Monday, 3rd October 2022

ಆರೋಹ ಅಂತರಾಷ್ಟ್ರೀಯ ಸಮ್ಮೇಳನ: ವೀರೇಶಾನಂದ ಸ್ವಾಮೀಜಿ

ತುಮಕೂರು: ಆ. 16 ಮತ್ತು 17 ರಂದು ‘ಆರೋಹ’ ಎಂಬ ಶೀರ್ಷಿಕೆಯಡಿಯಲ್ಲಿ ‘ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ’ದ ಅಂಗವಾಗಿ ಎರಡು ದಿನಗಳ ಅಂತರಾಷ್ಟ್ರೀಯ ಯುವ ಸಮ್ಮೇಳನವನ್ನು ಗಂಗಸಂದ್ರ ರಸ್ತೆಯ ಶೇಷಾದ್ರಿಪುರಂ ಪದವಿ ಕಾಲೇಜಿ ನಲ್ಲಿ ಆಯೋಜಿಸಲಾಗಿದೆ ಎಂದು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಮಕೃಷ್ಣ ಮಠ ಮತ್ತು ಮಿಷನ್‌ನ ಉಪಾಧ್ಯಕ್ಷ ರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ಯುವ ಸಮ್ಮೇಳನ ಉದ್ಘಾಟಿಸುವರು. ಕರ್ನಾಟಕ-ಕೇರಳ ವಿಭಾಗದ ಸಿಬ್ಬಂದಿ ನೇಮಕಾತಿ ಆಯೋಗದ ಪ್ರಾದೇಶಿಕ ನಿರ್ದೇಶಕ ರಾದ ಎಸ್.ಎನ್. ಗಿರೀಶ್, ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೆ ಪಿ. ಕೃಷ್ಣ, ತುಮಕೂರು ವಿಭಾಗದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿರುವ ಡಬ್ಲೂ÷್ಯ.ಡಿ. ಅಶೋಕ್ ಅಂತಾರಾಷ್ಟಿçÃಯ ಯುವ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಒಟ್ಟು ಐದು ಗೋಷ್ಠಿಗಳಲ್ಲಿ ಜರುಗಲಿದ್ದು, ಉಪನ್ಯಾಸಕರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಲಿದೆ. ಎಲ್ಲ ಉಪನ್ಯಾಸ ಗಳೂ ಆಂಗ್ಲ ಭಾಷೆಯಲ್ಲಿ ಮೂಡಿ ಬರಲಿವೆ. ರಾಮಕೃಷ್ಣ ಪರಂಪರೆಯ ಯತಿಗಳು, ಮಾತಾಜಿಗಳು ಮತ್ತು ಅಂತಾರಾಷ್ಟಿçÃಯ ಖ್ಯಾತಿಯ ಚಿಂತಕರು ಹಲವಾರು ವಿಷಯಗಳ ಕುರಿತು ಬೆಳಕು ಚೆಲ್ಲಲಿದ್ದಾರೆ. ಯುವ ಸಮ್ಮೇಳನದ ಮೊದಲ ಗೋಷ್ಠಿಯಲ್ಲಿ ಗದಗ-ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತೀ ಮತ್ತು ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಉಪನ್ಯಾಸ ನೀಡುವರು.
ಗೋಷ್ಠಿ ಎರಡರಲ್ಲಿ ಬೆಂಗಳೂರಿನ ಭವತಾರಣಿ ಆಶ್ರಮದ ಅಧ್ಯಕ್ಷರಾದ ಮಾತಾ ವಿವೇಕಮಯಿ ಮತ್ತು ಮುಂಬೈನ ಆತ್ಮದರ್ಶನ ಪ್ರೆöÊವೇಟ್ ಲಿಮಿಟೆಡ್‌ನ ಸಂಸ್ಥಾಪಕ ನಿರ್ದೇಶಕ ಡಾ. ರಾಧಾಕೃಷ್ಣನ್ ಪಿಳೈ ತಮ್ಮ ವಿಚಾರಗಳನ್ನು ಮಂಡಿಸುವರು ಎಂದರು.