Monday, 8th March 2021

ಜನ್ಮದಿನದ ಸಂಭ್ರಮದಲ್ಲಿ ಮಾತಿನ ಮಲ್ಲಿ, ನಿರೂಪಕಿ ಅನುಶ್ರೀ

ಬೆಂಗಳೂರು: ಮಾತಿನ ಮಲ್ಲಿ, ನಿರೂಪಕಿ ಅನುಶ್ರೀ ಅವರು ಸೋಮವಾರ ತಮ್ಮ 33ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಅನುಶ್ರೀ ಆರಂಭದಲ್ಲಿ ಟೆಲಿ ಅಂತ್ಯಾಕ್ಷರಿ ಎಂಬ ಶೋ ಮೂಲಕ ನಿರೂಪಕಿ ಯಾದರು. ನಂತರ ಸಾಕಷ್ಟು ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡುವ ಮೂಲಕ ಕರ್ನಾಟಕದ ಮನೆಮಾತಾದರು. ಇವರು ಸಿನಿಮಾಗಳಲ್ಲೂ ಕೂಡ ನಟಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ತಮ್ಮ ನಿರೂಪಣೆಯಿಂದ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅನುಶ್ರೀ 1988 ಜನವರಿ 25ರಂದು ಜನಿಸಿದರು. ಯೂಟ್ಯೂಬ್‌ ಚ್ಯಾನೆಲ್‌ನಲ್ಲೂ ಸಂದರ್ಶನಗಳನ್ನು ನಡೆಸುವ ಮೂಲಕ, ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ.

 

Leave a Reply

Your email address will not be published. Required fields are marked *