Tuesday, 27th October 2020

ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತ ಕುಲಕ್ಕೆ ವಿರೋಧ

ಮೂಡಲಗಿ: ಕರ್ನಾಟಕ ಬಂದ್ ಕರೆ ಹಿನ್ನಲೆ ಸ್ಥಳೀಯ ಜಯ ಕನಾಟಕ, ಹಸಿರು ಸೇನೆ, ಸಂಘಟನೆಗಳು ಪಟ್ಟಣದ ಕಲ್ಮೇಶ್ವರ ಸರ್ಕ¯ದಲ್ಲಿ ಸರ್ಕಾರದ ವಿರುದ್ದ ಪ್ರತಿಭಟಿಸಿ ಸ್ಥಳೀಯ ತಹಶೀಲ್ದಾರ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಭೂ ಸುಧಾರಣೆ ಕಾಯ್ದೆಯನ್ನು ಮರಳಿ ಪಡೆಯುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.

ಈ ವೇಳೆಯಲ್ಲಿ ಕಾಂಗ್ರೆಸ್ ಜಿಲ್ಲಾ ಕಾರ್ಮೀಕ ಘಟಕದ ಅಧ್ಯಕ್ಷ ಲಕ್ಕಣ್ಣ ಸವಸುದ್ದಿ ಮಾತನಾಡಿ, ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ರೈತವಿರೋಧಿಯಾಗಿದೆ.

ಅನ್ನದಾತರನ್ನೇ ನಿರ್ನಾಮ ಮಾಡುವಂತ ಈ ಕಾಯ್ದೆ ಎಂದು ಬಿಜೆಪಿ ಸರಕಾರದ ವಿರುದ್ದ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿ ದ್ದರು. ಭಾರತದ ಬೆನ್ನಲುಬು ನಮ್ಮಲ್ಲರ ಅನ್ನದಾತ ರೈತ. ಇಂದು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಇವು ರೈತ ಕುಲಕ್ಕೆ ವಿರೋಧವಾಗಿದೆ ಎಂದರು.

ಜಯ ಕರ್ನಾಟಕ ಮೂಡಲಗಿ ತಾಲೂಕ ಅಧ್ಯಕ್ಷ ಶಿವರೆಡ್ಡಿ ಹುಚ್ಚರಡ್ಡಿ ಮಾತನಾಡಿ, ಸರ್ಕಾರ ಈ ಕಾಯ್ದೆಯನ್ನು ಕೈ ಬೀಟ್ಟು ರೈತ ಸಮೂದಾಯಕ್ಕೆ ಸಹಾಯಕವಾಗುವಂತ ಕಾಯ್ದೆಗಳನ್ನು ರೂಪಿಸಬೇಕು ಅದನ್ನು ಬೀಟ್ಟು ರೈತ ಸಮೂದಾಯವನ್ನು ಕೆಳೆಗೆ ತುಳಿಯುವಂತ ಕೆಲಸವಾಗುತ್ತಿದೆ. ಆದರಿಂದ ರೈತರ ಏಳಿಗೆಗಾಗಿ ಸರ್ಕಾರ ಈ ಕಾಯ್ದೆಯಿಂದ ದೂರ ಉಳಿಸಬೇಕೆಂದರು.

ಮೂಡಲಗಿ ತಾಲೂಕಾ ರೈತ ಸಂಘ ಅಧ್ಯಕ್ಷ ಎಸ್ ಎಮ್ ಬಿಳ್ಳೂರ ಮಾತನಾಡಿ, ಅನ್ನದಾತರಿಗೆ ಮಾರಕವಾಗುವ ಕಾಯ್ದೆಯನ್ನು ಮರಳಿ ಪಡೆಯದಿಂದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಪತ್ರಿಭಟಣೆಯಲ್ಲಿ ರೈತ ಸಂಘದ ಹಾಗೂ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಮತ್ತು ಅನೇಕ ಸುತ್ತಮುತ್ತ ಗ್ರಾಮದ ರೈತರು, ಮುಖಂಡರು ಉಪಸ್ಥಿತರಿದ್ದರು.

ಮಿಶ್ರ ಪ್ರತಿಕ್ರಿಯೆ : ರಾಜ್ಯದಂದ್ಯಾತ ರೈತ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕೆರೆ ನೀಡಿದವು ಆದರೆ ಮೂಡಲಗಿ ತಾಲೂಕಿನಲ್ಲಿ ಕರ್ನಾಟಕ ಬಂದ್ ಅಂಗಡಿ ಮುಗಟ್ಟುಗಳು ಬಂದ್ ಆಗದೆ, ಕೆಲವ ಪ್ರತಿಭಟಣಾ ಸ್ಥಳದ ಸುತ್ತಮುತ್ತ ಮಾತ್ರ ಕೆಲ ಕಾಲ ಅಂಗಡಿ ಮುಗಟ್ಟುಗಳು ಬಂದ ಆಗಿ ನಂತರ ಎಂದಿನoತೆ ಕಾರ್ಯನಿರ್ವಹಿಸಿದವು. ಸ್ಥಳೀಯ ಪಿಎಸ್‌ಐ ಮಲ್ಲಿಕಾರ್ಜುನ ಸಿಂಧೂರ ಮತ್ತು ಕುಲಗೋಡ ಪಿಎಸ್‌ಐ ಹಣಮಂತ ನೇರಳೆ ಅವರು ನೇತೃತ್ವದಲ್ಲಿ ಬಂದು ಬಸ್ತಿ ಏರಪಡಿಸಿದರು.

Leave a Reply

Your email address will not be published. Required fields are marked *