Thursday, 5th August 2021

ಪದವೀಧರರ ಸಮಸ್ಯೆಗಳನ್ನು ಅರಿತಿದ್ದೇನೆ: ಆರ್.ಎಂ.ಕುಬೇರಪ್ಪ

ಹುಬ್ಬಳ್ಳಿ: ‘ಪಶ್ಚಿಮ ಪದವೀಧರ ಕ್ಷೇತ್ರವು ಚಿರಪರಿಚಿತವಾಗಿದ್ದು, ಪದವೀ ಧರರ ಸಮಸ್ಯೆಗಳನ್ನು ಅರಿತಿದ್ದೇನೆ. ಹೀಗಾಗಿ ಈ ಬಾರಿ ಗೆಲುವು ನನ್ನದೇ’ ಎಂದು ಕಾಂಗ್ರೆಸ್ ಅಭ್ಯರ್ಥಿ ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಂಗಳವಾರ ನಡೆದ ಚುನಾ ವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಪ್ರಥಮ ಪ್ರಾಶಸ್ತ್ಯದ ಮತ ನೀಡುವಂತೆ ವಿನಂತಿ ಸಿದರು. ‘ಈ ಕ್ಷೇತ್ರ ಹಿಂದೆ ಕಾಂಗ್ರೆಸ್ ವಶ ದಲ್ಲಿತ್ತು. ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿದರೆ ಕ್ಷೇತ್ರವನ್ನು ಮತ್ತೆ ವಶ ಮಾಡಿಕೊಳ್ಳಬಹುದು’ ಎಂದರು.

ಮುಖಂಡ ಎಫ್.ಎಚ್.ಜಕ್ಕಪ್ಪನವರ ಮಾತನಾಡಿ, ‘ಶಿಕ್ಷಣ ಕ್ಷೇತ್ರದ ಎಲ್ಲ ಮಜಲುಗಳನ್ನು ತಿಳಿದಿರುವ ಕುಬೇರಪ್ಪ ಅವರು ಯುವಕರ ಸಮಸ್ಯೆಯಾದ ನಿರು ದ್ಯೋಗ ಸಮಸ್ಯೆ ಪರಿಹಾರಕ್ಕೆ ಕಾಯಕಲ್ಪ ನೀಡಲಿದ್ದಾರೆ’ ಎಂದು ಹೇಳಿದರು.

ಮಾಜಿ ಸಚಿವ ಕೆ.ಎನ್.ಗಡ್ಡಿ, ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಎ.ಎ.ಜಹಗೀರದಾರ ಮಾತನಾಡಿ ದರು. ಬ್ಲಾಕ್ ಅಧ್ಯಕ್ಷರಾದ ವರ್ಧಮಾನಗೌಡ ಹಿರೇಗೌಡರ, ಮಂಜು ನಾಥ ಮಾಯಣ್ಣವರ, ಜಿಲ್ಲಾ ಪಂಚಾಯ್ತಿ ಸದಸ್ಯೆ ರೇಣುಕಾ ಇಬ್ರಾಹಿಂ ಪೂರ, ಮಹಿಳಾ ಬ್ಲಾಕ್ ಅಧ್ಯಕ್ಷರಾದ ವೆಂಕಮ್ಮ ಚಾಕಲಬ್ಬಿ, ಯಾಸ್ಮಿನ್ ಗುದಗಿ, ಆರ್.ಎಚ್.ಕೋನರಡ್ಡಿ ಇದ್ದರು.

Leave a Reply

Your email address will not be published. Required fields are marked *