Wednesday, 18th September 2024

ಸಮಾನ ಆರ್ಥಿಕತೆಯೆಡೆಗೆ ಮಹಿಳಾ ಹೆಜ್ಜೆ

ಮಹಿಳಾದನಿ

ಧುವಾರಖಾ ಶ್ರೀರಾಮ್

ಕಳೆದ ದಶಕದಲ್ಲಿ, ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರವನ್ನು (WLFPR)ಹೆಚ್ಚಿಸುವಲ್ಲಿ ಭಾರತವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ.
ಉದ್ಯೋಗಿಗಳಲ್ಲಿ ಮಹಿಳೆಯರ, ವಿಶೇಷವಾಗಿ ಯುವತಿಯರ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಪರಿವರ್ತಕ ಸಾಮರ್ಥ್ಯವು ಅಗಾಧವಾಗಿದೆ. ಇದು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಮಾತ್ರವಲ್ಲದೆ ಸಾಮಾಜಿಕ ಬದಲಾವಣೆಗೆ ವೇಗ ನೀಡುತ್ತದೆ. ಕುತೂಹಲದ ಅಂಶವೆಂದರೆ, ಕಳೆದ ದಶಕದಲ್ಲಿನ
ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರದ ಹೆಚ್ಚಳವು ಹಿಂದಿನ ಶತಮಾನದಲ್ಲಿ ಆದ ಹೆಚ್ಚಳಕ್ಕಿಂತ ಹೆಚ್ಚು ಮಹತ್ವದ್ದಾಗಿದೆ.

ಇದು ವಿಶಾಲವಾದ ಸಾಮಾಜಿಕ-ಆರ್ಥಿಕ ಬದಲಾವಣೆಗಳು, ನೀತಿ ಕ್ರಮಗಳು ಮತ್ತು ಮಹಿಳೆಯರ ಕೆಲಸದ ಬಗ್ಗೆ ಸಾಮಾಜಿಕ ನಡವಳಿಕೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತದೆ. ಭಾಗವಹಿಸುವಿಕೆಯ ಮಹತ್ವದ ದಶಕ: ಭಾರತವು ಮಹಿಳಾ ಉದ್ಯೋಗವನ್ನು ಹೆಚ್ಚಿಸಲು ಹಲವಾರು ಉಪಕ್ರಮಗಳು ಮತ್ತು ನೀತಿಗಳನ್ನು ಜಾರಿಗೆ ತಂದಿದೆ. ಇದು ಉದ್ಯೋಗಿಗಳಲ್ಲಿ ಲಿಂಗ ಸಮತೋಲನವನ್ನು ಉತ್ತೇಜಿಸುವಲ್ಲಿನ ಗಮನಾರ್ಹ ಪ್ರಗತಿ ಯನ್ನು ಪ್ರತಿಬಿಂಬಿಸುತ್ತದೆ. ಇಂಥ ಪ್ರಮುಖ ಉಪಕ್ರಮಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆಯು ವ್ಯವಹಾರಗಳನ್ನು ಪ್ರಾರಂಭಿಸಲು ಖಾತರಿ ರಹಿತ ಸಾಲಗಳನ್ನು ಒದಗಿಸುವ ಮೂಲಕ ಮಹಿಳಾ ಉದ್ಯಮಿಗಳಿಗೆ ಆದ್ಯತೆ ನೀಡುವ ಗುರಿಯನ್ನು ಹೊಂದಿದೆ.

ಹೆಚ್ಚುವರಿಯಾಗಿ, ಬೇಟಿ ಬಚಾವೋ, ಬೇಟಿ ಪಢಾವೋ ಅಭಿಯಾನವು ಹೆಣ್ಣು ಮಕ್ಕಳ ಶೈಕ್ಷಣಿಕ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದು ಅವರ ಭವಿಷ್ಯದ ಉದ್ಯೋಗದ ನಿರೀಕ್ಷೆಗಳ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಈ ಪ್ರಯತ್ನಗಳು, ಕಾರ್ಪೊರೇಟ್ ನೀತಿಗಳೊಂದಿಗೆ ಕೆಲಸದ
ಸುರಕ್ಷತೆ ಮತ್ತು ವೈವಿಧ್ಯವನ್ನು ಖಚಿತಪಡಿಸಿಕೊಳ್ಳುವ, ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ಇರುವ ಅಡೆತಡೆಗಳನ್ನು ಕಿತ್ತು ಹಾಕುವ ಸಮಗ್ರ ವಿಧಾನಕ್ಕೆ ನಿದರ್ಶನಗಳಾಗಿವೆ.

ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯು (PLFS) ಮಹಿಳಾ ಉದ್ಯೋಗಿಗಳ ಭಾಗವಹಿಸುವಿಕೆಯು ೨೦೧೭-೧೮ ರಲ್ಲಿದ್ದ ಶೇ.೨೨ರಿಂದ ೨೦೨೨-೨೩ರಲ್ಲಿ ಶೇ.೧೩.೯ರಷ್ಟು ಹೆಚ್ಚಳ ದೊಂದಿಗೆ ೩೫.೯ ಪ್ರತಿಶತವಾಗಿದೆ ಎಂದು ಹೇಳಿದೆ. ಈ ಭರವಸೆಯ ಪ್ರವೃತ್ತಿಯು ಉನ್ನತ ರಾಜಕೀಯ ನಾಯಕತ್ವ ಮತ್ತು ಅಧಿಕಾರಶಾಹಿ (ಸಾರ್ವಜನಿಕ), ಕಾರ್ಪೊರೇಟ್ (ಖಾಸಗಿ) ಮತ್ತು ಯುವತಿಯರ ಇಚ್ಛಾಶಕ್ತಿಗೆ ಸಾಕ್ಷಿಯಾಗಿದೆ. ವಿಶ್ವದಲ್ಲೇ ಅತಿದೊಡ್ಡ  ಯುವಸಮೂಹ ವನ್ನು ಹೊಂದಿರುವ ಭಾರತವು ಆರ್ಥಿಕ ಅವಕಾಶಗಳಿಗಾಗಿ ಸಜ್ಜಾಗುತ್ತಿದೆ. ಈ ಸಾರ್ವಜನಿಕ-ಖಾಸಗಿ ಯುವಪೂರಕ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಮತ್ತು ಉನ್ನತ ಮಟ್ಟದಲ್ಲಿ ನೀತಿ ರೂಪಿಸಲು ಯುವತಿಯರನ್ನು ಸಮಾನ ಪಾಲುದಾರರನ್ನಾಗಿ ಸೇರಿಸುವುದು ಮುಖ್ಯವಾಗಿದೆ.

ಮಾರ್ಗದರ್ಶಿಯ ವೇಗವರ್ಧಕ ಪಾತ್ರ: ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರವನ್ನು ಸುಧಾರಿಸುವ ನಿಟ್ಟಿನಲ್ಲಿ, ಸರಕಾರ, ನಾಗರಿಕ ಸಮಾಜ, ಉದ್ಯಮ ಸಂಘಟನೆಗಳು ಮತ್ತು ಬಹುಪಕ್ಷೀಯ ಏಜೆನ್ಸಿಗಳ ಪ್ರಾತಿನಿಧ್ಯದೊಂದಿಗೆ ಕಾರ್ಮಿಕಪಡೆಯನ್ನು ಒಟ್ಟುಗೂಡಿಸುವಲ್ಲಿನ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಯತ್ನಗಳು ಶ್ಲಾಘನೀಯ. ಈ ಕಾರ್ಯಪಡೆಯ ಚರ್ಚೆಗಳಿಂದ ಹೊರ ಹೊಮ್ಮಿದ ಫಲಿತಾಂಶಗಳನ್ನು, ಉದ್ಯೋಗದಾತ ರಿಗಾಗಿ ‘ಮಹಿಳಾ ಸಬಲೀಕರಣದಲ್ಲಿ ಸಮಾನತೆಯನ್ನು ಖಾತರಿಪಡಿಸುವಿಕೆ’ ಎಂಬ ಶೀರ್ಷಿಕೆಯ ಸಲಹಾ ಮಾರ್ಗದರ್ಶಿಯಾಗಿ ಸಂಕಲಿಸಲಾಗಿದೆ.

ಇದು ಭಾಗೀದಾರರ ನಡುವೆ ಸಹಯೋಗ ವಿಧಾನದ ಶಕ್ತಿಯನ್ನು ಬಲಪಡಿಸುತ್ತದೆ. ಇದು ಅನುಕೂಲಕರ ಕೆಲಸದ ವಾತಾವರಣವನ್ನು ನಿರ್ಮಿಸುವು ದಕ್ಕಿರುವ ಪ್ರಾಮುಖ್ಯವನ್ನು ಒತ್ತಿಹೇಳುತ್ತದೆ. ಸಮಾನ ವೇತನ ಅಭ್ಯಾಸಗಳು ಮತ್ತು ಆರೋಗ್ಯ ಹಾಗೂ ಸುರಕ್ಷತಾ ಮಾನದಂಡಗಳನ್ನು ನಿರ್ದಿಷ್ಟವಾಗಿ ಉದ್ಯೋಗಸ್ಥ ಮಹಿಳೆಯರ ಅಗತ್ಯಗಳಿಗೆ ಅನುಗುಣವಾಗಿ ಖಾತ್ರಿಪಡಿಸುತ್ತದೆ.

ಅಡೆತಡೆಗಳ ನಿವಾರಣೆ: ಹೊಂದಿಕೆಯಾಗುವ ಕೆಲಸದ ಸಮಯ ಮತ್ತು ಮಕ್ಕಳ ಆರೈಕೆ ಸೌಲಭ್ಯಗಳಂಥ ಕ್ರಮಗಳನ್ನು ಶಿಫಾರಸು ಮಾಡುವ ಮೂಲಕ, ಕಾರ್ಮಿಕ ಮಾರುಕಟ್ಟೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಮಿತಿಗೊಳಿಸುವ ಕೆಲವು ಪ್ರಾಥಮಿಕ ನಿರ್ಬಂಧಗಳನ್ನು ಪರಿಹರಿಸುವ ಗುರಿ ಯನ್ನು ಸಲಹಾ ಮಾರ್ಗದರ್ಶಿ ಹೊಂದಿದೆ. ಲಿಂಗ ತಟಸ್ಥ ಶಿಶುವಿಹಾರಗಳು ಮತ್ತು ಮಹಿಳಾ ವಕಿಂಗ್ ಹಬ್‌ಗಳ ಪ್ರಾಮುಖ್ಯವನ್ನು ನಿರ್ಮಾಣ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಸೂಕ್ಷ್ಮ, ಮಧ್ಯಮ ಮತ್ತು ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಮಾನವಾಗಿ ಒತ್ತಿ ಹೇಳಲಾಗಿದೆ. ಚಲನಶೀಲತೆ ಮತ್ತು ಹೆರಿಗೆಯ ಸಾಮಾಜಿಕ ಅಡೆತಡೆಗಳು, ಯುವತಿಯರು ಉದ್ಯೋಗಗಳಿಗೆ ಪ್ರವೇಶಿಸಲು ಮತ್ತು ಮರು-ಪ್ರವೇಶಿಸಲು ತಡೆಯುವ ಎರಡು ಪ್ರಮುಖ ಅಂಶಗಳಾಗಿವೆ. ಸಲಹಾ ಮಾರ್ಗದರ್ಶಿಯಲ್ಲಿ ವಿವರಿಸಿದಂತೆ ಶಿಶುವಿಹಾರ ಮತ್ತು ಹಿರಿಯ ಆರೈಕೆ ಸೌಲಭ್ಯಗಳೊಂದಿಗೆ ಮಹಿಳಾ ವಕಿಂಗ್ ಹಬ್‌ಗಳು/ ಹಾಸ್ಟೆಲ್‌ಗಳ ಆಶಯವನ್ನು ಈಡೇರಿಸಲು, ಸರಕಾರ ಮತ್ತು ಖಾಸಗಿ ವಲಯದ ನಡುವಿನ ಸಹಯೋಗದ ಪ್ರಯತ್ನಗಳು
ನಿರ್ಣಾಯಕವಾಗಿವೆ.

ಇದು ಸುರಕ್ಷತೆ, ಭದ್ರತೆ ಮತ್ತು ಆರೋಗ್ಯದ ನಿಬಂಧನೆಗಳೊಂದಿಗೆ ವಿಶ್ವದರ್ಜೆಯ ಸೌಲಭ್ಯಗಳೊಂದಿಗೆ ಗುಣಮಟ್ಟದ ಮೂಲಸೌಕರ್ಯವನ್ನು ನಿರ್ಮಿ
ಸುವುದು, ಯುವತಿಯರನ್ನು ಬದಲಾವಣೆ ಮತ್ತು ಆಯ್ಕೆಗಳ ಏಜೆಂಟ್‌ಗಳಾಗಿ ಪೋಷಿಸುವುದು ಹಾಗೂ ಅವರಲ್ಲಿ ಸ್ವಂತ ನಿರ್ಧಾರಗಳನ್ನು ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಬಲಪಡಿಸುವುದನ್ನು ಒಳಗೊಂಡಿರುತ್ತದೆ. ನಾಗರಿಕ ಸಮಾಜ ಮತ್ತು ಬಹುಪಕ್ಷೀಯ ಏಜೆನ್ಸಿಗಳ ಬೆಂಬಲವು ಈ ಕೇಂದ್ರಗಳನ್ನು ಆರ್ಥಿಕ ಸಬಲೀಕರಣದ ತಮ್ಮ ಆಕಾಂಕ್ಷೆಗಳನ್ನು ಮುಂದುವರಿಸಲು ಯುವತಿಯರಿಗೆ ಒಂದು ಸ್ಥಳವೆಂದು ಪರಿಗಣಿಸಲು ಸಮುದಾಯ ಗಳು ಮತ್ತು ಕುಟುಂಬಗಳ ನಡವಳಿಕೆಯಲ್ಲಿ ಬದಲಾವಣೆಯನ್ನು ತರುತ್ತದೆ.

ಕೋವಿಡ್ ಮಹಾಮಾರಿಯು ಕೆಲಸದ ಸ್ಥಳಗಳ ಬಗೆಗಿನ ನಮ್ಮ ಗ್ರಹಿಕೆಯನ್ನು ಬದಲಾಯಿಸುವುದರೊಂದಿಗೆ ಹಾಗೂ ಹೆಚ್ಚಿನ ಉದ್ಯೋಗಗಳು ಹೈಬ್ರಿಡ್ ಮತ್ತು ರಿಮೋಟ್ ವಿಧಾನಕ್ಕೆ ಪರಿವರ್ತನೆಗೊಳ್ಳುವುದರೊಂದಿಗೆ, ಸಾಂಪ್ರದಾಯಿಕ ಕೆಲಸದ ಸ್ಥಳದ ಸೂಕ್ಷ್ಮ ವ್ಯತ್ಯಾಸಗಳನ್ನು ತೆಗೆದು ಹಾಕುವಲ್ಲಿ ತಂತ್ರಜ್ಞಾನವು ಪರಿವರ್ತಕವಾಗಬಲ್ಲದು. ಟೆಲಿವಕಿಂಗ್ ಸೌಲಭ್ಯಗಳು ಸೇರಿದಂತೆ ಎಲ್ಲಾ ಲಿಂಗಗಳಿಗೆ ಹೊಂದಿಕೊಳ್ಳುವ ಅವಕಾಶಗಳನ್ನು ಒದಗಿಸು ವುದು, ಮಕ್ಕಳ ಆರೈಕೆ ಒಟ್ಟು ಜವಾಬ್ದಾರಿಯಾಗಿರಬೇಕು ಮತ್ತು ಮಹಿಳೆಯರು ತಮ್ಮ ಮೇಲೆ ಬೀಳುವ ಮಕ್ಕಳ ಆರೈಕೆಯ ಅಸಮಾನ ಹೊರೆಯಿಂದಾಗಿ ಉದ್ಯೋಗವನ್ನು ಬಿಡದಂತೆ ತಡೆಯುವ ಅಂಶಕ್ಕೆ ಸಲಹಾ ಮಾರ್ಗದರ್ಶಿಯಲ್ಲಿ ಒತ್ತು ನೀಡಲಾಗಿದೆ.

ಈ ಬೆಳವಣಿಗೆಗಳು ಮಹಿಳೆಯರ ಆರ್ಥಿಕ ಸಬಲೀಕರಣದ ಕಡೆಗೆ ಪ್ರಗತಿಶೀಲ, ಆದರೂ ಸವಾಲಿನ ಮಾರ್ಗ ವನ್ನು ಸೂಚಿಸುತ್ತವೆ. ಈ ಲಾಭಗಳನ್ನು ಉಳಿಸಿಕೊಳ್ಳಲು ಮತ್ತು ಹೆಚ್ಚಿಸಲು ಮುಂದುವರಿದ ನೀತಿಯ ಬಗ್ಗೆ ಗಮನ ಹಾಗೂ ಸಾಮಾಜಿಕ ಬದಲಾವಣೆಯ ಅಗತ್ಯವನ್ನು ಎತ್ತಿ ತೋರಿಸುತ್ತವೆ.

ಮಹಿಳೆಯರು ಸಾಧಿಸಬಲ್ಲರು: ಭಾರತವು ಜನಸಂಖ್ಯಾ ಪ್ರಯೋಜನದ ಉತ್ತುಂಗದಲ್ಲಿರುವುದರಿಂದ, ದೇಶದ ಮಹಿಳಾ ಉದ್ಯೋಗಿಗಳ ಸಾಮರ್ಥ್ಯ ವನ್ನು ಬಳಸಿಕೊಳ್ಳುವುದು ಸಾಮಾಜಿಕ ನ್ಯಾಯದ ವಿಷಯವಾಗಿದೆ ಮತ್ತು ಕಾರ್ಯತಂತ್ರದ ಆರ್ಥಿಕತೆಗೆ ಕಡ್ಡಾಯವಾಗಿದೆ. ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸಲಹಾ ಮಾರ್ಗದರ್ಶಿಯು, ಸಮಾಜದ ಎಲ್ಲಾ ವಲಯಗಳ ಸಂಘಟಿತ ಪ್ರಯತ್ನಗಳ ಜತೆಗೆ, ಕ್ರಮಕ್ಕಾಗಿ ಒಂದು ನೀಲನಕ್ಷೆಯನ್ನು ಒದಗಿಸುತ್ತದೆ. ಮುಂದಿನ ಪ್ರಯಾಣವು ಸವಾಲಿನದ್ದಾಗಿದೆ, ಆದರೆ ಪ್ರತಿಫಲಗಳು-ಆರ್ಥಿಕ ಸ್ಥಿತಿಸ್ಥಾಪಕತ್ವ, ಸಾಮಾಜಿಕ ಯೋಗ ಕ್ಷೇಮ ಮತ್ತು ಮಾನವ ಸಾಮರ್ಥ್ಯದ ಬಳಕೆ- ಕೈಗೆಟಕುವಂತಿವೆ.

ಈ ಪ್ರಯತ್ನವು ಜಾಗತಿಕ ವೇದಿಕೆಯಲ್ಲಿ ಭಾರತದ ಏಳಿಗೆಗೆ ಅಗತ್ಯ ಮಾತ್ರವಲ್ಲ, ಪ್ರಮುಖವೂ ಆಗಿದೆ. ಈ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ಮೂಲಕ ಮತ್ತು ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ದರವನ್ನು ವಧಿಸಲು ನಿರಂತರ ಪ್ರಯತ್ನಗಳಿಗೆ ಬದ್ಧರಾಗುವ ಮೂಲಕ, ಭಾರತವು ಅಂತರ್ಗತ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಹಾಗೂ ತನ್ನ ಎಲ್ಲಾ ನಾಗರಿಕರಿಗೆ ಉಜ್ವಲ ಭವಿಷ್ಯವನ್ನು ರೂಪಿಸಬಹುದು.

(ಲೇಖಕಿ ಯುವಾಹ ಯುನಿಸೆಫ್ ಇಂಡಿಯಾದ ಮುಖ್ಯಸ್ಥರು)

Leave a Reply

Your email address will not be published. Required fields are marked *