Thursday, 23rd March 2023

ಪ್ರೇಕ್ಷಕರನ್ನು ಆಕರ್ಷಿಸಿದ ಭಸ್ಮಾಸುರ ಮೋಹಿನಿ

ಶಿರಸಿ: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಸುಂಧರಾ ಸಮೂಹ ಸೇವಾ ಸಂಸ್ಥೆಯ ಪ್ರಥಮ ಕಾರ್ಯಕ್ರಮವಾಗಿ ಕಂಚಿ ಕೈ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಭಸ್ಮಾಸುರ ಮೋಹಿನಿ ಪ್ರಸಂಗದ ಯಕ್ಷಗಾನ ಕಲಾ ಪ್ರದರ್ಶನ ನೂರಾರು ಪ್ರೇಕ್ಷಕರ ಮನಸೂರೆಗೊಂಡಿತು.

ಈಶ್ವರನ ತಾಂಡವ ನೃತ್ಯ, ಭಸ್ಮಾಸುರನ ಆರ್ಭಟ, ಮೋಹಿನಿಯ ಮೋಹಕ ಅಭಿನಯ ಸಹಿತ ನಾನಾ ಪಾತ್ರಧಾರಿಗಳು  ಸೊಗಸಾದ ಅಭಿನಯ ಹಾಗೂ ಸಂಭಾಷಣೆಯ ಮೂಲಕ ಆಕರ್ಷಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಲೆ ವಾದಕರಾಗಿ ಅನಿರುದ್ಧ ಹೆಗಡೆ,, ಚಂಡೆ ವಾದಕರಾಗಿ ವಿಘ್ನೇಶ್ವರ ಕೆಸರಕೊಪ್ಪ ಗಾನ ವಾದನದ ಮೂಲಕ ರಂಜಿಸಿದರು.

ಮುಮ್ಮೇಳದಲ್ಲಿ ಶಂಕರ ಹೆಗಡೆ ನೀಲಕೋಡ, ನರಸಿಂಹ ಚಿಟ್ಟಾಣಿ, ಉದಯ ಹೆಗಡೆ ಕಡಬಾಳ, ಗಣಪತಿ ಭಟ್ಟ ಮುದ್ದಿನಪಾಲ, ಮಾರುತಿ ಬೈಲಗದ್ದೆ,, ಕಾರ್ತಿಕ ಕಣ್ಣಿ, ವೆಂಕಟ ರಮಣ ಹೆಗಡೆ ಮಾದನಕಳ್ ವಿವಿಧ ಪಾತ್ರ ಅಭಿನಯಿಸಿದರು.

ಕಂಚಿಕೈ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಹಾಗೂ ಗ್ರಾಮಸ್ಥರ ಸಹಕಾರದಲ್ಲಿ ಕಾರ್ಯಕ್ರಮ ಪ್ರದರ್ಶನಗೊಂಡಿತು.

ವಸುಂಧರಾ ಸಂಸ್ಥೆಯ ಅಧ್ಯಕ್ಷ ಆರ್ ಟಿ ಭಟ್ಟ ಸ್ವಾಗತಿಸಿದರು. ಕಾರ್ಯದರ್ಶಿ ಜಿ ಆರ್ ಭಟ್ಟ ಗುಳ್ಳಾಪುರ ವಂದಿಸಿದರು.

error: Content is protected !!