Wednesday, 5th October 2022

ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ನಾಮಪತ್ರ ಸಲ್ಲಿಕೆ

ಧಾರವಾಡ: ವಿಧಾನ ಪರಿಷತ್ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ಸಂಕನೂರ ನಾಮಪತ್ರ ಸಲ್ಲಿಸಿದರು.

ಕಳೆದ ಬುಧವಾರ ಅನೌಪಚಾರಿಕವಾಗಿ ನಾಮಪತ್ರ ಸಲ್ಲಿಸಿದ್ದ ಸಂಕನೂರ ಅವರು ಗುರುವಾರ ಪಕ್ಷದ ಮುಖಂಡರೊಂದಿಗೆ ಅಧಿಕೃತವಾಗಿ ಕಣಕ್ಕೆ ಸ್ಪರ್ಧೆಗಿಳಿಸರು. ವಿಧಾನ ಪರಿಷತ್ ಚುನಾವಣೆ ಪೂರ್ವ ಸಿದ್ಧತಾ ಸಭೆಯಲ್ಲಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಚುನಾವಣೆಗೆ ಕೋವಿಡ್ ಭಯವಿಲ್ಲದೆ ಎದುರಿ ಸೋಣ. ಪರಿಷತ್ ನ ಬಹುಮತ ಕೊರತೆ ನೀಗಿಸಬೇಕಿದೆ.

ಸಂಕನೂರ ಸುಸಂಸ್ಕೃತ ಅಭ್ಯರ್ಥಿ, ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.