Monday, 5th December 2022

ಪಾಕಿಸ್ತಾನ ನೂತನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಆಯ್ಕೆ

ಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಲೆಫ್ಟಿನೆಂಟ್ ಜನರಲ್ ಅಸಿಮ್ ಮುನೀರ್ ಅವರನ್ನು ನೂತನ ಸೇನಾ ಮುಖ್ಯಸ್ಥರನ್ನಾಗಿ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗುರುವಾರ ಆಯ್ಕೆ ಮಾಡಿದ್ದಾರೆ.

ಪ್ರಸ್ತುತ ಸೇನಾ ಮುಖ್ಯಸ್ಥ ಜಾವೇದ್ ಬಜ್ವಾ (61) ಅವರು ನ.29 ರಂದು ನಿವೃತ್ತಿಯಾಗಲಿದ್ದಾರೆ. ಈ ಮೊದಲು ಅವರ ಅವಧಿ ಯನ್ನು ಮೂರು ವರ್ಷ ವಿಸ್ತರಿಸಲಾಗಿತ್ತು. ಮತ್ತೊಂದು ಅವಧಿ ವಿಸ್ತರಣೆಗೆ ಮನವಿ ಮಾಡಿರಲಿಲ್ಲ.

ಹಾಗೆಯೇ ಲೆಫ್ಟಿನೆಂಟ್ ಜನರಲ್ ಸಾಹಿರ್ ಶಮ್‌ಶಾದ್ ಮಿರ್ಜಾ ಜಂಟಿ ಸೇನಾ ಸಿಬ್ಬಂದಿ ಕಮಿಟಿಯ ಅಧ್ಯಕ್ಷರನ್ನಾಗಿ ಪ್ರಧಾನಿ ಆಯ್ಕೆ ಮಾಡಿದ್ದಾರೆ.