Monday, 16th May 2022

ಜನರಿಗೆ, ಜನಪ್ರತಿನಿಧಿಗಳಿಗೆ ಸದಾ ಲಭ್ಯ: ವಿಶ್ವೇಶ್ವರ ಹೆಗಡೆ ಕಾಗೇರಿ

ಶಿರಸಿ : ನಾನು ನನ್ನ ಮನೆ ಹಾಗೂ ಕಚೇರಿಯಲ್ಲಿ ಜನರಿಗೆ ಅಥವಾ ಜನಪ್ರತಿನಿಧಿಗಳಿಗೆ ಸದಾ ಲಭ್ಯವಿರುತ್ತೇನೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಚಿವ ಆನಂದ್ ಸಿಂಗ್ ಸಮಯ ಕೇಳಿದ್ದರ ಕುರಿತು ಪ್ರತಿಕ್ರಿಯಿಸಿದರು.

ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಊರಲ್ಲಿ ಇದ್ದಾಗ ಸ್ಥಳೀಯರಿಗೆ ಸಿಗುತ್ತೇನೆ. ಅದೇ ರೀತಿ ಬೆಂಗಳೂರಿನಲ್ಲಿ ಇದ್ದಾಗ ಯಾರ್ಯಾರಿಗೆ ಅಗತ್ಯ ಇದೆಯೋ ಅವರನ್ನು ಭೇಟಿ ಆಗುತ್ತೇನೆ ಎಂದರು.‌

ನನ್ನ ಭೇಟಿಗೆ ಅವಕಾಶ ಕೇಳಿದವರಿಗೆ ನಿಶ್ಚಿತವಾಗಿಯೂ ಅವಕಾಶ ಕೊಡುತ್ತೇನೆ ಎಂದು ಸ್ಪೀಕರ್, ಸಚಿವ ಆನಂದ ಸಿಂಗ್ ಅವಕಾಶ ಕೇಳಿದ್ದಾರೋ ಇಲ್ಲವೋ ಎಂಬುದರ ಕುರಿತು ಸ್ಪಷ್ಟ ಅಭಿಪ್ರಾಯ ತಿಳಿಸಲು ನಿರಾಕರಿಸಿದರು.