Wednesday, 11th December 2024

ಪನ್ ಪಿತಾಮಹ ವಂಡರ್‌ ಕೈಯಿನ ವೈಎನ್ಕೆ !

ಸ್ಮರಣೆ

ತುರುವೇಕೆರೆ ಪ್ರಸಾದ್

ಮೇ.೧೬: ವೈಎನ್ಕೆ ಅವರ ಜನ್ಮ ದಿನ

ಲಲಿತ ಪ್ರಬಂಧ ಮತ್ತು ನಗೆ ಬರಹಗಳ ಸಾಂಪ್ರದಾಯಿಕ ಶೈಲಿಗಿಂತ ಭಿನ್ನವಾದ, ಅತ್ತ ಗಂಭೀರವೂ ಅಲ್ಲದ ಇತ್ತ ಲಲಿತ ಮಾದರಿಯೂ ಅಲ್ಲದ ತಮ್ಮ ವಿಶಿಷ್ಟ ಪನ್‌ಗಳಿಂದ ಹಾಸ್ಯಕ್ಕೊಂದು ಹೊಸ ಆಯಾಮ ಸೃಷ್ಟಿಸಿದ ಕೀರ್ತಿ ವೈಎನ್‌ಕೆ ಅವರಿಗೆ ಸಲ್ಲುತ್ತದೆ. ‘ಪನ್ ಇಸ್ ದ ಲೋಯೆ ಫಾರ್ಮ್ ಆಫ್ ವಿಟ್’ ಎಂದು ಭಾವಿಸಿದ್ದ ಕಾಲವೊಂದಿತ್ತು. ಅದನ್ನು ಸುಳ್ಳಾಗಿಸಿ ತಮ್ಮ ಅದ್ಭುತ ಜ್ಞಾನ ಭಂಡಾರದ ಸರಕನ್ನು ಭಾಷೆಯ ಸಮರ್ಥ ಬಳಕೆಯೊಂದಿಗೆ ವಿಸ್ಮಯ ಎನಿಸುವ ರೀತಿಯಲ್ಲಿ ದಾಖಲಿಸಿರುವ ವೈಎನ್ಕೆ ಆಧುನಿಕ ಪನ್ ಪಿತಾಮಹ.

ಖ್ಯಾತ ವಿಮರ್ಶಕ ಜಿ.ಎಸ್ ಆಮೂರರು ಹೇಳುವಂತೆ ವೈಎನ್ಕೆ ಮಾತು ಬರಹಗಳಲ್ಲಿ ಎದ್ದು ಕಾಣುವ ವೈವಿಧ್ಯಪೂರ್ಣ ಹಾಸ್ಯ ಮುಕ್ತತೆಯ (OPEN NESS) ಅಭಿವ್ಯಕ್ತಿಯಾಗಿದೆ. ಅವರ ಜೀವನ ದೃಷ್ಟಿಯ ಮುಖ್ಯ ಗುಣ ನಿರ್ಲಿಪ್ತತೆ ಮತ್ತು ಯಾವುದನ್ನು ಭಾವುಕವಾಗಿ ಸ್ವೀಕರಿಸದ ಬೌದ್ಧಿಕ ಪ್ರವೃತ್ತಿ. ಅವರ ಚಿಂತನ ಲಹರಿ ವಿಶ್ರಾಂತ ಚಿಂತಕನ ವಿಚಾರ ಲಹರಿಗಳಾಗದೇ ವರ್ತಮಾನದ ಒತ್ತಡಗಳಲ್ಲಿ ಸಿಡಿದು ಬಂದ ಕಿಡಿಗಳಾಗುತ್ತಿದ್ದವು. ರಷ್ಯಾ, ಹಂಗರಿ, ಜರ್ಮನಿ, ಇಂಗ್ಲೆಂಡ್, ಪೋಲ್ಯಾಂಡ್, ಅಮೆರಿಕ, ಜಕೋಸ್ಲೋವಾಕಿಯಾ ಹೀಗೆ ನೂರಾರು ದೇಶಗಳ ಸುತ್ತಿ ಬಂದ ಅನುಭವವನ್ನು ಕೋಶದ ಪದಗಳಲ್ಲಿ ಅನಾವರಣಗೊಳಿಸಿದವರು ಅವರು. ಹಾಸ್ಯ ಸುರಿಸುವಂತೆ ಮಾಡುವ ಕಾರಣಕ್ಕೆ ಯಾವುದೇ ಭಾಷೆಗೆ ಮುಲಾಜಿಲ್ಲದೆ ಲಗ್ಗೆ ಇಟ್ಟು ಪದ-ಪದಗಳ ಕಸಿ ಮಾಡಿ ಮಾತುಗಳ ಮಥಿಸಿ ಅರ್ಥ ಸೋಟಗೊಳಿಸುವುದು ವೈಎನ್ಕೆ ಅವರ ಬರಹಗಳಲ್ಲಿ ಎದ್ದು ಕಾಣುವ ಅಂಶ. ವೈಎನ್ಕೆ ಅವರದು ಅಗಾದ ಜೀವನೋ ತ್ಸಾಹ!

ದೇಶ, ಭಾಷೆ, ಸಂಸ್ಕೃತಿ, ಸಾಹಿತ್ಯ, ಆಡಳಿತ, ವಿಜ್ಞಾನ, ಇತಿಹಾಸ, ರಾಜಕೀಯ ಹೀಗೆ ಎಲ್ಲವನ್ನು ವಿಸ್ಮಯದ ಕಂಗಳಿಂದ ನೋಡುವ ಅಪರೂಪದ ಪ್ರವೃತ್ತಿ ಅವರಿಗಿತ್ತು. ಇದಕ್ಕೆ ನಿದರ್ಶನವೆಂದರೆ ಕಮ್ಯುನಿ ದೇಶಗಳ ರಾಜಕೀಯ ವಿದ್ಯಮಾನಗಳ ಬಗ್ಗೆ ವೈಎನ್ಕೆಯವರಷ್ಟು ಮೊನಚಾಗಿ ವ್ಯಂಗ್ಯ ಮಾಡಿದವರು ಬಹುಶಃ ಮತ್ತೊಬ್ಬರು ಇರಲಿಕ್ಕಿಲ್ಲ. ಅಲ್ಲಿನ ಒಳ ಹೊರಗನ್ನೆಲ್ಲ ವೈಎನ್ಕೆ ವಿಡಂಬಿಸುವ ರೀತಿ, ಕಚಗುಳಿ ಇಡುವ ಪರಿ, ಪಾಂಡಿತ್ಯ ಹಾಗೂ ಭಾಷೆಯ ಮೇಲೆ ಅವರಿಗಿದ್ದ ಹಿಡಿತವನ್ನು ಎತ್ತಿ ತೋರುತ್ತದೆ.

ಲೆನಿನ್ ಪ್ರಭಾವ ರಷ್ಯಾದಲ್ಲಿ ಇಳಿಮುಖವಾಗುತ್ತಿದ್ದ ಖ್ರುಶ್ಚೇವ ಗೋಬರ್‌ಚೋವ್ ಕಾಲದಲ್ಲಿ ಲಿನನ್ ಎಂಬುದು ಲೆನಿನ್ ಜೋತಕವಾಗಿತ್ತು. ಹತ್ತಾರು ವರ್ಷ ಸಂರಕ್ಷಿಸಿಡಲಾಗಿದ್ದ ಲೆನಿನ್ ಸಮಾಽಯ ಮುಂದೆ ರಷ್ಯನ್ನರು ನಿಂತು ನಾವು ನಿನ್ನಂತೆ ಸತ್ತಿದ್ದೇವೆ. ಆದರೆ ಇನ್ನು ಯಾರು ನಮ್ಮನ್ನು ಸಮಾಧಿ ಮಾಡಿಲ್ಲ ಎಂದು ಅವಲತ್ತುಕೊಳ್ಳುವುದನ್ನು ವೈಎನ್ಕೆ ವಿಡಂಬರಿಸಿರುವ ರೀತಿ ವಾಷಿಂಗ್ ದಿ ಡರ್ಟಿ ಲಿನೆನ್ ಇನ್ ಪಬ್ಲಿಕ್.(ಕೊಳಕಿನ ಒಳ ವಸಗಳ ಬಹಿರಂಗ ಶುದ್ಧೀಕರಣ) ಹಾಗೆಯೇ ರಷ್ಯಾದ ಎರಡು ಪ್ರಮುಖ ಪತ್ರಿಕೆಗಳಲ್ಲಿ ಒಂದು ಪ್ರಾವ್ಡಾ ಅಂದರೆ ಸತ್ಯ, ಇನ್ನೊಂದು ‘ಇಜಿವೆಸ್ತಿಯಾ’ಅಂದರೆ
ಸುದ್ದಿ. ಪ್ರಾವ್ಡಾದಲ್ಲಿ ಇಜಿವೆಸ್ತಿಯಾ ಇಲ್ಲ. ಇಜಿವೆಸ್ತಿಯಾದಲ್ಲಿ ಪ್ರವ್ಡಾ ಇಲ್ಲ ಎಂದು ಅಲ್ಲಿನ ಜನರ ಭಾವನೆಯನ್ನು ಮಾರ್ಮಿಕವಾಗಿ ಚಿತ್ರಿಸಿರುವ ವೈಎನ್ಕೆ ಒಬ್ಬ ಪತ್ರಕರ್ತನ ಸೂಕ್ಷ್ಮ ಗ್ರಹಿಕೆಗಳನ್ನು ಮೆರೆಯುತ್ತಾರೆ.

ಸ್ಕಾಟ್ ಜನರ ಜಿಪುಣತನದ ಬಗ್ಗೆ ಬರೆಯುತ್ತಾ ನಥಿಂಗ್ ಅಟ್ ದೇರ್ ಕಾ- ನಾಟ್ ಈವನ್ ಎ ಜೋಕ್ ಎಂದು ಲೇವಡಿ ಮಾಡುತ್ತಾರೆ. ಆರು ಸಾಲುಗಳ ಪದ್ಯವನ್ನು ಷಟ್ಪದಿ(shut up ಪದಿ) ಎಂದು ಕರೆಯಬಹುದು ಎಂದು ವೈಎನ್ಕೆ ಹೇಳುವ ಪರಿ ಗದ್ಯ ಕತ್ತರಿಸಿ ಪದ್ಯ ಹೊಸೆಯುವ ಕವಿ ಪುಂಗವರಿಗೆ ಚಾಟಿ ಏಟು! ಹಾಗೇ ಪದ್ಯ ಗದ್ಯಗಳ ಬಗ್ಗೆ ವಿಶ್ಲೇಷಿಸುತ್ತಾ, ಯಾವುದನ್ನು ಗಟ್ಟಿಯಾಗಿ ಹೇಳಿಕೊಂಡರೆ ನಿಮಾನ್ಸ್‌ಗೆ ಸೇರುವುದಿಲ್ಲವೋ ಅದು ಪದ್ಯ, ಉಳಿದದ್ದು ಗದ್ಯ ಇದಂಮಿತ್ತಮ್ ಎಂದು ರೂಲಿಂಗ್ ಇಡುತ್ತಾರೆ.

ಸುದ್ದಿಗಳನ್ನು ಕಾಲ ಗರ್ಭದಿಂದ ಹೊರಗೆ ಎಳೆದು ತಾಜಾ ಮಾಡಿ ಮೆಲುಕು ಹಾಕಿ ಸವಿಯುವಂತೆ ಮಾಡಿದ ವೈಎನ್ಕೆ, ಫೈಲ್‌ಗಳನ್ನು ರೆಫರ್ ಮಾಡುವು ದನ್ನು ಬಿಡಿಸಿ ಲೈಫಿನ ಸ್ವಾರಸ್ಯಕರ ಪ್ರಕರಣಗಳಿಗೆ ಸುದ್ದಿಯನ್ನು ತಳುಕು ಹಾಕುವ ಮೂಲಕ ಸುದ್ದಿಗೆ ಗುದ್ದು ನೀಡಿದವರು. ಚೋಲಿ ಕೆ ಪಿಚೆ ಕ್ಯಾ ಹೈ ಎಂದು ಗಂಡ ಹೇಳಿದರೆ ಹೆಂಡತಿ ಬಿಲ್ ಹೈ ಎಂದು ಇತ್ತೀಚೆಗೆ ಕೊಂಡ ಸಿಲ್ಕ (ಸ್ಮಿತಾ) ಸೀರೆಯ ೩೦೦೦ ರು. ಬಿಲ್ ತೆಗೆದುಕೊಟ್ಟಳಂತೆ.

ನಮ್ಮೂರಿನ ಬಸ್‌ನಲ್ಲಿ ಹೋದಾಗ ಒಣಗಿದ ಬಟ್ಟೆಯೆಲ್ಲ ಇಸಿ ಆಗಿರುತ್ತೆ, ಬಟ್ಟೆ ಏನು ನಾನು ಕೂಡ ಇಸಿ, ಅಪ್ಪಚ್ಚಿ ಅರ್ಥ ಅಪಾಚಿ ಇಂಡಿಯನ್.

ಒಂದು ಸಂಭಾಷಣೆ

ತಂದೆ: ಪ್ರೊ(pro) ವಿರುದ್ಧ ಏನು

ಮಗ; ಕಾನ್ (con) ತಂದೆ: ಪ್ರೋಗ್ರೆಸ್

ಮಗ: ಕಾಂಗ್ರೆಸ್. ಅವರ ‘ಬರಲಿದೆ ಬರಲಿದೆ‘ ಮತ್ತು
ಕಾಲ ಕ್ರೀಡೆಯಲ್ಲಿನ ಮಿಂಚಿಕೆಗಳು ಲವಲವಿಕೆಯಿಂದ ಅತಿ ಆಪ್ತವೆನಿಸುತ್ತವೆ. ಹತ್ತು ಮಕ್ಕಳ ಹೆತ್ತು ಸುಖವಾಗಿರು, ಸಂತಾನ ಚಿರಮಾಭಿವರ್ದಿಸಲಿ ಎಂದೆಲ್ಲ ಹರಕೆ ಪ್ರತಿಧ್ವನಿಸಲು ಈಗ ಮಕ್ಕಳಿವರೇ ನಮ್ಮ ೫೦ ಕೋಟಿ ಆಗಿರುವ ದೇಶದ ಅಶ್ವಥ ವೃಕ್ಷಕ್ಕೆ ಬದಲು ವಂಕಿ ಭಾರತದ ಎಲ್ಲಾ ಸಮಸ್ಯೆಗಳಿಗೆ ಬೆಂಕಿ (ಕಾವ್ಯ ಕನ್ನಿಕೆಗೆ ವಂಕಿ) ಎಂದು ವೈಎನ್ಕೆ ಕುಹಕವಾಡುವುದು ಇಂದಿಗೂ ಪ್ರಸ್ತುತವೇ ಸರಿ.

ಹವಾಯಿ ದೇಶದವನೊಬ್ಬನಿಗೆ ಅತಿ ಉದ್ದನೆಯ ಹೆಸರಿಟ್ಟಿದ್ದರಂತೆ, ಹೆಸರಿನಲ್ಲಿ ಏನಿದೆ ಎಂದು ಪ್ರಶ್ನಿಸಿಕೊಳ್ಳುವ ವೈಯನ್ಕೆ -೩೫ ಅಕ್ಷರಗಳಿವೆ ನಾಮದ ಬಾಲ ಎಂದು ಉತ್ತರಿಸುತ್ತಾರೆ. ಹಿಂದೆಯೇ ‘His parents have not named him, but sentenced him’’ ಎಂದು ಅಣಕ ಮಾಡುತ್ತಾರೆ. ಆಫ್ರಿಕಾದಲ್ಲಿ ತುಂಡು ಲಂಗ ಧರಿಸಿದ ಅಪರಾಧದ ಮೇಲೆ ಅಂತಹ ಹುಡುಗಿಯರಿಗೆ ‘ದಾರ್ ಎಸ್ ಸಲಾಂ’ ನಗರದ ರಸ್ತೆ ಗುಡಿಸುವ ಶಿಕ್ಷೆ ವಿಽಸಿದ ಕುರಿತು, ಹಾಗೆ ಮಾಡಿದ್ದರಿಂದ ಅವನಿಗೆ ಬಗ್ಗಿ ಕಸ ಗುಡಿಸುವ ಶಿಕ್ಷೆಯ ಉದ್ದೇಶ ಫಲಕಾರಿಯಾಯಿತೋ ? ಅಥವಾ ಆಡಳಿತ, ಈ ಲಲನೆಯರ ಮೈಮಾಟವನ್ನು ಅಧಿಕೃತವಾಗಿ ವೀಕ್ಷಿಸಿ ಸವಿಯಲು ಮಾಡಿಕೊಂಡ ವ್ಯವಸ್ಥೆಯೊ? ಅದರ ಬದಲು ಅವರಿಗೆ ಅಳೆತ್ತರದ ಮಾಕ್ಸಿ ತೊಡಿಸಿ ಅಂಚು ಹೊಲೆಸಿ ರಸ್ತೆಯಲ್ಲಿ ಬಿಟ್ಟಿದ್ದರೆ ಶಿಕ್ಷೆ ನೀಡಿದಂತೆಯೂ ಆಗುತ್ತಿತ್ತು ರಸ್ತೆಗಳೂ ಸ್ವಚ್ಛವಾಗುತ್ತಿದ್ದವು ಎಂದು ವ್ಯಂಗ್ಯವಾಡಿ ಪರಿಹಾರವನ್ನು ಸೂಚಿಸುತ್ತಾರೆ.

ಪ್ರಚಲಿತ ನಾಣ್ಣುಡಿಗಳನ್ನು ಪ್ರಾವರ್ಬುಗಳ ಹಿಂದೆ ಮುಂದೆ ಪದಗುಚ್ಚಗಳನ್ನು ಸೇರಿಸಿ ಫೋನ್ ಮಾಡುವ ಪರಿ ಅವರ ಹಾಸ್ಯ ಮನೋಭಾವ ಹಾಗೂ ಶೈಲಿ ಎರಡನ್ನು ಪ್ರತಿಬಿಂಬಿಸುತ್ತದೆ.. Love the neighbour and not is wife ಡಾಕ್ಟರ್ಗಳ ಹೆಸರಿನ ಹಿಂದೆ ಡಾ ಹೇಗೆ.? ವಕೀಲರನ್ನು ಏನ್ಲ ಎಂದರೆ ಮೊದಲನೇ ವರ್ಷದ ಲಾನ? ಅಥವಾ ಎರಡನೇ ವರ್ಷದ ಲಾನ? ಹೀಗೆ ಅರ್ಥ ಮಾಡಿಕೊಳ್ಳಬೇಕು. M A bar &at& lawಹಳ್ಳಿಗೆ ಹೋದಾಗ ಎಮ್ಮೆ ಅಟ್ ಬಾಲಾರ್ ಆಗಬಹುದು. ಕೆಲವರಿಗೆ ಐ ಟ್ರಬಲ-ಸುಫಿಯಾರಿಟಿ ಕಾಂಪ್ಲೆಕ್ಸ್, ಮತ್ತೆ ಕೆಲವರಿಗೆ ಇನಿರಿಯಾಟಿ ಕಾಂಪ್ಲೆಕ್ಸ್ ಮತ್ತೆ ಕೆಲವರಿಗೆ ಅಂಗಡಿ ಯಲ್ಲಿ ಕೊಳ್ಳಬೇಕೆನಿಸುವ ಶಾಪಿಂಗ್ ಕಾಂಪ್ಲೆಕ್ಸ್.

ಸಂದರ್ಭಕ್ಕೆ ಸರಿಯಾಗಿ ಮಿಂಚಿದ ನಗೆ ಹನಿಗಳಿಗೆ ಸೃಷ್ಟಿ ಲಯವಿರಬಹುದೇ ವಿನಃ, ಸ್ಥಿತಿ ಅಪರೂಪ ಎನ್ನುವ ವೈಎನ್ಕೆ ಪಟಾಕಿಯ ಬತ್ತಿಗೆ ಬೆಂಕಿ ಕೊಟ್ಟಂತೆ ಪದದಿಂದ ಪದಕ್ಕೆ ಹಾರುತ್ತ ಕೊನೆಗೆ ನಗೆಯ ಸಿಡಿಮದ್ದು ಸಿಡಿಸುವ ಸಮರ್ಥರು.. ಚಿತ್ರಕಲಾ ಪ್ರದರ್ಶನ ಒಂದರಲ್ಲಿ ನೇತು ಹಾಕಿದ್ದ ಕೆಟ್ಟ ಚಿತ್ರವನ್ನು ಕಂಡಾಗ ಬೇಸರಗೊಂಡ ಕಲಾವಿಮರ್ಶಕ ವ್ಯವಸ್ಥಾಪಕರಲ್ಲಿ ಕೇಳಿದ, ಏನು ಇಂತಹ ಚಿತ್ರಗಳನ್ನು ಹ್ಯಾಂಗ್ ಮಾಡಿದ್ದೀರಿ ಏನು ಮಾಡು ವುದು.? ಆರ್ಟಿ ಸಿಗಲಿಲ್ಲ  ಎಂದು ವ್ಯವಸ್ಥಾಪಕರು ಪೇಚಾಡಿದರು.

ಬರೆಯುವುದರಲ್ಲಿ ಪಳಗಿದ್ದವರು ವೈಎನ್ಕೆ ಯಾವುದೇ ಬರಹ ಪದ್ಯಗಳಲ್ಲಿ ಬದ್ಧತೆ, ಚೌಕಟ್ಟಿಗಾಗಿ ಹುಡುಕಾಡಿದವರಲ್ಲ. ರೂಢವಾಗಿ ಅಡಕವಾಗಿರುವ
ವ್ಯಕ್ತಿ ಸೇರಿದಂತೆ ಎ ಅರ್ಥಗಳ ಅನಾವರಣವಾಗಬೇಕು ಮತ್ತು ಸನ್ನಿವೇಶ ಸಂದರ್ಭದಲ್ಲಿ ಹೆಕ್ಕಿ ನಗುವನ್ನು ಉಕ್ಕಿಸಬೇಕೆಂಬುದು ಅವರ ಪರಮ ಗುರಿಯಾಗಿತ್ತು ಉದಾಹರಣೆಗೆ. ಥೂ ಎಂದರೆ ಅದೇ ಜಾಹೀರಾ.. ಥೂ.. ಕಪಿಲವಸ್ತುವಿನ ರಾಜ ಶುದ್ಧೋದನ ಅವನ ಮಗ ರಾತ್ರೋರಾತ್ರಿ ಎzದನಾ!. ಹಾಸ್ಯವೇ ಈ ಲೈಟು ಪದ್ಯಗಳ ಮೂಲ ಉದ್ದೇಶವಾದರೂ ಇದು ನಮ್ಮನ್ನು ಚಿಂತನೆಗೂ ಹಚ್ಚುತ್ತದೆ ಎಂಬುದು ಸುಳ್ಳಲ್ಲ.

(ಲೇಖಕರು : ಹಿರಿಯ ಪತ್ರಕರ್ತರು, ಲೇಖಕರು)