Friday, 20th September 2024

ದೇಶದಲ್ಲಿ ಹೆಚ್ಚುತ್ತಿದೆ ಯಕೃತ್ ಹಾನಿಯ ಸಮಸ್ಯೆ

ಆರೋಗ್ಯ ಭಾಗ್ಯ 

ಡಾ.ರವೀಂದ್ರ ನಿಡೋಣಿ

ಮದ್ಯ/ಆಲ್ಕೋಹಾಲ್ ಸೇವನೆ ನಮ್ಮ ಸಮಾಜದಲ್ಲಿ ವ್ಯಾಪಕವಾಗಿದೆ. ಕಡಿಮೆ ಪ್ರಮಾಣದ ಮತ್ತು ಜವಾಬ್ದಾರಿಯುತ ಮದ್ಯಸೇವನೆ ಅಪಾಯ ತರಬಹುದು. ಆದರೆ ಅತಿಯಾದ, ದೀರ್ಘಾವಧಿಯ ಮದ್ಯಸೇವನೆಯಿಂದ ಆರೋಗ್ಯಕ್ಕೆ ಗಂಭೀರ ಹಾನಿಯಾಗಬಹುದು. ಮುಖ್ಯವಾಗಿ ಯಕೃತ್ತಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು. ನಾನೊಬ್ಬ ಯಕೃತ್ ಕಸಿ ಸರ್ಜನ್ ಆಗಿರುವುದರಿಂದ ಮದ್ಯಸೇವನೆಯಿಂದಾಗುತ್ತಿರುವ ಯಕೃತ್ತಿನ ಹಾನಿಯ ಬಗ್ಗೆ ನನಗೆ ಕಳವಳವಾಗುತ್ತಿದೆ.

ಈ ಹಾನಿಯಾಗುವ ಬಗೆ, ಅದರ ವಿವಿಧ ಹಂತಗಳು, ಲಿವರ್ ಸಿರೋಸಿಸ್‌ನಿಂದಾಗುವ ಸಮಸ್ಯೆಗಳು, ಅದಕ್ಕೆ ನೀಡಬೇಕಾದ ಚಿಕಿತ್ಸೆ ಮತ್ತು ಯಕೃತ್ ಸಂಬಂಽ ರೋಗವು ಕೊನೆಯ ಹಂತಕ್ಕೆ ಹೋದರೆ ರೋಗಿಯ ಜೀವವುಳಿಸಲು ಯಕೃತ್ ಕಸಿ ಹೇಗೆ ನೆರವಾಗಬಲ್ಲದು ಎಂಬ ಇಲ್ಲಿ ವಿವರಿಸಲಾಗಿದೆ.
ಆಲ್ಕೋಹಾಲನ್ನು ದೇಹವು ಜೀರ್ಣಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಯಕೃತ್ತು ಪ್ರಮುಖ ಪಾತ್ರ ವಹಿಸುತ್ತದೆ. ಸೇವಿಸಿದ ಆಲ್ಕೋಹಾಲನ್ನು ಯಕೃತ್ತು ಸಣ್ಣ ತುಂಡುಗಳನ್ನಾಗಿಸಿ ದೇಹ ದಿಂದ ಹೊರಹಾಕಲು ಯತ್ನಿಸುತ್ತದೆ.

ಆದರೆ, ಅತಿಯಾಗಿ ಅಥವಾ ದೀರ್ಘಾವಽಯಿಂದ ಮದ್ಯ ಸೇವಿಸುತ್ತಿದ್ದ ವರ ದೇಹದಲ್ಲಿ ಯಕೃತ್ತಿಗೆ ಈ ಕೆಲಸ ಮಾಡಿ ಮಾಡಿ ಸುಸ್ತಾಗಿರುತ್ತದೆ. ಆಗ ಅದು ಆಲ್ಕೋಹಾಲನ್ನು ತುಂಡರಿಸಿ ದೇಹದಿಂದ ಹೊರಹಾಕುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಪ್ರಮುಖವಾಗಿ ೨ ಪರಿಣಾಮಗಳು ಉಂಟಾ ಗುತ್ತವೆ- ಅಸಿಟಾಲ್ಡಿಹೈಡ್‌ನ ರೂಪುಗೊಳ್ಳುವಿಕೆ: ಸೇವಿಸಿದ ಆಲ್ಕೋಹಾಲ್ ದೇಹದಲ್ಲಿ ಮೊದಲಿಗೆ ಅಸಿಟಾಲ್ಡಿಹೈಡ್ ಎಂಬ
ವಿಷಕಾರಿ ರಾಸಾಯನಿಕವಾಗಿ ಮಾರ್ಪಡುತ್ತದೆ. ಆಲ್ಕೋ ಹಾಲ್ ಡೀಹೈಡ್ರೋಜಿನೇಸ್ ಎಂಬ ಕಿಣ್ವ ಆಲ್ಕೋಹಾಲನ್ನು ಈ ರಾಸಾಯನಿಕವಾಗಿ ರೂಪಾಂತರಿಸುತ್ತದೆ. ಬಳಿಕ ಅಸಿಟಾ ಲ್ಡಿಹೈಡ್ ರಾಸಾಯನಿಕವು ಅಸಿಟಾಲ್ಡಿಹೈಡ್ ಡಿಹೈಡ್ರೋಜಿ ನೇಸ್ ಎಂಬ ಇನ್ನೊಂದು ಕಿಣ್ವದಿಂದ ಅಸಿಟಿಕ್ ಆಸಿಡ್ ಆಗಿ ಪರಿವರ್ತನೆಗೊಳ್ಳುತ್ತದೆ. ಅದು ಸ್ವಲ್ಪ ಕಡಿಮೆ ವಿಷಕಾರಿಯಾಗಿ ರುವುದರಿಂದ ಅದನ್ನು ದೇಹದಿಂದ ಸುಲಭವಾಗಿ ಹೊರ ಹಾಕಬಹುದು.

ಕೊಬ್ಬಿನ ಸಂಗ್ರಹ: ಅತಿಯಾಗಿ, ನಿರಂತರವಾಗಿ ಆಲ್ಕೋ ಹಾಲ್ ಸೇವಿಸುವುದರಿಂದ ಯಕೃತ್ತಿನ ಕೋಶಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ. ಅದನ್ನು -ಟಿ ಲಿವರ್ ಸಮಸ್ಯೆ ಎನ್ನುತ್ತೇವೆ. ಹಾಗೆ ಜಮೆಯಾಗುವ ಕೊಬ್ಬು ಯಕೃತ್ತಿನ ಸಹಜ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಅದು ಯಕೃತ್ತಿನ
ಉರಿಯೂತ ಹಾಗೂ ಕೋಶಗಳ ಹಾನಿಗೆ ಕಾರಣವಾಗಬಲ್ಲದು.

ಯಕೃತ್ ಹಾನಿಯ ಹಂತಗಳು  
-ಟಿ ಲಿವರ್: ಆಲ್ಕೋಹಾಲ್‌ನಿಂದ ಯಕೃತ್ತಿಗೆ ಉಂಟಾಗುವ ಮೊದಲ ಹಂತದ ಹಾನಿಯೆಂದರೆ -ಟಿ ಲಿವರ್ ಸಮಸ್ಯೆ. ಅಂದರೆ ಯಕೃತ್ತಿನ ಕೋಶಗಳಲ್ಲಿ ಕೊಬ್ಬು ಸಂಗ್ರಹ ವಾಗುವುದು. ಆಲ್ಕೋಹಾಲ್ ಸೇವನೆ ನಿಲ್ಲಿಸಿದರೆ ಸಾಮಾನ್ಯವಾಗಿ ಈ ಸಮಸ್ಯೆ ವಾಸಿಯಾಗುತ್ತದೆ. ಈ ಸಮಸ್ಯೆ
ಸಾಮಾನ್ಯವಾಗಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಬೇರಾವುದಾದರೂ ಕಾರಣಕ್ಕೆ ಪರೀಕ್ಷೆ ಮಾಡಿಸಿದಾಗ ಈ ಸಮಸ್ಯೆ ಪತ್ತೆಯಾಗುವ ಸಾಧ್ಯತೆ ಹೆಚ್ಚು.

ಆಲ್ಕೋಹಾಲಿಕ್ ಹೆಪಟೈಟಿಸ್: ಯಕೃತ್ತಿನ ಉರಿಯೂತ ವನ್ನೇ ಆಲ್ಕೋಹಾಲಿಕ್ ಹೆಪಟೈಟಿಸ್ ಎನ್ನುತ್ತಾರೆ. ಇದರ ಲಕ್ಷಣವೆಂದರೆ ಜಾಂಡೀಸ್ (ಚರ್ಮ ಹಾಗೂ ಕಣ್ಣು ಹಳದಿಯಾಗುವುದು), ಹೊಟ್ಟೆನೋವು, ಸುಸ್ತು, ವಾಂತಿ ಹಾಗೂ ಯಕೃತ್ತು ದೊಡ್ಡದಾಗುವುದು. ಆಲ್ಕೋಹಾಲಿಕ್ ಹೆಪಟೈಟಿಸ್
ತುಂಬಾ ಸೌಮ್ಯ ಹಂತದಿಂದ ತೀವ್ರ ಹಂತದವರೆಗೂ ಉಂಟಾಗಬಹುದು. ಒಮ್ಮೆಲೇ ಅತಿಯಾಗಿ ಆಲ್ಕೋಹಾಲ್ ಸೇವಿಸುವ ಅಭ್ಯಾಸವಿದ್ದವರಿಗೆ ಇದು ಬರುವ ಸಾಧ್ಯತೆ ಹೆಚ್ಚು.

ಸಿರೋಸಿಸ್: ಇದು ಆಲ್ಕೋಹಾಲ್ ಸೇವನೆಯಿಂದ ಯಕೃತ್ತಿಗೆ ಉಂಟಾಗಬಹುದಾದ ಗಂಭೀರ ಅನಾರೋಗ್ಯ. ಇದರಲ್ಲಿ ಯಕೃತ್ತಿನಲ್ಲಿ -ಬ್ರೋಸಿಸ್ (ಗಡ್ಡೆ)ಗಳಾಗುತ್ತವೆ. ಸಿರೋಸಿಸ್ ಗಂಭೀರವಾಗುತ್ತಾ ಹೋದಂತೆ ಯಕೃತ್ತಿನ ಕಾರ್ಯನಿರ್ವಹಣೆ ಕುಸಿಯತೊಡಗಿ, ಕ್ರಮೇಣ ದೇಹದಲ್ಲಿ ಮಾಡಲೇಬೇಕಾದ ಕೆಲಸಗಳನ್ನು ಮಾಡುವ ಸಾಮರ್ಥ್ಯ ವನ್ನು ಕಳೆದುಕೊಳ್ಳುತ್ತದೆ.

ಸಿರೋಸಿಸ್‌ನ ಸಮಸ್ಯೆಗಳು 
ಲಿವರ್ ಸಿರೋಸಿಸ್‌ನಿಂದ ನಮ್ಮ ದೇಹದ ಮೇಲಾಗುವ ಕೆಲ ಸಮಸ್ಯೆಗಳು ಇಂತಿವೆ:

ಪೋರ್ಟಲ್ ಹೈಪರ್‌ಟೆನ್ಷನ್: ಲಿವರ್ ಸಿರೋಸಿಸ್ ತೀವ್ರಗೊಳ್ಳುತ್ತಾ ಹೋದಂತೆ ನಮ್ಮ ದೇಹದಲ್ಲಿ ಯಕೃತ್ತಿಗೆ ರಕ್ತವನ್ನು ಪೂರೈಸುವ ಪ್ರಮುಖ ರಕ್ತನಾಳವಾದ ಪೋರ್ಟಲ್ ವೇನ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅದರಿಂದ ನಮ್ಮನ್ನನಾಳದಲ್ಲಿರುವ ರಕ್ತನಾಳಗಳು ಕೂಡ ಊದಿಕೊಳ್ಳುತ್ತವೆ.
ಅದನ್ನು ಈಸೋ-ಗಲ್ ವೇರಿಸಿಸ್ ಎಂದು ಕರೆಯುತ್ತಾರೆ. ಈ ವೇರಿಸಿಸ್‌ಗಳು ಒಡೆದು ತೀವ್ರತರವಾದ ಹಾಗೂ ಜೀವಕ್ಕೆ ಮಾರಕವಾಗುವ ರೀತಿಯಲ್ಲಿ ರಕ್ತಸ್ರಾವ ಉಂಟಾಗಬಹುದು.

ಹೊಟ್ಟೆಯ ಊತ: ಹೊಟ್ಟೆಯ ಕುಳಿಗಳಲ್ಲಿ ದ್ರವ ತುಂಬಿಕೊಳ್ಳುವುದನ್ನು ‘ಎಸೈಟಿಸ್’ ಎನ್ನುತ್ತಾರೆ. ಸಿರೋಸಿಸ್‌ನಿಂದ ಉಂಟಾಗುವ ಅತ್ಯಂತ ಸಾಮಾನ್ಯ ಅನಾರೋಗ್ಯವಿದು. ಇದರಿಂದಾಗಿ ಹೊಟ್ಟೆ ಊತ, ಹೊಟ್ಟೆನೋವು ಬರಬಹುದು, ಉಸಿರಾಟಕ್ಕೆ ತೊಂದರೆಯಾಗಬಹುದು.

ಹೆಪ್ಯಾಟಿಕ್ ಎನ್ಸೆ-ಲೋಪತಿ: ರಕ್ತದಲ್ಲಿನ ವಿಷವನ್ನು ತೆಗೆದು ಹಾಕುವ ಸಾಮರ್ಥ್ಯವನ್ನು ಯಕೃತ್ತು ಕಳೆದುಕೊಂಡಾಗ ದೇಹದಲ್ಲಿ ವಿಷ ಸಂಗ್ರಹವಾಗುತ್ತಾ ಹೋಗುತ್ತದೆ. ಉದಾಹರಣೆಗೆ ಮಿದುಳಿನಲ್ಲಿ ಅಮೋನಿಯಾ ಸಂಗ್ರಹವಾಗುತ್ತದೆ. ಇದರಿಂದ ಹೆಪ್ಯಾಟಿಕ್ ಎನ್ಸೆ-ಲೋಪತಿ ಎಂಬ ಸಮಸ್ಯೆಯಾಗಿ ವ್ಯಕ್ತಿಯಲ್ಲಿ ಗೊಂದಲ, ಮರೆವು ಹೆಚ್ಚಬಹುದು. ಕೊನೆಗೆ ಕೋಮಾ ಕೂಡ ಉಂಟಾಗಬಹುದು.

ಲಿವರ್ ಕ್ಯಾನ್ಸರ್: ಯಕೃತ್ತಿನ ಸಿರೋಸಿಸ್ ಉಂಟಾದವರಿಗೆ ಯಕೃತ್ತಿನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಮುಖ್ಯವಾಗಿ ಹೆಪೆಟೋಸೆಲ್ಯುಲರ್ ಕಾರ್ಸಿನೋಮಾ ಎಂಬ ಕ್ಯಾನ್ಸರ್ ಬರಬಹುದು. ಹೀಗಾಗಿ ಲಿವರ್ ಸಿರೋಸಿಸ್ ಉಂಟಾದವರ ಮೇಲೆ ನಿರಂತರ ನಿಗಾ ಇರಿಸಿ ಶುರುವಿನಲ್ಲೇ ಕ್ಯಾನ್ಸರನ್ನು ಪತ್ತೆಹಚ್ಚಬೇಕಾಗುತ್ತದೆ.

ಕಿಡ್ನಿ ಸಮಸ್ಯೆಗಳು: ಲಿವರ್ ಸಿರೋಸಿಸ್ ಸಮಸ್ಯೆ ತೀವ್ರವಾದರೆ ಮೂತ್ರಪಿಂಡಗಳ ಮೇಲೆ ದುಷ್ಪರಿಣಾಮವಾಗು ತ್ತದೆ. ಆಗ ಹೆಪೆಟೋರೆನಾಲ್ ಸಿಂಡ್ರೋಮ್ ಉಂಟಾಗು ತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದರೆ ಜೀವಕ್ಕೇ ಹಾನಿಯಾಗ ಬಹುದು. ಲಿವರ್ ಸಿರೋಸಿಸ್‌ನ ಚಿಕಿತ್ಸೆಯ ವೇಳೆ ಕೈಗೊಳ್ಳಲಾಗುವ ಕ್ರಮಗಳು.

ಆಲ್ಕೋಹಾಲ್ ಸೇವನೆ ನಿಲ್ಲಿಸುವಿಕೆ: ಲಿವರ್ ಸಿರೋಸಿಸ್‌ನ ಚಿಕಿತ್ಸೆಯಲ್ಲಿ ಮೊದಲ ಕ್ರಮವಾಗಿ ಆಲ್ಕೋಹಾಲ್ ಸೇವನೆ ಯನ್ನು ಶಾಶ್ವತವಾಗಿ, ಸಂಪೂರ್ಣವಾಗಿ ನಿಲ್ಲಿಸಬೇಕು. ಯಕೃತ್ತಿಗೆ ಇನ್ನಷ್ಟು ಹಾನಿಯಾಗುವುದನ್ನು ಹಾಗೂ ಸಿರೋಸಿಸ್ ಇನ್ನಷ್ಟು ಬೆಳೆಯುವುದನ್ನು ತಪ್ಪಿಸಲು ಇರುವ ಮಾರ್ಗವಿದು. ಆಹಾರ ಕ್ರಮದಲ್ಲಿ ಬದಲಾವಣೆ: ಕಡಿಮೆ ಉಪ್ಪು ಮತ್ತು ನೀರು ಸೇವನೆಯ ಸಮತೋಲಿತ ಡಯಟ್ ಆರಂಭಿಸ ಬೇಕು. ಯಕೃತ್ತಿಗೆ ದ್ರವವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಬರಲು ಹಾಗೂ ಯಕೃತ್ತಿನ ಮೇಲಿನ ಒತ್ತಡ ತಗ್ಗಿಸಲು ಈ ಡಯಟ್ ಅಗತ್ಯ. ದೇಹದ ಒಟ್ಟಾರೆ ಆರೋಗ್ಯ ಸುಧಾರಣೆಗೆ ಸರಿಯಾದ ಪೌಷ್ಟಿಕಾಂಶಗಳನ್ನು ಸೇವಿಸಬೇಕು.

ಔಷಧ ಮತ್ತು ಚಿಕಿತ್ಸೆ: ಎಸೈಟಿಸ್, ಹೆಪ್ಯಾಟಿಕ್ ಎನ್ಸೆ-ಲೋ ಪತಿ ಹಾಗೂ ಪೋರ್ಟಲ್ ಹೈಪರ್‌ಟೆನ್ಷನ್ ಗುಣಪಡಿಸಲು ವಿವಿಧ ಔಷಧಗಳನ್ನು ನೀಡಬಹುದು. ಡಯುರೆಟಿಕ್ಸ್, ಲ್ಯಾಕ್ಟುಲೋಸ್ (ಅಮೋನಿಯಾ ಮಟ್ಟ ಕಡಿಮೆ ಮಾಡಲು) ಹಾಗೂ ಬೀಟಾ-ಬ್ಲಾಕರ್ಸ್ (ಪೋರ್ಟಲ್ ವೇನ್ ಒತ್ತಡ
ಕಡಿಮೆ ಮಾಡಲು) ಮುಂತಾದ ಔಷಧಗಳನ್ನು ಸೇವಿಸಲು ಸೂಚಿಸಬಹುದು.

ನಿಯತ ವೈದ್ಯಕೀಯ ತಪಾಸಣೆ: ಸಿರೋಸಿಸ್ ರೋಗಿಗಳ ಆರೋಗ್ಯಸ್ಥಿತಿ ಪರಿಶೀಲಿಸಲು ನಿಯತ ವೈದ್ಯಕೀಯ ಪರೀಕ್ಷೆ ಅಗತ್ಯ. ಬೇರೇನಾದರೂ ಸಮಸ್ಯೆಯಾಗಿದ್ದರೆ ಆರಂಭದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲು ಯೋಜಿಸಬೇಕಾಗುತ್ತದೆ.

ಲಸಿಕೆಗಳು: ಹೆಪಟೈಟಿಸ್ ‘ಎ’ ಮತ್ತು ಹೆಪಟೈಟಿಸ್ ‘ಬಿ’ ಲಸಿಕೆಗಳನ್ನು ತೆಗೆದುಕೊಳ್ಳುವುದರಿಂದ ಯಕೃತ್ತಿಗೆ ಹೆಚ್ಚಿನ ಹಾನಿಯಾಗುವುದನ್ನು ಹಾಗೂ ವಿವಿಧ ಅನಾರೋಗ್ಯದ ಸಮಸ್ಯೆಗಳು ಎದುರಾಗುವುದನ್ನು ತಡೆಯಬಹುದು.

ಯಕೃತ್ ಕಸಿ
ಕೆಲ ಲಿವರ್ ಸಿರೋಸಿಸ್ ರೋಗಿಗಳಲ್ಲಿ ಅದು ಕೊನೆಯ ಹಂತಕ್ಕೆ ಹೋಗಿದ್ದಾಗ ಯಾವ ಚಿಕಿತ್ಸೆಯೂ ಪರಿಣಾಮ ಬೀರುವುದಿಲ್ಲ, ಯಕೃತ್ತಿನ ಕಸಿಯೊಂದೇ ಪರಿಹಾರವಾಗಿರು ತ್ತದೆ. ಈ ಸಂಕೀರ್ಣ ಶಸಚಿಕಿತ್ಸೆಯ ಮೂಲಕ, ಹಾನಿಗೀಡಾದ ಯಕೃತ್ತನ್ನು ತೆಗೆದು ಅದರ ಜಾಗದಲ್ಲಿ ಆರೋಗ್ಯ ವಂತ ವ್ಯಕ್ತಿಯ ಯಕೃತ್ತಿನ ಭಾಗವನ್ನು ಕಸಿ ಮಾಡಲಾಗುತ್ತದೆ. ಮೃತ ಅಥವಾ ಜೀವಂತ ದಾನಿಯ ಯಕೃತ್ತನ್ನು ಸ್ವೀಕರಿಸಿ ಕಸಿ ಮಾಡಬಹುದು. ಕೊನೆಹಂತದ ಸಿರೋಸಿಸ್ ರೋಗಿಗಳಿಗೆ ಯಕೃತ್ತಿನ ಕಸಿಯು ಮತ್ತೆ ಬದುಕುವ ಸಾಧ್ಯತೆಯನ್ನು ನೀಡುತ್ತದೆ.

ಕರ್ನಾಟಕದಲ್ಲಿ ಆಲ್ಕೋಹಾಲ್ ಸಂಬಂಧಿ ಯಕೃತ್ತಿನ ರೋಗಿ ಗಳ ಸಂಖ್ಯೆ ಹೆಚ್ಚುತ್ತಿದ್ದು, ಕಸಿಗಾಗಿ ಯಕೃತ್‌ಗಳಿಗೂ ಬೇಡಿಕೆ ಹೆಚ್ಚುತ್ತಿದೆ. ಆದರೆ ಮೃತರ ಯಕೃತ್ ಸಿಗುವ ಪ್ರಮಾಣ ಕಡಿಮೆ. ಹೀಗಾಗಿ ಕಸಿಗಾಗಿ ಕಾಯುತ್ತಿರುವವರ ಪಟ್ಟಿ ದೀರ್ಘ ವಾಗುತ್ತಿದೆ. ಆದ್ದರಿಂದ ಜೀವಂತ ವ್ಯಕ್ತಿಗಳು ಯಕೃತ್ತನ್ನು ದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಅವರ ಸಂಖ್ಯೆ ಹೆಚ್ಚಿದರೆ ಯಕೃತ್ತಿನ ಸಿರೋಸಿಸ್ ರೋಗಿಗಳಿಗೆ ಸಕಾಲಕ್ಕೆ
ಪರಿಹಾರ ಸಿಗುವಂತಾಗುತ್ತದೆ.

ಜೀವಂತ ವ್ಯಕ್ತಿಯಿಂದ ಪಡೆದ ಯಕೃತ್ತಿನ ಕಸಿಯು ಸುಧಾರಿತ ಶಸಚಿಕಿತ್ಸೆಯಾಗಿದೆ. ಮೃತರ ಯಕೃತ್ತನ್ನು ಕಸಿ ಮಾಡುವುದಕ್ಕಿಂತ ಹೆಚ್ಚು ಅನುಕೂಲ ಇದರಿಂದ ಸಿಗುತ್ತದೆ. ಆಲ್ಕೋಹಾಲ್ ಸಂಬಂಽ ಸಿರೋಸಿಸ್ ರೋಗಿಗಳಿಗಾಗಿನ ಯಕೃತ್ತಿನ ಕಸಿ ವಿಷಯದಲ್ಲೂ ಇದು ಮಹತ್ವದ್ದೇ ಆಗಿದೆ. ಜೀವಂತ ವ್ಯಕ್ತಿಯ ಯಕೃತ್ ಕಸಿ ಮಾಡಿದರೆ ಸಕಾಲಕ್ಕೆ ಅತಿ ಕಡಿಮೆ ಸಮಯದಲ್ಲಿ ತ್ವರಿತಗತಿಯಲ್ಲಿ ಮಾಡಿ ರೋಗಿಯು ಬೇಗನೆ ಚೇತರಿಸಿಕೊಳ್ಳುವಂತೆ ಮಾಡಬಹುದು.

ಕೊನೆಯ ಮಾತು: ರಾಜ್ಯದಲ್ಲಿ ಆಲ್ಕೋಹಾಲ್ ಸಂಬಂಧಿ ಯಕೃತ್ ಹಾನಿ ಹೆಚ್ಚಾಗುತ್ತಿದೆ. ಇದು ಮದ್ಯ ಸೇವಿಸುವವರಿಗೆ ಮಾತ್ರವಲ್ಲದೆ, ಅವರ ಕುಟುಂಬದ ಮೇಲೂ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ. ಆದ್ದರಿಂದ ಈ ಸಮಸ್ಯೆಯನ್ನು ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ನೀಡುವುದು ಅತ್ಯಗತ್ಯ. ಎಲ್ಲಕ್ಕಿಂತ ಹೆಚ್ಚಾಗಿ ಜವಾಬ್ದಾರಿಯುತ ಆಲ್ಕೋಹಾಲ್ ಸೇವನೆಯ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಿದೆ. ನಂತರ, ಯಕೃತ್ತಿನ ಸಮಸ್ಯೆಗೆ ಆರಂಭಿಕ ಹಂತದಲ್ಲೇ ಚಿಕಿತ್ಸೆ ನೀಡಿ, ಅದಕ್ಕೆ ಸರಿಪಡಿಸಲಾಗದ ಹಾನಿ ಯಾಗದಂತೆ ತಡೆಯಬೇಕಿದೆ.

(ಲೇಖಕರು ಯಕೃತ್ ಕಸಿ ತಜ್ಞವೈದ್ಯರು)