Friday, 7th October 2022

ಡ್ರಗ್‌ಸ್‌ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಬೇಡ: ಸಂಸದ ಪ್ರತಾಪ್ ಸಿಂಹ

ಮಡಿಕೇರಿ : ಬಿಜೆಪಿಯಿಂದ ಮಾತ್ರವೇ ಚುನಾವಣೆಯ ವೇಳೆ ಸ್ಟಾರ್ ಪ್ರಚಾರ ನಡೆಸಿಲ್ಲ. ಎಲ್ಲಾ ಪಕ್ಷಗಳಿಂದಲೂ ನಡೆಸಲಾಗಿದೆ. ಡ್ರಗ್ಸ ಜಾಲದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ ಪ್ರಚಾರ ಮಾಡಿದ ಮಾತ್ರಕ್ಕೆ, ರಾಜಕೀಯ ಬಣ್ಣವನ್ನು ಬಳಿಯುವುದು ಸರಿಯಲ್ಲ ಎಂಬುದಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ಬಿಜೆಪಿ ಪರವಾಗಿ ಕಳೆದ ಕೆ ಆರ್ ಪೇಟೆ ಚುನಾವಣೆ ಸಂದರ್ಭದಲ್ಲಿ ನಟಿ ರಾಗಿಣಿ ಪ್ರಚಾರ ಮಾಡಿದ್ದಾರೆ. ಆ ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದಲೂ ಸ್ಟಾರ್ ಪ್ರಚಾರ ನಡೆಸಲಾಗಿದೆ. ಹಾಗಂದ ಮಾತ್ರಕ್ಕೆ ರಾಜಕೀಯ ಬಣ್ಣ ಬಳಿಯುವುದು ಸರಿಯಲ್ಲ ಎಂಬುದಾಗಿ ಕಿಡಿಕಾರಿದರು.

ಚುನಾವಣೆ ಸಂದರ್ಭದಲ್ಲಿ ಸಿನಿ ತಾರೆಯರು ಬಂದು ಪ್ರಚಾರ ಮಾಡುವುದು ಕಾಮನ್. ಇದು ಬಿಜೆಪಿ ಮಾತ್ರವೇ ಮಾಡೋದಿಲ್ಲ. ಎಲ್ಲಾ ಪಕ್ಷದವರಿಂದಲೂ ಮಾಡಲಾಗುತ್ತದೆ ಎಂದರು.