Thursday, 1st December 2022

ಬೀದರ್‌ ನಗರಸಭೆ: ಶೇ.19.37ರಷ್ಟು ಮತದಾನ

ಬೀದರ್: ಅವಧಿ ಮುಕ್ತಾಯಗೊಂಡ ಬೀದರ್‌ ನಗರಸಭೆಯ 32 ವಾರ್ಡ್ ಗಳಿಗೆ ಚುನಾವಣೆ ಹಿನ್ನಲೆ ಮಂಗಳವಾರ ಮತದಾನ ನಡೆಯುತ್ತಿದ್ದು, ಇತ್ತೀಚಿನ ವರದಿ ಪ್ರಕಾರ, ಶೇ. 19.37 ರಷ್ಟು ಮತದಾನ ಆಗಿದೆ. ಒಟ್ಟು 1,53,325 ಮತದಾರರಲ್ಲಿ 29,701 ಜನ ಮತದಾನ ಮಾಡಿದ್ದಾರೆ.

ಬೀದರ ನಗರಸಭೆಯ 26, 28 ಮತ್ತು 32 ವಾರ್ಡ‍ ಗಳನ್ನು ಹೊರತುಪಡಿಸಿ, ಇನ್ನುಳಿದ 32 ವಾರ್ಡ‍ಗಳಿಗೆ ಮತದಾನ ಆರಂಭವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕೋವಿಡ್ ಕಿಟ್ ನೀಡಲಾಗಿದೆ. ಎಲ್ಲಾ ಮತ ಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗಿದೆ.

ಚುನಾವಣೆಯಲ್ಲಿ ಒಟ್ಟು 176 ನಾಮಪತ್ರಗಳು ಸಲ್ಲಿಕೆಯಾಗಿ, ಈ ಪೈಕಿ, 7 ನಾಮಪತ್ರಗಳು ತಿರಸ್ಕೃತವಾಗಿದ್ದವು. ಬೀದರ್‌ ನಗರಸಭೆ ಚುನಾವಣೆಯಲ್ಲಿ 77609 ಪುರುಷರು, 75703 ಮಹಿಳೆಯರು ಹಾಗೂ ಇತರೆ 13 ಸೇರಿ ಒಟ್ಟು 1,53,325 ಮತದಾರರು ತಮ್ಮ ಮತಹಕ್ಕನ್ನು ಚಲಾಯಿಸಲಿದ್ದಾರೆ.

ಒಟ್ಟು 162 ಮತಗಟ್ಟೆಗಳಲ್ಲಿ ಅಂದಾಜು 200 ಮತಗಟ್ಟೆ ಅಧಿಕಾರಿಗಳು, ಅಂದಾಜು 200 ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು 400 ಪೊಲೀಂಗ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.