Friday, 3rd February 2023

ಬಿಜೆಪಿ ಅಭ್ಯರ್ಥಿ ಮೇಲೆ ಚಪ್ಪಲಿ ತೂರಿ ಆಕ್ರೋಶ

ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ನಾಮಪತ್ರ ಸಲ್ಲಿಸಲು ಬರುತ್ತಿದ್ದ ವೇಳೆ ಜೆಡಿಎಸ್ ಕಾರ್ಯಕರ್ತರ ಗುಂಪು ಆಕ್ರೋೋಶದಿಂದ ಅವರ ಮೇಲೆ ಚಪ್ಪಲಿ ತೂರಿದ ಘಟನೆ ಸೋಮವಾರ ನಡೆದಿದೆ.

ಪರಿಸ್ಥಿಿತಿ ಬಿಗಡಾಯಿಸುವ ಹಂತಕ್ಕೆೆ ಹೋಗಲು ಬಿಡದ ಜಿಲ್ಲಾಾ ಪೊಲೀಸ್ ವರಿಷ್ಠಾಾಧಿಕಾರಿ ಪರಶುರಾಮ್ ಬಿಜೆಪಿ ಅಭ್ಯರ್ಥಿಯನ್ನು ರಕ್ಷಿಿಸಿ ತಮ್ಮ ವಾಹನದಲ್ಲಿ ಕೂರಿಸಿ, ಎಸ್ಕಾಾರ್ಟ್ ಜತೆ ಮನೆವರೆಗೆ ಕಳುಹಿಸಿದರು.
ಆ ವೇಳೆ ಜೆಡಿಎಸ್ ಕಾರ್ಯಕರ್ತರ ಆಕ್ರೋೋಶ ತಣಿಯಲಿಲ್ಲ. ಪೊಲೀಸರು ಪ್ರತಿಭಟನಾನಿರತ ಜೆಡಿಎಸ್ ಕಾರ್ಯಕರ್ತರನ್ನು ಚದುರಿಸಿದರು. ಸಮಯ ಮೀರಿದ್ದರಿಂದ ನಾರಾಯಣಗೌಡ ಓಡಿಕೊಂಡೇ ಬಂದು ನಾಮಪತ್ರ ಸಲ್ಲಿಸಲು ಚುನಾವಣಾಧಿಕಾರಿ ಕಚೇರಿಗೆ ತೆರಳಿದರು. ಆ ವೇಳೆ ಜೆಡಿಎಸ್ ಕಾರ್ಯಕರ್ತರು ತಮ್ಮ ಪಕ್ಷವನ್ನು ತೊರೆದು ಹೋದ ಅನರ್ಹ ಶಾಸಕ ವಿರುದ್ಧ ಸಿಟ್ಟಿಿಗೆದ್ದು ಘೋಷಣೆ ಕೂಗಿ ಆಕ್ರೋೋಶ ವ್ಯಕ್ತಪಡಿಸಿದರು. ನಾರಾಯಣಗೌಡ ಮತ್ತು ಇದಕ್ಕೆೆ ಪ್ರತಿರೋಧ ವ್ಯಕ್ತಪಡಿಸಿದರು.
ಜಿದ್ದಾಾಜಿದ್ದಿನ ಅಖಾಡ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮೂರು ಪ್ರಮುಖ ಪಕ್ಷಗಳ ಹುರಿಯಾಳುಗಳು ಸೋಮವಾರ ಶಕ್ತಿಿ ಪ್ರದರ್ಶನೊಂದಿಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಿದರು.

ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಸೋಮವಾರ ಕೆ.ಆರ್.ಪೇಟೆ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್, ಕಾಂಗ್ರೆೆಸ್ ಹುರಿಯಾಳು ಕೆ.ಬಿ.ಚಂದ್ರಶೇಖರ್, ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಪ್ರತ್ಯೇಕ ಮೆರವಣಿಗೆಯೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ಕಾರ್ಯಕರ್ತರು ನಾರಾಯಣಗೌಡ ವಿರುದ್ಧ ರೊಚ್ಚಿಿಗೆದ್ದು, ಪ್ರತಿಭಟಿಸಿದ್ದರಿಂದ ಚುನಾವಣಾಧಿಕಾರಿ ಕಚೇರಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿತು.

 

ಜೆಡಿಎಸ್ ಸ್ಪರ್ಧೆಯ ಎಲ್ಲ ಕ್ಷೇತ್ರಗಳಲ್ಲಿ ಪ್ರಚಾರ: ನಿಖಿಲ್

ಮಂಡ್ಯ: ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರಕ್ಕೆೆ ತೆರಳುವುದಾಗಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಾಮಿ ಹೇಳಿದರು. ಕೆ.ಆರ್.ಪೇಟೆ ಪಟ್ಟಣದಲ್ಲಿ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಅವರ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊೊಂಡು ಮಾತನಾಡಿ, ಸ್ಪರ್ಧೆಯ ಎಲ್ಲ ಕ್ಷೇತ್ರಗಳನ್ನೂ ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದರು. ಕೆ.ಆರ್.ಪೇಟೆಯಲ್ಲಿ ನಿಷ್ಠಾಾವಂತ ಕಾರ್ಯಕರ್ತ ದೇವರಾಜು ಅವರನ್ನು ಗುರುತಿಸಿ, ಅವಕಾಶ ಕಲ್ಪಿಿಸಿದೆ. ಈ ಬಾರಿ ಉಪ ಚುನಾವಣೆಯಲ್ಲಿ ದೇವರಾಜು ಅವರ ಬೆಂಬಲಕ್ಕೆೆ ಪಕ್ಷ ಸಾರಾಸಗಟು ನಿಂತಿದ್ದು, ಗೆಲುವು ನಿಶ್ಚಿಿತ ಎಂದು ನಿಖಿಲ್ ವಿಶ್ವಾಾಸ ವ್ಯಕ್ತಪಡಿಸಿದರು.

error: Content is protected !!