲಿ ಯಾವುದೇ ಅನುಮಾನವಿಲ್ಲ. ಗಡಿಯಲ್ಲಿ ತಂಟೆ ತೆಗೆದರೆ ಭಾರತವು ಸುಮ್ಮನಾಗು ತ್ತದೆಯೆಂದುಕೊಂಡಿದ್ದ ಚೀನಾ ದೇಶಕ್ಕೆ ನಮ್ಮ ಸೈನಿಕರು ತಕ್ಕ ಶಾಸ್ತಿಯನ್ನೇ ಮಾಡಿದ್ದರು, ಯಾವಾಗ ಯುದ್ಧವನ್ನು ಮಾಡಲಾಗದ ಪರಿಸ್ಥಿತಿಯೆದುರಾಯಿತೋ ಆಗ ದೇಶದಲ್ಲಿನ ಆಂತರಿಕ ವಿಚಾರದಲ್ಲಿ ಪ್ರತಿಭಟನೆಯನ್ನು ಮಾಡಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರಿಗೆ ಮಸಿ ಬಳೆಯುವ ಕೆಲಸಕ್ಕೆ ಚೀನಾ ಕೈ ಹಾಕಿತು.

ತನ್ನ ಈ ಕಾರ್ಯಕ್ಕಾಗಿ ಚೀನಾ ಮತ್ತದೇ ತನ್ನ ಮುದ್ದಿನ ಭಾರತದ ಕಮ್ಯುನಿಸ್ಟರನ್ನು ಬಳಸಿಕೊಂಡಿದೆ. ಕಮ್ಯುನಿಸ್ಟ್ ನಾಯಕರು,
ಕಮ್ಯುನಿಸ್ಟ್ ಪತ್ರಕರ್ತರು, ಕಮ್ಯುನಿಸ್ಟ್ ವಕೀಲರು, ವಿಶ್ವವಿದ್ಯಾಲಯದ ಕಮ್ಯುನಿಸ್ಟ್ ಪ್ರಾಧ್ಯಾಪಕರು ಎಲ್ಲರೂ ಸಹ ದಶಕಗಳಿಂದ ಕಮ್ಯುನಿಸ್ಟ್ ಸಿದ್ಧಾಂತವನ್ನು ಹೇರುವ ಸಲುವಾಗಿ ಚೀನಾ ದೇಶದ ಜತೆಗೆ ಕೈ ಜೋಡಿಸಿದ್ದಾರೆ.

‘ವಿಸ್ಟ್ರಾನ್’ ಕಂಪನಿಯ ಗಲಾಟೆಯಲ್ಲಿ ಯಾವಾಗ ‘ಎಸ್.ಎಫ್‌.ಐನ ಕೋಲಾರದ ಅಧ್ಯಕ್ಷನ ಬಂಧನವಾಯಿತೋ ಆಗಲೇ ‘ಕಮ್ಯುನಿಸ್ಟರ’ ಕೈವಾಡದ ವಾಸನೆ ಮೂಗಿದೆ ಬಡಿದಿದೆ. ಇವರ ತೆವಲಿಗೆ ಭಾರತಕ್ಕೆ ಬರಬೇಕಿದ್ದ ಬಂಡವಾಳಕ್ಕೂ ಕತ್ತರಿ ಬೀಳುತ್ತದೆ, ಅಸಂಖ್ಯಾತ ಯುವಕರ ಕೆಲಸವೂ ಇಲ್ಲದಂತಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜಾಗಿದೆ.
1991 ರಲ್ಲಿ ದೇಶದಲ್ಲುಂಟಾಗಿದ್ದ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವ ಸಲುವಾಗಿ ದೇಶದಲ್ಲಿದ್ದ ಚಿನ್ನವನ್ನು ಲಂಡನ್ನಿನ
ಬ್ಯಾಂಕಿನಲ್ಲಿ ಅಡವಿಟ್ಟು ಸಾಲಮಾಡಿ ಸಮಸ್ಯೆ ಬಗೆಹರಿಸಿಕೊಂಡಂಥ ದೇಶ ನಮ್ಮದು.

ಗುಬ್ಬಚ್ಚಿ ಗೂಡಿನಂತಿದ್ದಂಥ ಅಂದಿನ ಆರ್ಥಿಕ ನೀತಿಯನ್ನು ಸಡಿಲಿಸಿ ಭಾರತಕ್ಕೆ ವಿದೇಶಿ ಬಂಡವಾಳ ಬರುವಂತೆ ಮಾಡಲಾ ಯಿತು. ವಿದೇಶಿ ಬಂಡವಾಳವು ಹರಿದು ಬರುವುದು ಅಷ್ಟು ಸುಲಭದ ಮಾತಲ್ಲ, ಅದಕ್ಕಾಗಿ ಸರಕಾರಗಳು ಎಷ್ಟು ಕಷ್ಟಪಡ ಬೇಕಿದೆ. ಬಂಡವಾಳ ಹೂಡಲು ತಯಾರಿರುವ ಕಂಪನಿಗಳಿಗೆ ಬೇಕಿರುವ ಸ್ನೇಹಮಯ ವಾತಾವರಣವನ್ನು ನಿರ್ಮಾಣ
ಮಾಡಬೇಕಿದೆ.

‘ಲೈಸೆನ್ಸ್ ರಾಜ್’ನಡಿಯಲ್ಲಿದ್ದ ಭಾರತವನ್ನು ಬಂಡವಾಳ ಸ್ನೇಹಿ ದೇಶವನ್ನಾಗಿಸಿ ಕಾರ್ಖಾನೆಗಳನ್ನು ನಿರ್ಮಾಣ ಮಾಡ ಬಯಸುವವರಿಗೆ ಬೇಕಿರುವಂಥ ಅಗತ್ಯ ಸೌಲಭ್ಯಗಳನ್ನು ನೀಡುವುದು ಸುಲಭದ ಕೆಲಸವಲ್ಲ. ನೀಡದಿದ್ದರೆ ಅವರ‍್ಯಾಕೆ ನಮ್ಮ
ದೇಶದಲ್ಲಿ ಬಂದು ಕಾರ್ಖಾನೆ ಸ್ಥಾಪಿಸುತ್ತಾರೆ? ನಾವು ತಯಾರಿಲ್ಲವೆಂದರೆ ಮತ್ತೊಂದು ದೇಶವು ತಯಾರಿರುತ್ತದೆ ಅವರು ಅಲ್ಲಿಗೆ
ಹೋಗುತ್ತಾರೆ. ಬಿಡದಿಯಲ್ಲಿರುವ ‘ಟೊಯೋಟಾ’ ಕಾರ್ಖಾನೆಯು ತನ್ನ ಕೆಲಸಗಾರರನ್ನು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತದೆ
ಯೆಂದರೆ, ತನ್ನ ಕಾರ್ಮಿಕರಿಗೆ ಸಂಜೆಯ ‘ಸ್ನಾಕ್ಸ್’ನ್ನು ಮನೆಗೆ ಕಳುಹಿಸುತ್ತದೆ.

‘ಟೊಯೋಟಾ’ ಕಂಪನಿಯಲ್ಲಿ ಕೆಲಸ ಮಾಡುವ ವರನಿಗೆ ತನ್ನ ಮಗಳನ್ನು ಕೊಟ್ಟರೆ ಸುಖವಾಗಿರುತ್ತಾಳೆಂಬ ಮಾತನ್ನು ಹೆಣ್ಣು ಹೆತ್ತ ಪೋಷಕರು ಆಡುತ್ತಾರೆ. ಅಲ್ಲಿಯೂ ಕಾರ್ಮಿಕ ಸಂಘವಿದೆ, ಆದರೆ ಅವರ‍್ಯಾರೂ ಸಹ ಕಮ್ಯುನಿಸ್ಟ್ ಸಂಘಟನೆಯ ಜೊತೆ ಗುರುತಿಸಿಕೊಂಡಿಲ್ಲ. ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಾರೆ, ತಮ್ಮ ಬೇಡಿಕೆಗಳನ್ನುಈಡೇರಿಸಿಕೊಳ್ಳುತ್ತಾರೆ. ‘ವಿಸ್ಟ್ರಾನ್’ ಕಂಪನಿಯ ಕಾರ್ಮಿಕರ ರೀತಿಯಲ್ಲಿ ಕಾರ್ಖಾನೆ ಯನ್ನು ಸುಡುವ ಮಟ್ಟಕ್ಕೆ ಹೋಗುವುದಿಲ್ಲ. ‘ಐ ಫೋನ್’ ಕಂಪನಿಯು ತನ್ನ ವಸ್ತುಗಳನ್ನು ಉತ್ಪಾದಿಸುವ ಗುತ್ತಿಗೆಯನ್ನು ಅಷ್ಟು ಸುಲಭವಾಗಿ ಇತರ ಕಂಪನಿಗಳಿಗೆ ನೀಡುವುದಿಲ್ಲ, ತಾನು ನೀಡಬೇಕೆಂದು ಕೊಂಡಿರುವ ಕಂಪನಿಯ ಸಂಪೂರ್ಣ ಇತಿಹಾಸವನ್ನು ಜಾಲಾಡಿ, ಸಾವಿರಾರು ನೀತಿ ನಿಯಮಗಳನ್ನು ರೂಪಿಸಿ ನಂತರ ‘ವಿಸ್ಟ್ರಾನ್’ನಂಥ ಕಂಪನಿಗಳಿಗೆ ನೀಡುತ್ತದೆ.

ಅಂತಹ ಕಂಪನಿಯ ವಿರುದ್ಧ ಈ ಮಟ್ಟಿಗೆ ತಿರುಗಿ ಬೀಳುವುದು ತಪ್ಪು. ಸಮಸ್ಯೆ ಏನೇ ಇದ್ದರೂ ಅಷ್ಟೇ ಮೊದಲು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು, ಬಗೆಹರಿಯದಿದ್ದರೆ ಪೊಲೀಸರಿzರೆ, ಸರಕಾರವಿದೆ, ಕಾನೂನಿದೆ. ಕೇವಲ ಎರಡರಿಂದ ಮೂರು ತಿಂಗಳ ಸಮಸ್ಯೆಯನ್ನು ದೊಡ್ಡದು ಮಾಡಿ ದೊಡ್ಡ ಕಂಪನಿಯನ್ನೇ ಸುಡುವ ಪ್ರಯತ್ನದ ಹಿಂದೆ ಖಂಡಿತವಾಗಿಯೂ ಕಮ್ಯುನಿಸ್ಟರ ಕೈವಾಡವಿದ್ದೇ ಇದೆ.

ಕಾರ್ಖಾನೆಯ ಲಾಭದ ಹೆಚ್ಚಿನ ಅಂಶವನ್ನು ನೌಕರರಿಗೆ ನೀಡಬೇಕೆಂಬುದು ಕಮ್ಯುನಿಸ್ಟರ ನಿಖರ ವಾದ. ಇದರ ಸಲುವಾಗಿ
ಸರಕಾರಗಳು ಬೋನಸ್, ಕನಿಷ್ಠ ವೇತನ, ಕಾರ್ಮಿಕ ಭವಿಷ್ಯ ನಿಧಿ, ಕಾರ್ಮಿಕ ವಿಮೆ, ಹೆಚ್ಚುವರಿ ಸಮಯದ ವೇತನವನ್ನೆಲ್ಲ ಕಾಯಿದೆಯ ರೂಪದಲ್ಲಿ ಜಾರಿಗೊಳಿಸಿದೆ. ಹೆಚ್ಚಿನ ಲಾಭಾಂಶವನ್ನು ಬೇಕೆಂದು ಕೇಳುವವರು ನಷ್ಟದಿಂದ ಮುಚ್ಚಿ ಹೋಗಿರುವ ಅದೆಷ್ಟು ಕಂಪನಿಗಳಿಗೆ ಸಹಾಯ ಮಾಡಿದ್ದಾರೆ? ಆತ್ಮಹತ್ಯೆ ಮಾಡಿಕೊಂಡಿರುವ ‘ಕಾಫಿ ಡೇ’ ಸಿದ್ಧಾರ್ಥರ ನೆರವಿಗೆ ಕಮ್ಯುನಿಸ್ಟ್ ಸಂಘಟನೆಯವರು ಬಂದರೆ? ‘ಕಾಫಿ ಡೇ’ ಸಂಕಷ್ಟದಲ್ಲಿರುವಾಗ ಸಂಬಳ ಕೊಡಲಿಲ್ಲ ವೆಂದರೆ ಸುಮ್ಮನೆ ಇರುವರೇ? ‘ಕಾಫಿ ಡೇ’ ಕೇವಲ ಒಂದು ಉದಾಹರಣೆಯಷ್ಟೇ, ಅದೆಷ್ಟೋ ಕಂಪನಿಗಳು ವ್ಯವಹಾರದಲ್ಲಿ ಸೋತು ನಷ್ಟವನ್ನು ಅನುಭವಿಸಿ ಮುಚ್ಚಿವೆ.

ತಾವು ಮುಚ್ಚಿದರೂ ಸಹ ಕಾರ್ಮಿಕರಿಗೆ ನೀಡಬೇಕಿರುವ ಬಾಕಿ ಹಣವನ್ನು ನೀಡಿವೆ. ನಷ್ಟದಲ್ಲಿ ಪಾಲುದಾರರಾಗದವರಿಗೆ ಲಾಭದಲ್ಲಿ ಮಾತ್ರ ತಾವು ಕೇಳಿದಷ್ಟು ಪಾಲು ಕೇಳುವ ಯಾವ ಹಕ್ಕಿದೆ? ಹಾಗಂತ ಕಾರ್ಮಿಕರೇನು ಜೀತದಾಳುಗಳಲ್ಲ, ಅವರಿಗೆ ಸಿಗುವಂಥ ಕನಿಷ್ಠ ವೇತನ, ಬೋನಸ್, ಸಮಯದ ನಿಗದಿಯನ್ನು ಇದೇ ಕಾರ್ಮಿಕ ಸಂಘಟನೆಗಳ ಜೊತೆಯಲ್ಲಿ ಚರ್ಚಿಸಿಯೇ ಕಾಯಿದೆಗಳ ಮೂಲಕ ಜಾರಿಗೆ ತಂದಿರುವುದು. ಈ ಕಾಯಿದೆ ಅನ್ವಯ ಕಾರ್ಖಾನೆಯು ನಡೆಯುತ್ತಿಲ್ಲವೆಂಬ ಆರೋಪ ಕೇಳಿ ಬಂದರೆ, ಅದಕ್ಕೆ ಅದರದ್ದೇ ಆದಂತಹ ಮಾರ್ಗಗಳಿವೆ.

ಅದನ್ನು ಬಿಟ್ಟು ಯಾರದ್ದೇ ಮಾತು ಕೇಳಿಕೊಂಡು ‘ವಿಸ್ಟ್ರಾನ್’ ಕಂಪನಿಗೆ ಬೆಂಕಿ ಹಚ್ಚುವ ಮೂಲಕ ಚಿನ್ನದ ಮೊಟ್ಟೆ ಇಡಬೇಕಿ ದ್ದಂಥ ಕೋಳಿಯನ್ನು ಒಂದೇ ಬಾರಿ ಕತ್ತು ಹಿಸುಕಿ ಸಾಯಿಸುವ ಪ್ರಯತ್ನವನ್ನು ಮಾಡಲಾಗಿದೆ.