Thursday, 11th August 2022

ಅತ್ಯಾಚಾರಕ್ಕೆ ಯತ್ನ: ಪೊಲೀಸಪ್ಪನಿಗೆ ಜೈಲೂಟ

ತುಮಕೂರು: ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಪೊಲೀಸ್ ಕಾನ್‌ಸ್ಟೇಬಲ್‌ ಜೈಲು ಸೇರಿದ್ದಾನೆ. ತಿಪಟೂರು ತಾಲ್ಲೂಕಿನ ಕೆ.ಬಿ ಕ್ರಾಸ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ಮಂಜುನಾಥ್ (ಮಿಲ್ಟಿ) ಬಂಧಿತ ಪೊಲೀಸ್ ಸಿಬ್ಬಂದಿ.

ಕಿಬ್ಬನಹಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ತಿಪಟೂರು ಡಿವೈಎಸ್ಪಿಗೆ ಎಸ್ ಬಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡ್ತಿದ್ದ ಮಂಜು ನಾಥ್, ಜೂ.28ರಂದು ಬೆಳಗ್ಗೆ 10 ಗಂಟೆಗೆ ಕಿಬ್ಬನಹಳ್ಳಿಯಲ್ಲಿ ಹೋಟೆಲ್ ನಡೆಸಿಕೊಂಡಿದ್ದ ಸಂತ್ರಸ್ತ ಮಹಿಳೆಯೊಂದಿಗೆ ಅಸಭ್ಯ ವರ್ತನೆ ತೋರಿದ್ದಾನೆ.

ಸಂತ್ರಸ್ತ ಮಹಿಳೆಯ ಗಂಡ ತಿಪಟೂರಿಗೆ ಹೋಟೆಲ್ ಸಾಮಾನುಗಳನ್ನ ತರಲು ಹೋದ ವೇಳೆ, ತಿಂಡಿ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಮಂಜುನಾಥ್, ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಜೊತೆಗೆ ಸೆಕ್ಸ್‌ಗೆ ಸಹಕರಿಸ ದಿದ್ದರೇ ಹೊಟೇಲ್ ಬಂದ್ ಮಾಡಿಸೋದಾಗಿ ಮಹಿಳೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ಕೂಡಲೇ ತನ್ನ ಪತಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಬಳಿಕ ಘಟನೆ ಸಂಬಂಧ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 354(a), 354(b), 448, 506,509, ಹಾಗೂ ಇತರ ಕಲಂ ರೀತಿ ಕೇಸ್ ದಾಖಲಾಗಿದೆ. ಸದ್ಯ ಪೊಲೀಸ್ ಕಾನ್ ಸ್ಟೇಬಲ್ ಮಂಜುನಾಥ್ ನನ್ನು ಬಂಧಿಸಿ ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.