Wednesday, 25th November 2020

ತ್ರಿವಿಕ್ರಮನ ಹಾಡಿಗೆ ಭರ್ಜರಿ ಪ್ರಶಂಸೆ

ರವಿಚಂದ್ರನ್ ಪುತ್ರ, ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ‘ತ್ರಿವಿಕ್ರಮ’.

ಈ ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಬಾಕಿ ಯಿದೆ. ದೀಪಾವಳಿ ಹಬ್ಬಕ್ಕೆ ‘ತ್ರಿವಿಕ್ರಮ’ ಚಿತ್ರದ ‘ಮಮ್ಮಿ ಪ್ಲೀಸ್ ಮಮ್ಮಿ…’ ಹಾಡು ಬಿಡುಗಡೆಯಾ ಗಿತ್ತು. ಬಿಡುಗಡೆಯಾದ ಮೂರು ದಿನಗಳಲ್ಲಿ 7 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆ ಯಾಗಿದೆ. ಸಾಮಾನ್ಯವಾಗಿ ಅಮ್ಮ – ಮಗನ ಸೆಂಟಿಮೆಂಟ್ ಹಾಡುಗಳಿರುತ್ತವೆ. ಇಲ್ಲಿ, ಮಗ ತನ್ನ ಪ್ರೀತಿಯ ಬಗ್ಗೆೆ ತಾಯಿಯ ಬಳಿ ವಿನೂತನ ಶೈಲಿಯಲ್ಲಿ ಹೇಳಿಕೊಳ್ಳುವ ಈ ಹಾಡಿಗೆ ಅಪಾರ ಮೆಚ್ಚುಗೆ ದೊರಕಿದೆ.

ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡನ್ನು ವಿಜಯ್ ಪ್ರಕಾಶ್ ಇಂಪಾಗಿ ಹಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಗೌರಿ ಎಂಟರ್‌ಟೈನರ್ ಲಾಂಛನದಲ್ಲಿ ಸೋಮಣ್ಣ ನಿರ್ಮಿ ಸುತ್ತಿರುವ ಈ ಚಿತ್ರವನ್ನು ಸಹನಾ ಮೂರ್ತಿ ನಿರ್ದೇಶಿಸು ತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾ ಷಣೆ ಕೂಡ ಸಹನಾ ಮೂರ್ತಿ ಅವರದ್ದೇ ಆಗಿದೆ. ಸಂತೋಷ್ ರೈ ಪಾತಾಜೆ, ಗುರು ಪ್ರಶಾಂತ್ ರೈ ಛಾಯಾ ಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ತ್ರಿವಿಕ್ರಮ ಚಿತ್ರಕ್ಕಿದೆ.

ನಾಯಕಿಯಾಗಿ ಅಕಾಂಕ್ಷಾ ಶರ್ಮಾ ನಟಿಸುತ್ತಿದ್ದಾರೆ. ತುಳಸಿ ಶಿವಮಣಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ಚಿಕ್ಕಣ್ಣ, ಆದಿ ಲೋಕೇಶ್, ಶಿವಮಣಿ, ಅಕ್ಷರಾ ಗೌಡ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Leave a Reply

Your email address will not be published. Required fields are marked *