Wednesday, 5th October 2022

ಜಿಪಂ ಸಿಇಒ ಡಾ. ಸುಶೀಲಾ ಬಿ. ಅಧಿಕಾರ ಸ್ವೀಕಾರ

ಧಾರವಾಡ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಡಾ. ಸುಶೀಲಾ ಬಿ. ಅಧಿಕಾರ ಸ್ವೀಕರಿಸಿದ್ದಾರೆ. ಇಲ್ಲಿಂದ ವರ್ಗಾವಣೆಗೊಂಡಿರುವ ಡಾ. ಬಿ.ಸಿ. ಸತೀಶ ಅವರು ಅಧಿಕಾರ ಹಸ್ತಾಂತರಿಸಿದರು.

ಹೈದರಾಬಾದ್ ನ ಗಾಂಧಿ ಮೆಡಿಕಲ್ ಕಾಲೇಜಿನಿಂದ ವೈದ್ಯಕೀಯ ಪದವಿ ಪಡೆದಿರುವ ಡಾ. ಸುಶೀಲಾ ಅವರು, ಕೆಲಕಾಲ ವೈದ್ಯ ಕೀಯ ವೃತ್ತಿ ನಡೆಸಿ ನಂತರ 2013ರ ನಾಗರಿಕ ಸೇವಾ ಪರೀಕ್ಷೆ ಗಳಲ್ಲಿ ಭಾರತೀಯ ರೇಲ್ವೆ ಸಿಬ್ಬಂದಿ ಸೇವೆ ( IRPS) ಗೆ ಅರ್ಹತೆ ಪಡೆದರು. ಪುನಃ 2015ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಭಾರತೀಯ ಆಡಳಿತ ಸೇವೆ (ಐಎಎಸ್) ಕರ್ನಾಟಕ ಕೇಡರ್ ಗೆ ಆಯ್ಕೆ ಯಾದರು.

ರಾಯಚೂರಿನಲ್ಲಿ ಜಿಲ್ಲಾ ತರಬೇತಿ, ಸೇಡಂ ಹಾಗೂ ಕಲಬುರ್ಗಿಯಲ್ಲಿ ಉಪ ವಿಭಾಗಾಧಿಕಾರಿ ಯಾಗಿ , ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಇದೀಗ ಬಡ್ತಿಯೊಂದಿಗೆ ಧಾರವಾಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಹುದ್ದೆ ಸ್ವೀಕರಿಸಿದ್ದಾರೆ.