Wednesday, 1st December 2021

ಭಾಗವತ ಪಟ್ಲ ಸತೀಶ್ ಶೆಟ್ಟಿಗೆ ಅವಮಾನ

ವಿಶ್ವವಾಣಿ ಸುದ್ದಿಮನೆ ಮಂಗಳೂರು
ಕಟೀಲು ಯಕ್ಷಗಾನ ಮೇಳ ಹೊರಡುವ ವೇಳೆ ಖ್ಯಾಾತ ಭಾಗವತ ಪಟ್ಲ ಸತೀಶ್ ಶೆಟ್ಟಿಿಯವರಿಗೆ ರಂಗಸ್ಥಳದಿಂದ ಹೊರಗೆ ಕಳುಹಿಸುವ ಮೂಲಕ ಅವಮಾನ ಮಾಡಲಾಗಿದೆ.
ಈ ವರ್ಷದ ಕಟೀಲು ಯಕ್ಷಗಾನದ ತಿರುಗಾಟ ಶುಕ್ರವಾರ ರಾತ್ರಿಿ ಆರಂಭವಾಗಿದ್ದು, ಕಟೀಲು ಮೇಳದ ಆರು ಮೇಳಗಳ ಪ್ರಸಂಗ ಏಕಕಾಲದಲ್ಲಿ ಕಟೀಲು ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಈ ಹಿಂದಿನಂತೆ ಭಾಗವತರಾದ ಪಟ್ಲ ಸತೀಶ್ ಶೆಟ್ಟಿಿ ಭಾಗವತ ನಿರ್ವಹಿಸಲು ವೇದಿಕೆಗೆ ಬಂದಿದ್ದರು. ಆದರೆ, ಅವರು ವೇದಿಕೆ ಏರಿ ಕೂರುತ್ತಿಿದ್ದಂತೆ ಅವರನ್ನು ವಾಪಸು ಕರೆಸಲಾಗಿದೆ. ಈ ಮೂಲಕ ಯಕ್ಷಗಾನ ಅಭಿಮಾನಿಗಳ ಮುಂದೆಯೇ ಅವರಿಗೆ ಅವಮಾನ ಮಾಡಲಾಗಿದೆ. ಯಕ್ಷಗಾನ ಮೇಳ ನಿರ್ವಹಣೆ ಸಂಬಂಧಿಸಿ ವಿವಾದವು ಹೈಕೋರ್ಟ್ ಮೆಟ್ಟಿಿಲೇರಿತ್ತು. ಇದರಲ್ಲಿ ಪಟ್ಲ ಸತೀಶ್ ಶೆಟ್ಟಿಿ ಕಲಾವಿದರ ಪರ ಇದ್ದರೆಂದು ಅವರನ್ನು ವೇದಿಕೆಗೆ ಕರೆದು ಅವಮಾನ ಮಾಡಲಾಗಿದೆ ಎಂದು ಹೇಳಲಾಗಿದೆ.
ಪ್ರಕರಣ ವಿವರ
ನ.22ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾಾನದ 6 ಯಕ್ಷಗಾನ ಮೇಳಗಳ 2019 -2020 ಸಾಲಿನ ತಿರುಗಾಟಕ್ಕೆೆ ಚಾಲನೆ ನಿಡಲಾಗಿತ್ತು. ಅಂದು ಅಲ್ಲಿ ಆರು ಮೇಳದ ಕಲಾವಿದರು ಯಕ್ಷಗಾನದಲ್ಲಿ ಭಾಗವಹಿಸುತ್ತಾಾರೆ ಮತ್ತು ಮೇಳದ ಎಲ್ಲ ಭಾಗವತರು ಭಾಗವತಿಕೆ ನಡೆಸುವುದು ಅಲ್ಲಿ ನಿರಂತರವಾಗಿ ನಡೆದು ಬರುತ್ತಿಿರುವ ಸಂಪ್ರದಾಯ. ಕೆಲ ಭಾಗವತರು ಭಾಗವತಿಕೆ ಮುಗಿಸಿದ್ದು, ರಾತ್ರಿಿ ಪುತ್ತೂರಿನ ರಮೇಶ್ ಭಟ್ ಅವರು ಭಾಗವತಿಕೆ ನಡೆಸುತ್ತಿಿದ್ದರು. ಆ ಸಂದರ್ಭ ಭಾಗವತಿಕೆ ಮಾಡಲು ಪಟ್ಲರು ರಂಗ ಸ್ಥಳಕ್ಕೆೆ ಬಂದಿದ್ದು, ರಮೇಶ್ ಭಟ್ ಅವರು ಪಟ್ಲರಿಗೆ ಭಾಗವತಿಕೆ ನಡೆಸಲು ಅವಕಾಶ ಮಾಡಿ ಕೊಟ್ಟು ವೇದಿಕೆಯಿಂದ ಹೊರನಡೆಯಲು ಅನುವಾಗಿದ್ದರು. ಆ ಸಂದರ್ಭ ರಮೇಶ್ ಭಟ್ ಅವರನ್ನು ಮದ್ಯದಲ್ಲೇ ತಡೆದ ಮೇಳದ ಯಜಮಾನ ದೇವಿಪ್ರಸಾದ್ ಕಲ್ಲಾಡಿಯವರು, ಸತೀಶ್ ಶೆಟ್ಟಿಿ ಪಟ್ಲ ರವರನ್ನು ಭಾಗವತಿಕೆ ಮಾಡದಂತೆ ತಿಳಿಸಿ ರಂಗ ಸ್ಥಳದಿಂದ ಹೊರನಡೆಯುವಂತೆ ತಿಳಿಸಿದರು.

ಕಲಾವಿದನನ್ನು ಸಾಯಿಸಿದಂತೆ
ನನಗೆ ಎಷ್ಟೋೋ ದೊಡ್ಡ ದೊಡ್ಡ ಮೇಳಗಳಿಂದ ದೊಡ್ಡ ಸಂಬಳದ ಆಫರ್‌ಗಳು ಬಂದವು. ಆದರೆ ನಾನು ಅದ್ಯಾಾವುದಕ್ಕೂ ಒಪ್ಪಿಿಕೊಂಡಿರಲಿಲ್ಲ. ನಾನು ಇಷ್ಟು ಬೆಳೆಯಲು ಕಟೀಲು ತಾಯಿ ಕಾರಣ. ನಾನು ಅವಳ ಸೇವೆ ಮಾಡಬೇಕು ಎಂಬ ಏಕೈಕ ಉದ್ದೇಶದಿಂದ ಅಲ್ಲಿ ಮಾಡಿದ ಅಷ್ಟೂ ಅವಮಾನಗಳನ್ನು ಸಹಿಸಿಯೂ ಮೇಳದಲ್ಲಿ ಸೇವೆ ಮಾಡಿದೆ. ಈ ರೀತಿ ರಂಗ ಸ್ಥಳದಿಂದ ಎದ್ದು ಹೋಗುವಂತೆ ಹೇಳಿದ್ದು ಅವರ ಸಂಸ್ಕೃತಿ ತೋರಿಸುತ್ತದೆ. ನಮ್ಮ ನಡುವೆ ಏನೇ ಮನಸ್ತಾಾಪಗಳು ಇದ್ದರೂ ಅದನ್ನು ರಂಗಸ್ಥಳ ಏರುವ ಮೊದಲು ಅಥವಾ ರಂಗ ಸ್ಥಳದಿಂದ ಇಳಿದ ಬಳಿಕ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತು. ರಂಗ ಸ್ಥಳದಲ್ಲಿ ಕುಳಿತವನನ್ನು ಹೀಗೆ ಎಬ್ಬಿಿಸುವುದು ಅದು ಕಟೀಲು ದೇವಾಲಯದ ಬೀದಿಯಲ್ಲಿ… ಇದು ಕಲಾವಿದನನ್ನು ಸಾಯಿಸಿದಂತೆ ಎಂದು ಪಟ್ಲರು ನೋವು ತೋಡಿಕೊಂಡರು.

ಇದಾದ ಬಳಿಕ ಆಕ್ರೋೋಶಗೊಂಡಿದ್ದ ನನ್ನ ಅಭಿಮಾನಿಗಳನ್ನು ಸಂತೈಸಿ, ಅವರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಎಂದು ತಿಳಿಸಿ ಮೌನವಾಗಿಯೇ ಅಲ್ಲಿಂದ ಹೊರ ನಡೆದೆ. ನನ್ನ ಪೇಟವನ್ನು ದೇವಿಯ ಪಾದತಳದಲ್ಲಿ ಇಟ್ಟು ವಾಪಸ್ ಮನೆಗೆ ಬಂದೆ. ಎಲ್ಲವನ್ನೂ ದೇವಿಯೇ ನೋಡಿಕೊಳ್ಳುತ್ತಾಾಳೆ. ಎಲ್ಲವೂ ಆ ತಾಯಿಗೆ ಬಿಟ್ಟದ್ದು. ನಾನು ತಾಯಿಯ ಮಗ, ಅವಳು ವಾಪಸು ನನ್ನನ್ನು ಕರೆಸಿಕೊಳ್ಳುತ್ತಾಾಳೆ ಎಂಬ ನಂಬಿಕೆ ನನಗಿದೆ.