Thursday, 2nd February 2023

ಬೆಳಗಾವಿ: ಸರಕಾರದ ಮೃಧು ಧೋರಣೆಯೇಕೆ?

Belgaum

ಬೆಳಗಾವಿ ವಿಷಯದಲ್ಲಿ ಸರಕಾರ ಮೃಧು ಧೋರಣೆ ತಾಳಿದಂತೆ ಕಾಣುತ್ತಿದೆ. ಆದರೆ ಈ ಮೃಧು ಧೋರಣೆ ಏಕೆ ಎಂಬುದು ಯಾರಿಗೂ ತಿಳಿಯುತ್ತಿಲ್ಲ.

ಎಂಇಎಸ್ ಪುಂಡರು, ನಮ್ಮ ರಾಜ್ಯದ ನಮ್ಮ ಜಿಲ್ಲೆಯಲ್ಲಿಯೇ ಪೊಲೀಸರ ಜೀಪು ಹಾಗೂ ಸಾರ್ವಜನಿಕರ ಇಪ್ಪತ್ತಕ್ಕೂ ಹೆಚ್ಚು ಕಾರುಗಳನ್ನು ಜಖಂ ಗೊಳಿಸಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿಗೂ ಹಾನಿ ಮಾಡಿದ್ದಾರೆ. ಆದರೂ ಈವರೆಗೂ ಸರಕಾರ ಯಾವುದೇ ರೀತಿಯ ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇಷ್ಟೇಲ್ಲ ಆದರೂ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕಠಿಣ ನಿಲುವನ್ನು ತಾಳಿಲ್ಲ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ. ಏಕೆ? ಬಿಜೆಪಿಯ ಮತ ಬ್ಯಾಂಕ್ ಒಡೆಯುತ್ತದೆ ಎಂಬ ಚಿಂತೆಯಿದ್ದಂತೆ ಕಾಣುತ್ತಿದೆ. ಹೀಗೆ ಮಾಡಿದರೆ, ನಾಡು, ನುಡಿ ಹಾಗೂ ಗಡಿ ಜಿಲ್ಲೆಗಳ ಗತಿಯೇನು? ರಾಜ್ಯದಲ್ಲೇ ಎರಡನೇ ಅತಿಹೆಚ್ಚು ಕಂದಾಯ ವನ್ನು ತಂದುಕೊಡುವ ಬೆಳಗಾವಿ ಜಿಲ್ಲೆಯ ಕುರಿತು, ಸರಕಾರಕ್ಕೇ ಇಂತಹ ನಿರ್ಲಕ್ಷ್ಯ ಧೋರಣೆಯೇ ತಾಳಿರು ವುದು ಶುದ್ಧತಃ ಸರಿಯಲ್ಲ.

ಅಲ್ಲದೆ ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳೆದರೆಂದೂ ಈಗಾಗಲೇ ೭ ಮಂದಿಯನ್ನು ಬಂಧಿಸಲಾಗಿದೆ. ಪೋಲಿಸರಾದರೂ ಏನು ಮಾಡು ತ್ತಿದ್ದಾರೆ. ಅವರಿಗೆ ನಮ್ಮದೇ ಜನರ ಮೇಲಿರುವ ಕಾಠಿಣ್ಯತೆ, ಎಂಇಎಸ್ ಪುಂಡರ ಮೇಲಿಲ್ಲ. ಇನ್ನಾದರೂ ಸರಕಾರ ತನ್ನ ನಿಲುವು ಬದಲಿಸಿ ಕೊಂಡು, ಎಂಇಎಸ್ ನಿಷೇಧಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂಬುದು ಗಡಿನಾಡಿನವನಾದ ನನ್ನ ವಿನಂತಿ.

ಬಾವುರಾಜ್ ಬಿಸ್ವಾಗರ, ಖವಟಕೊಪ್ಪ ಅಭ್ಯಾಸ ಮಾಡಿದರೆ ಕಾಗುಣಿತ ದೋಷ ಕಡಿಮೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಅವರು ಶುದ್ಧ ಕನ್ನಡ ಮತ್ತು ‘ಅ’ಕಾರ ‘ಹ’ಕಾರ ಉಚ್ಚಾರಣೆಯ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಯ ಮೇಲೆ ಬಹಳಷ್ಟು ಚರ್ಚೆಗಳು ನಡೆಯುತ್ತಿವೆ. ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ-ವಿಜಯಪುರ ಭಾಗದಲ್ಲಿ ಕಾರ‘ಣ’ ಅಕ್ಷರವನ್ನು ನ’ ಕಾರವಾಗಿ ಉಚ್ಚಾರ ಮಾಡುತ್ತಾರೆ.

ಪ್ರತಿ ೩೦ ಕಿ.ಮೀಟರ್‌ಗಳಂತೆ ಭಾಷೆಯ ಉಚ್ಚಾರಣೆಯಲ್ಲಿ, ಬಳಕೆಯಲ್ಲಿ ಬದಲಾವಣೆಯಾಗುತ್ತದೆ ಎಂದು ಭಾಷಾ ತಜ್ಞರು ಹೇಳುತ್ತಾರೆ. ‘ಅ’ಕಾರ, ‘ಹ’ಕಾರದ ಉಚ್ಚಾರಣೆ ಜತೆಗೆ ದೀರ್ಘಾಕ್ಷರಗಳು, ಹೊಟ್ಟೆ ಸೀಳುವ ಅಕ್ಷರಗಳನ್ನು ಬರೆಯುವಾಗ ಬಹಳಷ್ಟು ವಿದ್ಯಾರ್ಥಿಗಳು ಕಾಗುಣಿತ ದೋಷ ಗಳನ್ನು ಮಾಡುತ್ತಾರೆ ಎಂಬುದು ಹಲವರ ಅಭಿಪ್ರಾಯ. ಪ್ರಬಂಧ, ಪತ್ರಲೇಖನ ಮತ್ತು ಮೂರ್ನಾಲ್ಕು ವಾಕ್ಯಗಳಲ್ಲಿ ಬರೆಯಬೇಕಾದ ಉತ್ತರಗಳನ್ನೂ ವಿದ್ಯಾರ್ಥಿಗಳು ದೋಷ ಪೂರಿತವಾಗಿ ಬರೆಯುತ್ತಿದ್ದಾರೆ.

ಬರವಣಿಗೆಗೆ ಹೆಚ್ಚು ಒತ್ತು ಕೊಡುತ್ತಾ ಹೋದರೆ, ಶೈಕ್ಷಣಿಕ ವರ್ಷದಲ್ಲಿನ ಪಠ್ಯಸಾಗು ವುದಿಲ್ಲವೆಂಬ ಬೇಸರ ಶಿಕ್ಷಕರ ವಲಯದಲ್ಲಿದೆ. ಎರಡು- ಮೂರು ದಶಕಗಳ ಹಿಂದೆ ಬರವಣಿಗೆ ಮತ್ತು ಓದಿಗೆ ಶಿಕ್ಷಕರು ಹೆಚ್ಚು ಒತ್ತುನೀಡುತ್ತಿದ್ದರು. ಪಠ್ಯಪುಸ್ತಕದ ಎಲ್ಲ ಪಾಠಗಳನ್ನು ಮುಗಿಸುವ ಒತ್ತಡ ಇರಲಿಲ್ಲ. ಈ ಕಾರಣದಿಂದ ಆ ಕಾಲದಲ್ಲಿ ಅಭ್ಯಾಸ ಮಾಡಿದವರ ಬರವಣಿಗೆಯಲ್ಲಿ ಕಾಗುಣಿತ ದೋಷಗಳು ಕಡಿಮೆ ಕಂಡುಬರುತ್ತಿದ್ದವು.

-ಪ್ರಮೋದ್ ಪಾಟೀಲ್ ಚಿಕ್ಕೋಡಿ

ಆತ್ಮಹತ್ಯೆ ತಡೆಗೆ ವೈಜ್ಞಾನಿಕ ಪರಿಹಾರ ಹುಡುಕಿ
ಐಐಎಸ್‌ಸಿ ಸಂಶೋಧನಾ ವಿದ್ಯಾರ್ಥಿಗಳ ಆತ್ಯಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಲು ವಿದ್ಯಾರ್ಥಿಗಳ ವಸತಿಗೃಹಗಳ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್‌ಗಳನ್ನು ತೆಗೆಸಿ ಗೋಡೆಗೆ ಫ್ಯಾನ್‌ಗಳನ್ನು ಅಳವಡಿಸಲು ನಿರ್ಧರಿಸಿರುವ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.

ಐಐಎಸ್‌ಸಿಗೆ ಪ್ರವೇಶ ಪಡೆಯುವುದೇ ಒಂದು ದೊಡ್ಡ ಸಾಧನೆಯಾಗಿರುತ್ತದೆ. ಅಲ್ಲಿ ಅಧ್ಯಯನ ಮಾಡಿದವರು, ಸಂಶೋಧನೆ ಮಾಡಿದವರು ವಿಶ್ವದ ಉನ್ನತ ಸಂಶೋಧನಾ ಕೇಂದ್ರಗಳಲ್ಲಿ ವಿeನಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂಥ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ ಕೆಲವರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದರೆ ಅದಕ್ಕೆ ಬಲವಾದ ಕಾರಣಗಳೇ ಇರಬಹುದು. ಒಬ್ಬ ವ್ಯಕ್ತಿ ಕಟ್ಟ ಕಡೆಯದಾಗಿ ಆತ್ಮಹತ್ಯೆಯ ಬಗ್ಗೆ ಆಲೋಚಿಸುತ್ತಾನೆ.

ಸಂಶೋಧನಾ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗುವುದೆಂದರೆ ವಿವಿಧ ರೀತಿಯ ಕಿರುಕುಳ, ಖಿನ್ನತೆ, ಪ್ರೇಮ ವೈಫಲ್ಯ, ಸಂಶೋಧನೆಯಲ್ಲಿ ಯಶಸ್ಸು ಕಾಣದಿರುವುದು ಸೇರಿದಂತೆ ಹಲವು ಕಾರಣಗಳಿರಬಹುದು. ಇವುಗಳ ಬಗ್ಗೆ ವಿವಿಧ ಕೋನಗಳಿಂದ ವಿಶ್ಲೇಷಿಸಿ ಸೂಕ್ತವಾದ ಪರಿಹಾರಗಳನ್ನು ಕಂಡು ಕೊಳ್ಳುವ ಮೂಲಕ ಇಂತಹ ಕೃತ್ಯಗಳನ್ನು ತಡೆಯಬೇಕಾಗಿದೆ. ಅದನ್ನು ಬಿಟ್ಟು ಸೀಲಿಂಗ್ ಫ್ಯಾನ್‌ಗಳನ್ನು ಬದಲಿಸಿದರೆ ಆತ ಅಥವಾ ಆಕೆ ಮತ್ತೊಂದು ಮಾರ್ಗವನ್ನು ಹಿಡಿಯಬಹುದು. ಆದ್ದರಿಂದ ಸಮಸ್ಯೆಯ ವ್ಯವಸ್ಥಿತ ಅಧ್ಯಯನ ಹಾಗೂ ವೈeನಿಕ ಪರಿಹಾರಗಳ ಕಡೆಗೆ ಗಮನ ಕೇಂದ್ರೀಕರಿಸುವುದು ಅಗತ್ಯವಾಗಿದೆ.

-ಬೊಳ್ಳಮ್ಮ ಪಿ.ಕ ಮಡಿಕರಿ

ಮಕ್ಕಳಿಗೆ ನೀತಿ ಬೋಧನೆಯಿರಲಿ
ದಾವಣಗೆರೆ ಜಿಲ್ಲೆಯ ನಲ್ಲೂರಿನ ಸರಕಾರಿ ಶಾಲೆಯಲ್ಲಿ ಈಚೆಗೆ ಕೆಲ ವಿದ್ಯಾರ್ಥಿಗಳು ಶಿಕ್ಷಕರೊಬ್ಬರನ್ನು ಹೊಡೆದು ಹುಂಬತನ ಪ್ರದರ್ಶಿಸಿದ್ದರು. ಈ ಘಟನೆ ಎಲ್ಲ ವಿದ್ಯಾರ್ಥಿ ಸಮುದಾಯ ಹಾಗೂ ಶಿಕ್ಷಕ ಸಮುದಾಯಕ್ಕೆ ಕಳಂಕವಾಯಿತು. ವ್ಯಕ್ತಿಯಲ್ಲಿನ ಅಶಿಸ್ತು, ದುರ್ವರ್ತನೆಯಿಂದ ಪಾರು ಮಾಡು ವುದೋ ಅದೇ ವಿದ್ಯೆ ಎನ್ನುವುದು ಸುಭಾಷಿತ. ವಿದ್ಯಾರ್ಥಿಗಳ ಪಾಲಿಗೆ ಮುಂದೆ ಗುರಿ, ಹಿಂದೆ ಗುರು ಇರದಿದ್ದರೆ ಹೇಗೆ? ಪೋಷಕರನ್ನು ಕರೆಸುವುದು, ಕ್ಷಮೆ ಕೇಳಿಸುವುದು ಕೇವಲ ಯಾಂತ್ರಿಕ. ಮಕ್ಕಳೇಕೆ ಹೀಗೆ ವರ್ತಿಸುತ್ತಾರೆ, ಶಿಕ್ಷಣ ವ್ಯವಸ್ಥೆಯಲ್ಲೇ ಏನಾದರೂ ದೋಷಗಳುಂಟೆ? ಹೌದಾದರೆ ಅವನ್ನು ಸರಿ ಪಡಿಸುವ ಕುರಿತು ಚರ್ಚಿಸುವ ತುರ್ತು ಅಗತ್ಯವಿದೆ.

ಈ ಹಿಂದೆ, ತರಗತಿಯ ಶಿಕ್ಷಕರು ರಜೆಯಲ್ಲಿದ್ದರೆ ಅವರ ತರಗತಿಗಳನ್ನು ಮತ್ತೊಬ್ಬ ಶಿಕ್ಷಕರು ತೆಗೆದುಕೊಳ್ಳುತ್ತಿದ್ದರು. ಆಗ ನೀತಿಕತೆ, ಇತಿಹಾಸ, ಪ್ರಸಿದ್ಧ ಕವಿಗಳ ಕವನ ವಾಚನ… ಹೀಗೆ ಜ್ಞಾನ ಸಮಾರಾಧನೆಯೇ ಮಕ್ಕಳಿಗೆ ಸಲ್ಲುತ್ತಿತ್ತು. ಮಕ್ಕಳಿಗೂ ತಮ್ಮ ಅನುಭವ ಹಂಚಿಕೊಳ್ಳಲು, ಹಾಡು, ನಟನೆ ಪ್ರದರ್ಶಿಸಲು ಆ ಬಿಡುವು ವೇದಿಕೆ ಆಗುತ್ತಿತ್ತು. ಇಡೀ ವಾರ ಪಠ್ಯಕ್ರಮದ ಅಧ್ಯಾಯಗಳಷ್ಟೇ ಮಕ್ಕಳ ಮೇಲೆ ರವಾನೆಯಾದರೆ ಸಾಲದು, ಅವರು ತಮ್ಮ ಬದುಕಿಗೆ ಅವುಗಳನ್ನು ಸಮರ್ಪಕವಾಗಿ ಅನ್ವಯಿಸಿಕೊಂಡು ರೂಢಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಶಾಲಾಕಾಲೇಜುಗಳಲ್ಲಿ ಪ್ರತೀ ತರಗತಿಗೆ
ವಾರಕ್ಕೊಂದು ಮಾರಲ್ ಪೀರಿಯಡ್ ವೇಳಾಪಟ್ಟಿಯಲ್ಲೇ ನಿಯೋಜಿಸು ವುದು ಪರಿಣಾಮಕಾರಿ.

-ರಾಜು ಬಡಿಗೇರ, ಖವಟಕೊಪ್ಪ

error: Content is protected !!