Friday, 12th August 2022

ಪೈಪೋಟಿಗೆ ಇಳಿದಿವೆ ಎಲೆಕ್ಟ್ರಿಕ್ ಬೈಕ್

ಬೈಕೋಬೇಡಿ

ಅಶೋಕ್‌ ನಾಯಕ್‌

ಎಲೆಕ್ಟ್ರಿಕ್ ವಾಹನ ಈಗ ಫ್ಯಾಷನ್ ಆಗಿದೆ. ಮನೆಯ ಅಂಗಣದಲ್ಲಿ ಪೆಟ್ರೋಲ್ ವಾಹನಗಳ ಸಂಖ್ಯೆ ಎಷ್ಟೇ ಇದ್ದರೂ, ಎಲೆಕ್ಟ್ರಿಕ್ ವಾಹನವು ತನ್ನದೇ ಆದ ಖದರ್ ಹೊಂದಿದೆ ಎಂದರೂ ತಪ್ಪಿಲ್ಲ. ಕಾರಣ, ಲುಕ್ ಹಾಗೂ ಬಣ್ಣದಲ್ಲಿ ಎಲೆಕ್ಟ್ರಿಕ್ ವಾಹನವು, ಇಂಧನ ಚಾಲಿತ ವಾಹನಕ್ಕೆ ಭಾರೀ ಪೈಪೋಟಿ ನೀಡುತ್ತಿದೆ.

ಓಲಾ ಎಸ್೧
ನೀವು ಎಲೆಕ್ಟ್ರಿಕ್ ಬೈಕ್ ಶೋಧದಲ್ಲಿದ್ದರೆ, ನಿಮಗಿದು ಒಳ್ಳೆ ಆಫರ್ ಎಂದು ಓಲಾ ಎಸ್1 ಕಂಪೆನಿಯ ಮಾತಾಗಿದೆ. ವಾಹನ ಖರೀದಿಸಿದ 14 ದಿನದೊಳಗೆ ಈ ವಾಹನದ ಡೆಲಿವರಿ ಮಾಡಿಕೊಡಲಾಗುವುದು ಎಂದು ಗ್ಯಾರಂಟಿ ಕೂಡ ನೀಡುವುದು. ಸುಮಾರು 85 ಸಾವಿರ ರೂಪಾಯಿಯಿಂದ ಒಂದು ಲಕ್ಷಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟವಾಗುವ ಈ ವಾಹನವು ಎರಡು ವೇರಿಯಂಟ್‌ಗಳಲ್ಲಿ ಲಭ್ಯ. ಎಸ್1 ಎಸ್ಟಿಡಿ ಮತ್ತು ಎಸ್೧ ಪ್ರೊ.ಸರಕು ಸರಂಜಾಮು ಗಳನ್ನು ಕೊಂಡೊಯ್ಯಲು ತಕ್ಕಮಟ್ಟಿಗೆ ಸ್ಟೋರೇಜ್ ಕೆಪಾಸಿಟಿ ಇದೆ. ಟ್ಯಾಬ್ಲಾಟ್‌ನಂತೆ ಟಚ್ ಸ್ಕ್ರೀನ್‌ಗಾಗಿ ಈ ವಾಹನದಲ್ಲಿ ಹ್ಯಾಂಡಲ್ ಮಧ್ಯದಲ್ಲಿ ಸ್ಕ್ರೀನ್ ಇದೆ.

ಸುಮಾರು ಆರೂವರೆ ಗಂಟೆಗಳ ಕಾಲ ಚಾರ್ಜಿಂಗ್ ಕೆಪಾಸಿಟಿ ಇರುವ ಈ ವಾಹನದಲ್ಲಿ ಪ್ರತಿ ಚಾರ್ಜಿಂಗ್‌ನಲ್ಲಿ 181 ಕಿಮೀ ದೂರ ಕ್ರಮಿಸುವುದು. ವೇಗವಾಗಿ ಚಾರ್ಜಿಂಗ್ ಆಗುವ ಕಾರಣ, ಸಮಯ ವ್ಯರ್ಥವಾಗುತ್ತಿದೆ ಎಂಬ ಆತಂಕ ಕಾಡುವುದಿಲ್ಲ. ಮೊಬೈಲ್ ಕನೆಕ್ಟ್ ಮಾಡಲೂ ಕೂಡ ಬ್ಲೂಟೂಥ್ ಹಾಗೂ ವೈಫೈ ಇದೆ.

ಹೀರೋ ಎಲೆಕ್ಟ್ರಿಕ್ ಫೋಟೋನ್
ಇಡೀ ಜಗತ್ತಿಗೆ ಹಾಗೂ ನಮ್ಮ ದೇಶಕ್ಕೆ ಮಹಾಮಾರಿಯಾಗಿ ಪರಿಣಮಿಸಿದ ಕರೋನಾ ದಿಂದಾಗಿ ಹಲವು ಎಲೆಕ್ಟ್ರಿಕ್ ವಾಹನಗಳ ಪೈಕಿ, ಹೀರೋ ಎಲೆಕ್ಟ್ರಿಕ್ ಫೋಟೋನ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ವಿಳಂಬ ಮಾಡಲಾಗಿತ್ತು. ಈಗ ಮಾರುಕಟ್ಟೆಗೆ ಬಂದಿದೆ. ಈ ವಾಹನದ ವೇರಿಯಂಟ್ ಫೋಟೋನ್ ಎಚ್‌ಎಕ್ಸ್ ಆಗಿದೆ.

ಪ್ರತಿ ಚಾರ್ಜಿಗೆ 108 ಕಿಮೀ ದೂರ ಕ್ರಮಿಸುತ್ತದೆ. ಐದು ಗಂಟೆಯ ಚಾರ್ಜಿಂಗ್ ಕೆಪಾಸಿಟಿ ಇದೆ. ಈ ವಾಹನದಲ್ಲಿ ಪ್ರಯಾಣಿಸು ವಾಗ ಪರಿಸರ ಮಾಲಿನ್ಯಕ್ಕೆ ನಾವೇ ಕಾರಣವಾಗುತ್ತೇ ವೆಂಬ ಭೀತಿ ಇರುವುದಿಲ್ಲ. ಈ ವಾಹನಕ್ಕೆ ಬಿಎಲ್ಡಿಸಿ ಹಬ್ ಮೋಟಾರು ಶಕ್ತಿ ನೀಡುವುದು. ಎರಡು ವೇರಿಯಂಟ್ನಲ್ಲಿ ಈ ವಾಹನ ಲಭ್ಯವಿದ್ದು, ಹೀರೋ ಎಲೆಕ್ಟ್ರಿಕ್ ಫೋಟೋನ್ ಬೆಲೆ ಸುಮಾರು 61000 ರೂಪಾಯಿಗಳು., ಎಲ್ಪಿ ವೇರಿಯಂಟ್ ವಾಹನದ ಬೆಲೆ ರು.73000 ದಿಂದ ಆರಂಭ. ಎರಡೂ ವೆರೈಟಿಯ ವಾಹನಗಳಿಗೆ ಬೇರೆದ್ದೇ ಬ್ಯಾಟರಿ ಸೈಜ್ಗಳಿವೆ. 28 ಎಎಚ್ ಬ್ಯಾಟರಿಯು ಈ ವಾಹನಕ್ಕೆ 110 ಕಿ.ಮೀ. ಎಕಾನಮಿ ಮೋಡ್ ನೀಡುವುದು ಹಾಗೂ ಪವರ್ ಮೋಡ್‌ನಲ್ಲಿ 80 ಕಿಮೀ.