Wednesday, 5th October 2022

ಬಿಜೆಪಿ ಕುಟುಂಬದಲ್ಲಿ ಒಳ್ಳೆಯ ಹೊಂದಾಣಿಕೆ

ಹಾವೇರಿ: ಬಿಜೆಪಿಗೆ ಬಂದು ಒಂಬತ್ತು ದಿನ ಆಗಿದೆ, ಸಂಸಾರ ತುಂಬಾ ಚೆನ್ನಾಾಗಿದೆ. ಅತ್ತೆೆ, ಮಾವ, ಸೊಸೆ, ಭಾವ, ಕಾಕಾ ಎಲ್ಲರೂ ಹೊಂದಿಕೊಳ್ಳುತ್ತಿಿದ್ದೇವೆ ಎಂದು ಹಿರೇಕೆರೂರು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರ ವ್ಯಾಾಪ್ತಿಿಯ ಮಕರಿ ಗ್ರಾಾಮದಲ್ಲಿ ಮಾತನಾಡಿ, ಬಿಜೆಪಿಗೆ ಬಂದು ಇಂದಿಗೆ ಒಂಬತ್ತು ದಿನ ಆಗಿದೆ, ಕುಟುಂಬದಲ್ಲಿ ಒಳ್ಳೆೆಯ ಹೊಂದಾಣಿಕೆ ಇದೆ. ಎಲ್ಲರೂ ಪ್ರೀತಿಯಿಂದ ನೋಡಿಕೊಳ್ಳುತ್ತಾಾರೆ. ಮುಂದೆಯು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಅಭಿಪ್ರಾಾಯಪಟ್ಟರು.
17 ವರ್ಷಗಳಿಂದ ನಾನು ಬಣಕಾರ ಅವರ ಪ್ರತಿ ಸ್ಪರ್ಧಿಯಾಗಿ ಕೆಲಸ ಮಾಡಿದ್ದೆ. ನಾವಿಬ್ಬರು ಒಂದಾದ ಮೇಲೆ ಕಾರ್ಯಕರ್ತರು ಯಾಕೆ ಎರಡು ಭಾಗವಾಗಿರಬೇಕು ಎಂದು ಒಂದಾಗುತ್ತಿಿದ್ದಾರೆ. ಒಬ್ಬರು ಇದ್ದಾಗ ಭಾರ ಹೆಚ್ಚಾಾಗಿತ್ತು. ಯು.ಬಿ.ಬಣಕಾರ ಬಂದ ಮೇಲೆ ಭಾರ ಕಡಿಮೆ ಅಗಿದೆ. ನನ್ನದೇ ಚುನಾವಣೆ ಎಂದು ಭಾವಿಸಿ ಅವರು ಕೆಲಸ ಮಾಡುತ್ತಿಿದ್ದಾರೆ. ಬಿಜೆಪಿಗೆ ಬಂದಿದ್ದರಿಂದ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.

ಕಾಂಗ್ರೆೆಸ್ ಮುಳುಗುವ ಹಡಗು
ನಮ್ಮನ್ನು ಸೋಲಿಸಲು ಮಾಜಿ ಮುಖ್ಯಮಂತ್ರಿಿ ಕುಮಾರಸ್ವಾಾಮಿ ಯಾರು? ನಮ್ಮನ್ನು ಸೋಲಿಸುವುದು ಗೆಲ್ಲಿಸುವುದು ಜನರು. ಕುಮಾರಸ್ವಾಾಮಿಯವರು ಸರಿಯಾಗಿ ಆಡಳಿತ ಮಾಡಿದ್ದರೆ ಮಾಜಿ ಆಗುತ್ತಿಿರಲಿಲ್ಲ. ಸಿದ್ದರಾಮಯ್ಯ ದೊಡ್ಡವರು ಅವರ ಬಗ್ಗೆೆ ಏನೂ ಮಾತನಾಡುವುದಿಲ್ಲ. ಕಾಂಗ್ರೆೆಸ್‌ನಲ್ಲಿ ಇದೀಗ ಗುಂಪುಗಾರಿಕೆ ಆಗಿದೆ. ಮೂಲ ಹಾಗೂ ವಲಸಿಗರು ಎಂದು ಎರಡು ಗುಂಪುಗಳಾಗಿವೆ. ಹೀಗಾಗಿ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಾಸ ಇಲ್ಲ. ಕಾಂಗ್ರೆೆಸ್ ಮುಳುಗುವ ಹಡಗು ಆಗಿದೆ ಎಂದು ಆರೋಪಿಸಿದರು.
ಮುಳುಗುತ್ತಿಿರುವ ಹಡಗನ್ನು ದಡ ಸೇರಿಸಬೇಕು ಎನ್ನುವವರು ಕಡಿಮೆ ಆಗಿದ್ದಾರೆ. ಎಷ್ಟೋೋ ಸಾಧ್ಯವೋ ಅಷ್ಟು ರಂಧ್ರ ಮಾಡಿ ಮುಳುಗಿಸುವ ಪ್ರಯತ್ನ ಮಾಡುತ್ತಿಿದ್ದಾರೆ. ಕಾಂಗ್ರೆೆಸ್ಸಿಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ. ಈಗ ಕಾಂಗ್ರೆೆಸ್ ಕಥೆ ಹಾಳು ಊರಿಗೆ ಆಳಿದವನೇ ಗೌಡ ಎನ್ನುವಂತಾಗಿದೆ. ಕಾಂಗ್ರೆೆಸ್ ಅಭ್ಯರ್ಥಿ ಬಿ.ಎಚ್.ಬನ್ನಿಿಕೋಡ ಸಹ ಅದೇ ರೀತಿ ಆಗಿದ್ದಾರೆ. ಕಾಂಗ್ರೆೆಸ್‌ಗೆ ಬಿ.ಎಚ್.ಬನ್ನಿಿಕೋಡಗೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮಾಜಿ ಡಿಸಿಎಂ ಪರಮೇಶ್ವರ ಮೋಸ ಮಾಡಿದ್ದಾರೆ ಎಂದು ವಾಗ್ದಾಾಳಿ ನಡೆಸಿದರು.