Friday, 27th May 2022

ಏಷ್ಯನ್ ಕ್ರೀಡಾಕೂಟ 2022 ಮುಂದೂಡಿಕೆ

ಬೀಜಿಂಗ್: ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿದ್ದ 2022ರ ಏಷ್ಯನ್ ಕ್ರೀಡಾಕೂಟವನ್ನು ಮುಂದೂಡಲಾಗಿದೆ.

ಹಾಂಗ್ಜೌನಲ್ಲಿ ಸೆಪ್ಟೆಂಬರ್‌ ತಿಂಗಳಿನಲ್ಲಿ ನಡೆಯಬೇಕಿದ್ದ ಏಷ್ಯನ್ ಕ್ರೀಡಾಕೂಟವನ್ನು ಅನಿರ್ದಿಷ್ಟ ದಿನಾಂಕದವರೆಗೆ ಮುಂದೂಡಲಾಗಿದೆ. ವಿಳಂಬಕ್ಕೆ ಯಾವುದೇ ಕಾರಣ ನೀಡಲಾಗಿಲ್ಲ. ಆದರೆ ಚೀನಾ ಕೋವಿಡ್ ಪ್ರಕರಣಗಳ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ.