ಅಭಿಮತ
ಕೀರ್ತನ ಶೆಟ್ಟಿ
ಇದೀಗ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಗಿದಿದೆ. ಇದನ್ನು ಟೆಸ್ಟ್ ಕ್ರಿಕೆಟ್ ಇತಿಹಾಸದ ಒಂದು ಹೊಸ ಅಧ್ಯಾಯದ ಪ್ರಾರಂಭ ಎಂದರೂ ತಪ್ಪಾಗಲಿಕ್ಕಿಲ್ಲ. ಏಕದಿನ, ಟಿ- 20 ಕ್ರಿಕೆಟ್ ಅಬ್ಬರದಲ್ಲಿ ಈ ಚಾಂಪಿಯನ್‌ಶಿಪ್ ಟೆಸ್ಟ್ ಕ್ರಿಕೆಟ್‌ಗೆ ಹೊಸ ಮೆರುಗನ್ನು ನೀಡಿದೆ. ಸೌತಾಂಪ್ಟನ್‌ನಲ್ಲಿ ನಡೆದ ಫೈನಲ್ ಕಾದಾಟದಲ್ಲಿ ಭಾರತವು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಿತು. ಕೇವಲ ಒಂದು ಟೆಸ್ಟ್ ಪಂದ್ಯದಲ್ಲಿ ಯಾವ ತಂಡ ಉತ್ತಮ ಎಂದು ಹೇಗೆ ನಿರ್ಧರಿಸಬಹುದು ಎಂಬುವುದು ಕೆಲವು ದಿನಗಳ ಕಾಲ ಚರ್ಚೆಯ ವಿಷಯವಾಗಿತ್ತು.
ಅದೇನೇ ಇರಲಿ, ಸೀಮಿತ ಓವರ್‌ಗಳ ವಿಶ್ವಕಪ್‌ನ ಸ್ವರೂಪಗಳನ್ನು ಹಲವು ಬಾರಿ ಬದಲಾಯಿಸಿದಂತೆಯೇ, ಮುಂದಿನ ವರ್ಷಗಳಲ್ಲಿ ಟೆಸ್ಟ್ ಚಾಂಪಿಯನ್‌ಶಿಪ್ ಸ್ವರೂಪದ ಮರುಪರಿಶೀಲನೆ ಆಗಬಹುದು ಮತ್ತು ಮರು – ವಿನ್ಯಾಸವೂ ಮಾಡಬಹುದು. ಸದ್ಯಕ್ಕಂತೂ, ಚಾಂಪಿಯನ್‌ಶಿಪ್ ಅನ್ನು ಪ್ರಾರಂಭ ಮಾಡಿರುವುದೇ ಒಂದು ಒಳ್ಳೆಯ ಸಂಗತಿ. ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ನಾಯಕತ್ವದ ಭಾರತ ತಂಡವು 3 ವೇಗಿಗಳು ಹಾಗೂ ಇಬ್ಬರು ಸ್ಪಿನ್ನರ್ಸ್‌ಗಳೊಂದಿಗೆ ಕಣಕ್ಕಿಳಿಯಿತು. ಐದು – ಬೌಲರ್ ವಿಧಾನದ ಬಹುಮುಖ್ಯ ಪ್ರಯೋಜನವೆಂದರೆ, ಯಾರಾದರೊಬ್ಬರು ಗಾಯಾಳಾದರೆ, ಅಂಥ ಸಂದರ್ಭದಲ್ಲಿ ತಂಡಕ್ಕೆ ಬ್ಯಾಕಪ್ ಸಿಗುತ್ತದೆ.
ತೀವ್ರ ಕೂತೂಹಲ ಮೂಡಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಮಳೆರಾಯ ಅಡ್ಡಿಯಾಗಿರುವುದನ್ನು ಯಾವ ಅಭಿಮಾನಿಯೂ ಮರೆಯಲಾರ. ಇದೇ ಕಾರಣದಿಂದ ಹಲವು ಅವಽಗಳೂ ನಷ್ಟವಾದವು. ಭಾರೀ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಮೊದಲ ದಿನವೇ ನಿರಾಸೆ ಕಾದಿತ್ತು. ಇಡೀ ದಿನದ ಆಟ ಒಂದೂ ಎಸೆತ ಕಾಣದೆ ರzಗಿತ್ತು.ದ್ವಿತೀಯ ದಿನದಂದು ನಡೆದ ಟಾಸ್‌ನಲ್ಲಿ ನ್ಯೂಜಿಲ್ಯಾಂಡ್ ತಂಡವು
ಭಾರತವನ್ನು ಬ್ಯಾಟಿಂಗ್‌ಗೆ ಇಳಿಸಿತು ಹಾಗೂ ಐವರು ವೇಗಿಗಳ ದಂಡಿನೊಂದಿಗೆ ಭಾರತದ ಮೇಲೆ ಬೌಲಿಂಗ್ ಆಕ್ರಮಣಗೈದರು. ಒಂದು ಹಂತಕ್ಕೆ ಭಾರತವೂ ಅವರನ್ನು ದಿಟ್ಟತನದಿಂದ ಎದುರಿಸಿದರು. ಆದರೆ ಅಂತಿಮ ಅವಧಿಯಲ್ಲಿ ಮಂದ ಬೆಳಕಿನಿಂದಾಗಿ ಮತೊಮ್ಮೆ ಪಂದ್ಯಕ್ಕೆ ಅಡಚಣೆಯಾಗಿ ಆಟ ನಿಂತಾಗ ಭಾರತ 3 ವಿಕೆಟ್ ನಷ್ಟಕ್ಕೆ ಭಾರತವು 146 ರನ್ ಗಳಿಸಿತ್ತು.
ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡರು. ಮೂರನೇ ದಿನದಂದು ಯಾವುದೇ ಅಡಚಣೆಯಿಲ್ಲದೆ ಇಡೀ ದಿನ ಆಟ ನಡೆಯಿತು. ಭಾರತ 3 ವಿಕೆಟ್‌ಗೆ 146 ರನ್ ಗಳಿಸಿ, ಅಲ್ಲಿಂದ ಆಟ ಮುಂದುವರಿಸಿತು. ಆದರೆ ಕೀವಿಸ್ ವೇಗಕ್ಕೆ ತತ್ತರಿಸಿ ಮೊದಲ ಅವಧಿಯ ೪ ವಿಕೆಟ್‌ಗಳನ್ನು ಕಳೆದುಕೊಂಡಿತು. ಮಧ್ಯಾಹ್ನದ ವೇಳೆ ಭಾರತದ ಸ್ಕೋರ್ 7 ವಿಕೆಟ್ ನಷ್ಟಕ್ಕೆ 211 ರನ್ ಆಗಿತ್ತು. ಮತ್ತೆ 6 ರನ್ ಸೇರಿಸು ವಷ್ಟರಲ್ಲಿ ಆಲೌಟ್ ಆಯ್ತು.
ಪಂದ್ಯದ ನಾಲ್ಕನೇ ದಿನ, ಭಾರತೀಯರ ಬೌಲಿಂಗ್ ಅಬ್ಬರ ನೋಡಲು ಉತ್ಸುಕರಾಗಿದ್ದ ಅಭಿಮಾನಿಗಳಿಗೆ, ಇಡೀ ದಿನ ಮಳೆ ಸುರಿದಿದ್ದರಿಂದ ಮತ್ತೊಮ್ಮೆ ನಿರಾಶೆ ಎದುರಾಯಿತು. ಬಹಳ ಕುತೂಹಲ ಮೂಡಿಸಿದ್ದ ಕೊನೆಯ ದಿನದ ಆಟದಲ್ಲಿ ಭಾರತೀಯ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚಿನ ಪ್ರತಿರೋಧ ಕಂಡುಬಂದಿಲ್ಲ. ರಿಷಭ್ ಪಂತ್ ಒಂದಷ್ಟು ಹೊತ್ತು ನೆಲಕಚ್ಚಿ ನಿಂತರೂ, ಯಾವುದೇ ಫಲ ನೀಡಲಿಲ್ಲ. ಕೇವಲ 139ರನ್‌ಗಳ ಗುರಿ ಪಡೆದ ಕೇನ್ ವಿಲಿಯಮ್ಸ ಪಡೆ, ಸುಲಭವಾಗಿ ಗುರಿ ಮುಟ್ಟಿತು. ಭಾರತವನ್ನು 8 ವಿಕೆಟ್ ಗಳಿಂದ ಮಣಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಕಿರೀಟವನ್ನು ಮುಡಿಗೆರಿಸಿಕೊಂಡಿತು. ಎರಡು ದಶಕಗಳಲ್ಲಿ ಇದು ನ್ಯೂಜಿಲ್ಯಾಂಡ್‌ನ ಮೊದಲ ಐಸಿಸಿ ಪ್ರಶಸ್ತಿಯಾಗಿದೆ. ಹಾಗೂ ಕಳೆದ 7 ವರ್ಷಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ (ಪುರುಷ ಹಾಗೂ ಮಹಿಳೆ) ಐಸಿಸಿ ಟೂರ್ನಿಯ ಫೈನಲ್ನಲ್ಲಿ ಎದುರಾದ 5ನೇ ಸೋಲಾಗಿದೆ.
ಒಂದು ಫೈನಲ್ ಕದನಕ್ಕೆ ಎರಡು ವರ್ಷಗಳಿಂದ ಎಲ್ಲರೂ ಕಾಯುತ್ತಿತ್ತಿದ್ದರಿಂದ ಫಲಿತಾಂಶ ಬರಲಿ ಎಂಬ ಕಾರಣಕ್ಕೆ ಫೈನಲ್ ಪಂದ್ಯಕ್ಕೆ ಒಂದು ಮೀಸಲು ದಿನವನ್ನು ಸಹ ಐಸಿಸಿ ಇಟ್ಟರೂ, ಮಳೆಯ ಕಾರಣದಿಂದ ಪೂರ್ತಿ ಪಂದ್ಯ ಡೆಸುವುದು ಕಷ್ಟವಾಗಿತ್ತು. ವಿಶ್ವ ಕಪ್ ಟೆಸ್ಟ್ ಫೈನಲ್‌ನ ಪಂದ್ಯವನ್ನು 450 ಓವರ್ ಪೂರ್ತಿ ಗೊಳಿಸುವ ತನಕ ಆಟ ಮುಂದುವರಿಸಿದರೆ ಉತ್ತಮ ಎಂದು ಮಾಜಿ ಕ್ರಿಕೆಟಿಗ, ಹಾಲಿ ವಿಶ್ಲೇಷಕ ಆಕಾಶ್ ಚೋಪ್ರ ಸಲಹೆ ನೀಡಿದ್ದರು. ಆದರೆ, ತರಾತುರಿಯಲ್ಲಿ ಮಾಡಿದಂತೆ ಇದ್ದ ಫೈನಲ್ ಪಂದ್ಯವು, ಅಭಿಮಾನಿಗಳಿಗಂತೂ ಇದು ಫೈನಲ್ಸ್ ಎಂಬ ಫೀಲ್ ಸಿಗಲೇ ಇಲ್ಲ ಎಂಬುದು ಅಕ್ಷರಶಃ ಸತ್ಯ !