Wednesday, 1st December 2021

ಬಾಂಗ್ಲಾದೇಶ ಹಿಂಸಾಚಾರ ಪ್ರಕರಣ: ಪ್ರಮುಖ ಆರೋಪಿ ಬಂಧನ

ಢಾಕಾ : ಕಳೆದ ಬುಧವಾರದಿಂದ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ನಿರಂತರ ಹಿಂಸಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಭದ್ರತಾಪಡೆಗಳು ಬಂಧಿಸಿ ದ್ದಾರೆ.

ಬಂಧಿತ ಆರೋಪಿ ಇಕ್ಬಾಲ್ ಹೊಸೇನ್ ಎನ್ನುವವನಾಗಿದ್ದು, ಹಿಂಸಾಚಾರದ ಪ್ರಮುಖ ಸೂತ್ರಧಾರಿ ಎಂದು ತಿಳಿದುಬಂದಿದೆ. ಕಾಕ್ಸ್ ಬಜಾರ್ ನ ಬೀಚ್ ಪ್ರದೇಶದಲ್ಲಿ ಇಕ್ಬಾಲ್ ಹೊಸೇನ್ ನನ್ನ ಬಂಧಿಸಿ ರುವುದಾಗಿ ಬಾಂಗ್ಲಾ ಪೊಲೀಸ್ ಮೂಲಗಳು ತಿಳಿಸಿವೆ.

ಅಲೆಮಾರಿ ಇಕ್ಬಾಲ್ ಹೊಸೇನ್ ಕ್ಯೂಮಿಲ್ಲಾದ ದುರ್ಗಾ ಪೂಜಾ ಮಂದಿರದಲ್ಲಿ ಖುರಾನ್ ಪ್ರತಿ ಇರಿಸಿ ವ್ಯಾಪಕ ಹಿಂಸಾಚಾರಕ್ಕೆ ಕಾರಣನಾಗಿದ್ದಾನೆ ಎಂದು ಹೇಳಲಾಗಿದೆ.

ದುರ್ಗಾ ಪೂಜೆ ನಡೆಸುತ್ತಿದ್ದ ಪೆಂಡಾಲ್ ಮೇಲೆ ದಾಳಿ ನಡೆಸಿದ ಬಳಿಕ ಹಲವು ಕಡೆ ಹಿಂದೂಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು.

ಹಿಂದೂಗಳ 66 ಮನೆಗಳನ್ನು ಧ್ವಂಸಗೈಯಲಾಗಿತ್ತು ಮತ್ತು 20 ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಈಗಾಗಲೇ 600ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.