Wednesday, 28th July 2021

ಉದ್ಯಮಿ ಕೊಲೆ: ಪುತ್ರಿಯಿಂದಲೇ ಕೃತ್ಯದ ಶಂಕೆ

ಮಾದಕ ವಸ್ತು ಸೇವನೆ ಮಾಡಬಾರದು ಎಂದು ಹೇಳಿದ್ದ ತಂದೆಗೆ ಮಗಳು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ರಾಜಾಜಿನಗರದ ಉದ್ಯಮಿ ಜಯಕುಮಾರ್(43) ಮೃತರು. ಘಟನೆಯಲ್ಲಿ ಜಯಕುಮಾರ್ ಮಗಳು ಉನ್ನತಿ ಎಂಬುವರಿಗೂ ಬೆಂಕಿ ತಾಗಿದ ಪರಿಣಾಮ ಸುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆೆಗೆ ದಾಖಲಿಸಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಷ್ಯಂ ವೃತ್ತದ 5ನೇ ಬ್ಲಾಾಕ್ ನಿವಾಸಿಯಾದ ಜಯಕುಮಾರ್ ಬಟ್ಟೆೆ ಅಂಗಡಿ ಇಟ್ಟುಕೊಂಡಿದ್ದರು. ಜಯಕುಮಾರ್ ಅವರ ಪತ್ನಿ, ಕುಟುಂಬದ ಕಾರ್ಯಕ್ರಮದ ನಿಮಿತ್ತ ಪಾಂಡಿಚೇರಿಗೆ ತೆರಳಿದ್ದರು. ಮನೆಯಲ್ಲಿ ತಂದೆ ಜಯಕುಮಾರ್ ಹಾಗೂ ಮಗಳು ಉನ್ನತಿ ಮಾತ್ರ ಇದ್ದರು. ಶನಿವಾರ ರಾತ್ರಿ ಮಗಳು ಉನ್ನತಿ ಡ್ರ್ಸ್ ಸೇವಿಸುತ್ತಿಿದ್ದಾಗ ಜಯಕುಮಾರ್ ಅದಕ್ಕೆೆ ಅಡ್ಡಿಿಪಡಿಸಿ, ಮಗಳಿಗೆ ಬೈದಿದ್ದಾರೆ ಎನ್ನಲಾಗಿದೆ. ಡ್ರ್ಸ್ ಸೇವಿಸುವುದನ್ನು ತಡೆದಿದ್ದಾರೆ ಎಂದು ಅಪ್ಪನ ವಿರುದ್ಧ ಕೋಪಗೊಂಡ ಉನ್ನತಿ, ಜಯಕುಮಾರ್ ಮಲಗಿರುವಾಗ ಬೆಂಕಿ ಹಚ್ಚಿಿದ್ದಾಳೆ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆೆ ದಕ್ಷಿಣ ವಿಭಾಗದ ಡಿಸಿಪಿ ಎನ್.ಶಶಿಕುಮಾರ್ ಹಾಗೂ ರಾಜಾಜಿನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆೆ ಆಗಮಿಸಿ ತಪಾಸಣೆ ನಡೆಸಿದ್ದಾರೆ.

ಕೊಲೆಯಾಗಿರುವ ಶಂಕೆ: ಡಿಸಿಪಿ
ಉದ್ಯಮಿ ಜಯಕುಮಾರ್ ಎಂಬುವರ ಮೃತದೇಹ ರಾಜಾಜಿನಗರದ ಅವರ ಮನೆಯ ಸ್ನಾಾನಗೃಹದಲ್ಲಿ ಸಿಕ್ಕಿಿದ್ದು, ಸಂಪೂರ್ಣ ಸುಟ್ಟುಹೋಗಿದೆ. ಇದು ಮೇಲ್ನೋೋಟಕ್ಕೆೆ ಕೊಲೆ ಎಂಬ ಶಂಕೆ ಮೂಡಿದೆ. ಅಲ್ಲದೇ ಸ್ನಾಾನಗೃಹಕ್ಕೆೆ ಹೊಂದಿಕೊಂಡಿರುವ ಬೆಡ್‌ರೂಮ್‌ನಲ್ಲಿ ರಕ್ತ ಬಿದ್ದಿರುವುದು ಕಂಡುಬಂದಿದೆ. ಅದರ ಜತೆಗೆ ಇನ್ನಷ್ಟು ಅನುಮಾನ ಬರುವಂತಹ ಅಂಶಗಳು ಕಂಡುಬಂದಿವೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಕೃತ್ಯ ಸ್ಥಳ ನೋಡಿದರೆ ಕೊಲೆಯಾಗಿರುವುದು ಮೇಲ್ನೋೋಟಕ್ಕೆೆ ಕಂಡು ಬರುತ್ತಿಿದೆ. ಈ ಕೊಲೆ ಯಾರು ಮಾಡಿದ್ದಾರೆ ? ಏಕೆ ಮಾಡಿದ್ದಾರೆ ಎಂಬುದನ್ನು ಪತ್ತೆೆ ಹಚ್ಚಬೇಕಿದೆ. ಹೀಗಾಗಿ ಅವರ ಮಗಳು ಉನ್ನತಿಯನ್ನು ವಶಕ್ಕೆೆ ಪಡೆದು ವಿಚಾರಣೆ ಮಾಡಲಾಗುವುದು ಎಂದು ಡಿಸಿಪಿ ಎನ್. ಶಶಿಕುಮಾರ್ ಅವರು ಸ್ಥಳಕ್ಕೆೆ ಭೇಟಿ ನೀಡಿದಾಗ ಸುದ್ದಿಗಾರರಿಗೆ ತಿಳಿಸಿದರು.

Leave a Reply

Your email address will not be published. Required fields are marked *