Friday, 19th August 2022

ಹೆಲಿಪ್ಯಾಡ್’ನಿಂದಾಗಿ ಅಥ್ಲೀಟ್ ಗಳ ತರಬೇತಿ ಪ್ರದೇಶ ನಾಶ…!

ಮೈಸೂರು: ಜೂನ್.21ರಂದು ಮೈಸೂರಿನಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಗೆ ಚಾಲನೆ ಪ್ರಧಾನಿ ನರೇಂದ್ರ ಮೋದಿ ನೀಡಿದರು. ಆದರೆ ಓವಲ್ ಮೈದಾನದಲ್ಲಿ ಅವರಿಗಾಗಿ ಸಿದ್ಧಪಡಿಸಿದ ಹೆಲಿಪ್ಯಾಡ್ ಅಥ್ಲೀಟ್ ಗಳು ತರಬೇತಿ ಪಡೆಯುತ್ತಿದ್ದ ಪ್ರದೇಶವನ್ನು ನಾಶಪಡಿಸಿದೆ. ಇದರಿಂದ ಅಥ್ಲೀಟ್ ಗಳು ಸೂಕ್ತ ರೀತಿಯಲ್ಲಿ ತರಬೇತಿ ಪಡೆಯಲಾಗದೆ ಸಂಕಷ್ಟಕ್ಕೆ ಸಿಲುಕಿ ದಂತಾಗಿದೆ.

ಮೋದಿ ಅವರನ್ನು ಹೆಲಿಕಾಪ್ಟರ್‌’ನಿಂದ ಇಳಿಸಲು ಓವಲ್‌ ಮೈದಾನದ ಸ್ಥಳದಿಂದ 100 ಮೀಟರ್‌ ದೂರದಲ್ಲಿ ತಾತ್ಕಾಲಿಕ ಹೆಲಿ ಪ್ಯಾಡ್‌ ಸಿದ್ಧಪಡಿಸಲಾಗಿತ್ತು. ಹೆಲಿಪ್ಯಾಡ್ ನಿರ್ಮಿಸಿದ್ದ ಸ್ಥಳ ನಾಶಗೊಂಡಿದ್ದು, ಇದರಿಂದ ಕ್ರೀಡಾಪಟುಗಳು ಸೂಕ್ತ ರೀತಿಯಲ್ಲಿ ಅಭ್ಯಾಸ ಮಾಡಲು ಸಾಧ್ಯವಾಗದೆ ಸಮಸ್ಯೆಗಳು ಎದುರಾಗಿದೆ.

ಹಾನಿಗೊಳಗಾಗಿರುವ ಪ್ರದೇಶದಲ್ಲಿ ವಿಶೇಷವಾಗಿ ಮೈಸೂರು ವಿಶ್ವವಿದ್ಯಾಲಯ ಮತ್ತು ಅದರ ಸಂಯೋಜಿತ ಕಾಲೇಜುಗಳಲ್ಲಿ ಓದುತ್ತಿರುವ ಕ್ರೀಡಾಪಟುಗಳು ಕ್ರೀಡಾಭ್ಯಾಸ ಮಾಡುತ್ತಿದ್ದರು.

ಕ್ರಾಫರ್ಡ್ ಹಾಲ್ ಪಕ್ಕದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಸೇರಿದಂತೆ ಇತರೆ ಬಯಲು ಪ್ರದೇಶಗಳಿರುವಾಗ ಓವಲ್ ಮೈದಾನವನ್ನೇಕೆ ಅಧಿಕಾರಿಗಳು ಆಯ್ಕೆ ಮಾಡಿಕೊಂಡರು ಮತ್ತೊಬ್ಬ ಕ್ರೀಡಾಪಟು ಪ್ರಶ್ನಿಸಿದ್ದಾರೆ.